ಗುರುಗಳು ಜ್ಞಾನಿಗಳ ರಾಜರಾಗಿದ್ದಾರೆ ಎಂದು ಸಂತ ತುಕಾರಾಮರು ಹೇಳಿದ್ದಾರೆ. ಯಾರು ಜ್ಞಾನವನ್ನು ಕೊಡುತ್ತಾರೆಯೋ, ಅವರೇ ಗುರುಗಳು ! ಶಿಲೆಯಿಂದ ಶಿಲ್ಪವು ತಯಾರಾಗಬಹುದು; ಆದರೆ ಅದಕ್ಕೆ ಶಿಲ್ಪಿ ಬೇಕಾಗುತ್ತಾನೆ. ಅದೇರೀತಿ ಸಾಧಕರು ಮತ್ತು ಶಿಷ್ಯರು ಈಶ್ವರನನ್ನು ಪ್ರಾಪ್ತಗೊಳಿಸಿಕೊಳ್ಳಬಲ್ಲರು; ಆದರೆ ಅದಕ್ಕೆ ಗುರುಗಳ ಆವಶ್ಯಕತೆಯಿರುತ್ತದೆ. ಗುರುಗಳು ತಮ್ಮ ಬೋಧಾಮೃತದಿಂದ ಸಾಧಕರ ಮತ್ತು ಶಿಷ್ಯರ ಅಜ್ಞಾನವನ್ನು ದೂರಗೊಳಿಸಿದ ನಂತರವೇ ಅವರಿಗೆ ಈಶ್ವರಪ್ರಾಪ್ತಿಯಾಗುತ್ತದೆ. ಪ್ರಸ್ತುತ ಲೇಖನದಲ್ಲಿ ನಾವು `ಸಂತರು ಮತ್ತು ಗುರುಗಳು’, ‘ಅವಿದ್ಯಾಮಾಯೆ ಮತ್ತು ಗುರುಮಾಯೆ’, ‘ಈಶ್ವರ ಮತ್ತು ಗುರುಗಳು’, ‘ದೇವತೆಗಳು ಮತ್ತು ಗುರುಗಳು’, ‘ಅವತಾರ ಮತ್ತು ಗುರುಗಳು’, ‘ಪ್ರವಚನಕಾರರು ಮತ್ತು ಗುರುಗಳು’, ‘ಭೂಲೋಕದ ಮಾಂತ್ರಿಕರು ಮತ್ತು ಗುರು’, ‘ಸಾಮಾನ್ಯ ವ್ಯಕ್ತಿ, ಸಾಧಕರು ಮತ್ತು ಗುರುಗಳು’, ‘ಶಿಕ್ಷಕರು ಮತ್ತು ಗುರುಗಳು‘, ಹೀಗೆ ಗುರುಗಳ ಇತರರೊಂದಿಗಿನ ತುಲನೆಯಲ್ಲಿನ ಮಹತ್ತ್ವವನ್ನು ತಿಳಿದುಕೊಳ್ಳೋಣ.
1. ಸಂತರು ಮತ್ತು ಗುರುಗಳು
ಸಕಾಮ ಹಾಗೂ ನಿಷ್ಕಾಮಗಳ ಪ್ರಾಪ್ತಿಗಾಗಿ ಸಂತರು ಅಲ್ಪಸ್ವಲ್ಪ ಮಾರ್ಗದರ್ಶನ ಮಾಡುತ್ತಾರೆ. ಕೆಲವು ಸಂತರು ಜನರ ವ್ಯಾವಹಾರಿಕ ಅಡಚಣೆಗಳನ್ನು ದೂರಗೊಳಿಸುವುದು, ಅವರಿಗೆ ಕೆಟ್ಟ ಶಕ್ತಿಗಳಿಂದಾಗುವ ದುಃಖಗಳ ನಿವಾರಣೆ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅದು ಇಂತಹ ಸಂತರ ಕಾರ್ಯವೇ ಆಗಿರುತ್ತದೆ. ಯಾರಾದರೊಬ್ಬ ಸಂತರು ಯಾರಾದರೊಬ್ಬ ಸಾಧಕನನ್ನು ಶಿಷ್ಯನೆಂದು ಸ್ವೀಕರಿಸಿದ ನಂತರ ಅವನಿಗಾಗಿ ಅವರು ಗುರುಗಳಾಗುತ್ತಾರೆ. ಗುರುಗಳು ಕೇವಲ ನಿಷ್ಕಾಮದ (ಈಶ್ವರನ) ಪ್ರಾಪ್ತಿಗಾಗಿ ಮಾತ್ರ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾರೆ. ಒಂದು ಸಲ ಸಂತರು ಗುರುಗಳೆಂದು ಕಾರ್ಯ ಮಾಡತೊಡಗಿದರೆಂದರೆ ಅವರ ಬಳಿಗೆ ಬರುವವರಲ್ಲಿ ಸಕಾಮದಲ್ಲಿನ ಅಡಚಣೆಗಳನ್ನು ದೂರಗೊಳಿಸಬೇಕು ಎಂದೆನಿಸುವುದು ಕಡಿಮೆಯಾಗತೊಡಗಿ ಕೊನೆಗೆ ಅದು ನಿಂತೇ ಹೋಗುತ್ತದೆ; ಆದರೆ ಯಾವಾಗ ಅವರು ಯಾರನ್ನಾದರೂ ಶಿಷ್ಯನೆಂದು ಸ್ವೀಕರಿಸಿದರೆ, ಅವನ ಸಂಪೂರ್ಣ ಕಾಳಜಿಯನ್ನು ವಹಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ಗುರುಗಳು ಸಂತರಾಗಿರುತ್ತಾರೆ. ಆದರೆ ಪ್ರತಿಯೊಬ್ಬ ಸಂತರು ಗುರುಗಳಾಗಿರುವುದಿಲ್ಲ. ಹೀಗಿದ್ದರೂ ಸಂತರ ಹೆಚ್ಚಿನ ಲಕ್ಷಣಗಳು ಗುರುಗಳಿಗೆ ಅನ್ವಯಿಸುತ್ತವೆ.
ಸಂತರು | ಗುರುಗಳು | |
1. ಇತರರ ಬಗ್ಗೆ ಪ್ರೀತಿ (ಶೇ.) | 30 | 60 |
2. ಸೇವೆ (ಶೇ.) | 30 | 50 |
3. ತ್ಯಾಗ (ಶೇ.) | 70 | 90 |
4. ಬರೆಯುವುದು ಅ. ಪ್ರಮಾಣ (ಶೇ.) ಆ. ಸ್ವರೂಪ |
2 ಅನುಭೂತಿ ಹೆಚ್ಚು |
10 ಮಾರ್ಗದರ್ಶನ ಹೆಚ್ಚು |
5. ಪ್ರಕಟ ಶಕ್ತಿ (ಶೇ.) | 20 | 5 |
6. ಉನ್ನತಿ | ಶೀಘ್ರ | ಅತಿ ಶೀಘ್ರ |
2. ಅವಿದ್ಯಾಮಾಯೆ ಮತ್ತು ಗುರುಮಾಯೆ
‘ಮಾಯೆಯ ಎರಡು ವಿಧಗಳಿವೆ – ಒಂದು ಅವಿದ್ಯಾಮಾಯೆ ಮತ್ತು ಇನ್ನೊಂದು ಗುರುಮಾಯೆ. ಅವಿದ್ಯಾಮಾಯೆಯು ಜೀವವನ್ನು ಅಜ್ಞಾನದಲ್ಲಿ ಸಿಲುಕಿಸುತ್ತದೆ ಮತ್ತು ಗುರುಮಾಯೆಯು ಜೀವವನ್ನು ಅವಿದ್ಯಾಮಾಯೆಯಿಂದ ಬಿಡಿಸುತ್ತದೆ. ಗುರುಮಾಯೆಯನ್ನೇ `ಪ್ರಭುಮಾಯೆ’, ಅಥವಾ `ಹರಿಮಾಯೆ’ ಎಂದೂ ಕರೆಯುತ್ತಾರೆ. ಅವಿದ್ಯಾಮಾಯೆಯು ತನ್ನ ಮಾಯಾವೀ ರೂಪದ ಅರಿವಾಗಲು ಬಿಡುವುದಿಲ್ಲ. ಏಕನಾಥರಂತಹ ಮಹಾನ್ ಸಂತರಿಗೂ ತಮ್ಮ ಮನೆಯಲ್ಲಿ ನೀರು ತುಂಬುವ, ಗಂಧವನ್ನು ತೇಯುವ ಶ್ರೀಖಂಡ್ಯಾ ಎನ್ನುವ ವ್ಯಕ್ತಿಯು, ಪ್ರತ್ಯಕ್ಷ ಭಗವಂತನೇ ಆಗಿದ್ದಾನೆ ಎನ್ನುವುದು ಅವಿದ್ಯಾಮಾಯೆಯಿಂದ ತಿಳಿಯಲಿಲ್ಲ. ಮುಂದೆ ದ್ವಾರಕೆಯಿಂದ ಎರಡನೆಯ ಭಕ್ತನ ರೂಪದಲ್ಲಿ ಬಂದು ಹರಿಮಾಯೆಯು ಆ ಅವಿದ್ಯಾಮಾಯೆಯನ್ನು ದೂರಗೊಳಿಸಿದಾಗಲೇ, ಶ್ರೀಖಂಡ್ಯಾನ ನಿಜಸ್ವರೂಪವು ಏಕನಾಥರಿಗೆ ತಿಳಿಯಿತು’.
3. ಈಶ್ವರ ಮತ್ತು ಗುರುಗಳು
ಅ. ಈಶ್ವರ ಮತ್ತು ಗುರುಗಳು ಒಂದೇ ಆಗಿದ್ದಾರೆ : ಗುರುಗಳೆಂದರೆ ಈಶ್ವರನ ಸಾಕಾರ ರೂಪ ಮತ್ತು ಈಶ್ವರನೆಂದರೆ ಗುರುಗಳ ನಿರಾಕಾರ ರೂಪ.
ಆ. ಬ್ಯಾಂಕಿನ ಹಲವಾರು ಶಾಖೆಗಳಿರುತ್ತವೆ. ಅವುಗಳ ಪೈಕಿ ಸ್ಥಳೀಯ ಶಾಖೆಯಲ್ಲಿ ಖಾತೆಯನ್ನು ತೆರೆದು ಹಣವನ್ನು ತುಂಬಿದರೆ ನಡೆಯುತ್ತದೆ. ಹೀಗೆ ಮಾಡುವುದು ಸುಲಭವೂ ಆಗಿರುತ್ತದೆ. ದೂರದಲ್ಲಿನ ಪ್ರಧಾನ ಕಛೇರಿಗೆ ಹೋಗಿ ಹಣವನ್ನು ತುಂಬಬೇಕೆಂದಿರುವುದಿಲ್ಲ. ಹಾಗೆ ಮಾಡಲು ತೊಂದರೆಯನ್ನು ಪಡುವ ಆವಶ್ಯಕತೆಯೂ ಇರುವುದಿಲ್ಲ. ಹಾಗೆಯೇ ಭಾವ, ಭಕ್ತಿ, ಸೇವೆ, ತ್ಯಾಗ ಇತ್ಯಾದಿಗಳನ್ನು ಕಾಣಿಸದೇ ಇರುವ ಈಶ್ವರನಿಗೋಸ್ಕರ ಮಾಡುವುದಕ್ಕಿಂತಲೂ ಅವನ ಸಗುಣ ರೂಪದ, ಅಂದರೆ ಗುರುಗಳಿಗೆ ಮಾಡುವುದು ಸುಲಭವಾಗಿರುತ್ತದೆ. ಸ್ಥಳೀಯ ಶಾಖೆಯಲ್ಲಿ ತುಂಬಿರುವ ಹಣವು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜಮೆಯಾಗುವಂತೆ ಗುರುಗಳಿಗೆ ಸಲ್ಲಿಸಿದ ಸೇವೆಯೂ ಈಶ್ವರನಿಗೇ ತಲುಪುತ್ತದೆ.ವಾಮನ ಪಂಡಿತರು ಭಾರತದೆಲ್ಲೆಡೆ ಸಂಚರಿಸಿ ದೊಡ್ಡ-ದೊಡ್ಡ ವಿದ್ವಾಂಸರೆಲ್ಲರನ್ನು ಸೋಲಿಸಿ ಅವರಿಂದ ಪರಾಜಯ ಪತ್ರಗಳನ್ನು ಬರೆಸಿಕೊಂಡರು.
ಅವುಗಳೊಂದಿಗೆ ಹೋಗುತ್ತಿದ್ದಾಗ ಒಂದು ಸಂಜೆ ಒಂದು ಮರದ ಕೆಳಗೆ ಸಂಧ್ಯಾವಂದನೆ ಮಾಡುವುದಕ್ಕೆಂದು ಕುಳಿತು ಕೊಂಡರು. ಆಗ ಆ ಗಿಡದ ಮೇಲೆ ಅವರಿಗೆ ಒಂದು ಬ್ರಹ್ಮರಾಕ್ಷಸವು ಕಂಡಿತು. ಅಷ್ಟರಲ್ಲಿಯೇ ಇನ್ನೊಂದು ಬ್ರಹ್ಮರಾಕ್ಷಸವು ಬಂದು ಪಕ್ಕದ ಕೊಂಬೆಯ ಮೇಲೆ ಕುಳಿತುಕೊಳ್ಳಲು ಅನುವಾಯಿತು. ಆಗ ಮೊದಲನೆಯದು ಅದನ್ನು ಅಲ್ಲಿ ಕೂರಲು ಬಿಡದೇ, “ಈ ಜಾಗವು ವಾಮನ ಪಂಡಿತರಿಗಾಗಿದೆ; ಏಕೆಂದರೆ ಅವರಿಗೆ ತಮ್ಮ ವಿಜಯದ ಬಗ್ಗೆ ಬಹಳ ಅಹಂಕಾರವುಂಟಾಗಿದೆ” ಎಂದಿತು. ಇದನ್ನು ಕೇಳಿದ ತಕ್ಷಣ ವಾಮನ ಪಂಡಿತರು ಎಲ್ಲ ಪರಾಜಯಪತ್ರಗಳನ್ನು ಹರಿದು ಹಾಕಿದರು ಮತ್ತು ತಪಶ್ಚರ್ಯವನ್ನು ಮಾಡಲು ಹಿಮಾಲಯಕ್ಕೆ ಹೋದರು. ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿಯೂ ಅವರಿಗೆ ದೇವರು ದರ್ಶನ ನೀಡಲಿಲ್ಲ. ಆದ್ದರಿಂದ ನಿರಾಶರಾಗಿ ಅವರು ಪ್ರಪಾತದಿಂದ ಕೆಳಗೆ ಧುಮುಕಿದರು. ಅಷ್ಟರಲ್ಲಿಯೇ ಈಶ್ವರನು ಅವರನ್ನು ಹಿಡಿದುಕೊಂಡು ಅವರ ತಲೆಯ ಮೇಲೆ ಎಡಗೈಯನ್ನಿಟ್ಟು ಆಶೀರ್ವಾದ ನೀಡಿದನು. ಅನಂತರ ಅವರಿಬ್ಬರ ನಡುವೆ ಈ ಕೆಳಗಿನ ಸಂಭಾಷಣೆಯು ನಡೆಯಿತು.
ಪಂಡಿತ: ತಲೆಯ ಮೇಲೆ ಎಡಗೈಯನ್ನೇಕೆ ಇಟ್ಟೆ? ಬಲಗೈಯನ್ನು ಏಕೆ ಇಡಲಿಲ್ಲ?
ಈಶ್ವರ : ಆ ಅಧಿಕಾರವು ಗುರುಗಳದ್ದಾಗಿದೆ.
ಪಂಡಿತ : ಗುರುಗಳ ಭೇಟಿಯು ಎಲ್ಲಿ ಆಗುವುದು?
ಈಶ್ವರ: ಸಜ್ಜನಗಡದ ಮೇಲೆ.
ತರುವಾಯ ವಾಮನ ಪಂಡಿತರು ಸಮರ್ಥ ರಾಮದಾಸ ಸ್ವಾಮಿಗಳ ದರ್ಶನಕ್ಕೆಂದು ಸಜ್ಜನಗಡಕ್ಕೆ ಹೋದರು. ಅಲ್ಲಿ ಸಮರ್ಥ ರಾಮದಾಸರು ಅವರ ಬೆನ್ನಿನ ಮೇಲೆ ಬಲಗೈಯನ್ನಿಟ್ಟು ಅವರಿಗೆ ಆಶೀರ್ವಾದ ಮಾಡಿದರು.
ಪಂಡಿತ : ತಲೆಯ ಮೇಲೆ ಕೈಯನ್ನಿಟ್ಟು ಏಕೆ ಆಶೀರ್ವಾದ ನೀಡಲಿಲ್ಲ?
ಸ್ವಾಮಿಗಳು : ಈಶ್ವರನು ಕೈ ಇಟ್ಟಿದ್ದಾನಲ್ಲ!
ಪಂಡಿತ : ಹಾಗಾದರೆ, ಈಶ್ವರನು `ತಲೆಯ ಮೇಲೆ ಕೈಯಿಡುವ ಅಧಿಕಾರವು ಗುರುಗಳದ್ದಾಗಿದೆ’ ಎಂದೇಕೆ ಹೇಳಿದನು?
ಸ್ವಾಮಿಗಳು : ಈಶ್ವರನ ಬಲಗೈ ಮತ್ತು ಎಡಗೈ ಒಂದೇ ಆಗಿದೆ. ಈಶ್ವರ ಮತ್ತು ಗುರುಗಳೂ ಒಂದೇ ಆಗಿದ್ದಾರೆ, ಎನ್ನುವುದು ನಿನಗೇಕೆ ತಿಳಿಯುವುದಿಲ್ಲ!
– ಪ.ಪೂ.ಕಾಣೇ ಮಹಾರಾಜ, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.
4. ಶಿಷ್ಯನ ದೃಷ್ಟಿಯಿಂದ ಈಶ್ವರ ಮತ್ತು ಗುರುಗಳು
ಶಿಷ್ಯನ ದೃಷ್ಟಿಯಲ್ಲಿ ಈಶ್ವರ ನಿಗಿಂತ ಅಥವಾ ದೇವರಿಗಿಂತ ಗುರುಗಳೇ ಶ್ರೇಷ್ಠರಾಗಿದ್ದಾರೆ.
ಅ. ಗುರು ಥೋರ ಕಿ ದೇವ ಥೋರ ಮ್ಹಣಾವಾ|
ನಮಸ್ಕಾರ ಕೋಣಾಸ ಆಧಿ ಕರಾವಾ|
ಮನಾ ಮಾರಿುsುಯಾ ಗುರು ಥೋರ ವಾಟೆ |
ತಯಾಚಾ ಕೃಪಾಪ್ರಸಾದೇ ರಘುರಾಜ ಭೇಟೆ || – ಸಮರ್ಥ ರಾಮದಾಸಸ್ವಾಮಿಗಳು
ಅರ್ಥ: ಗುರುಗಳು ಶ್ರೇಷ್ಠರೆನ್ನಬೇಕೋ ದೇವರು ಶ್ರೇಷ್ಠರೆನ್ನಬೇಕೋ|
ಮೊದಲು ಯಾರಿಗೆ ನಮಸ್ಕಾರ ಮಾಡಬೇಕು|
ನನ್ನ ಮನಸ್ಸಿಗೆ ಗುರುಗಳೇ ಶ್ರೇಷ್ಠರೆನಿಸುತ್ತಾರೆ|
ಅವರ ಕೃಪಾಪ್ರಸಾದದಿಂದ ಈಶ್ವರನ ಭೇಟಿಯಾಗುತ್ತದೆ||
– ಸಮರ್ಥ ರಾಮದಾಸಸ್ವಾಮಿಗಳು
‘ಗುರುಕೃಪೆಯ ಪ್ರಸಾದ ಸಿಗದೇ ನಾವು ಈ ಭವಸಾಗರದಿಂದ ಪಾರಾಗಲಾರೆವು.’
– ಪ.ಪೂ.ದಾಸ (ರಘುವೀರ) ಮಹಾರಾಜರು, ಪಾನವಳ, ಬಾಂದಾ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ.
ಆ. ಗುರು ಗೋವಿಂದ ದೋವು ಖಡೆ, ಕಾಕೆ ಲಾಗೂ ಪಾಯ|
ಬಲಿಹಾರೀ ಗುರು ಆಪಕೀ, ಗೋವಿಂದ ದಿಯೋ ಬತಾಯ|| – ಸಂತ ಕಬೀರ
ಅರ್ಥ: ಗುರುಗಳು ಮತ್ತು ದೇವರು ಇಬ್ಬರೂ ನಿಂತಿದ್ದಾರೆ, ನಾನು ಯಾರಿಗೆ ನಮಸ್ಕರಿಸಲಿ? ಗುರುದೇವಾ, ನಾನು ತಮ್ಮ ಚರಣಗಳಲ್ಲಿಯೇ ನತಮಸ್ತಕನಾಗಿದ್ದೇನೆ, ನೀವು ನನಗೆ ದೇವರನ್ನು ಪರಿಚಯಿಸಿ ಕೊಟ್ಟಿರಿ.
5. ದೇವತೆಗಳು ಮತ್ತು ಗುರುಗಳು
ಅ. ‘ದೇವದೇವತೆಗಳಿಂದ ಭೋಗಗಳನ್ನು (ಋದ್ಧಿ-ಸಿದ್ಧಿಗಳನ್ನು) ಪಡೆದುಕೊಂಡರೆ ಬುದ್ಧಿಯು ಅಶುದ್ಧವಾಗುತ್ತದೆ. ಗುರುಗಳಿಂದ ಪಡೆದುಕೊಂಡರೆ ಬುದ್ಧಿಯು ಅಶುದ್ಧವಾಗದೇ ಇರುವುದರಿಂದ ಅದರ ಸದುಪಯೋಗವಾಗುತ್ತದೆ. ಸದುಪಯೋಗವೆಂದರೆ ತನ್ನ ವೈಭವದ ಉಪಯೋಗವು ಮುಮುಕ್ಷುಗಳು, ಸಾಧಕರು, ಸಿದ್ಧರು, ಅಯಾಚಿತರು (ಕೇಳದೇ ಸಿಗುವ ಭಿಕ್ಷೆಯಿಂದ ಜೀವನ ನಡೆಸುವವರು) ಮತ್ತು ದೀನ-ದುರ್ಬಲರಿಗಾಗುತ್ತದೆ.
ಆ. ದೇವತೆಗಳು ಬೇಗನೇ ಪ್ರಸನ್ನರಾಗುವುದಿಲ್ಲ. ಸಾಮಾನ್ಯವಾಗಿ ಅವರಿಗೆ ನಮ್ಮ ಬಗ್ಗೆ ಕರುಣೆ ಎನಿಸುವುದಿಲ್ಲ. ಗುರುಗಳ ಅಂತಃಕರಣವು ಬೆಣ್ಣೆಗಿಂತಲೂ ಮೃದುವಾಗಿರುವುದರಿಂದ, ಗುರುಗಳು ಕರುಣಾಮಯರಾಗಿರುತ್ತಾರೆ. ತಾವು ಕೊಡುವ ವೈಭವವು ಆ ವ್ಯಕ್ತಿಯಿಂದ ಸದುಪ ಯೋಗವಾಗುವುದು ಎಂಬ ಭರವಸೆ ಮಾತ್ರ ಅವರಿಗೆ ಆಗಬೇಕಾಗುತ್ತದೆ. ಹೀಗಾಯಿತೆಂದರೆ ಅವರು ನಾವು ಅದನ್ನು ಕೇಳುವಂತಹ ಪರಿಸ್ಥಿತಿ ಬರಲು ಬಿಡುವುದಿಲ್ಲ, ತಾವಾಗಿಯೇ ವೈಭವ ವನ್ನು ಕೊಟ್ಟು ಬಿಡುತ್ತಾರೆ. ಹೀಗೆ ಮಾಡುವಾಗಲೂ ಆ ವೈಭವವನ್ನು ಸ್ವೀಕರಿಸದಿರುವ ಜಾಣ ಶಿಷ್ಯನು ಅವರಿಗೆ ಅತ್ಯಂತ ಇಷ್ಟವಾಗುತ್ತಾನೆ. ನಂತರ ಅವರು ಅವನಿಗೆ ತಮ್ಮನ್ನೇ ಕೊಡುತ್ತಾರೆ!’ – ಪ.ಪೂ.ಕಾಣೇ ಮಹಾರಾಜರು, ನಾರಾಯಣಗಾವ್, ಪುಣೆ ಜಿಲ್ಲೆ, ಮಹಾರಾಷ್ಟ್ರ.
ಇ. ಕ್ಷುದ್ರದೇವತೆಗಳು ಮತ್ತು ಗುರುಗಳು: ದೇವತೆಗಳು, ಗುರುಗಳು ಮತ್ತು ಸಂತರಿಂದ ಕಾಮನೆಗಳನ್ನು ಪೂರ್ಣಗೊಳಿಸಿಕೊಂಡು ವಿಷಯಭೋಗಗಳನ್ನು ಭೋಗಿಸುವಾಗ ನಿಧಾನವಾಗಿ ವೈರಾಗ್ಯ ಪ್ರಾಪ್ತವಾಗಿ, ಕಾಮನೆಯಿರುವವನು ಪರಮಾರ್ಥದ ಅಧಿಕಾರಿಯಾಗುತ್ತಾನೆ. ಕ್ಷುದ್ರ (ಗೌಣ) ದೇವತೆಗಳಿಂದ ಕಾಮನೆಗಳನ್ನು ಪೂರ್ಣಗೊಳಿಸುವಾಗ ಹೀಗಾಗುವುದಿಲ್ಲ.
ಅವತಾರ ಮತ್ತ ಗುರುಗಳು: ಗುರುಗಳ ಕಾರ್ಯವು ಹೆಚ್ಚಾಗಿ ಮೂರು-ನಾಲ್ಕು ಶಿಷ್ಯರ ಸಂದರ್ಭದಲ್ಲಿ ಮಾತ್ರ ಇರುತ್ತದೆ. ಅವತಾರಗಳು ಸಾಮಾನ್ಯವಾಗಿ ಸಮಾಜದ ರಕ್ಷಣೆ ಮತ್ತು ಧರ್ಮಸ್ಥಾಪನೆಗಾಗಿ ಅವತಾರ ತಾಳುತ್ತಾರೆ. ಮನುಷ್ಯ ದೇಹವನ್ನು ಧರಿಸುವ ಶ್ರೀರಾಮ, ಶ್ರೀಕೃಷ್ಣಾದಿ ಅವತಾರಗಳೂ ಗುರುಗೃಹದಲ್ಲಿದ್ದರು ಮತ್ತು ಗುರುಸೇವೆ ಮಾಡಿ ಗುರುಕೃಪೆಯನ್ನು ಪಡೆದುಕೊಂಡರು. ಇದನ್ನು ಅವರು ಇತರರಿಗೆ ಕಲಿಸಲು ಮಾಡಿದರು.
6. ಅವತಾರ ಮತ್ತು ಗುರುಗಳು
ಗುರುಗಳ ಕಾರ್ಯ ಹೆಚ್ಚಾಗಿ ಎರಡು-ನಾಲ್ಕು ಶಿಷ್ಯರ ಸಂದರ್ಭದಲ್ಲಿ ಇರುತ್ತದೆ, ಆದರೆ ಅವತಾರ ಸರ್ವಸಾಧಾರಣವಾಗಿ ಸಮಾಜದ ರಕ್ಷಣೆ ಹಾಗೂ ಧರ್ಮಸ್ಥಾಪನೆಗಾಗಿ ಇರುತ್ತದೆ. ಮಾನವದೇಹ ಧಾರಣೆ ಮಾಡಿದ ಶ್ರೀರಾಮ, ಶ್ರೀಕೃಷ್ಣ ಮುಂತಾದ ಅವತಾರಿ ಗುರುಗಳ ಮನೆಯಲ್ಲಿಯೇ ಇದ್ದು ಮತ್ತು ಅವರು ಗುರುಸೇವೆ ಮಾಡಿ ಗುರುಕೃಪೆ ಸಂಪಾದನೆ ಮಾಡಿದರು. ಇದೆಲ್ಲವೂ ಇತರರಿಗೆ ಕಲಿಯಲಿಕ್ಕಾಗಿ ನಡೆಯುತ್ತದೆ.
7. ಪ್ರವಚನಕಾರರು ಮತ್ತು ಗುರುಗಳು
ಪ್ರವಚನಕಾರರು ಮಾತನಾಡುವುದು | ಗುರುಗಳು (ಸಂತರು) ಮಾತನಾಡುವುದು |
1. ನಿರ್ಧರಿಸಿ | ಉತ್ಸ್ಫೂರ್ತತೆಯಿಂದ |
2. ಕೃತಕತೆ | ಸಹಜತೆ |
3. ಬುದ್ಧಿಯಿಂದ ಉಗಮವಾಗಿರುವುದು | ಆತ್ಮದಿಂದ ಉಗಮವಾಗಿರುವುದು |
4. ಸಂತ ತುಕರಾಮರು, ಸಂತ ಜ್ಞಾನೇಶ್ವರರು ಮುಂತಾದವರ ಭೋದನೆಗಳಿಂದ ಕಲಿಸುವುದು |
ಸ್ವಾನುಭೂತಿಯಿಂದ |
5. ಜಡತ್ವ | ಚೈತನ್ಯ |
6. ಕೇಳುವವರಿಗೆ ಸ್ವಲ್ಪ ಸಮಯದ ನಂತರ ಬೇಜಾರಾಗುವುದು | ಕೇಳುವವರಿಗೆ ಗಂಟೆಗಟ್ಟಲೆ ಕೇಳಬಹುದು |
7. ಇತರರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರ ಸಿಗದಿರುವುದು | ಪ್ರಶ್ನೆಗಳನ್ನು ಕೇಳದೆ ಉತ್ತರ ಸಿಗುವುದು |
8. ಹೆಚ್ಚಾಗಿ ಅಹಂಕಾರವಿರುವುದು | ಅಹಂಕಾರ ಇರುವುದಿಲ್ಲ |
8. ಭೂಲೋಕದ ಮಾಂತ್ರಿಕರು ಮತ್ತು ಗುರುಗಳು
ಮಾಂತ್ರಿಕರು ಪ್ರಾಪಂಚಿಕ ಅಡಚಣೆಗಳನ್ನು ದೂರಗೊಳಿಸುತ್ತಾರೆ; ಆದರೆ ಗುರುಗಳಿಗೆ ಮತ್ತು ಪ್ರಾಪಂಚಿಕ ಅಡಚಣೆಗಳಿಗೆ ಯಾವ ಸಂಬಂಧವೂ ಇರುವುದಿಲ್ಲ. ಕೇವಲ ಶಿಷ್ಯನ ಆಧ್ಯಾತ್ಮಿಕ ಉನ್ನತಿಯೊಂದಿಗೆ ಮಾತ್ರ ಅವರ ಸಂಬಂಧವಿರುತ್ತದೆ.
9. ಸಾಮಾನ್ಯ ವ್ಯಕ್ತಿ, ಸಾಧಕರು ಮತ್ತು ಗುರುಗಳು
ಕ್ರಿಯೆ ಎಂದರೆ ಉದ್ದೇಶರಹಿತ ಕೃತಿ. ಹೇಗೆ ಸಾಧನೆಯಲ್ಲಿ ಉನ್ನತಿಯಾಗುತ್ತಾ ಹೋಗುತ್ತದೆಯೋ, ಆ ಪ್ರಮಾಣದಲ್ಲಿ ಸ್ಥೂಲದೇಹ ವನ್ನು ಬಿಟ್ಟು ಇತರ ದೇಹಗಳ ಕರ್ಮವು ಕಡಿಮೆಯಾಗುತ್ತಾ ಹೋಗುವುದರಿಂದ ಒಟ್ಟು ಕರ್ಮ ಮತ್ತು ಕ್ರಿಯೆ ಕಡಿಮೆಯಾಗುತ್ತಾ ಹೋಗುತ್ತವೆ.
ಕರ್ಮದ ಹಿಂದಿನ ಇಚ್ಛೆ | ಒಟ್ಟು ಕರ್ಮ ಮತ್ತು ಕ್ರಿಯೆ (ಶೇ.) |
ಕರ್ಮ ಮತ್ತು ಕ್ರಿಯೆಗಳ ಪ್ರಮಾಣ |
||
ಕರ್ಮ (ಶೇ.) | ಕ್ರಿಯೆ (ಶೇ.) | |||
1. ಸಾಮಾನ್ಯ ವ್ಯಕ್ತಿ | ಸ್ವೇಚ್ಛೆ (ಸ್ವಂತದ) | 100 | 90 | 10 |
2. ಸಾಧಕರು |
ಪರೇಚ್ಛೆ (ಇತರರ) | 40 | 70 | 30 |
3. ಗುರುಗಳು |
ಈಶ್ವರೇಚ್ಛೆ (ಈಶ್ವರನ) | 5 | 10 | 90 |
10. ಶಿಕ್ಷಕರು ಮತ್ತು ಗುರುಗಳು
ಶಿಕ್ಷಕರು ನಿರ್ಧಿಷ್ಟ ಸಮಯ ಮತ್ತು ಕೇವಲ ಶಬ್ದಗಳ ಮಾಧ್ಯಮದಿಂದ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ, ಆದರೆ ಗುರುಗಳು ಇಪ್ಪತ್ತೈದು ಗಂಟೆ ಶಬ್ದ ಮತ್ತು ಶಬ್ದಾತೀತ ಹೀಗೆ ಎರಡು ಮಾಧ್ಯಮದಿಂದ ಶಿಷ್ಯರಿಗೆ ಸತತ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಗುರುಗಳು ಯಾವುದೇ ಸಂಕಟದಿಂದಲೂ ಶಿಷ್ಯರನ್ನು ಪಾರು ಮಾಡುತ್ತಾರೆ, ಆದರೆ ಶಿಕ್ಷಕರಿಗೆ ವಿದ್ಯಾರ್ಥಿಗಳ ವೈಯಕ್ತಿಕ ಜೀವನದಲ್ಲಿ ಯಾವುದೇ ಸಂಬಂಧವಿರುವುದಿಲ್ಲ. ಸ್ವಲ್ಪದರಲ್ಲಿ ಗುರುಗಳು ಶಿಷ್ಯನ ಸಂಪೂರ್ಣ ಜೀವನವನ್ನು ಆವರಿಸುತ್ತಾರೆ, ಆದರೆ ಶಿಕ್ಷಕರು ವಿಧ್ಯಾರ್ಥಿಗಳೊಂದಿಗೆ ಸಂಪರ್ಕ ಕೆಲವು ಗಂಟೆ ಮತ್ತು ಅದೂ ಕೆಲವು ವಿಷಯ ಕಲಿಸುವುದಕ್ಕೆ ಸೀಮಿತವಾಗಿರುತ್ತದೆ.
ಟಿಪ್ಪಣಿ1 – ಸಂತರು ಮತ್ತು ಗುರುಗಳು ಕನಿಷ್ಠ ಶೇ.70ರ ಮಟ್ಟದವರಾಗಿರುತ್ತಾರೆ. ಶೇ.70 ಕ್ಕಿಂತಲೂ ಮುಂದಿನ ಉನ್ನತಿಯು ಸಂತರಿಗಿಂತ ಗುರುಗಳಲ್ಲಿ ವೇಗವಾಗಿ ಆಗುತ್ತದೆ. ಗುರುಗಳು ಶೇ.80ರ (ಸದ್ಗುರು) ಮತ್ತು ಶೇ.90ರ (ಪರಾತ್ಪರಗುರು) ಮಟ್ಟವನ್ನು ಸಂತರ ತುಲನೆಯಲ್ಲಿ ಬೇಗನೇ ತಲುಪುತ್ತಾರೆ. ಇದಕ್ಕೆ ಕಾರಣವೆಂದರೆ ಅವರು ಸತತವಾಗಿ ಶಿಷ್ಯನ ಉನ್ನತಿಯ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಸಂತರು ಕೆಲ ಸಂದರ್ಭಗಳಲ್ಲಿ ಭಕ್ತರ ಅಸತ್ ಕಾರ್ಯಗಳನ್ನೂ ಮಾಡುತ್ತಾರೆ.
(ಸನಾತನ ನಿರ್ಮಿತ ಗ್ರಂಥ ‘ಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ವರ್ತಿಸುವುದು’)