ಸದ್ಯ ಆಧ್ಯಾತ್ಮಿಕ ತೊಂದರೆಗಳ ತೀವ್ರತೆ ಹೆಚ್ಚಾಗುತ್ತಿದೆ. ಇದರಿಂದ ಆಧ್ಯಾತ್ಮಿಕ ಉಪಾಯವೆಂದು ನಾಮಜಪ ಅಥವಾ ಮಂತ್ರಪಠಣ ಮಾಡುವ ಬಹುತೇಕ ಸಾಧಕರು ಬಹಳಷ್ಟು ಪ್ರಯತ್ನಿಸಿದರೂ ಅವರ ಮನಸ್ಸು ನಾಮಜಪ ಅಥವಾ ಮಂತ್ರಪಠಣದಲ್ಲಿ ಏಕಾಗ್ರವಾಗುವುದಿಲ್ಲ. ಕೆಲವರಿಗಂತೂ ಉಪಾಯದ ಸಮಯದಲ್ಲಿ ನಾಮಜಪ ಅಥವಾ ಮಂತ್ರಪಠಣವು ಮರೆತು ಹೋಗುತ್ತದೆ. ಮನಸ್ಸು ಏಕಾಗ್ರವಾಗದಿದ್ದರೆ ಮುಂದಿನ ಸುಲಭ ಪ್ರಯತ್ನಗಳನ್ನು ಮಾಡಬೇಕು.
೧. ನಾಮಜಪಕ್ಕೆ ಕುಳಿತ ಬಳಿಕ ತಮ್ಮ ಸುತ್ತಲೂ ನಾಮಜಪದ ಸಂರಕ್ಷಕ-ಕವಚ ನಿರ್ಮಾಣವಾಗಲು ಪ್ರಾರ್ಥನೆಯನ್ನು ಮಾಡಬೇಕು.
೨. ಜಪಮಾಲೆಯಿಂದ ಮನಸ್ಸಿನಲ್ಲಿಯೇ ನಾಮ ಜಪ ಅಥವಾ ಮಂತ್ರಪಠಣವನ್ನು ಮಾಡಬೇಕು. ಅದೂ ಆಗದಿದ್ದರೆ ಗುಣಗುಣಿಸುತ್ತಾ ನಾಮಜಪ ಅಥವಾ ಮಂತ್ರಪಠಣ ಮಾಡಬೇಕು. ಅದೂ ಆಗದಿದ್ದರೆ ನಾಮಜಪ ಅಥವಾ ಮಂತ್ರಜಪವನ್ನು ಬರೆಯಬೇಕು.
೩. ನಾಮಜಪ ಅಥವಾ ಮಂತ್ರಪಠಣವನ್ನು ನಿತ್ಯಕ್ಕಿಂತ ಶೀಘ್ರಗತಿಯಲ್ಲಿ ಮಾಡಬೇಕು.
೪. ಮೊಬೈಲ್‌ನಲ್ಲಿ ಅಲಾರಾಂ ಇಟ್ಟು ಆಗಾಗ ನಾಮಜಪ ಅಥವಾ ಮಂತ್ರಪಠಣ ಭಾವಪೂರ್ಣವಾಗಲು ಪ್ರಾರ್ಥನೆಯನ್ನು ಮಾಡಬೇಕು.
೫. ಮನಸ್ಸಿನಲ್ಲಿ ನಾಮಜಪ ಅಥವಾ ಮಂತ್ರಪಠಣವನ್ನು ಮಾಡುವಾಗ ನಿಧಾನವಾಗಿ ದೀರ್ಘಶ್ವಾಸವನ್ನು ತೆಗೆದುಕೊಳ್ಳಬೇಕು, ಬಳಿಕ ಸಾಧ್ಯವಾದಷ್ಟು ಸಮಯ ಶ್ವಾಸವನ್ನು ಒಳಗೆ ಹಿಡಿದಿಟ್ಟುಕೊಂಡು ನಂತರ ನಿಧಾನವಾಗಿ ಬಿಡಬೇಕು. ಇದರಿಂದ ನಾಡಿಶುದ್ಧಿಯಾಗಲು ಸಹಾಯವಾಗುತ್ತದೆ.
೬. ನಾಮಜಪ ಅಥವಾ ಮಂತ್ರಪಠಣ ಮಾಡುವಾಗ ಒಂದು ದೊಡ್ಡ ಪೆಟ್ಟಿಗೆಯ ತೆರೆದ ಭಾಗವನ್ನು ನಮ್ಮ ಶರೀರದ ಕಡೆಗೆ ತೊಡೆಯ ಮೇಲೆ (ಶರೀರದಿಂದ ಸುಮಾರು ೫-೧೦ ಸೆ.ಮೀ. ದೂರದಲ್ಲಿ) ಅನಾಹತ ಚಕ್ರದ ಸ್ಥಳದಲ್ಲಿ ಉಪಾಯ ವಾಗುವ ರೀತಿಯಲ್ಲಿ ಇಡಬೇಕು.
– (ಪೂ.) ಶ್ರೀ. ಸಂದೀಪ ಆಳಶಿ (೧.೪.೨೦೧೭)
ಸಾಧಕರೇ, ನಾಮಜಪ ಮಾಡುವಾಗ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುತ್ತಿದ್ದಲ್ಲಿ ವೈಖರಿಯಲ್ಲಿ ನಾಮಜಪ ಮಾಡಿರಿ !
‘ಸಾಧಕರು ಆಧ್ಯಾತ್ಮಿಕ ತೊಂದರೆಯ ತೀವ್ರತೆಗನುಸಾರ ಪ್ರತಿದಿನ ಸ್ವಲ್ಪಸಮಯ ಕುಳಿತು ನಾಮಜಪ ಮಾಡುತ್ತಾರೆ. ನಾಮಜಪದ ಸಮಯದಲ್ಲಿ ಸಾಧಕರ ಮನಸ್ಸಿನಲ್ಲಿ ವಿಚಾರಗಳನ್ನು ಹೆಚ್ಚಿಸಿ ಅನಿಷ್ಟ ಶಕ್ತಿಗಳು ನಾಮಜಪದಲ್ಲಿ ಅಡ್ಡಿಯುಂಟು ಮಾಡಲು ಪ್ರಯತ್ನಿಸುತ್ತವೆ. ಆದ್ದರಿಂದ ನಾಮಜಪ ಏಕಾಗ್ರತೆಯಿಂದಾಗದೇ ಸಾಧಕರಿಗೆ ಅದರಿಂದ ಅಪೇಕ್ಷಿತ ರೀತಿಯ ಲಾಭವಾಗುವುದಿಲ್ಲ. ಮನಸ್ಸಿನಲ್ಲಿ ಅನಗತ್ಯ ವಿಚಾರಗಳು ಬರುತ್ತಿದ್ದಲ್ಲಿ ಅದನ್ನು ತಡೆಯಲು ನಾಮಜಪವನ್ನು ಒಂದು ಕಾಗದದ ಮೇಲೆ ಬರೆದು ಮತ್ತು ಅದನ್ನು ನೋಡಿ ವೈಖರಿಯಲ್ಲಿ (ಜೋರಾದ ಸ್ವರಯಲ್ಲಿ) ನಾಮಜಪ ಮಾಡಿರಿ. ಇದರಿಂದ ವಿಚಾರಗಳತ್ತ ಗಮನ ಹೋಗದೆ ಅದು ತನ್ನಿಂದತಾನೇ ಕಡಿಮೆಯಾಗಿ ನಾಮಜಪವು ಪರಿಣಾಮಕಾರಿಯಾಗುವುದು. ದೊಡ್ಡ ಸ್ವರದಲ್ಲಿ ನಾಮಜಪ ಮಾಡುವಾಗ ಇತರರಿಗೆ ಅಡಚಣೆಯಾಗದಿರುವಂತೆ ಕಾಳಜಿ ವಹಿಸಿ. ಆಧ್ಯಾತ್ಮಿಕ ತೊಂದರೆಯಿಂದ ಸಾಧಕರ ರಕ್ಷಣೆ ಮಾಡುವ ಹಾಗೂ ಚಿತ್ತದ ಮೇಲೆ ಹೊಸ ಸಂಸ್ಕಾರವಾಗದಿರಲು ಸಹಾಯ ಮಾಡುವ ನಾಮಜಪವನ್ನು ಭಾವಪೂರ್ಣವಾಗಿ ಮತ್ತು ಏಕಾಗ್ರತೆಯಿಂದ ಮಾಡಿರಿ ! – (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೧೭)
ನಾಮ ಜಪ ಮಾಡಲೂ ನಮಗೆ ಶ್ರೀ ವಿನಾಕ .
ಶ್ರೀ ವೆಂಕಟೇಶ್ವರ. ಲಕ್ಷ್ಮೀದೇವಿ. ಶ್ರೀ ಶನೈಶ್ವರ ಸ್ವಾಮಿಯ ನಾಮಾಂಕಿತ ತಿಳಿಸಿ ಸರ್
ನಮಸ್ಕಾರ ಮಂಜೇಗೌಡರವರೇ,
ತಾವು
ಶ್ರೀ ಗಣೇಶಾಯ ನಮಃ | ಅಥವಾ ಶ್ರೀ ವಿನಾಯಕಾಯ ನಮಃ |
ಶ್ರೀ ವೆಂಕಟೇಶ್ವರಾಯ ನಮಃ | ಅಥವಾ ಶ್ರೀ ವೆಂಕಟೇಶಾಯ ನಮಃ |
ಶ್ರೀ ಲಕ್ಷ್ಮೀದೇವ್ಯೈ ನಮಃ |
ಶ್ರೀ ಶನೈಶ್ಚರಾಯ ನಮಃ |
ಈ ರೀತಿ ಆಯಾ ದೇವತೆಗಳ ಜಪವನ್ನು ಮಾಡಬಹುದು. ಅದರಲ್ಲಿಯೂ ನಿಮ್ಮ ಕುಲದೇವರ ನಾಮ ಜಪಿಸಿದರೆ ಅದು ಅತ್ಯುತ್ತಮವಾಗಿದೆ. ಕುಲದೇವರ ನಾಮ ಜಪಿಸುವ ಮಹತ್ವವನ್ನು ಕೂಡ ನಮ್ಮ ಜಾಲತಾಣದಲ್ಲಿ ನೀಡಲಾಗಿದೆ. ಆ ಲೇಖನವನ್ನೂ ಓದಿ.
ಉತ್ತಮ ರೀತಿಯಲ್ಲಿ ಸಂಪೂರ್ಣ ಸಂದೇಶ ಕಳಿಸಿದಿರ ನಮಸ್ಕಾರ ಗಳು