ಅ. ‘ಯಾವುದಾದರೊಂದು ಜೀವದ ರಜ-ತಮಾತ್ಮಕ ಇಚ್ಛೆಯು, ಇನ್ನೊಂದು ಜೀವದ ಮೇಲೆ ದುಷ್ಪರಿಣಾಮವನ್ನು ಮಾಡುವುದಕ್ಕೆ ದೃಷ್ಟಿ ತಗಲುವುದು ಎನ್ನುತ್ತಾರೆ.’
ಇದರ ಒಂದು ಉದಾಹರಣೆಯೆಂದರೆ, ಮಗುವಿಗೆ ದೃಷ್ಟಿ ತಗಲುವುದು : ನಗುವ ಅಥವಾ ಮುದ್ದಾದ ಮಗುವನ್ನು ನೋಡಿ ಕೆಲವು ಜನರ ಮನಸ್ಸಿನಲ್ಲಿ ಅವರಿಗೆ ಅರಿವಾಗದೇ, ಒಂದು ರೀತಿಯ ಆಸಕ್ತಿಯುಕ್ತ ವಿಚಾರಗಳು ಬರುತ್ತವೆ. ಆಸಕ್ತಿಯುಕ್ತ ವಿಚಾರಗಳು ಯಾವಾಗಲೂ ರಜ-ತಮಾತ್ಮಕವಾಗಿರುತ್ತವೆ. ಮಗುವಿನ ಸೂಕ್ಷ್ಮದೇಹವು ಅತ್ಯಂತ ಸಂವೇದನಾಶೀಲವಾಗಿರುವುದರಿಂದ, ಈ ರಜ-ತಮಾತ್ಮಕ ಸ್ಪಂದನಗಳಿಂದ ಅದರ ಮೇಲೆ ಕೆಟ್ಟ ಪರಿಣಾಮವಾಗುತ್ತದೆ; ಅಂದರೆ ಮಗುವಿಗೆ ದೃಷ್ಟಿ ತಗಲುತ್ತದೆ.
ಆ. ಕೆಲವೊಮ್ಮೆ ಯಾವುದಾದರೊಬ್ಬ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಬಗ್ಗೆ ಯಾವುದಾದರೊಬ್ಬ ವ್ಯಕ್ತಿ ಅಥವಾ ಕೆಟ್ಟ ಶಕ್ತಿಯ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬರುತ್ತವೆ ಅಥವಾ ಅವರಿಗೆ ಒಳಿತಾಗುವುದನ್ನು ಆ ವ್ಯಕ್ತಿಗೆ ಅಥವಾ ಕೆಟ್ಟ ಶಕ್ತಿಗೆ ಸಹಿಸಲಾಗುವುದಿಲ್ಲ. ಇದರಿಂದ ನಿರ್ಮಾಣವಾಗುವ ಕೆಟ್ಟ ಸ್ಪಂದನಗಳು ಆ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಮೇಲೆ ಪರಿಣಾಮವನ್ನು ಬೀರುವುದಕ್ಕೆ ‘ದೃಷ್ಟಿ ತಗಲುವುದು’ ಎನ್ನುತ್ತಾರೆ.
‘ಯಾವುದಾದರೊಂದು ಜೀವದ ಮನಸ್ಸಿನಲ್ಲಿ, ಇನ್ನೊಂದು ಜೀವದ ಬಗ್ಗೆ ತೀವ್ರ ಮತ್ಸರ ಅಥವಾ ದ್ವೇಷಯುಕ್ತ ವಿಚಾರಗಳ ಪ್ರಮಾಣವು ಶೇ. ೩೦ ಕ್ಕಿಂತ ಹೆಚ್ಚಿಗಿದ್ದರೆ, ಆ ಜೀವದ ದೃಷ್ಟಿಯು ಇನ್ನೊಂದು ಜೀವಕ್ಕೆ ತೀವ್ರವಾಗಿ ತಗಲಬಹುದು. ಈ ರೀತಿಯ ದೃಷ್ಟಿ ತಗಲಿದಾಗ ದೃಷ್ಟಿ ತಗಲಿದ ಜೀವಕ್ಕೆ ಶಾರೀರಿಕಕ್ಕಿಂತ ಮಾನಸಿಕ ತೊಂದರೆಗಳಾಗುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ‘ಸೂಕ್ಷ್ಮ-ಸ್ತರದಲ್ಲಿ ತೀವ್ರ ದೃಷ್ಟಿ ತಗಲುವುದು’ ಎನ್ನುತ್ತಾರೆ.’
ಇ. ಅಘೋರಿ ವಿಧಿಗಳನ್ನು ಮಾಡುವವರಿಂದ ಯಾವುದಾದರೊಬ್ಬ ವ್ಯಕ್ತಿಯ ಮೇಲೆ ಮಾಟದಂತಹ ವಿಧಿಗಳನ್ನು ಮಾಡಿಸಿಕೊಂಡಿದ್ದರೂ ಆ ವ್ಯಕ್ತಿಗೆ ದೃಷ್ಟಿ ತಗಲುತ್ತದೆ.
ಇ೧. ಮಾಟದ ವೈಶಿಷ್ಟ್ಯಗಳು
ಇ೧ಅ. ‘ಮಾಟವನ್ನು ಒಂದು ವಿಶಿಷ್ಟ ಉದ್ದೇಶಕ್ಕಾಗಿ ಮಾಡುತ್ತಾರೆ.
ಇ೧ಆ. ದೃಷ್ಟಿ ತಗಲಬೇಕಾದರೆ ಯಾವುದಾದರೊಂದು ಜೀವದ ಕಪಟ ವಾಸನೆಯು ಶೇ.೩೦ರಷ್ಟಿರಬೇಕಾಗುತ್ತದೆ, ಆದರೆ ಮಾಟ ತಗಲಬೇಕಾದರೆ ಈ ಕಪಟ ವಾಸನೆಯು ಶೇ. ೩೦ ಕ್ಕಿಂತಲೂ ಹೆಚ್ಚು ತೀವ್ರ, ಅಂದರೆ ಉಗ್ರರೂಪವನ್ನು ತಾಳಬೇಕಾಗುತ್ತದೆ.
ಇ೧ಇ. ದೃಷ್ಟಿಯ ಸ್ಪಂದನಗಳು ಶೇ.೩೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತ್ರಾಸದಾಯಕವಾದರೆ, ಅದು ಮಾಟದಲ್ಲಿ ರೂಪಾಂತರವಾಗುತ್ತದೆ.’
ಈ. ಕೆಟ್ಟ ಶಕ್ತಿಗಳು ಹರಡುವ ಕಪ್ಪು ಶಕ್ತಿಯಿಂದ ಯಾವುದಾದರೊಂದು ಜೀವಕ್ಕೆ ತೊಂದರೆಯಾಗುವುದಕ್ಕೂ ‘ಜೀವಕ್ಕೆ ಆ ಕೆಟ್ಟ ಶಕ್ತಿಯ ದೃಷ್ಟಿ ತಗಲಿತು’, ಎನ್ನುತ್ತಾರೆ.
(ಹೆಚ್ಚಿನ ಮಾಹಿತಿಗಾಗಿ ಮತ್ತು ಪರಿಹಾರೋಪಾಯಕ್ಕಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ: ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ)