ಬಟ್ಟೆಗಳನ್ನು ಒಗೆಯುವುದು ಮತ್ತು ಒಗೆದ ಬಟ್ಟೆಗಳನ್ನು ಹಾಕಿಕೊಳ್ಳುವುದರ ಮಹತ್ವ
೧. ಒಗೆದು ಸ್ವಚ್ಛ ಗೊಳಿಸಿದ ಬಟ್ಟೆಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಧರಿಸುವುದರಿಂದ ವ್ಯಕ್ತಿಯಲ್ಲಿನ ರಜ-ತಮಗಳು ಕಡಿಮೆಯಾಗಿ ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುವುದು : ಒಗೆದ ಬಟ್ಟೆಗಳನ್ನು ಹಾಕಿಕೊಂಡ ಮೇಲೆ, ಒಗೆದ ಬಟ್ಟೆಗಳಲ್ಲಿರುವ ನೂಲಿನಲ್ಲಿ ವ್ಯಕ್ತಿಯ ಶರೀರದಲ್ಲಿನ ರಜ-ತಮ ಲಹರಿಗಳು ಆಕರ್ಷಿತವಾಗುತ್ತವೆ. ಬಟ್ಟೆಗಳನ್ನು ಒಗೆಯದೇ ಹಾಕಿಕೊಂಡರೆ ಬಟ್ಟೆಯಲ್ಲಿ ಆಕರ್ಷಿತವಾಗಿರುವ ರಜ-ತಮ ಲಹರಿಗಳಿಂದಾಗಿ ವ್ಯಕ್ತಿಯಲ್ಲಿನ ರಜ-ತಮವು ಹೆಚ್ಚಾಗುತ್ತದೆ ಮತ್ತು ವ್ಯಕ್ತಿಯ ಸುತ್ತಲಿನ ವಾಯು ಮಂಡಲವು ದೂಷಿತವಾಗುತ್ತದೆ. ಇದರಿಂದ ವ್ಯಕ್ತಿ ಮತ್ತು ವ್ಯಕ್ತಿಯ ಬಟ್ಟೆಗಳ ಮೇಲೆ ಕೆಟ್ಟಶಕ್ತಿಗಳ ಹಲ್ಲೆಗಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಉಪಯೋಗಿಸಿದ ಬಟ್ಟೆಗಳನ್ನು ಒಗೆಯುವುದರಿಂದ ನೀರಿನಲ್ಲಿನ ಆಪತತ್ತ್ವಯುಕ್ತ ಈಶ್ವರೀ ಚೈತನ್ಯದಿಂದ ಬಟ್ಟೆಗಳ ಮೇಲೆ ಆಧ್ಯಾತ್ಮಿಕ ಉಪಚಾರವಾಗಿ ಅವುಗಳಲ್ಲಿನ ರಜ-ತಮವು ನಾಶವಾಗುತ್ತದೆ ಮತ್ತು ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಒಗೆದ ಬಟ್ಟೆಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಹಾಕಿಕೊಳ್ಳುವುದರಿಂದ ವ್ಯಕ್ತಿಯಲ್ಲಿನ ರಜ-ತಮವು ಕಡಿಮೆಯಾಗಿ ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುತ್ತದೆ. – ಈಶ್ವರ (ಕು. ಮಧುರಾ ಭೋಸಲೆ ಇವರು ಈಶ್ವರ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೧೨.೧೧.೨೦೦೭, ಮಧ್ಯಾಹ್ನ ೧.೩೦)
೨. ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವವರಿಗೆ ಒಗೆಯದ, ಹೊಲಸಾದ ಮತ್ತು ವಾಸನೆಯಿಂದ ತುಂಬಿದ, ಬಟ್ಟೆಗಳನ್ನು ಹಾಕಿ ಕೊಳ್ಳಲು ಇಷ್ಟವಾಗುವುದು : ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವ ಕೆಲವು ಜನರಿಗೆ ಒಗೆದ ಬಟ್ಟೆಗಳನ್ನು ಹಾಕಿಕೊಳ್ಳಲು ಇಷ್ಟವಾಗುವುದಿಲ್ಲ. ಅವರಿಗೆ ವಾಸನೆಯಿಂದ ತುಂಬಿದ ಹೊಲಸಾದ ಬಟ್ಟೆಗಳನ್ನು ಹಾಕಿಕೊಳ್ಳಲು ಇಷ್ಟವಾಗುತ್ತದೆ. ರಜ-ತಮದಿಂದ ತುಂಬಿರುವ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ, ಇಂತಹ ವ್ಯಕ್ತಿಗಳಿಗೆ ತೊಂದರೆ ಕೊಡುವ ಪಾತಾಳದಲ್ಲಿನ ಮಾಂತ್ರಿಕರಿಗೆ (ಬಲಾಢ್ಯ ಅಸುರೀ ಶಕ್ತಿಗಳಿಗೆ) ಅವರ ತ್ರಾಸದಾಯಕ ಶಕ್ತಿಯನ್ನು ಹೆಚ್ಚಿಸಲು ಪೂರಕ ವಾತಾವರಣವು ಸಿಗುತ್ತದೆ. ಆದುದರಿಂದ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳುವ ವಿಚಾರವನ್ನು ಮಾಂತ್ರಿಕರೇ ವ್ಯಕ್ತಿಗಳ ಮನಸ್ಸಿನಲ್ಲಿ ಹಾಕುತ್ತಾರೆ.
೩. ಬಟ್ಟೆಗಳನ್ನು ಒಗೆಯದೇ ಅವುಗಳ ಮೇಲೆ ಅತ್ತರನ್ನು ಸಿಂಪಡಿಸುವುದರಿಂದ ಬಟ್ಟೆಯಲ್ಲಿನ ರಜ-ತಮವು ನಾಶವಾಗುವುದಿಲ್ಲ, ಇದರಿಂದ ಕೆಟ್ಟ ಶಕ್ತಿಗಳಿಗೆ ಹಲ್ಲೆ ಮಾಡಲು ಸಾಧ್ಯವಾಗುತ್ತದೆ : ಹಿಂದೂ ಧರ್ಮದಲ್ಲಿ ಮಡಿವಸ್ತ್ರವನ್ನು (ಒಗೆದ ಬಟ್ಟೆಗಳನ್ನು) ಧರಿಸಲು ಹೇಳಲಾಗಿದೆ. ಕೆಲವು ಪಂಥಗಳಲ್ಲಿನ ಜನರು ಪ್ರತಿದಿನ ಸ್ನಾನವನ್ನೂ ಮಾಡುವುದಿಲ್ಲ. ಹೀಗಿರುವಾಗ ಬಟ್ಟೆ ಒಗೆಯುವುದಂತೂ ದೂರದ ಮಾತು. ಕೆಲವರು ಒಗೆಯದ ಬಟ್ಟೆಗಳನ್ನು ಬಹಳ ದಿನಗಳವರೆಗೆ ಉಪಯೋಗಿಸುತ್ತಾರೆ. ಇನ್ನೂ ಕೆಲವರು ಆ ಬಟ್ಟೆಗಳ ಮೇಲೆ ಅತ್ತರನ್ನು ಸಿಂಪಡಿಸಿ ಮತ್ತೆ ಮತ್ತೆ ಉಪಯೋಗಿಸುತ್ತಾರೆ. ಅತ್ತರನ್ನು ಸಿಂಪಡಿಸುವುದರಿಂದ ಬಟ್ಟೆಗಳಿಗೆ ಸ್ಥೂಲದಲ್ಲಿ ಸುಗಂಧ ಬರುತ್ತಿದ್ದರೂ, ಸೂಕ್ಷ್ಮದಲ್ಲಿ ಆ ಬಟ್ಟೆಗಳಲ್ಲಿರುವ ರಜ-ತಮವು ನಾಶವಾಗಿರುವುದಿಲ್ಲ. ಆದುದರಿಂದ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳುವ ವ್ಯಕ್ತಿಯಲ್ಲಿನ ರಜ- ತಮವು ಹೆಚ್ಚಾಗುತ್ತದೆ ಮತ್ತು ಅವರ ಮೇಲೆ ಕೆಟ್ಟ ಶಕ್ತಿಗಳಿಂದಾಗುವ ಹಲ್ಲೆಗಳೂ ಹೆಚ್ಚಾಗುತ್ತವೆ. – ಈಶ್ವರ (ಕು. ಮಧುರಾ ಭೋಸಲೆ ಇವರು ಈಶ್ವರ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೧೨.೧೧.೨೦೦೭, ಮಧ್ಯಾಹ್ನ ೧.೩೦)
ನದಿತೀರದಲ್ಲಿ ಬಟ್ಟೆಗಳನ್ನು ಒಗೆಯುವುದರ ಮಹತ್ವ
ಹಿಂದಿನ ಕಾಲದಲ್ಲಿ ನದಿಗಳ ತೀರದಲ್ಲಿ ನೀರಿನ ಪ್ರವಾಹದಲ್ಲಿ ಬಟ್ಟೆಗಳನ್ನು ಒಗೆಯುತ್ತಿದ್ದರು. ಇದರಿಂದ ನೀರಿನ ಶುದ್ಧ ಸ್ಪರ್ಶದಿಂದ ಬಟ್ಟೆಗಳಲ್ಲಿನ ರಜ-ತಮಾತ್ಮಕ ಸ್ಪಂದನ ಗಳಲ್ಲಿನ ಪಾಪದ ಪರಿಮಾರ್ಜನೆಯು ಪ್ರವಾಹಾತ್ಮಕ ನೀರಿನಲ್ಲಿ ಆಗುತ್ತಿತ್ತು. ಅಂದರೆ ಈ ಕೃತಿಯು ಬಟ್ಟೆಗಳಲ್ಲಿನ ರಜ-ತಮಾತ್ಮಕ ಸೂಕ್ಷ್ಮ ಪರಿಣಾಮವನ್ನೂ ನಾಶ ಮಾಡುವಂತಹದ್ದಾಗಿತ್ತು. ಆದುದರಿಂದ ಆ ಕಾಲದಲ್ಲಿ ಬ್ರಹ್ಮಕರ್ಮದಲ್ಲಿ ಮಡಿವಸ್ತ್ರಗಳಿಗೆ (ಒಗೆದ ಬಟ್ಟೆಗಳಿಗೆ) ಬಹಳ ಮಹತ್ವವನ್ನು ನೀಡಲಾಗಿತ್ತು.
ಬಟ್ಟೆಗಳನ್ನು ಒಗೆಯುವ ಯಂತ್ರ
ಬಟ್ಟೆಗಳನ್ನು ಒಗೆಯುವ ಯಂತ್ರದಲ್ಲಿ (ವಾಷಿಂಗ್ ಮಷೀನ್) ಬಟ್ಟೆಗಳನ್ನು ಒಗೆಯುವುದರಿಂದ ಅವು ರಜ-ತಮಾತ್ಮಕವಾಗುವುದರಿಂದ, ಅವುಗಳಿಂದಾಗುವ ಪರಿಣಾಮಗಳು : ಇತ್ತೀಚೆಗೆ ಸಮಯದ ಅಭಾವದಿಂದಾಗಿ ಹಾಗೂ ಬಟ್ಟೆಗಳನ್ನು ಒಗೆಯುವ ಕಷ್ಟವನ್ನು ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನರು ಬಟ್ಟೆಗಳನ್ನು ಒಗೆಯಲು ಯಂತ್ರವನ್ನು ಉಪಯೋಗಿಸುತ್ತಾರೆ. ಬಟ್ಟೆಗಳನ್ನು ಒಗೆಯುವ ಯಂತ್ರದಲ್ಲಿ ಒಗೆಯುವುದರಿಂದ ಬಟ್ಟೆಗಳಲ್ಲಾಗುವ ಯಾಂತ್ರಿಕ ಮತ್ತು ವೇಗಮಯ ರಜ-ತಮಾತ್ಮಕ ವಿದ್ಯುತ್ ಸ್ಪಂದನಗಳಿಂದ ಬಟ್ಟೆಗಳಲ್ಲಿ ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳು ಜಾಗೃತವಾಗುತ್ತವೆ. ನೀರಿನ ಸ್ಪರ್ಶದಿಂದ ಆಪತತ್ತ್ವಾತ್ಮಕ ಲಹರಿಗಳ ರಭಸದಿಂದ ಪ್ರವಾಹದ ರೂಪದಲ್ಲಿ ಜೋರಾಗಿ ಕಾರ್ಯ ಮಾಡತೊಡಗುತ್ತವೆ. ಇದರಿಂದ
೧. ಬಟ್ಟೆಗಳಿಂದ ತ್ರಾಸದಾಯಕ ಸ್ಪಂದನಗಳು ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗತೊಡಗುತ್ತವೆ.
೨. ‘ಬಟ್ಟೆಗಳನ್ನು ಒಗೆಯುವ ಯಂತ್ರದಲ್ಲಿ ಒಗೆದಿದ್ದೇವೆ, ಆದುದರಿಂದ ಒಳ್ಳೆಯ ರೀತಿಯಲ್ಲಿ ಸ್ವಚ್ಛವಾಗಿವೆ ಎಂದು ಅನಿಸಿದರೂ ಅವು ಸೂಕ್ಷ್ಮಸ್ತರದಲ್ಲಿ ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿ ಕೊಂಡಿರುವುದರಿಂದ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಕೆಟ್ಟ ಶಕ್ತಿಗಳ ತೊಂದರೆಯು ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ರಜ-ತಮಾತ್ಮಕ ಪರಿಣಾಮಗಳನ್ನು ದೂರಗೊಳಿಸುವ ಉಪಾಯಗಳು : ಬಟ್ಟೆಗಳನ್ನು ಒಗೆಯುವಾಗ ಯಂತ್ರದಲ್ಲಿ (ಬಟ್ಟೆಗಳಲ್ಲಿ) ಊದುಬತ್ತಿಯ ವಿಭೂತಿ ಅಥವಾ ಪವಿತ್ರ ಯಜ್ಞದ ವಿಭೂತಿಯನ್ನು ಹಾಕಬೇಕು ಮತ್ತು ಬಟ್ಟೆಗಳಲ್ಲಿರುವ ರಜ-ತಮಾತ್ಮಕರೂಪೀ ಸೂಕ್ಷ್ಮ ಮಾಲಿನ್ಯವನ್ನು ನಾಶಗೊಳಿಸಲು ವಿಭೂತಿಯಲ್ಲಿನ ದೇವತ್ವಕ್ಕೆ ಪ್ರಾರ್ಥನೆ ಮಾಡಬೇಕು. – ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಈಶ್ವರ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೨೭.೧೦.೨೦೦೭, ರಾ. ೧೦.೨೫)
(೨೦೦೪ ರಲ್ಲಿ ಗೋವಾದ ಫೋಂಡಾದಲ್ಲಿನ ಸನಾತನ ಆಶ್ರಮದಲ್ಲಿ ಬಟ್ಟೆಗಳನ್ನು ಒಗೆಯುವ ಬಗ್ಗೆ ವಿವಿಧ ಪ್ರಯೋಗಗಳನ್ನು ಮಾಡಲಾಗಿತ್ತು. ಆಗ ಮೇಲೆ ಹೇಳಿದ ಕೃತಿಯಿಂದ ಬಟ್ಟೆಗಳನ್ನು ಒಗೆದರೆ ಹೆಚ್ಚು ಲಾಭವಾಗುತ್ತದೆ ಎಂದು ಅನುಭವವು ಬಂದಿತ್ತು. ಪ್ರತಿಸಲ ಈಶ್ವರನು ಮೊದಲು ಅನುಭೂತಿಯನ್ನು ಕೊಡುತ್ತಾನೆ ಅನಂತರ ಅದರ ಬಗ್ಗೆ ಜ್ಞಾನವನ್ನು ನೀಡುತ್ತಾನೆ. ೨೭.೧೦.೨೦೦೭ ರಂದು ದೊರಕಿದ ಜ್ಞಾನವು ಇದರ ಇನ್ನೊಂದು ಉದಾಹರಣೆಯಾಗಿದೆ. – ಪ.ಪೂ. ಡಾ. ಜಯಂತ ಆಠವಲೆ, ಸಂಕಲನಕಾರರು)
ಆಧುನಿಕತೆಯ ಕಡೆಗಲ್ಲ, ವಿನಾಶದ ಕಡೆಗೆ ಒಯ್ಯುವ ವಿಜ್ಞಾನ !
ವಿಶ್ವವನ್ನು ಅಧ್ಯಯನ ಮಾಡುವ ಋಷಿಮುನಿಗಳ ಕೈಯಿಂದ ಬಟ್ಟೆಗಳನ್ನು ಒಗೆಯುವ ಪದ್ಧತಿಗೆ ‘ಅನಾಗರಿಕವೆಂದು’ ಹೀನೈಸುವ, ಮತ್ತು ಬಟ್ಟೆಗಳನ್ನು ಒಗೆಯುವ ಯಂತ್ರವನ್ನು ಕಂಡು ಹಿಡಿದು ಮಾನವರನ್ನು ವಿನಾಶದ ಕಡೆಗೆ ಒಯ್ಯುವ ಇಂದಿನ ವಿಜ್ಞಾನಿಗಳು ಆಧುನಿಕರಾಗಿಲ್ಲ, ಅವರು ಹಿಂದುಳಿದವರೇ ಆಗಿದ್ದಾರೆ.
ಬಟ್ಟೆಗಳನ್ನು ಒಣಗಿಸುವ ಬಗೆಗಿನ ಆಚಾರಧರ್ಮ
ಮರದ (ಕಟ್ಟಿಗೆಯ) ದಂಡದ ಮೇಲೆ ಬಟ್ಟೆಗಳನ್ನು ಒಣಗಲು ಹಾಕಬೇಕು : ಸಾಧ್ಯವಿದ್ದರೆ ಸ್ನಾನ ಮಾಡಿ ಬರುವಾಗಲೇ ಬಟ್ಟೆಗಳನ್ನು ಒಗೆದುಕೊಂಡು ಬರಬೇಕು. ಬಟ್ಟೆಗಳನ್ನು ಒಗೆದ ಮೇಲೆ ಅವುಗಳನ್ನು ಮನೆಯಲ್ಲಿ ಎತ್ತರದಲ್ಲಿ ತೂಗಾಡಿಸಿದ ಮರದ ದಂಡದ (ಗಳದ) ಮೇಲೆ ಮರದ ಕೋಲಿನಿಂದ ಒಣಗಲು ಹಾಕಬೇಕು. ಮರದ (ಕಟ್ಟಿಗೆಯ) ದಂಡವು ತನ್ನಲ್ಲಿನ ಸೂಕ್ಷ್ಮ ಅಗ್ನಿಯ ಸಹಾಯದಿಂದ ಒಣಗಲು ಹಾಕಿರುವ ಬಟ್ಟೆಗಳ ಸುತ್ತಲೂ ರಕ್ಷಾಕವಚವನ್ನು ನಿರ್ಮಾಣ ಮಾಡುತ್ತದೆ. ಮರದ ದಂಡವು ತನ್ನಲ್ಲಿನ ವಲಯಗಳ ರೂಪದಲ್ಲಿನ ತೇಜ ದಾಯಕ ಲಹರಿಗಳನ್ನು ಪ್ರಕ್ಷೇಪಿಸುತ್ತಿರುತ್ತದೆ. ಮರದ ದಂಡವು ಬಟ್ಟೆಗಳಿಗೆ, ಗತಿಮಾನ ಮತ್ತು ಹೆಚ್ಚು ಪ್ರಕ್ಷೇಪಣೆಯ ಕ್ಷಮತೆಯನ್ನು ತೋರಿಸುವ ಕವಚವನ್ನೇ ಉಪಲಬ್ಧ ಮಾಡಿಕೊಡುತ್ತದೆ. ಬಟ್ಟೆಗಳನ್ನು ದಂಡದ ಮೇಲೆ ಹರಡಿ ಒಣಗಲು ಹಾಕಿರುವುದರಿಂದ ಅವೂ ಸಹ ಪ್ರಕ್ಷೇಪಣೆಯ ಅವಸ್ಥೆಯಲ್ಲಿಯೇ ಇರುತ್ತವೆ. ಮರದ ಕೋಲಿನಿಂದ ಬಟ್ಟೆಗಳನ್ನು ಒಣಗಲು ಹಾಕುವುದರಿಂದ ಲೋಹದಂತಹ ಯಾವುದೇ ವಸ್ತುವಿನಿಂದ ಬಟ್ಟೆಗಳಿಗಾಗುವ ರಜತಮಾತ್ಮಕ ಸಂಸರ್ಗವು ತಡೆಗಟ್ಟಲ್ಪಡುತ್ತದೆ.
ಒಣಗಿದ ಬಟ್ಟೆಗಳನ್ನು ತೆಗೆದಿಡುವುದು : ಹಿಂದಿನ ಕಾಲದಲ್ಲಿ ಗರಿಗರಿಯಾಗಿ ಒಣಗಿದ ಬಟ್ಟೆಗಳನ್ನು ಸಾಯಂಕಾಲದೊಳಗೆ ತೆಗೆದು, ಯೋಗ್ಯ ಪದ್ಧತಿಯಿಂದ ಮಡಚಿ ಗೋಡೆಗಳ ಮೇಲಿನ ಮರದ (ಕಟ್ಟಿಗೆಯ) ಕುಂಠಿಯ ಮೇಲೆ ಇಡುತ್ತಿದ್ದರು. ಕುಂಠಿಯ ಮೇಲೆ ಮಡಚಿದ ಬಟ್ಟೆಗಳನ್ನು ಇಡುವುದರಿಂದ ಬಟ್ಟೆಗಳ ಮಧ್ಯಭಾಗದಲ್ಲಿ ತಯಾರಾದ ಗೋಲಾಕಾರ ಕಮಾನಿನಿಂದ ಮರದ ಮತ್ತು ಭೂಮಿಗೆ ಸಮಾನಾಂತರವಾಗಿರುವ ಕುಂಠಿಯು ಕಾಣಿಸುತ್ತಿತ್ತು. ಈ ಕುಂಠಿಯ ಕೇಂದ್ರಬಿಂದುವಿನಿಂದ ತೇಜದಾಯಕ ಲಹರಿಗಳು ವೇಗವಾಗಿ ಪ್ರಕ್ಷೇಪಣೆಯಾಗುವುದರಿಂದ ಘನೀಕೃತ ಅವಸ್ಥೆಯಲ್ಲಿರುವ ಬಟ್ಟೆಗಳ ನೆರಿಗೆಗಳಿಂದಲೂ ಲಹರಿಗಳು ಪ್ರಕ್ಷೇಪಣೆ ಆಗುತ್ತಿದ್ದವು. ಮರದಿಂದ ಬಟ್ಟೆಗಳ ನೆರಿಗೆಗಳಲ್ಲಿ ಸಂಕ್ರಮಿತವಾದ ಅಗ್ನಿರೂಪೀ ತೇಜಲಹರಿಗಳು ಘನೀಕೃತವಾಗಿ ಸಗುಣರೂಪ ಧಾರಣೆ ಮಾಡಿ ಭೂಮಿಯ ದಿಕ್ಕಿನಲ್ಲಿರುವ ಬಟ್ಟೆಗಳ ತುದಿಗಳಿಂದ ಪಾತಾಳದಿಂದ ಪ್ರಕ್ಷೇಪಿತವಾಗುವ ತ್ರಾಸದಾಯಕ ಸ್ಪಂದನಗಳೊಂದಿಗೆ ಹೋರಾಡುತ್ತಿದ್ದವು. ಅಂದರೆ ಯಾವ ರೀತಿಯಲ್ಲಿ ಕೃತಿ ಇರುತ್ತದೆಯೋ, ಅದೇರೀತಿ ವಾಸ್ತುವಿನಲ್ಲಿನ ಇತರ ಪೂರಕ ಸಂಗತಿಗಳ ರಚನೆಯನ್ನು ಮಾಡಿ ಆಯಾಯ ಘಟಕಗಳ ಕಾರ್ಯಕ್ಕೆ ಕವಚಾತ್ಮಕ ಪೂರಕ ಮತ್ತು ಪೋಷಕ ವಾತಾವರಣವನ್ನು ಮಾಡಿಕೊಡುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ಹೀಗೆ ಸತತ ಭೂಮಿಯಿಂದ ದೂರ ಮತ್ತು ಮೇಲಿನ ದಿಕ್ಕಿನಲ್ಲಿ ವಾಯುಮಂಡಲದಲ್ಲಿ ಮರದಲ್ಲಿನ (ಕಟ್ಟಿಗೆಯಲ್ಲಿನ) ಅಗ್ನಿಯ ಸಹಾಯದಿಂದ ಬಟ್ಟೆಗಳನ್ನು ಇಡುವುದರಿಂದ ಅವು ಸತತ ಶುದ್ಧವಾಗಿದ್ದು ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳಿಂದಲೂ ಮುಕ್ತವಾಗಿರುತ್ತಿದ್ದವು.
– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)
ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಆಗುವ ಲಾಭಗಳು
ಒಗೆದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳ ಮೇಲೆ ಆಧ್ಯಾತ್ಮಿಕ ಉಪಚಾರವಾಗುತ್ತದೆ, ಮತ್ತು ಅದರ ಲಾಭವು ಆ ಬಟ್ಟೆಗಳನ್ನು ಧರಿಸುವವರಿಗೂ ಆಗುತ್ತದೆ. ಅದಲ್ಲದೇ, ಬಿಸಿಲಿನಲ್ಲಿ ಒಣಗಿಸಿದ ಬಟ್ಟೆಗಳಿಗೆ ಒಂದು ರೀತಿಯ ಸೂಕ್ಷ್ಮ ಸುಗಂಧವೂ ಬರುತ್ತದೆ.
– ಕುಂ. ಪ್ರಿಯಾಂಕಾ ಲೋಟಲೀಕರ (೧೨.೩.೨೦೧೦)
ಸಾತ್ತ್ವಿಕ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ದೇಹದ ಸುತ್ತಲೂ ಸಂರಕ್ಷಣಾ ಕವಚವು ನಿರ್ಮಾಣವಾಗುವುದು
‘ಬಟ್ಟೆಗಳನ್ನು ಧರಿಸುವುದು, ಒಂದು ಸಂರಕ್ಷಣಾತ್ಮಕ ಆಚಾರವಾಗಿದೆ. ಬಟ್ಟೆಗಳ ಸಾತ್ತ್ವಿಕ ಬಣ್ಣಗಳಿಂದ ಮತ್ತು ಅವುಗಳ ಆಕಾರದಿಂದ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳಿಂದ ನಮ್ಮ ರಕ್ಷಣೆಯಾಗುತ್ತದೆ. ಆದುದರಿಂದ ಸ್ನಾನದಿಂದ ದೇಹವು ಶುದ್ಧವಾದ ಕೂಡಲೇ ಒಗೆದ ಬಟ್ಟೆಗಳನ್ನು ಹಾಕಿಕೊಂಡು ದೇಹದ ಮೇಲೆ ಒಂದು ರೀತಿಯ ಸಂರಕ್ಷಣಾ-ಕವಚವನ್ನು ನಿರ್ಮಾಣ ಮಾಡಲಾಗುತ್ತದೆ. ಆದುದರಿಂದ ಸಾತ್ತ್ವಿಕ ಬಟ್ಟೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. – ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ನಾಮದಿಂದ ಬರೆಯುತ್ತಾರೆ, ೧೧.೧೨.೨೦೦೭, ಮಧ್ಯಾಹ್ನ ೧.೪೩)
(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ’)
Good
ಉತ್ತಮ ಮಾಹಿತಿ
Good information🙏