ಗುರುಕೃಪಾಯೋಗದ ವೈಶಿಷ್ಟ್ಯಗಳು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ
ಗುರುಕೃಪಾಯೋಗದ ನಿರ್ಮಿತಿಯಾಗಿರುವುದರ ಕಾರಣಗಳು ಮತ್ತು ಅವುಗಳ ಪ್ರಕ್ರಿಯೆ !
‘ಈಗ ಅಧ್ಯಾತ್ಮದಲ್ಲಿ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ, ಹಠಯೋಗ, ನಾಮಸಂಕೀರ್ತನಯೋಗ, ಕುಂಡಲಿನೀಯೋಗ, ಶಕ್ತಿಪಾತಯೋಗ ಮುಂತಾದ ಅನೇಕ ಯೋಗಮಾರ್ಗಗಳು ಪ್ರಚಲಿತವಿದೆ. ಸನಾತನ ಸಂಸ್ಥೆಯ ಪ್ರೇರಣಾಸ್ಥಾನವಾಗಿರುವ ಪ.ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ. ಡಾಕ್ಟರ ಆಠವಲೆಯವರು ೧೯೯೪ ರಲ್ಲಿ ಗುರುಕೃಪಾಯೋಗದ ನಿರ್ಮಿತಿಯನ್ನು ಮಾಡಿದರು. ಇದರ ಬಗ್ಗೆ ಶ್ರೀ. ರಾಮ ಹೊನಪರಿಗೆ ದೊರಕಿದ ಜ್ಞಾನವನ್ನು ಇಲ್ಲಿ ನೀಡುತ್ತಿದ್ದೇವೆ.
೧. ಇತರ ಯೋಗಮಾರ್ಗಗಳ ತುಲನೆಯಲ್ಲಿ ‘ಗುರುಕೃಪಾಯೋಗ’ ಈ ಸಾಧನಾಮಾರ್ಗದ ಆಧ್ಯಾತ್ಮಿಕ ವೈಶಿಷ್ಟ್ಯಗಳು
೧ ಅ. ಇತರ ಯೋಗಮಾರ್ಗಗಳು ಮತ್ತು ಗುರುಕೃಪಾಯೋಗ : ‘ಜ್ಞಾನಯೋಗ, ಧ್ಯಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಇವು ಈಶ್ವರನಕಡೆಗೆ ಹೋಗುವ ಮಾರ್ಗಗಳಾಗಿವೆ. ಗುರುಕೃಪಾ ಯೋಗದಲ್ಲಿಯೂ ಈ ಮಾರ್ಗಗಳಿವೆ; ಆದರೆ ಅವುಗಳ ಸ್ವರೂಪ ಭಿನ್ನವಾಗಿದೆ. ಅವುಗಳಲ್ಲಿನ ತುಲನಾತ್ಮಕ ಅಧ್ಯಯನವನ್ನು ಮುಂದೆ ನೀಡಲಾಗಿದೆ.
೧ ಅ ೧. ಕರ್ಮಯೋಗ : ಈ ಸಾಧನಾಮಾರ್ಗದಲ್ಲಿ ಸಂಪೂರ್ಣ ಮಹತ್ವವು ಕರ್ಮಕ್ಕಿರುತ್ತದೆ. ಕರ್ಮವು ತಪ್ಪಿಲ್ಲದೇ ಮತ್ತು ಪರಿಪೂರ್ಣವಾಗಿದ್ದರೆ ಮಾತ್ರ ಅದರ ಫಲ ಸಿಗುತ್ತದೆ. ಕರ್ಮದಲ್ಲಿ ತಪ್ಪುಗಳಾದರೆ, ಸಾಧನೆಯು ಖರ್ಚಾಗುತ್ತದೆ.
೧ ಅ ೧ ಅ. ಗುರುಕೃಪಾಯೋಗದಲ್ಲಿನ ಕರ್ಮಯೋಗ : ಕರ್ಮಗಳನ್ನು ಮಾಡುವಾಗ ತಪ್ಪಿಲ್ಲದೇ ಮಾಡುವುದರೊಂದಿಗೆ ಅವುಗಳನ್ನು ಭಾವಪೂರ್ಣವಾಗಿ ಮಾಡುವುದಕ್ಕೆ ಮಹತ್ವವಿದೆ. ಆದುದರಿಂದ ಕರ್ಮಗಳನ್ನು ಮಾಡುವಾಗ ಮನುಷ್ಯನಿಂದ ತಿಳಿದು ಅಥವಾ ತಿಳಿಯದೇ ತಪ್ಪುಗಳಾದರೆ ದೇವರು ಇಂತಹ ತಪ್ಪುಗಳನ್ನು ಕ್ಷಮಿಸುತ್ತಾನೆ. ಹಾಗೆಯೇ ಸಾಧಕರು ಕರ್ಮಗಳನ್ನು ಮಾಡುವಾಗ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಆದುದರಿಂದ ಇಂತಹ ಕರ್ಮಗಳಲ್ಲಿ ಅಹಂ ಕಡಿಮೆ ಇರುವುದರಿಂದ ಸಾಧಕರಿಗೆ ಕರ್ಮದೋಷ ತಗಲುವ ಪ್ರಮಾಣವೂ ಕಡಿಮೆಯಿರುತ್ತದೆ. ಕರ್ಮಯೋಗದಲ್ಲಿ ಕೇವಲ ಉತ್ತಮ ಕರ್ಮಕ್ಕೆ ಮಹತ್ವವಿರುತ್ತದೆ. ಗುರುಕೃಪಾಯೋಗದಲ್ಲಿನ ಕರ್ಮಯೋಗದಲ್ಲಿ ಕರ್ಮಗಳನ್ನು ಮಾಡುವಾಗ ಮನಸ್ಸಿನಲ್ಲಿ ಬರುವ ವಿಚಾರಗಳ ಅಧ್ಯಯನವನ್ನು ಮಾಡಲು ಕಲಿಸಲಾಗುತ್ತದೆ. ಆದುದರಿಂದ ಆ ಕರ್ಮಗಳು ಸ್ಥೂಲ ಮತ್ತು ಸೂಕ್ಷ್ಮ ದೃಷ್ಟಿಯಿಂದ ಶುದ್ಧವಾಗುತ್ತವೆ. ಇದರ ಪರಿಣಾಮ ಸಾಧಕರಿಗೆ ಸಾಧನೆಯ ದೃಷ್ಟಿಯಿಂದ ಕರ್ಮದ ಫಲ ಹೆಚ್ಚು ಸಿಗುತ್ತದೆ.
೧ ಅ ೨. ಭಕ್ತಿಯೋಗ : ಭಕ್ತಿಯೋಗದಲ್ಲಿ ದೇವರ ಮೂರ್ತಿ, ರೂಪ, ಗುಣ, ಸ್ಮರಣೆ ಮತ್ತು ಭಗವಂತನ ಬಗ್ಗೆ ಪ್ರೇಮ ಈ ಅಂಶಗಳಿಗೆ ಹೆಚ್ಚು ಮಹತ್ವವಿದೆ. ಈ ಅಂಶಗಳು ದೇವರಿಗೆ ಮತ್ತು ಭಕ್ತರಿಗೆ ಸಂಬಂಧಿಸಿವೆ.
೧ ಅ ೨ ಅ. ಗುರುಕೃಪಾಯೋಗದಲ್ಲಿನ ಭಕ್ತಿ ಯೋಗ : ಈ ಯೋಗದಲ್ಲಿನ ಭಕ್ತಿಯೋಗದಲ್ಲಿ ‘ಜೀವನದಲ್ಲಿನ ಪ್ರತಿಯೊಂದು ಪ್ರಸಂಗದಲ್ಲಿ, ಸಜೀವ ಮತ್ತು ನಿರ್ಜೀವ ಘಟಕಗಳಲ್ಲಿ ದೇವರನ್ನು ಹೇಗೆ ನೋಡಬೇಕು ? ಅವನ ಭಕ್ತಿಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಸತತವಾಗಿ ಕಲಿಸಲಾಗುತ್ತದೆ. ಆದುದರಿಂದ ಭಕ್ತಿಯೋಗದಂತೆ ‘ನಾನು ಮತ್ತು ನನ್ನ ದೇವರು’, ಎಂಬ ಸಂಕುಚಿತ ವಿಚಾರವಿರದೇ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಸಾಧಕರಲ್ಲಿ ಚರಾಚರದಲ್ಲಿ ಭಗವಂತನಿರುವುದರ ಅರಿವು ಹೆಚ್ಚಾಗತೊಡಗುತ್ತದೆ. ಇದರಿಂದ ಸಾಧಕರಲ್ಲಿನ ಅಹಂನ ಪ್ರಮಾಣ ಬೇಗನೆ ಕಡಿಮೆಯಾಗಿ ಅವನ ಆಧ್ಯಾತ್ಮಿಕ ಪ್ರಗತಿಯು ಸಹ ಬೇಗನೆ ಆಗುತ್ತದೆ.
೧ ಅ ೩. ಧ್ಯಾನಯೋಗ : ಧ್ಯಾನಯೋಗದಿಂದ ಸಾಧನೆಯನ್ನು ಮಾಡುವಾಗ ಸಾಧಕರ ಮನಸ್ಸು ಸ್ಥಿರವಾಗಿರುವುದು ಆವಶ್ಯಕವಾಗಿದೆ. ಸದ್ಯದ ಕಾಲದಲ್ಲಿ ರಜ-ತಮದ ಪ್ರಮಾಣ ಹೆಚ್ಚಿರುವುದರಿಂದ ಧ್ಯಾನಯೋಗದ ಮೂಲಕ ಸಾಧನೆಯನ್ನು ಮಾಡುವುದು ಕಠಿಣವಾಗಿದೆ, ಹಾಗೆಯೇ, ಅನೇಕ ಗಂಟೆಗಳವರೆಗೆ ಕುಳಿತು ಧ್ಯಾನವನ್ನು ಮಾಡಲು ಶರೀರಕ್ಕೆ ಒಂದು ಮಿತಿ ಇರುತ್ತದೆ.
೧ ಅ ೩ ಅ. ಗುರುಕೃಪಾಯೋಗದಲ್ಲಿನ ಧ್ಯಾನಯೋಗ : ಸಾಧಕರು ಸತತವಾಗಿ ನಾಮಜಪ ಮಾಡುವುದರ ಕಡೆಗೆ ಗಮನಕೊಡುತ್ತಾರೆ. ಇದರಿಂದ ಅವರ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಸಾಧಕರು ನಾಮಜಪದೊಂದಿಗೆ ತಪ್ಪಿಲ್ಲದೇ ಮತ್ತು ಭಾವಪೂರ್ಣ ಸೇವೆಯಲ್ಲಿ ತಲ್ಲೀನರಾಗಿರುತ್ತಾರೆ. ಅವರಲ್ಲಿ ಸೇವೆಯನ್ನು ಮಾಡುವಾಗ ‘ಸೇವೆ ತಪ್ಪು ರಹಿತವಾಗ ಬೇಕು’, ಎಂಬ ಧ್ಯಾಸವಿರುತ್ತದೆ. ಇದು ಸಾಧಕರ ಸೇವೆಯನ್ನು ಮಾಡುವಾಗ ಇರುವ ಅವ್ಯಕ್ತ ಭಾವವಾಗಿದೆ. ಸಾಧಕರ ಮನಸ್ಸು, ‘ಸೇವೆಯಲ್ಲಿ ಸಂಪೂರ್ಣ ಏಕಾಗ್ರವಾಗುವುದು’, ಸಹಜ ಧ್ಯಾನದ ಲಕ್ಷಣವಾಗಿದೆ.
ಸಾಧಕರು ಸೇವೆಯೊಂದಿಗೆ ಏಕರೂಪವಾಗುತ್ತಾ ಹೋದಂತೆ ಅವರು ನಿಧಾನವಾಗಿ ಸಹಜ ಧ್ಯಾನದ ಕಡೆಗೆ ಮಾರ್ಗಕ್ರಮಣ ಮಾಡುತ್ತಾರೆ. ಸಹಜ ಧ್ಯಾನವು ಧ್ಯಾನಯೋಗದಲ್ಲಿನ ಅಂತಿಮ ಹಂತವಾಗಿದೆ. ಧ್ಯಾನದಲ್ಲಿ ಮನಸ್ಸನ್ನು ಏಕಾಗ್ರತೆ ಮಾಡುವುದು ಕಠಿಣವಾಗಿರುತ್ತದೆ. ಈ ತುಲನೆಯಲ್ಲಿ ಸೇವೆಯಲ್ಲಿ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಇದರಿಂದ ಸೇವೆಯಿಂದ ಸಾಧಕರಿಗೆ ಧ್ಯಾನದ ಅವಸ್ಥೆ ಬೇಗನೆ ಪ್ರಾಪ್ತವಾಗುತ್ತದೆ.
೧ ಅ. ೪. ಜ್ಞಾನಯೋಗ : ಜ್ಞಾನಯೋಗದಿಂದ ಸಾಧನೆಯನ್ನು ಮಾಡಲು ಉಚ್ಚ ಆಧ್ಯಾತ್ಮಿಕ ಮಟ್ಟದಆವಶ್ಯಕತೆ ಇರುತ್ತದೆ. ಕಲಿಯುಗದಲ್ಲಿನ ಜೀವಿಗಳ ಸಾಧನೆ ಕಡಿಮೆ ಇರುವುದರಿಂದ ಅವರಿಗೆ ಜ್ಞಾನಯೋಗ ಅರಗಿಸಿಕೊಳ್ಳಲಾಗುವುದಿಲ್ಲ. ಆದುದರಿಂದ ಸಾಧನೆ ಯಲ್ಲಿ ಪ್ರಗತಿಯಾಗಲು ಸಾಧಕರಿಗೆ ಬಹಳ ಸಮಯ ತಗಲುತ್ತದೆ.
೧ ಅ ೪ ಅ. ಗುರುಕೃಪಾಯೋಗದಲ್ಲಿನ ಜ್ಞಾನ ಯೋಗ : ಜ್ಞಾನವು ಅನಂತವಾಗಿದ್ದು ಅದನ್ನು ಎಷ್ಟು ಅರಿತುಕೊಂಡರೂ ಅದು ಕಡಿಮೆಯೇ ಆಗಿದೆ.ಮಾನವನ ಆಯುಷ್ಯಕ್ಕೆ ಮಿತಿಯಿದೆ. ಆದುದರಿಂದ ಗುರುಕೃಪಾಯೋಗದಲ್ಲಿ ಸಾಧಕರಿಗೆ ಈಶ್ವರಪ್ರಾಪ್ತಿಗಾಗಿ ಎಷ್ಟು ಜ್ಞಾನದ ಆವಶ್ಯಕತೆ ಇದೆಯೋ, ಅಷ್ಟು ಜ್ಞಾನವನ್ನು ಸತ್ಸಂಗ ಅಥವಾ ಗ್ರಂಥಗಳ ಮೂಲಕ ನೀಡಲಾಗುತ್ತದೆ.
ಸಾಧನೆಯ ದೃಷ್ಟಿಯಿಂದ ಉಪಯೋಗವಿಲ್ಲದ ಜ್ಞಾನವನ್ನು ಅರಿತುಕೊಳ್ಳಲು ಸಾಧಕರ ಸಮಯವು ವ್ಯರ್ಥವಾಗದೇ, ಅದನ್ನು ಪ್ರತ್ಯಕ್ಷ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಉಪಯೋಗಿಸಲಾಗುತ್ತದೆ. ಇದರಿಂದ ಸಾಧಕರು ಗ್ರಹಿಸಿದ ಜ್ಞಾನಕ್ಕನು ಸಾರ ಅಧ್ಯಾತ್ಮವನ್ನು ಪ್ರತ್ಯಕ್ಷ ಜೀವಿಸುವುದರಿಂದ ಅವರ ಸಾಧನೆಯಲ್ಲಿನ ಪ್ರಗತಿ ವೇಗದಿಂದ ಆಗುತ್ತದೆ.
೧ ಆ. ಗುರುಕೃಪಾಯೋಗ ಸಾಧನಾಮಾರ್ಗದ ಇತರ ತುಲನಾತ್ಮಕ ವೈಶಿಷ್ಟ್ಯಗಳು
೧ ಆ ೧. ಗುರುಕೃಪಾಯೋಗದಲ್ಲಿ ನಾಲ್ಕೂ ರೀತಿಯ ಯೋಗಮಾರ್ಗಗಳಿಗೆ ಮಹತ್ವವಿದೆ : ಜ್ಞಾನಯೋಗದಲ್ಲಿ ಜ್ಞಾನಕ್ಕೆ, ಧ್ಯಾನಯೋಗದಲ್ಲಿ ಧ್ಯಾನಕ್ಕೆ, ಭಕ್ತಿ ಯೋಗದಲ್ಲಿ ಭಕ್ತಿಗೆ ಮತ್ತು ಕರ್ಮಯೋಗದಲ್ಲಿ ಕರ್ಮಕ್ಕೆ ಮಹತ್ವವನ್ನು ನೀಡಲಾಗಿದೆ. ಆದರೆ ಅದೇ ಗುರುಕೃಪಾಯೋಗದಲ್ಲಿ ಮಾತ್ರ ಈ ನಾಲ್ಕೂ ರೀತಿಯ ಯೋಗಮಾರ್ಗಗಳಿಗೆ ಮಹತ್ವವನ್ನು ನೀಡಲಾಗಿದೆ.
೧ ಆ ೨. ಸಮಷ್ಟಿ ಸಾಧನೆಯನ್ನು ಮಾಡುವುದರಿಂದ ಸಮಾಜ ಋಣವನ್ನು ಬೇಗನೆ ತೀರಿಸಲು ಸಾಧ್ಯವಾಗುತ್ತದೆ : ಮೋಕ್ಷಪ್ರಾಪ್ತಿಗಾಗಿ ಮಾತೃ – ಪಿತೃ ಋಣ, ದೇವಋಣ, ಋಷಿಋಣ ಮತ್ತು ಸಮಾಜ ಋಣವನ್ನು ತೀರಿಸುವುದು ಅವಶ್ಯಕವಾಗಿರುತ್ತದೆ. ಇತರ ಯೋಗಮಾರ್ಗಗಳಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಿ ಮೊದಲ ಮೂರು ಋಣಗಳು ತೀರುತ್ತವೆ; ಆದರೆ ಸಮಾಜಋಣವು ತೀರುವುದಿಲ್ಲ; ಏಕೆಂದರೆ ಅದನ್ನು ತೀರಿಸಲು ಸಮಷ್ಟಿ, ಅಂದರೆ ಅಧ್ಯಾತ್ಮಪ್ರಸಾರ ಮಾಡುವುದು ಆವಶ್ಯಕವಾಗಿರುತ್ತದೆ. ಗುರುಕೃಪಾಯೋಗದಲ್ಲಿ ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ. ಆದುದರಿಂದ ಸಾಧಕರು ನಾಲ್ಕೂ ಋಣಗಳಿಂದ ಬೇಗನೆ ಮುಕ್ತರಾಗುತ್ತಾರೆ.
೧ ಆ ೩. ಸಾಧನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸಲು ಪ್ರಾಯೋಗಿಕ ಮಾರ್ಗದರ್ಶನವಿರುವುದು : ಇತರ ಯೋಗಮಾರ್ಗಗಳು ಈಶ್ವರ ಪ್ರಾಪ್ತಿಯ ಮಾರ್ಗವನ್ನು ತೋರಿಸಿವೆ; ಆದರೆ ಈ ಮಾರ್ಗದಿಂದ ಅಧ್ಯಾತ್ಮದಲ್ಲಿ ಮುಂದೆ ಹೋಗುತ್ತಿರುವಾಗ ನಮ್ಮೆದುರು ಬರುವ ಸ್ವಭಾವದೋಷ ಮತ್ತು ಅಹಂ ಇವುಗಳಿಂದಾಗುವ ಅಡಚಣೆಗಳನ್ನು ದೂರ ಗೊಳಿಸುವ ಮಾರ್ಗವನ್ನು ಕೇವಲ ಗುರುಕೃಪಾಯೋಗ ಈ ಸಾಧನಾಮಾರ್ಗವೇ ತೋರಿಸುತ್ತದೆ.
೧ ಆ ೪. ತಾರಕ ಮತ್ತು ಮಾರಕ ಉಪಾಸನೆಗೆ ಒತ್ತು ನೀಡುವುದು : ಇತರ ಯೋಗಮಾರ್ಗಗಳು ಭಗವಂತನ ತಾರಕ ಉಪಾಸನೆಗೆ ಒತ್ತು ನೀಡಿವೆ. ಗುರುಕೃಪಾಯೋಗದಲ್ಲಿ ತಾರಕ ಮತ್ತು ಮಾರಕ ಈ ಎರಡೂ ಉಪಾಸನೆಗಳಿಗೆ ಒತ್ತು ನೀಡಲಾಗಿದೆ. ಈ ಎರಡೂ ರೂಪಗಳು ಭಗವಂತನ ರೂಪಗಳೇ ಆಗಿರುವುದರಿಂದ ಮತ್ತು ಅವುಗಳ ಮೂಲಕ ಉಪಾಸನೆಯನ್ನು ಮಾಡಿದರೆ ಸಾಧಕರಿಗೆ ಅವನವರೆಗೆ ಬೇಗನೆ ತಲುಪಲು ಸಾಧ್ಯವಾಗುತ್ತದೆ.
೧ ಆ ೫. ಸಾಧಕರು ಅಷ್ಟಾಂಗ ಸಾಧನೆಯಿಂದ ಗುರುತತ್ತ್ವದೊಂದಿಗೆ ಜೋಡಿಸಲ್ಪಟ್ಟಿದ್ದರಿಂದ ಅವರಿಗೆ ಸ್ಥೂಲ ಗುರುಗಳ ಮಾರ್ಗದರ್ಶನದ ಆವಶ್ಯಕತೆ ಉಳಿಯಲಿಲ್ಲ : ಇತರ ಯೋಗಮಾರ್ಗಗಳಿಂದ ಸಾಧನೆಯನ್ನು ಮಾಡುವಾಗ ಸಾಧಕರಿಗೆ ಪ್ರತಿಯೊಂದು ಹಂತದಲ್ಲಿ ಸ್ಥೂಲದೇಹವಿರುವ ಗುರುಗಳ ಆವಶ್ಯಕತೆ ಇರುತ್ತದೆ. ಗುರುಕೃಪಾಯೋಗದಲ್ಲಿ ಅಷ್ಟಾಂಗ ಸಾಧನೆಯನ್ನು ಹೇಳಲಾಗಿದೆ. ಅದಕ್ಕನುಸಾರ ಸಾಧಕರು ಪ್ರಾಮಾಣಿಕತೆಯಿಂದ ಸಾಧನೆಯನ್ನು ಮಾಡಿದರೆ ಅವರು ನೇರವಾಗಿ ಗುರುತತ್ತ್ವದೊಂದಿಗೆ ಜೋಡಿಸಲ್ಪಡುತ್ತಾರೆ. ಅದರನಂತರ ಗುರುತತ್ತ್ವವು ಸೂಕ್ಷ್ಮದಿಂದ ಅಥವಾ ಸ್ಥೂಲದಲ್ಲಿನ ಇತರ ಮಾಧ್ಯಮಗಳಿಂದ ಸಾಧಕರಿಗೆ ಹಂತಹಂತವಾಗಿ ಮಾರ್ಗವನ್ನು ತೋರಿಸುತ್ತಾ ಮೋಕ್ಷದವರೆಗೆ ಕರೆದೊಯ್ಯುತ್ತದೆ. ಈ ಪ್ರಕ್ರಿಯೆಗೆ ‘ಗುರುಕೃಪಾಯೋಗ’, ಎನ್ನುತ್ತಾರೆ.
೧ ಆ ೬. ಭಗವಂತನ ‘ಪ್ರೀತಿ’ ಮತ್ತು ‘ವ್ಯಾಪಕತ್ವ’ ಈ ಗುಣಗಳು ಸಾಧಕರಲ್ಲಿ ವೃದ್ಧಿಯಾಗುತ್ತವೆ :
ಇತರ ಯೋಗಮಾರ್ಗಗಳಲ್ಲಿ ಸಮಷ್ಟಿ ಸಾಧನೆ ಇಲ್ಲ. ಗುರುಕೃಪಾಯೋಗದಲ್ಲಿ ಸಮಷ್ಟಿ ಸಾಧನೆಗೆ ಹೆಚ್ಚು ಮಹತ್ವವಿದೆ. ಸಮಾಜವನ್ನು ಸಾಧನೆಗೆ ಉದ್ಯುಕ್ತಗೊಳಿಸಿದರೆ, ಅಂದರೆ ಸತತವಾಗಿ ಇತರರ ವಿಚಾರ ಮಾಡಿದರೆ ಸಾಧಕರಲ್ಲಿ ಭಗವಂತನ ‘ಪ್ರೀತಿ’ ಮತ್ತು ‘ವ್ಯಾಪಕತ್ವ’ ಈ ಗುಣಗಳು ವೃದ್ಧಿಯಾಗಲು ಸಹಾಯವಾಗುತ್ತದೆ. ಇದರಿಂದ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಲ್ಲಿ ಆಗುತ್ತದೆ.
೧ ಆ ೭. ಯೋಗಮಾರ್ಗಕ್ಕನುಸಾರ ಸಾಧನೆಯನ್ನು ಮಾಡಲು ಆವಶ್ಯಕವಿರುವ ಆಧ್ಯಾತ್ಮಿಕ ಸ್ತರ
ಕಲಿಯುಗದಲ್ಲಿನ ಸರ್ವಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟಿದೆ. ಆದುದರಿಂದ ಅವನಿಗೆ ಇತರ ಯೋಗಮಾರ್ಗಗಳ ತುಲನೆಯಲ್ಲಿ ಗುರುಕೃಪಾಯೋಗದ ಸಾಧನೆಯ ಮಾರ್ಗಕ್ಕನುಸಾರ ಸಾಧನೆಯನ್ನು ಮಾಡುವುದು ಸುಲಭವಾಗುತ್ತದೆ. ಇದು ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ. ಹಾಗೆಯೇ ಕನಿಷ್ಠ, ಮಧ್ಯಮ ಅಥವಾ ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ಜೀವಿಗಳೂ ಗುರುಕೃಪಾಯೋಗನುಸಾರ ಸಾಧನೆಯನ್ನು ಮಾಡಿದರೆ ಅವರ ಮುಂದಿನ ಆಧ್ಯಾತ್ಮಿಕ ಪ್ರಗತಿ ಬೇಗನೆ ಆಗುತ್ತದೆ.
೧ ಆ ೮. ಇತರ ಯೋಗಮಾರ್ಗಗಳ ತುಲನೆಯಲ್ಲಿ ಗುರುಕೃಪಾಯೋಗದಲ್ಲಿ ಈಶ್ವರಪ್ರಾಪ್ತಿಯ ಮಾರ್ಗದಲ್ಲಿನ ಹಂತಗಳನ್ನು ಒಳ್ಳೆಯ ರೀತಿಯಿಂದ ತಿಳಿಸಿಹೇಳಲಾಗಿದೆ : ಇತರ ಯೋಗಮಾರ್ಗಗಳಿಂದ ‘ಸಾಧನೆಯನ್ನು ಮಾಡುವಾಗ ಯಾವ ರೀತಿ ಮಾರ್ಗಕ್ರಮಣ ಮಾಡಬೇಕು ? ಅದರಲ್ಲಿನ ಹಂತಗಳು ಯಾವುವು ? ಅದರಲ್ಲಿ ಬರುವ ಅಡಚಣೆಗಳನ್ನು ಹೇಗೆ ದೂರಗೊಳಿಸಬೇಕು ?, ಎಂಬುದರ ಬಗೆಗಿನ ಜ್ಞಾನವು ಸೀಮಿತವಾಗಿದೆ. ಗುರುಕೃಪಾಯೋಗದಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಆದುದರಿಂದ ಸಾಧಕರಿಗೆ ಮೋಕ್ಷಪ್ರಾಪ್ತಿಯ ಕಡೆಗೆ ಮುಂದೆಹೋಗಲು ಸುಲಭವಾಗುತ್ತದೆ.
೧ ಇ. ವಿವಿಧ ದೇಹಗಳಿಗೆ ಮತ್ತು ಅಹಂಗೆ ಕಾರ್ಯವನ್ನು ಮಾಡಲು ಆವಶ್ಯಕವಿರುವ ಪ್ರಾಣಶಕ್ತಿಯ ಪ್ರಮಾಣ
ಈ ಕೋಷ್ಟಕ್ಕನುಸಾರ ಚಿತ್ತ, ಅಂದರೆ ಅದರಲ್ಲಿನ ವಿವಿಧ ಸ್ವಭಾವದೋಷ ಮತ್ತು ಅಹಂ ಇವುಗಳಿಂದಾಗಿ ಪ್ರಾಣಶಕ್ತಿಯು ಶೇ. ೬೫ ರಷ್ಟು ಖರ್ಚಾಗುತ್ತದೆ. ಗುರುಕೃಪಾಯೋಗ ಈ ಸಾಧನಾಮಾರ್ಗದಲ್ಲಿ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಶೇ. ೬೦ ರಷ್ಟು ಮಹತ್ವವನ್ನು ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಆಚರಣೆಯಲ್ಲಿ ತಂದರೆ ಸಾಧಕರಲ್ಲಿ ದೊಡ್ಡ ಪ್ರಮಾಣದಲ್ಲಿ ಖರ್ಚಾಗುವ ಪ್ರಾಣಶಕ್ತಿಯು ಉಳಿಯುತ್ತದೆ ಮತ್ತು ಈ ಈಶ್ವರನ ಶಕ್ತಿಯ ಲಾಭವು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳಲು ಉಪಯೋಗವಾಗುತ್ತದೆ.
೧ ಈ. ಮೋಕ್ಷಪ್ರಾಪ್ತಿಯಲ್ಲಿ ಚಿತ್ತಶುದ್ಧಿಗೆ ಎಲ್ಲಕ್ಕಿಂತ ಹೆಚ್ಚು ಮಹತ್ವವಿದೆ : ಯಾವುದೇ ಯೋಗಮಾರ್ಗದಿಂದ ಸಾಧನೆಯನ್ನು ಮಾಡಿದರೂ, ಎಲ್ಲಿಯವರೆಗೆ ಚಿತ್ತಶುದ್ಧಿ, ಅಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಾಗುವುದಿಲ್ಲವೋ, ಅಲ್ಲಿಯವರೆಗೆ ಈಶ್ವರಪ್ರಾಪ್ತಿಯಾಗುವುದಿಲ್ಲ. ಇತರ ಯೋಗ ಮಾರ್ಗಗಳಲ್ಲಿ ಈ ವಿಷಯಕ್ಕೆ ಬಹಳಷ್ಟು ಪ್ರಾಯೋಗಿಕ ಮಹತ್ವವನ್ನು ನೀಡಿಲ್ಲ. ಇದರಿಂದ ಚಿತ್ತಶುದ್ಧಿಯಾಗಲು ಸಾಧಕರ ಸಾಧನೆಯು ದೊಡ್ಡ ಪ್ರಮಾಣದಲ್ಲಿ ಖರ್ಚಾಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಗಾಗಿ ಸಾಧಕರಿಗೆ ಅನೇಕ ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರ ತುಲನೆಯಲ್ಲಿ ಗುರುಕೃಪಾಯೋಗ ಎಂಬ ಸಾಧನಾಮಾರ್ಗದಲ್ಲಿ ಚಿತ್ತಶುದ್ಧಿಗೆ ಹೆಚ್ಚು ಮಹತ್ವವನ್ನು ನೀಡಿರುವುದರಿಂದ ಮತ್ತು ಅದರಂತೆ ಕೃತಿಯನ್ನು ಮಾಡಿಸಿಕೊಳ್ಳುವುದರಿಂದ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿಯ ದೊಡ್ಡ ಹಂತವು ಈ ಜನ್ಮದಲ್ಲಿಯೇ ಸಾಧ್ಯವಾಗುತ್ತದೆ.
೧ ಉ. ಕಾಲಕ್ಕನುಸಾರ ಗುರುಕೃಪಾಯೋಗ ಸಾಧನಾ ಮಾರ್ಗದ ಮಹತ್ವ ! : ಕಲಿಯುಗದಲ್ಲಿನ ರಜ – ತಮದ ವಾತಾವರಣ, ಮನುಷ್ಯನ ಸಾಧನೆ ಮಾಡುವ ಕ್ಷಮತೆ ಮತ್ತು ವಯಸ್ಸಿನ ಮಿತಿ, ಇವುಗಳನ್ನು ಗಮನದಲ್ಲಿ ತೆಗೆದುಕೊಂಡರೆ ಇತರ ಯೋಗಮಾರ್ಗಗಳ ತುಲನೆಯಲ್ಲಿ ಗುರುಕೃಪಾಯೋಗ ಸಾಧನಾಮಾರ್ಗವು ಸಾಧನೆಯ ಫಲವನ್ನು ಬೇಗನೆ ಪ್ರಾಪ್ತಮಾಡಿಕೊಡುವುದಾಗಿದೆ; ಏಕೆಂದರೆ ಭಗವಂತನು ಮನುಷ್ಯನಿಗೆ ಗುರುಕೃಪಾಯೋಗವನ್ನು ಸದ್ಯದ ಕಾಲಕ್ಕೆ ಹೊಂದಿಕೆ ಆಗುವಂತೆ ನಿರ್ಮಾಣ ಮಾಡಿದ್ದಾನೆ.
೧ ಊ. ಗುರುಕೃಪಾಯೋಗ ಈ ಸಾಧನಾಮಾರ್ಗದಲ್ಲಿನ ಕಠಿಣತೆ ಮತ್ತು ಅದರಿಂದಾಗುವ ಲಾಭಗಳು ! : ಇತರ ಯೋಗಮಾರ್ಗಗಳ ತುಲನೆಯಲ್ಲಿ ಗುರುಕೃಪಾಯೋಗವು ಎಲ್ಲಕ್ಕಿಂತ ಕಠಿಣ ಮಾರ್ಗವಾಗಿದೆ; ಏಕೆಂದರೆ ಇತರ ಯೋಗಮಾರ್ಗಗಳಲ್ಲಿ ಸಾಧನೆಯನ್ನು ಮಾಡುವಾಗ ಸಾಧಕರ ಇತರ ಸಾಧಕರು ಅಥವಾ ಸಮಾಜದೊಂದಿಗೆ ಯಾವುದೇ ಸಂಬಂಧ ಬರುವುದಿಲ್ಲ; ಆದರೆ ಗುರುಕೃಪಾಯೋಗದಲ್ಲಿ ಸಮಷ್ಟಿ ಸಾಧನೆಗೆ ಹೆಚ್ಚು ಮಹತ್ವವನ್ನು ನೀಡಿದ್ದರಿಂದ ಸಾಧನೆಯನ್ನು ಮಾಡುವಾಗ ಸಾಧಕರಿಗೆ ಯಾವಾಗಲೂ ಇತರ ಸಾಧಕರ ಮತ್ತು ಸಮಾಜದ ಸಂಪರ್ಕ ಬರುತ್ತದೆ. ಇಂತಹ ಸಮಯದಲ್ಲಿ ವಿಭಿನ್ನ ಪ್ರಕೃತಿಗಳೊಂದಿಗೆ ಹೊಂದಿಕೊಂಡು ಸಾಧನೆಯನ್ನು ಮಾಡುವುದು ಸಾಧಕರಿಗೆ ಕಠಿಣವಾಗುತ್ತದೆ. ಸಾಧಕರ ಮನಸ್ಸಿನಲ್ಲಿ ಮೊದಲಿಗೆ ಬಹಳಷ್ಟು ಸಂಘರ್ಷವಾಗುತ್ತದೆ. ಸಾಧನೆಯಲ್ಲಿ ಹೆಚ್ಚಳವಾದಂತೆ ಸಾಧಕರ ಮನಸ್ಸಿನ ಸಂಘರ್ಷ ಕಡಿಮೆಯಾಗುತ್ತದೆ. ಅದರ ನಂತರ ಈ ಸಂಘರ್ಷದ ಫಲಸ್ವರೂಪ ಸಾಧಕರ ಮೋಕ್ಷಪ್ರಾಪ್ತಿಯ ಮಾರ್ಗವು ಮುಕ್ತವಾಗುತ್ತದೆ.
೧ ಎ. ಗುರುಕೃಪಾಯೋಗ ಎಂಬ ಸಾಧನಾಮಾರ್ಗದ ಪಾರ್ಶ್ವಭೂಮಿ ಪರಾತ್ಪರ ಗುರು ಡಾ. ಆಠವಲೆಯವರ ಪೂರ್ವಜನ್ಮಗಳಲ್ಲಿ ಸಿದ್ಧವಾಗಿದೆ : ಪರಾತ್ಪರ ಗುರು ಡಾಕ್ಟರರು ಹಿಂದಿನ ಜನ್ಮಗಳಲ್ಲಿ ಜ್ಞಾನಯೋಗ, ಧ್ಯಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗ ಇವುಗಳ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಅವರ ಹಿಂದಿನ ಜನ್ಮಗಳಲ್ಲಿ ಈ ವಿಷಯಗಳ ಬಗ್ಗೆ ಅನುಭವ ಜನ್ಯ ಅಧ್ಯಯನವಾಗಿತ್ತು. ಆದುದರಿಂದ ಸದ್ಯದ ಜನ್ಮದಲ್ಲಿ ಪರಾತ್ಪರ ಗುರು ಡಾಕ್ಟರರಿಗೆ ನಾಲ್ಕು ಯೋಗಮಾರ್ಗಗಳ ‘ಸಮನ್ವಯವನ್ನು ಸಾಧಿಸುವ, ಈ ಗುರುಕೃಪಾಯೋಗ ಮಾರ್ಗದ ನಿರ್ಮಿತಿಯನ್ನು ಮಾಡಲು ಸಾಧ್ಯವಾಯಿತು.
೧ ಏ. ಪರಾತ್ಪರ ಗುರು ಡಾಕ್ಟರರಿಗೆ ‘ಗುರುಕೃಪಾಯೋಗ, ಈ ಸಾಧನಾಮಾರ್ಗವನ್ನು ನಿರ್ಮಾಣ ಮಾಡಲು ಬರುವುದರ ಹಿಂದಿನ ಕಾರಣಗಳು ಮತ್ತು ಅವುಗಳ ಪ್ರಮಾಣ
– ಶ್ರೀ ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧೨.೨೦೧೭)