೧. ಪ್ರಾಚೀನ ಕಾಲದಲ್ಲಿ ಯಾರಾದರೊಬ್ಬರ ಜುಟ್ಟು ಕತ್ತರಿಸುವುದು ಅಂದರೆ ಮೃತ್ಯುದಂಡಕ್ಕೆ ಸಮಾನ ಎಂದು ಪರಿಗಣಿಸಲ್ಪಡುವುದು !
‘ಹರಿವಂಶ’ ಪುರಾಣದಲ್ಲಿ ಒಂದು ಕಥೆ ಇದೆ. ಹೈಹಯ ಮತ್ತು ತಾಲಜಂಘ ವಂಶದಲ್ಲಿನ ರಾಜಾಂನೀಶಕ, ಯವನ, ಕಾಂಬೋಜ ಪಾರದ ಮುಂತಾದ ರಾಜರ ಸಹಾಯದಿಂದ ಬಾಹೂ ರಾಜನ ರಾಜ್ಯವನ್ನು ವಶಪಡಿಸಿಕೊಂಡಾಗ, ಬಾಹೂ ರಾಜನು ತನ್ನ ಪತ್ನಿಯೊಂದಿಗೆ ಅರಣ್ಯಕ್ಕೆ ಹೊರಟು ಹೋದನು. ಅಲ್ಲಿ ಬಾಹೂ ರಾಜನು ಮರಣಹೊಂದಿದನು. ಓರ್ವ ಮಹರ್ಷಿಗಳು ರಾಜನ ಗರ್ಭವತಿ ಪತ್ನಿಯ ರಕ್ಷಣೆ ಮಾಡಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆತಂದರು. ಅಲ್ಲಿ ಅವಳು ಓರ್ವ ಪುತ್ರನಿಗೆ ಜನ್ಮವಿತ್ತಳು. ಅವನೇ ಮುಂದೆ ಸಗರ ರಾಜನೆಂದು ಪ್ರಸಿದ್ಧಿಯಾದನು. ಸಗರ ರಾಜನು ಓರ್ವ ಮುನಿಗಳಿಂದ ಶಾಸ್ತ್ರ ಮತ್ತು ಶಸ್ತ್ರ ವಿದ್ಯೆಗಳಲ್ಲಿ ಪಾರಂಗತನಾದನು. ಕಾಲಾಂತರದಿಂದ ಸಗರ ರಾಜನು ಹೈಹಯರನ್ನು ಕೊಂದುಹಾಕಿದನು ಮತ್ತು ಶಕ, ಯವನ, ಕಾಂಬೋಜ, ಪಾರದ ಇತ್ಯಾದಿ ರಾಜರನ್ನೂ ಕೊನೆಗಾಣಿಸಲು ನಿರ್ಧರಿಸಿದನು. ಶಕ, ಯವನ ಇತ್ಯಾದಿ ರಾಜರು ವಸಿಷ್ಠ ಋಷಿಗಳಿಗೆ ಶರಣು ಬಂದರು. ವಸಿಷ್ಠ ಋಷಿಗಳು ಕೆಲವು ಕರಾರಿನ ಮೇಲೆ ಅವರಿಗೆ ಅಭಯ ನೀಡಿದರು ಹಾಗೂ ಸಗರ ರಾಜನಿಗೆ, ಅವನು ಇವರನ್ನು ಹೊಡೆಯಬಾರದು ಎಂದು ಆಜ್ಞೆ ನೀಡಿದರು. ಸಗರ ರಾಜನು ತನ್ನ ಪ್ರತಿಜ್ಞೆಯನ್ನು ಬಿಡಲು ಸಿದ್ಧನಿರಲಿಲ್ಲ ಹಾಗೂ ವಸಿಷ್ಠ ಋಷಿಗಳ ಆಜ್ಞೆಯ ಉಲ್ಲಂಘನೆಯನ್ನು ಮಾಡುವುದು ಅಸಾಧ್ಯವಿತ್ತು. ಆದುದರಿಂದ ಅವನು ಆ ರಾಜರ ಜುಟ್ಟು ಸಹಿತ ತಲೆಬೋಳಿಸಿ ಅವರನ್ನು ಬಿಟ್ಟುಕೊಟ್ಟನು. ಪ್ರಾಚೀನ ಕಾಲದಲ್ಲಿ ಯಾರಾದರೊಬ್ಬರ ಜುಟ್ಟು ಕತ್ತರಿಸುವುದು ಮೃತ್ಯುದಂಡಕ್ಕೆ ಸಮ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಅತ್ಯಂತ ಖೇದಜನಕ ವಿಷಯವೆಂದರೆ, ಇಂದು ಹಿಂದುಗಳು ತಾವು ಸ್ವತಃ ತಮ್ಮ ಜುಟ್ಟನ್ನು ಕತ್ತರಿಸಿ ಹಾಕುತ್ತಿದ್ದಾರೆ.
೨. ಅಧುನಿಕ ವಿಜ್ಞಾನವೂ ಈಗ ಜುಟ್ಟಿನ ಮಹತ್ವವನ್ನು ಅಂಗೀಕರಿಸುತ್ತದೆ !
೨ ಅ. ಡಾ. ಹಾಯ್ವಮನ್ : ನಾನು ಅನೇಕ ವರ್ಷಗಳವರೆಗೆ ಭಾರತದಲ್ಲಿದ್ದು ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಿದ್ದೇನೆ. ಇಲ್ಲಿಯ ಜನರು ಪ್ರಾಚೀನ ಕಾಲದಿಂದಲೂ ತಲೆಗೆ ಜುಟ್ಟು ಇಡುತ್ತಿದ್ದು, ವೇದಗಳಲ್ಲಿಯೂ ಅದರ ವರ್ಣನೆಯು ಕಾಣಲು ಸಿಗುತ್ತದೆ. ದಕ್ಷಿಣ ಭಾರತದಲ್ಲಿಯಂತೂ ಅರ್ಧ ತಲೆಯ ಮೇಲೆ ಗೋಪದ್ಮದಂತೆ (ಗೋಪುರದಂತೆ) ಜುಟ್ಟನ್ನು ಇಡುತ್ತಾರೆ. ಅವರ ತೀಕ್ಷ್ಣ ಬುದ್ಧಿಯನ್ನು ಕಂಡು ನಾನು ತುಂಬಾ ಪ್ರಭಾವಿತನಾದೆನು. ಖಚಿತವಾಗಿಯೂ ಬೌದ್ಧಿಕ ವಿಕಾಸದಲ್ಲಿ ಈ ಜುಟ್ಟು ತುಂಬಾ ಸಹಾಯಕವಾಗಿರುತ್ತದೆ. ಜುಟ್ಟನ್ನು ಇಡುವುದು ಅತ್ಯಂತ ಲಾಭದಾಯಕವಾಗಿದೆ. ಹಿಂದೂ ಧರ್ಮದ ಮೇಲೆ ನನಗೆ ಅಗಾಧ ವಿಶ್ವಾಸವಿದೆ. ಮತ್ತು ಜುಟ್ಟನ್ನು ಇಡುವುದನ್ನು ಸಮರ್ಥಿಸುತ್ತೇನೆ.
೨ ಆ. ಖ್ಯಾತ ವಿದ್ವಾಂಸರಾದ ಡಾ. ಐ. ಈ. ಕ್ಲಾರ್ಕ್ (ಎಮ್.ಡಿ.) : “ನಾನು ಯಾವಾಗದಿಂದ ಪ್ರಾಚೀನ ಕಾಲದ ವಿಜ್ಞಾನದ ಶೋಧ ನಡೆಯಲು ಪ್ರಾರಂಭಿಸಿದೆನೋ ಅಂದಿನಿಂದ ನನ್ನ ವಿಶ್ವಾಸ ದೃಢ ವಾಯಿತು ಏಕೆಂದರೆ, ಹಿಂದುಗಳ ಪ್ರತಿಯೊಂದು ನಿಯಮಗಳು ವೈಜ್ಞಾನಿಕ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತವೆ. ಜುಟ್ಟನ್ನು ಇಡುವುದು ಇದು ಹಿಂದೂಗಳ ಧರ್ಮ ಮಾತ್ರವಲ್ಲ, ಅದು ಸುಷುಮ್ನಾ ನಾಡಿಯ ಕೇಂದ್ರಗಳ ರಕ್ಷಣೆಗಾಗಿ ಋಷಿ-ಮುನಿಗಳ ಶೋಧನೆಯ ವಿಲಕ್ಷಣ ಚಮತ್ಕಾರವಾಗಿದೆ.”
೨ ಇ. ಪಾಶ್ಚಾತ್ಯ ವಿದ್ವಾಂಸರಾದ ಅರ್ಲ ಥಾಮಸ್ : “ಹಿಂದೂ ಜನರು ಜುಟ್ಟನ್ನು ಇಟ್ಟು ಸುಷುಮ್ನಾದ ರಕ್ಷಣೆಯನ್ನು ಮಾಡುತ್ತಾರೆ. ಇದರ ವಿರುದ್ಧ ಇತರ ದೇಶದಲ್ಲಿನ ಜನರು ತಲೆಯ ಮೇಲೆ ಉದ್ದನೆಯ ಕೂದಲು ಇಟ್ಟು ಅಥವಾ ಟೊಪ್ಪಿಗೆ ಧರಿಸುತ್ತಾರೆ. ಇವುಗಳ ಪೈಕಿ ಹಿಂದೂ ಜನರ ಜುಟ್ಟನ್ನು ಇಡುವುದು ಅತ್ಯಂತ ಶ್ರೇಯಸ್ಕರವಾಗಿದೆ.” ಎಂದು ಥಾಮಸ್ ಬರೆದಿದ್ದಾರೆ.
೩. ಜುಟ್ಟನ್ನು ಇಡುವುದರಿಂದ ಮನುಷ್ಯನ ರಕ್ಷಣೆಯಾಗುವುದು :
ಮಾನವನ ಶರೀರವನ್ನು ಪ್ರಕೃತಿಯು ಎಷ್ಟು ಬಲಶಾಲಿಯನ್ನಾಗಿಸಿದೆ ಎಂದರೆ, ಅದು ದೊಡ್ಡ ದೊಡ್ಡ ಆಘಾತಗಳನ್ನು ಸಹಿಸಿಯೂ ಜೀವಂತವಾಗಿರುತ್ತದೆ; ಆದರೆ ಶರೀರದಲ್ಲಿ ಕೆಲವು ಇಂತಹ ಸ್ಥಾನಗಳೂ ಇರುತ್ತವೆ, ಅವುಗಳ ಮೇಲೆ ಆಘಾತವಾಗುವುದರಿಂದ ಮನುಷ್ಯನು ತಕ್ಷಣ ಮೃತ್ಯು ಹೊಂದಬಹುದು. ಇವುಗಳಿಗೆ ‘ಮರ್ಮಸ್ಥಾನ’ಗಳೆಂದು ಕರೆಯಲಾಗುತ್ತದೆ. ಹಿಂದೂ ಜನರು ಜುಟ್ಟಿನ ಕೆಳಭಾಗದಲ್ಲಿಯೂ ಮರ್ಮಸ್ಥಾನವಿರುತ್ತದೆ, ಈ ಬಗ್ಗೆ ಸುಶ್ರುತಾಚಾರ್ಯರು ಬರೆದಿದ್ದಾರೆ ಏನೆಂದರೆ,
ಮಸ್ತಕಾಭ್ಯಾಂತರೊ ಪರಿಷ್ಟಾತ್‌ಶಿರಾಸಂಧಿ ಸನ್ನಿಪಾತೊ |
ರೋಮಾವರ್ತೊ ಧಿಪತಿಸ್ತಾತ್ರಾಪಿ ಸದ್ಯೊ ಮರಣಮ್||
ಅರ್ಥ : ತಲೆಯ ಮೇಲೆ ಕೂದಲುಗಳ ಸುಳಿ ಎಲ್ಲಿರುವುದೊ, ಅದರ ಕೆಳಗಿನ ಭಾಗವು ರೋಮ ಮತ್ತು ಸಂಧುಗಳಿಗೆ ಸಂಬಂಧಿಸಿರುತ್ತದೆ. ಅದಕ್ಕೆ ಅಧಿಪತಿಮರ್ಮ ಎನ್ನುತ್ತಾರೆ. ಅಲ್ಲಿ ಪೆಟ್ಟು ಬಿದ್ದರೆ ತಕ್ಷಣ ಮೃತ್ಯುವಾಗುತ್ತದೆ. (ಸುಶ್ರುತ ಸಂಹಿತಾ, ಶಾರೀರ ಸ್ಥಾನಮ್: ೬.೨೮) ಸುಷುಮ್ನಾದ ಮೂಲ ಸ್ಥಾನಕ್ಕೆ ‘ಮಸ್ತುಲಿಂಗ’ ಎಂದು ಕರೆಯುತ್ತಾರೆ. ಮೆದುಳಿಗೆ ಕಿವಿ, ಮೂಗು, ನಾಲಿಗೆ, ತ್ವಚೆ ಈ ಪಂಚಜ್ಞಾನೇಂದ್ರಿಯಗಳೊಂದಿಗೆ ಸಂಬಂಧವಿರುತ್ತದೆ ಮತ್ತು ಕೈ, ಕಾಲು, ಗುದದ್ವಾರ, ಗುಪ್ತೇಂದ್ರೀಯ ಇತ್ಯಾದಿ ಕರ್ಮೇಂದ್ರಿಯಗಳಿಗೆ ಮಸ್ತುಲಿಂಗದೊಡನೆ ಸಂಬಂಧವಿದೆ. ಮೆದುಳು ಮತ್ತು ಮಸ್ತುಲಿಂಗಗಳು ಎಷ್ಟು ಸಾಮರ್ಥ್ಯಶಾಲಿಯಾಗಿರುತ್ತವೆಯೋ ಅಷ್ಟು ಜ್ಞಾನೇಂದ್ರಿಯಗಳ ಮತ್ತು ಕರ್ಮೇಂದ್ರಿಯಗಳ ಸಾಮರ್ಥ್ಯವು ಹೆಚ್ಚುತ್ತದೆ. ಮೆದುಳಿಗೆ ಶೀತಲತೆ ಬೇಕಾಗಿರುತ್ತದೆಯಾದರೆ, ಮಸ್ತುಲಿಂಗಕ್ಕೆ ಉಷ್ಣತೆ ! ಮೆದುಳಿಗೆ ಶೀತಲತೆಯನ್ನು ಒದಗಿಸಲು ಬೋಳಿಸುವುದು ಮತ್ತು ಮಸ್ತುಲಿಂಗಕ್ಕೆ ಉಷ್ಣತೆಯನ್ನು ನೀಡುವುದಕ್ಕೆ ಗೋಪದ್ಮದ(ಗೋಪುರದ) ಆಕಾರದ ಕೂದಲು ಇಡುವುದು ಅವಶ್ಯಕವಿರುತ್ತದೆ. ಕೂದಲು ನಿರ್ವಾಹಕವಾಗಿರುತ್ತವೆ; ಎಂದು ಜುಟ್ಟಿನ ಉದ್ದವಾದ ಕೂದಲು ಹೊರಗಡೆಯ ಅನಾವಶ್ಯಕ ಉಷ್ಣತೆ ಅಥವಾ ಚಳಿಯಿಂದ ಮಸ್ತುಲಿಂಗದ ರಕ್ಷಣೆ ಮಾಡುತ್ತದೆ.
೪. ಜುಟ್ಟನ್ನು ಇಡುವುದರಿಂದಾಗುವ ಇತರ ಲಾಭಗಳು
ಅ. ಜುಟ್ಟನ್ನು ಇಡುವುದರಿಂದ , ಹಾಗೆಯೇ ಜುಟ್ಟಿನ ನಿಯಮಗಳನ್ನು ಪಾಲಿಸುವುದರಿಂದ ಸದ್ ಬುದ್ಧಿ ಮತ್ತು ಸದ್‌ವಿಚಾರಗಳ ಪ್ರಾಪ್ತಿಯಾಗುತ್ತದೆ.
ಆ. ಆತ್ಮಶಕ್ತಿಯು ಪ್ರಬಲವಾಗುತ್ತದೆ.
ಇ. ಮನುಷ್ಯನು ಧಾರ್ಮಿಕ, ಸಾತ್ತ್ವಿಕ ಮತ್ತು ಸಂಯಮೀಯಾಗಿರುತ್ತಾನೆ.
ಈ. ಲೌಕಿಕ ಮತ್ತು ಪಾರಲೌಕಿಕ ಕಾರ್ಯಗಳಲ್ಲಿ ಯಶಸ್ಸು ದೊರಕುತ್ತದೆ.
ಉ. ದೇವತೆಗಳು ಎಲ್ಲರೂ ಮನುಷ್ಯನ ರಕ್ಷಣೆ ಮಾಡುತ್ತಾರೆ.
ಊ. ಸುಷುಮ್ನಾದ ರಕ್ಷಣೆಯಿಂದ ಮನುಷ್ಯನು ಆರೋಗ್ಯಶಾಲಿ, ಬಲಶಾಲಿ, ತೇಜಸ್ವಿ ಮತ್ತು ದೀರ್ಘಾಯುಷಿಯಾಗುತ್ತಾನೆ.
ಎ. ನೇತ್ರದೃಷ್ಟಿಯು ಸುರಕ್ಷಿತವಾಗಿರುತ್ತದೆ.
ಈ ರೀತಿಯಾಗಿ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಎಲ್ಲವೂ ದೃಷ್ಟಿಕೋನದಿಂದ ಜುಟ್ಟಿಗೆ ವಿಶೇಷ ಮಹತ್ತ್ವ ಇರುವುದು ಗಮನಕ್ಕೆ ಬರುತ್ತದೆ; ಆದರೆ ಇಂದು ಹಿಂದೂ ಜನರು ಪಾಶ್ಚಾತ್ಯರ ಅಂಧಾನುಕರಣೆಯಿಂದಾಗಿ‘ ಫ್ಯಾಶನೆಬಲ್’ ಕಾಣುವ ಸ್ಪರ್ಧೆಯಲ್ಲಿ ಜುಟ್ಟನ್ನು ಇಡುವುದಿಲ್ಲ ಮತ್ತು ತಮ್ಮ ಕೈಗಳಿಂದಲೇ ಹಿಂದೂ ಧರ್ಮ ಮತ್ತು ಸಂಸ್ಕೃತಿ ಇವುಗಳ ತ್ಯಾಗ ಮಾಡುತ್ತಾರೆ. ಜನರು ನಗಲಿ, ಮೂರ್ಖರೆನ್ನಲಿ ಅದನ್ನು ಸಹಿಸಿರಿ; ಆದರೆ ಧರ್ಮದ ತ್ಯಾಗ ಮಾಡಬೇಡಿರಿ ! ಪ್ರತಿಯೊಬ್ಬ ಮಾನವನ ಕಲ್ಯಾಣವನ್ನು ಬಯಸುವ ನಮ್ಮ ಹಿಂದೂ ಸಂಸ್ಕೃತಿಯು ನಷ್ಟವಾಗುತ್ತಿದೆ. ಹಿಂದುಗಳು ಸ್ವತಃ ತಮ್ಮ ಸಂಸ್ಕೃತಿಯ ನಾಶ ಮಾಡುತ್ತಿದ್ದಲ್ಲಿ, ರಕ್ಷಣೆ ಯಾರು ಮಾಡುವರು ?’
( ಆಧಾರ : ‘ಋಷಿಪ್ರಸಾದ’, ಆಗಸ್ಟ್ ೨೦೦೬ )
Good information🙏