ಆಹಾರಪಚನ ಸರಿಯಾಗಿ ಆಗದಿದ್ದರೆ ಅಗ್ನಿತತ್ತ್ವದ ಉಪಾಯ ಮಾಡಿ !

(ಪೂ.) ಡಾ. ಮುಕುಲ ಗಾಡಗೀಳ

ಅನೇಕ ಜನರಿಗೆ ಹೊಟ್ಟೆ ಜಡವಾಗುವುದು, ಶೌಚವು ಸರಿಯಾಗದಿರುವುದು, ಹಸಿವಾಗದಿರುವುದು, ಇತ್ಯಾದಿ ಪಚನದ ತೊಂದರೆಗಳು ಸಂಭವಿಸುತ್ತವೆ. ನಮ್ಮೊಳಗೆ ಅಗ್ನಿತತ್ತ್ವವು ಕಡಿಮೆಯಾಗಿದ್ದರಿಂದ ಈ ತೊಂದರೆಗಳು ಸಂಭವಿಸುತ್ತವೆ. ಹೊಟ್ಟೆಯಲ್ಲಿನ ಅಗ್ನಿ ಮಂದವಾಗಿದ್ದರಿಂದ ತಿಂದಿದ್ದು ಸರಿಯಾಗಿ ಪಚನವಾಗುವುದಿಲ್ಲ; ಇದರಿಂದಾಗಿ ಹೊಟ್ಟೆಗೆ ಜಡತ್ವ ನಿರ್ಮಾಣವಾಗುತ್ತದೆ. ಇದಕ್ಕಾಗಿ ಅಗ್ನಿತತ್ತ್ವವನ್ನು ಪೂರೈಸುವ ಉಪಾಯ ಮಾಡಬೇಕು. ಇದಕ್ಕಾಗಿ ಮುಂದೆ ಹೇಳಿದ ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು.

 

 

ಮುದ್ರೆ

ಮಧ್ಯದ ಬೆರಳಿನ ತುದಿಗೆ ಹೆಬ್ಬೆರಳಿನ ತುದಿ ತಗುಲಿಸುವುದು

ನ್ಯಾಸ

ಆಜ್ಞಾಚಕ್ರ ಮತ್ತು ಮಣಿಪುರ ಚಕ್ರ

ನಾಮಜಪ

ಓಂ ಓಂ ಶ್ರೀ ಅಗ್ನಿದೇವಾಯ ನಮಃ ಓಂ ಓಂ |

ಆಹಾರಪಚನದ ತೊಂದರೆಯು ನಿವಾರಣೆಯಾಗುವವರೆಗೆ ಈ ಉಪಾಯವನ್ನು ಮಾಡಬೇಕು. ಅಲ್ಲಿಯ ವರೆಗೆ ಪ್ರತಿದಿನ ಹಗುರವಾದ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಹಸಿವಾದ ಬಳಿಕವೇ ತಿನ್ನಬೇಕು.

(ಸಾಧಕರಿಗೆ ಸೂಚನೆ : ಇಲ್ಲಿ ಹೇಳಲಾಗಿದ್ದ ಅಗ್ನಿದೇವತೆಯ ನಾಮಜಪವು ಪಚನದ ಶಾರೀರಿಕ ತೊಂದರೆಯ ನಿವಾರಣೆಗಾಗಿ ಇರುವುದರಿಂದ ವ್ಯಷ್ಟಿ ಸ್ತರದಲ್ಲಿದೆ. ಆದುದರಿಂದ ಈ ತೊಂದರೆ ಇರುವ ಸಾಧಕರು ಅಗ್ನಿದೇವತೆಯ ನಾಮಜಪವನ್ನು ಉಪಾಯವೆಂದು ೧ ಗಂಟೆ ಕುಳಿತು ಮಾಡಬೇಕು ಮತ್ತು ಈ ಕಾಲಾವಧಿಯನ್ನು ವ್ಯಷ್ಟಿ ನಾಮಜಪವೆಂದು ತಿಳಿಯಬೇಕು.)
– (ಪೂ.) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯ, ಗೋವಾ.

1 thought on “ಆಹಾರಪಚನ ಸರಿಯಾಗಿ ಆಗದಿದ್ದರೆ ಅಗ್ನಿತತ್ತ್ವದ ಉಪಾಯ ಮಾಡಿ !”

Leave a Comment