ಅ. ಮೊದಲನೆಯ ಹಂತ : ಸಾಮಾನ್ಯ ವ್ಯಕ್ತಿಯು ತನ್ನ ಕುಲದೇವತೆ ಅಥವಾ ಉಪಾಸ್ಯದೇವತೆಯಲ್ಲಿ ಮತ್ತು ಗುರುಪ್ರಾಪ್ತಿಯಾದ ವ್ಯಕ್ತಿಯು ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಬೇಕು.
ಆ. ಎರಡನೆಯ ಹಂತ : ಮೊದಲನೆಯ ಹಂತದ ಪ್ರಾರ್ಥನೆಯ ಜೊತೆಗೆ ಆಯಾ ಕಾರ್ಯಕ್ಕೆ ಸಂಬಂಧಿಸಿದ ದೇವತೆಗಳಲ್ಲಿ ಉದಾ. ಸ್ನಾನದ ಮೊದಲು ಜಲದೇವತೆಗೆ ಮತ್ತು ಭೋಜನದ ಮೊದಲು ಶ್ರೀ ಅನ್ನಪೂರ್ಣಾ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಇದರಿಂದ ಆಯಾ ದೇವತೆಯ ಮಹತ್ವವು ಗಮನಕ್ಕೆ ಬಂದು ಕೃತಜ್ಞತಾಭಾವವು ಹೆಚ್ಚಾಗುತ್ತದೆ.
ಇ. ಮೂರನೆಯ ಹಂತ : ಮೊದಲನೆಯ ಮತ್ತು ಎರಡನೆಯ ಹಂತದ ಪ್ರಾರ್ಥನೆಗಳ ಜೊತೆಗೆ ಆಯಾ ಕಾರ್ಯಕ್ಕೆ ಸಹಾಯವನ್ನು ಮಾಡುವ ಉಪಕರಣಗಳಿಗೂ ಪ್ರಾರ್ಥನೆಯನ್ನು ಮಾಡಬೇಕು. ಉದಾ. ಸಂಚಾರೀದೂರವಾಣಿ ಉಪಯೋಗಿಸುವವನು ಸಂಚಾರೀದೂರವಾಣಿಗೆ ಮತ್ತು ಗೃಹಿಣಿಯರು ಅಡುಗೆಗೆ ತಗಲುವ ಪಾತ್ರೆಗಳು, ಒಲೆ ಇತ್ಯಾದಿಗಳಿಗೆ ಪ್ರಾರ್ಥನೆಯನ್ನು ಮಾಡಬೇಕು. ಇದರಿಂದ ವ್ಯಕ್ತಿಗೆ ‘ಚರಾಚರದಲ್ಲಿ ಈಶ್ವರೀ ತತ್ತ್ವವಿದೆ’ ಎಂಬುದು ಕಲಿಯಲು ಸಿಗುತ್ತದೆ.
ಸಾಧನೆಯನ್ನು ಮಾಡುವಾಗ ‘ಅನೇಕ ದೇವತೆಗಳ ಉಪಾಸನೆಯಿಂದ ಒಂದು ದೇವತೆಯ ಉಪಾಸನೆಯ ಕಡೆಗೆ’ ಹೋಗುವುದಿರುತ್ತದೆ. ಹೀಗಿರುವಾಗ ವಿವಿಧ ದೇವತೆಗಳಲ್ಲಿ ಮತ್ತು ಉಪಕರಣಗಳಿಗೆ ಪ್ರಾರ್ಥನೆಯನ್ನು ಮಾಡಲು ಹೇಳಲಾಗಿದೆ. ಇದರ ಹಿಂದಿನ ಉದ್ದೇಶವನ್ನೂ ಗ್ರಂಥದಲ್ಲಿ ಸ್ಪಷ್ಟೀಕರಿಸಲಾಗಿದೆ. ‘ಗುರುಚರಣಸ್ಪರ್ಶಾವಿಣ ದುಜಾ ಸುಲಭ ಮಾರ್ಗ ನ ಆಹೆ ರೇ|’ (ಗುರುಚರಣಸ್ಪರ್ಶವನ್ನು ಹೊರತುಪಡಿಸಿ ಬೇರೆ ಯಾವುದೇ ಸುಲಭ ಮಾರ್ಗವಿಲ್ಲ) ಹೀಗೆ ಗುರು ಅಥವಾ ಉಪಾಸ್ಯದೇವತೆಯಲ್ಲಿ ಉತ್ಕಟಭಾವ ನಿರ್ಮಾಣವಾದ ನಂತರ ಎರಡನೆಯ ಅಥವಾ ಮೂರನೆಯ ಹಂತದಲ್ಲಿ ಹೇಳಿದ ಪ್ರಾರ್ಥನೆಗಳನ್ನು ಮಾಡದಿದ್ದರೂ ನಡೆಯುತ್ತದೆ.
ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು : ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.
ಪ್ರಾರ್ಥನೆಯ ಜೊತೆಗೆ ಸರ್ವತೋಮುಖ ಸಾಧನೆಯನ್ನು ಮಾಡಿರಿ,
ಆಗಲೇ ಜೀವನದಲ್ಲಿ ಸತತವಾಗಿ ಆನಂದ ಸಿಗುವುದು
ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗುತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಕುಲದೇವರ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆಯಾದರೂ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು. ಹಾಗೆಯೇ ಪೂರ್ವಜರ ಅತೃಪ್ತ ಲಿಂಗದೇಹಗಳ ತೊಂದರೆಗಳಿಂದ ರಕ್ಷಣೆಯನ್ನು ಪಡೆಯಲು ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ತೊಂದರೆಯ ತೀವ್ರತೆಗನುಸಾರ ಪ್ರತಿದಿನ ೨ರಿಂದ ೬ ಗಂಟೆ ಮಾಡಬೇಕು. ಸಮಾಜದಲ್ಲಿ ಅಧ್ಯಾತ್ಮದ ಪ್ರಚಾರವಾಗಲು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇರಿಕೊಂಡು ಸತ್ಸೇವೆಯನ್ನು ಮಾಡಬೇಕು. ಇಂತಹ ವಿವಿಧ ಪ್ರಯತ್ನಗಳಿಂದ ಸಾಧನೆಯನ್ನು ಮಾಡಬೇಕು. (ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥಸಂಪತ್ತು ಹಾಗೂ ಸನಾತನದ ಸತ್ಸಂಗಗಳ ಲಾಭವನ್ನು ಪಡೆಯಿರಿ.)
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)