ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?

ಅ. ಆದಷ್ಟು ಅಶುಭ ದಿನ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಯ ಹೊತ್ತು ಕೂದಲುಗಳನ್ನು ಕತ್ತರಿಸದಿರುವುದರ ಹಿಂದಿನ ಶಾಸ್ತ್ರ.

೧. ಆದಷ್ಟು ಅಶುಭ ದಿನಗಳಂದು, ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ದಿನಗಳಂದು ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣವು ಹೆಚ್ಚಿರುತ್ತದೆ.

೨. ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ.

೩. ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ ಸ್ಥಾನಗಳು ನಿರ್ಮಾಣವಾಗುತ್ತವೆ; ಆದುದರಿಂದ ರಜ-ತಮದ ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವ ಕೃತಿಯನ್ನು ಮಾಡಬಾರದು.

೪. ಆದಷ್ಟು ಸಾಯಂಕಾಲದ ಸಮಯ ಅಥವಾ ರಾತ್ರಿ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನದ ಹೊತ್ತಿನಲ್ಲಿ ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ಕಾಲವೂ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸುವಂತಹದ್ದಾಗಿದೆ.

ಆ. ರಾಮನವಮಿ, ಹನುಮಾನಜಯಂತಿಗಳಂತಹ ಉತ್ಸವಗಳ ದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು !

ರಾಮನವಮಿ, ಹನುಮಾನಜಯಂತಿ ಇವುಗಳಂತಹ ಉತ್ಸವಗಳ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ವಾಯು ಮಂಡಲದಲ್ಲಿ ಸಾತ್ತ್ವಿಕ ಲಹರಿಗಳ ಪ್ರಮಾಣವು ಅಧಿಕವಿರುತ್ತದೆ. ಇಂತಹ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಅಶುಭ ಕೃತಿಯನ್ನು ಮಾಡಿ ವಾಯುಮಂಡಲದಲ್ಲಿ ರಜ-ತಮವನ್ನು ಪಸರಿ ಸುವ ಕಾರ್ಯವನ್ನು ಮಾಡುವುದರಿಂದ ಜೀವಕ್ಕೆ ಸಮಷ್ಟಿ ಪಾಪವನ್ನು ಎದುರಿಸಬೇಕಾಗುತ್ತದೆ.

ಇ. ಜನ್ಮವಾರ ಮತ್ತು ಜನ್ಮತಿಥಿಯಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು !

ಜನ್ಮವಾರ ಮತ್ತು ಜನ್ಮತಿಥಿಯಂದೂ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ನಮ್ಮ ಪ್ರಕೃತಿಗೆ ಸಂಬಂಧಿಸಿದ ಗ್ರಹ, ನಕ್ಷತ್ರ, ಹಾಗೆಯೇ ತಾರಾಮಂಡಲದಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ನಮ್ಮ ಕ್ಷಮತೆಯು ಕಡಿಮೆಯಾಗಿ ಉಪಾಸ್ಯ ದೇವತೆಯಿಂದ ಸಿಗುವ ಚೈತನ್ಯದ ಲಾಭವು ಕಡಿಮೆಯಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ನಮಗೆ ಹಾನಿಯಾಗುತ್ತದೆ. ಹಾಗೆಯೇ ಇತರರ ಆಶೀರ್ವಾದದಿಂದ ಸಿಗುವ ಶುಭಫಲವೂ ಕಡಿಮೆಯಾಗುತ್ತದೆ.

ಈ. ನಿಷ್ಕರ್ಷ 

ಶುಭದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಇಂತಹ ದಿನ ಅಶುಭ ಕೃತಿಯನ್ನು ಮಾಡಿದುದರ ಸಮಷ್ಟಿ ಪಾಪ ತಗಲುತ್ತದೆ, ಹಾಗೆಯೇ ಅಶುಭ ದಿನಗಳಂದೂ ಇಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಈ ಕೃತಿಯಿಂದ ರಜ-ತಮಾತ್ಮಕ ಲಹರಿಗಳು ದೇಹದಲ್ಲಿ ಬರುವ ಪ್ರಮಾಣವು ಅಧಿಕವಾಗಿರುತ್ತದೆ. ಇತರ ಸಮಯದಲ್ಲಿ ಅಶುಭ ಸಮಯವನ್ನು ಬಿಟ್ಟು ಕೂದಲುಗಳನ್ನು ಕತ್ತರಿಸಿಕೊಳ್ಳಲು ಧರ್ಮವು ಅನುಮತಿ ನೀಡಿದೆ.

ರಾತ್ರಿ ಕೂದಲುಗಳನ್ನು ಏಕೆ ಕತ್ತರಿಸಬಾರದು?

ಅ. ರಾತ್ರಿ ಕೂದಲುಗಳನ್ನು ಕತ್ತರಿಸುವಾಗ ಆಗುವ ರಜ-ತಮಾತ್ಮಕ ನಾದದ ಕಡೆಗೆ ಕೆಟ್ಟ ಶಕ್ತಿಗಳು ಆಕರ್ಷಿಸುವ ಪ್ರಮಾಣವು ಹಗಲಿಗಿಂತ ಹೆಚ್ಚಿರುವುದರಿಂದ ರಾತ್ರಿ ಸಮಯದಲ್ಲಿ ಕೂದಲುಗಳನ್ನು ಕತ್ತರಿಸಬಾರದು!: ‘ರಾತ್ರಿಯ ವಾತಾವರಣವು ರಜ-ತಮಯುಕ್ತವಾಗಿರುವುದರಿಂದ ಕೆಟ್ಟ ಶಕ್ತಿಗಳ ವೇಗವಾದ ರಜ-ತಮೋಗುಣೀ ಸಂಚಾರಕ್ಕೆ ಪೂರಕವಾಗಿರುತ್ತದೆ. ಇಂತಹ ಸಮಯದಲ್ಲಿ ಉಗುರು ಮತ್ತು ಕೂದಲುಗಳನ್ನು ಕತ್ತರಿಸುವಾಗ ಆಗುವ ರಜ-ತಮಾತ್ಮಕ ನಾದದೆಡೆಗೆ ಕೆಟ್ಟ ಶಕ್ತಿಗಳು ಸಹಜವಾಗಿ ಆಕರ್ಷಿಸುವ ಮತ್ತು ಜೀವಕ್ಕೆ ತೊಂದರೆಗಳನ್ನು ಕೊಡುವ ಪ್ರಮಾಣವು ಹಗಲಿಗಿಂತ ಹೆಚ್ಚಿರುವುದರಿಂದ, ರಜ-ತಮಾತ್ಮಕ ಸ್ಪಂದನಗಳನ್ನು ನಿರ್ಮಾಣ ಮಾಡುವ ಕೃತಿಗಳನ್ನು ಸಾಧ್ಯವಾದಷ್ಟು ಅಶುಭ ಕಾಲದಲ್ಲಿ, ಅಂದರೆ ರಾತ್ರಿಯ ಸಮಯದಲ್ಲಿ ಮಾಡಬಾರದು.’ – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩.೧೨.೨೦೦೬, ಮಧ್ಯಾಹ್ನ ೧೨.೦೮)

ಆ. ರಾತ್ರಿಯ ಸಮಯವು ಮಾಂತ್ರಿಕರಿಗೆ ಹೆಚ್ಚು ಫಲದಾಯಕ ಮತ್ತು ಶಕ್ತಿಯ ಅಪವ್ಯಯವನ್ನು ತಪ್ಪಿಸುವಂತಹದ್ದಾಗಿರುತ್ತದೆ, ಮಾಂತ್ರಿಕರಿಗೆ ಮಾಟವನ್ನು ಮಾಡಲು ಅವಕಾಶ ಸಿಗಬಾರದೆಂದು ರಾತ್ರಿಯ ಸಮಯದಲ್ಲಿ ಕೂದಲುಗಳನ್ನು ಕತ್ತರಿಸಬಾರದು!: ‘ರಾತ್ರಿಯ ಕಾಲಕ್ಕೆ ‘ತಾಮಸಿಕ ಕಾಲ’ ಅಥವಾ ‘ಮಹಾಕಾಲ’ ಎಂದು ಹೇಳುತ್ತಾರೆ. ಈ ಕಾಲದಲ್ಲಿ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಸಂಚಾರವು ಅಧಿಕವಾಗಿರುತ್ತದೆ. ತಾಮಸಿಕ ಕಾಲದಲ್ಲಿ ಮಾಡಿದ ಯಾವುದೇ ಕೃತಿಯಿಂದ ಶುಭ ಮತ್ತು ಚೈತನ್ಯಮಯ ಫಲವು ಸಿಗದೇ, ಅಶುಭ ಪರಿಣಾಮಗಳಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಉಗುರು ಮತ್ತು ಕೂದಲುಗಳು ಆಯಾ ಜೀವದ ಸ್ಥೂಲದೇಹದಲ್ಲಿನ ತ್ರಿಗುಣಗಳಿಗೆ ಸರ್ವಾಧಿಕ ಸಾಮ್ಯತೆಯನ್ನು ದರ್ಶಿಸುತ್ತವೆ. ರಾತ್ರಿಯ ಸಮಯದಲ್ಲಿ ಅಂದರೆ ತಾಮಸಿಕ ಕಾಲದಲ್ಲಿ ಇದರ ಲಾಭವನ್ನು ಪಡೆದುಕೊಳ್ಳುವುದು ಮಾಂತ್ರಿಕರಿಗೆ ಹೆಚ್ಚು ಫಲದಾಯಕ ಮತ್ತು ಶಕ್ತಿಯ ಅಪವ್ಯಯವನ್ನು ತಪ್ಪಿಸುವಂತಹದ್ದಾಗಿರುತ್ತದೆ. ಆದುದರಿಂದ ಮಾಂತ್ರಿಕರು ಈ ಸಮಯವನ್ನು ಉಗುರು ಹಾಗೂ ಕೂದಲುಗಳ ಮೇಲೆ ಮಾಟವನ್ನು ಮಾಡಲು ಉಪಯೋಗಿಸುವ ಸಾಧ್ಯತೆಯು ಹೆಚ್ಚಿರುತ್ತದೆ. ಜೀವದ ಮೇಲೆ ವಿಪರೀತ ಪರಿಣಾಮವಾಗುವುದನ್ನು ತಪ್ಪಿಸಲು ರಾತ್ರಿಯ ಸಮಯದಲ್ಲಿ ಉಗುರುಗಳನ್ನು ತೆಗೆಯುವುದು ಮತ್ತು ಕೂದಲುಗಳನ್ನು ಕತ್ತರಿಸುವುದನ್ನು ಮಾಡಬಾರದು.’

– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೯.೨.೨೦೦೫, ಮಧ್ಯಾಹ್ನ ೨.೪೦)

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ’)

Leave a Comment