ಶ್ರೀಕೃಷ್ಣನಂತೆ ಒಬ್ಬ ಸಖಾ, ಗುರು, ಪಾಲಕ ಯಾರು ಇಲ್ಲ; ಈ ಸತ್ಯವನ್ನು ಅರಿತವನೇ ನಿಜವಾದ ಭಕ್ತ! ಭಗವಾನ್ ಶ್ರೀಕೃಷ್ಣನಿಗೆ ಸಂಪೂರ್ಣವಾಗಿ ಶರಣಾದ ಭಕ್ತನು ಈ ಸಂಸಾರದಿಂದ ಮುಕ್ತಿಯನ್ನು ಹೊಂದುತ್ತಾನೆ. ಶ್ರೀಕೃಷ್ಣನ ಬಗ್ಗೆ ಉತ್ಕಟ ಭಾವವನ್ನು ತಮ್ಮಲ್ಲಿ ಬೆಳೆಸಲು ಅವನ ಅವತಾರದ ಸಾನಿಧ್ಯದಿಂದ ಪಾವನವಾಗಿರುವ ದೈವೀ ಕ್ಷೇತ್ರಗಳಾದ ಗೋಕುಲ, ವೃಂದಾವನ ಮತ್ತು ದ್ವಾರಕೆಯ ಛಾಯಾಚಿತ್ರಗಳನ್ನು ಇಲ್ಲಿ ನೀಡಿದ್ದೇವೆ. ಈ ಚಿತ್ರಗಳ ನೋಡುವಾಗ ಮನಸ್ಸಿನಲ್ಲಿ ಕೃತಜ್ಞತೆ ಇಟ್ಟುಕೊಂಡು ಶ್ರೀ ಕೃಷ್ಣನ ಅಸ್ತಿತ್ವವನ್ನು ಅನುಭವಿಸೋಣ!
ಜಗದ್ಗುರು ಶ್ರೀಕೃಷ್ಣನು ಸಾಕ್ಷಾತ್ ಪೂರ್ಣಾವತಾರ |
ಭಕ್ತಿ, ಜ್ಞಾನ ಮತ್ತು ಕರ್ಮ ಇವುಗಳ ಪರಿಪೂರ್ಣ ಭಂಡಾರ ||
ಶ್ರೀಕೃಷ್ಣನ ಬಾಲ ಲೀಲೆಗಳ ಆನಂದವನ್ನು ಪಡೆದ ಗೋಕುಲ !
‘ಮಾಧವ ಕುಂಜ ಗಲಿ’ (ಇಲ್ಲಿ ಕೆಲವೊಮ್ಮೆ ಶ್ರೀ ಕೃಷ್ಣನು ಅವನ ಗೆಳೆಯರೊಂದಿಗೆ ಕದ್ದು ತಂದ ಬೆಣ್ಣೆಯನ್ನು ಸವಿಯಲು ಬರುತ್ತಿದ್ದರೆ ಕೆಲವೊಮ್ಮೆ ಇಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದ)
ಶ್ರೀ ಕೃಷ್ಣನ ಭಕ್ತಿರಸದಲ್ಲಿ ನೆಂದು ಸಂಪೂರ್ಣ ಕೃಷ್ಣಮಯವಾಗಿರುವ ತೀರ್ಥಕ್ಷೇತ್ರ : ವೃಂದಾವನ !
ಕೇಶವನ ಮಧುರ ಕೊಳಲಿನ ಇಂಪಾದ ದನಿಯನ್ನು ಕೇಳಲು |
ಇಲ್ಲಿ ಬರುವರು ಗೋಪ-ಗೋಪಿಕೆಯರೊಂದಿಗೆ ಪ್ರಾಣಿ-ಪಕ್ಷಿಗಳು ||
ಶ್ರೀ ಕೃಷ್ಣನು ತನ್ನ ಮುರಳೀಧರ ರೂಪದ ದರ್ಶನವನ್ನು ನೀಡುತ್ತಿದ್ದ ವಟವೃಕ್ಷ, ಬನ್ಸಿವಟ್.
ರಾಸಲೀಲೆಯ ಮುಖ್ಯ ಸ್ಥಳ. ಇಲ್ಲಿ ಇಂದಿಗೂ ಪ್ರತಿ ರಾತ್ರಿ ಶ್ರೀ ಕೃಷ್ಣಾ ಮತ್ತು ಗೋಪಿಕೆಯರ ರಾಸಲೀಲೆ ನಡೆಯುತ್ತದೆ.
ಶ್ರೀಹರಿಯ ಅಸ್ತಿತ್ವವನ್ನು ಅನುಭವಿಸೋಣ ದ್ವಾರಿಕೆಯಲ್ಲಿ !
ವಿಶ್ವಕರ್ಮ ದೇವರು, ಒಂದೇ ರಾತ್ರಿಯೊಳಗೆ ೪ ವೇದಗಳನ್ನು ಪಠಿಸಿ ಶ್ರೀ ಕೃಷ್ಣನ ಈ ಭವ್ಯ ದೇವಸ್ಥಾನವನ್ನು ಕಟ್ಟಿದರು. ಈ ದೇವಸ್ಥಾನಕ್ಕೆ ೫೦೦೦ ವರ್ಷಗಳ ಇತಿಹಾಸವಿದೆ.
Edannu nodalu avakasha kotta nimagella danyavada galu…
ಭಗವಂತನ ಲೀಲೆ ಅಗಾಧವಾದುದ್ದು ಆತನ ಬಗ್ಗೆ ಎಷ್ಟು ಬರೆದರೂ ಕೊಂಡಾಡಿದರು, ಕಡಿಮೆ.