ದಹೀಕಾಲಾ
ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣ ಮಾಡುವುದೇ ‘ಕಾಲಾ’. ಶ್ರೀಕೃಷ್ಣನು ವ್ರಜಮಂಡಲದಲ್ಲಿ ಗೋವುಗಳನ್ನು ಮೇಯಿಸುವಾಗ ಸ್ವಂತದ ಮತ್ತು ಇತರ ಮಿತ್ರರ ಬುತ್ತಿಗಳನ್ನು ಒಟ್ಟಿಗೆ ಕೂಡಿಸಿ ಆ ಖಾದ್ಯಪದಾರ್ಥಗಳ ‘ಕಾಲಾ’ ಮಾಡಿದನು ಮತ್ತು ಎಲ್ಲರೊಂದಿಗೆ ತಿಂದನು. ಈ ಕಥೆಗನುರ ಮುಂದೆ ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.
ಮೊಸರು ಕುಡಿಕೆಯ ವೈಶಿಷ್ಟ್ಯಗಳು
ಅ. ಗೋಪಾಲಕಾಲಾ
ಗೋಪಾಲಕಾಲಾ ಅಂದರೆ ಭಜನೆ ಆದ ನಂತರ ಅಥವಾ ಗೋಕುಲಾಷ್ಟಮಿಯ ನಂತರ ಮೊಸರು ಕುಡಿಕೆಯನ್ನು ಒಡೆದು ಗ್ರಹಿಸುವ ಪ್ರಸಾದ.
ಆ. ಗೋಪಾಲಕಾಲಾದ ಸವಿರುಚಿ
ಅವಲಕ್ಕಿ, ಹಾಲು, ಮೊಸರು, ಮಜ್ಜಿಗೆ ಮತ್ತು ಬೆಣ್ಣೆ ಈ ಐದು ಪದಾರ್ಥಗಳನ್ನು ಒಟ್ಟು ಮಾಡಿ ತಯಾರಿಸುವ ಪ್ರಸಾದಕ್ಕೆ ಒಂದು ಬಣ್ಣಿಸಲಾಗದ ದಿವ್ಯ ರುಚಿ ಇರುತ್ತದೆ.
ಇ. ಮೊಸರು ಕುಡಿಕೆ
ಮೊಸರು ಕುಡಿಕೆ ಅಂದರೆ ‘ಜೀವ’. ಮೊಸರು ಕುಡಿಕೆಯನ್ನು ಒಡೆಯುವುದು ಅಂದರೆ ದೇಹಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯಲ್ಲಿ ಸ್ಥಿರವಾಗುವುದು. ಅದರ ನಂತರ ಸ್ವೀಕರಿಸುವ ಪ್ರಸಾದ ಆನಂದದ ಪ್ರತೀಕವಾಗಿದೆ.
ಮೊಸರು ಕುಡಿಕೆಯ ಪಾವಿತ್ರ್ಯವನ್ನು ಉಳಿಸಲು ಮುಂದಿನ ಕೃತಿಗಳನ್ನು ತಡೆಯಿರಿ !
೧. ಲಕ್ಷಗಟ್ಟಲೆ ರೂಪಾಯಿಯ ಮೊಸರು ಕುಡಿಕೆ ಸ್ಪರ್ಧೆಗಳನ್ನು ಆಯೋಜಿಸಿ ಉತ್ಸವದ ವ್ಯಾಪಾರೀಕರಣ !
೨. ಉತ್ಸವದಲ್ಲಿ ತಂಬಾಕು, ಗುಟ್ಕಾ ಇತ್ಯಾದಿಗಳ ಜಾಹಿರಾತುಗಳನ್ನು ಪ್ರದರ್ಶಿವುದು, ಅಥವಾ ಉತ್ಪಾದಕರನ್ನು ಪ್ರಾಯೋಜಕರೆಂದು ಕರೆತರುವುದು !
೩. ಈ ಸಂದರ್ಭದಲ್ಲಿ ನಡೆಯುವ ಮದ್ಯಪಾನ, ವಿಕೃತ ನೃತ್ಯ, ಮಹಿಳೆಯರ ಶೋಷಣೆ, ರಾಸಾಯನಿಕ ಬಣ್ಣದ ನೀರನ್ನು ಎರಚುವುದು !
೪. ೪೦ ಅಡಿಗಿಂತ ಎತ್ತರದಲ್ಲಿ ಕಟ್ಟಿರುವ ಮೊಸರು ಕುಡಿಕೆ, ಅದನ್ನು ಒಡೆಯುವ ಪೈಪೋಟಿಯಲ್ಲಿ ಅಪಾಯಕಾರಿ ಮಾನವ ಗೋಪುರ ತಯಾರಿಸುವುದು !
೫. ಮಹಿಳೆಯರು ಇರುವ ‘ಗೋವಿಂದಾ’ ತಂಡಗಳ ಅಶಾಸ್ತ್ರೀಯ ರೂಢಿ !
ಹಿಂದುಗಳೇ, ಮೊಸರು ಕುಡಿಕೆಯಲ್ಲಿ ನಡೆಯುವ ತಪ್ಪು ಆಚರಣೆಗಳನ್ನು ತಡೆಯಲು ಮುಂದಿನ ಕೃತಿಗಳನ್ನು ಮಾಡಿ!
೧. ಮಹಿಳೆಯರ ಕಿರುಕುಳ, ಜೂಜಾಡುವುದು, ಮದ್ಯಸೇವನೆ ಮುಂತಾದವುಗಳು ಕಂಡರೆ ಪೊಲೀಸರಲ್ಲಿ ದೂರು ನೋಂದಾಯಿಸಿ!
೨. ಮೊಸರು ಕುಡಿಕೆಯ ಸ್ಪರ್ಧೆಗಳ ಆಯೋಜಕರನ್ನು ಭೇಟಿ ಮಾಡಿ ಅವರಿಗೆ ಪ್ರಬೋಧನೆ ಮಾಡಿ!