ಸಾಧಕರಿಗೆ ಆಧ್ಯಾತ್ಮಿಕ ತೊಂದರೆಯಾಗುತ್ತಿರುವಾಗ ಉಪಾಯಗಳನ್ನು ಹೇಳುವಾಗ ಕಲಿಯಲು ಸಿಕ್ಕಿದ ಕೆಲವು ವಿಷಯಗಳಲ್ಲಿ, ಮುಂದಿನ ಮಾರ್ಗದರ್ಶಕ ತತ್ತ್ವಗಳು ಗಮನಕ್ಕೆ ಬಂದವು. ಅವುಗಳನ್ನು ಮುಂದೆ ಕೊಡಲಾಗಿದೆ.
೧. ತೊಂದರೆಯು ಪೂರ್ಣವಾಗಿ ಕಡಿಮೆಯಾಗುವ ತನಕ ನ್ಯಾಸ, ಮುದ್ರೆ ಮತ್ತು ನಾಮಜಪವನ್ನು ಕಂಡುಹಿಡಿದು ಮುಂದು ಮುಂದಿನ ಉಪಾಯವನ್ನು ಯಾವಾಗ ಮಾಡಬೇಕು ? :
ಉಪಾಯ ಮಾಡಲು ಪ್ರಾರಂಭಿಸಿದ ನಂತರ ತೊಂದರೆಯು ಕಡಿಮೆಯಾಗುವ ಲಕ್ಷಣವೆಂದರೆ ಆರಂಭದಲ್ಲಿ ಆಕಾಶತತ್ತ್ವದ ಉಪಾಯ ಬರುತ್ತದೆ, ನಂತರ ಸ್ವಲ್ಪ ಸಮಯ ಉಪಾಯ ಮಾಡಿ ಪುನಃ ಉಪಾಯವನ್ನು ಹುಡುಕುವಾಗ ವಾಯುತತ್ತ್ವದ ಉಪಾಯ ಬರುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಅಗ್ನಿ ತತ್ತ್ವದ ಉಪಾಯ ಬರುತ್ತದೆ. ಈ ರೀತಿ ಪ್ರಾರಂಭದಲ್ಲಿ ಆಕಾಶ ತತ್ತ್ವದ (ನಿರ್ಗುಣ ತತ್ತ್ವದ ದರ್ಶಕ) ಆವಶ್ಯಕವಿರುವ ಉಪಾಯವು ಮತ್ತು ತೊಂದರೆ ಕಡಿಮೆಯಾದ ನಂತರ ಕೊನೆಗೆ ಅಗ್ನಿ ತತ್ತ್ವದ ಎಂದರೆ ಸಗುಣ-ನಿರ್ಗುಣ ಸ್ತರದ ಆವಶ್ಯಕತೆ ಇರುತ್ತದೆ. ಇಂತಹ ಸಮಯದಲ್ಲಿ ತೊಂದರೆಯ ಲಕ್ಷಣವು ಪೂರ್ಣ ಕಡಿಮೆಯಾಗುವ ತನಕ ಉಪಾಯವನ್ನು ಮಾಡಬೇಕು.
೨. ತೊಂದರೆಯು ಕಡಿಮೆಯಾಗಲು ನ್ಯಾಸ, ಮುದ್ರೆ ಮತ್ತು ನಾಮಜಪವನ್ನು ಕಂಡುಹಿಡಿದು ಅನಿಷ್ಟ ಶಕ್ತಿಗಳೊಂದಿಗೆ ಪ್ರತ್ಯಕ್ಷ ಹೋರಾಡದೇ ಪರೋಕ್ಷವಾಗಿ ಹೋರಾಡುವ ಧೋರಣೆಯನ್ನು ಯಾವಾಗ ಅವಲಂಬಿಸ ಬೇಕು ? : ಈ ಪರೋಕ್ಷವಾಗಿ ಹೋರಾಡುವ ಧೋರಣೆಯನ್ನು ಮುಂದಿನ ಪ್ರಸಂಗದಲ್ಲಿ ಅವಲಂಬಿಸಬೇಕು.
ಅ. ಸಾಧಕನಿಗೆ ತೀವ್ರ ತೊಂದರೆಯಾಗುತ್ತಿರುವಾಗ ಕೆಲವೊಮ್ಮೆ ಉಪಾಯವನ್ನು ಕಂಡುಹಿಡಿಯುವಾಗ ಉತ್ತರವೆಂದು ನಿರ್ಗುಣ ಸ್ತರದ ಉಪಾಯ ಬರುತ್ತದೆ. ಆ ಸಮಯದಲ್ಲಿ ನ್ಯಾಸದ ಸ್ಥಾನದಲ್ಲಿ ಅಂಗೈಯನ್ನು ಮುಂದೆ ಮಾಡಿ ಶೂನ್ಯ, ಮಹಾಶೂನ್ಯ, ನಿರ್ಗುಣ ಅಥವಾ ಓಂ ಇವುಗಳ ಪೈಕಿ ಯಾವುದಾದರೊಂದು ನಾಮಜಪವನ್ನು ಹುಡುಕಿ ಅದನ್ನು ಮಾಡಬೇಕು.
ಆ. ಕೆಲವೊಮ್ಮೆ ರಾತ್ರಿ ೧೧-೧೨ ಗಂಟೆಗೆ ಮಲಗುವಾಗ ಸಾಧಕನಿಗೆ ತೀವ್ರ ತೊಂದರೆಯಾಗುತ್ತದೆ. ಆಗಲೂ ಕೆಲವೊಮ್ಮೆ ನಿರ್ಗುಣ ಸ್ತರದ ಉಪಾಯಗಳು ಬರುತ್ತವೆ. ಅನಿಷ್ಟ ಶಕ್ತಿಗಳ ಇಂತಹ ನಿರ್ಗುಣ ಸ್ತರದ ಆಕ್ರಮಣದ ಸಮಯದಲ್ಲಿ ಉಪಾಯ ಮಾಡಲು ತುಂಬ ಸಮಯ ತಗಲಬಹುದು. ಭೋಜನದ, ಮಲಗುವ ಅಥವಾ ಇನ್ನೂ ಕೆಲವು ಮಹತ್ವದ ಪ್ರಸಂಗದಲ್ಲಿ ಉಪಾಯಕ್ಕಾಗಿ ಅಷ್ಟು ಸಮಯ ನೀಡಲು ಸಾಧ್ಯವಾಗುವುದಿಲ್ಲ; ಏಕೆಂದರೆ ಇದರಿಂದ ಭೋಜನ-ನಿದ್ರೆಯ ಮೇಲೆ ಪರಿಣಾಮವಾಗುತ್ತದೆ. ಆಗ ನಾವು ಛತ್ರಪತಿ ಶಿವಾಜಿ ಮಹಾರಾಜರು ಯಾವ ರೀತಿ ಆಯಾ ಸಮಯದಲ್ಲಿ ಆಯಾ ಯುದ್ಧನೀತಿಯನ್ನು ಅನುಸರಿಸುತ್ತಿದ್ದರು ಎನ್ನುವುದನ್ನು ಸ್ಮರಿಸಿ, ಅದನ್ನೇ ನಾವು ಸಹ ಅನುಸರಿಸಬೇಕು. ವೈರಿ ಪಡೆಯು ಬಲಶಾಲಿಯಾಗಿದ್ದರೆ ಶಿವಾಜಿ ಮಹಾರಾಜರು ಯುಕ್ತಿಯಿಂದ ಯುದ್ಧ ಮಾಡುತ್ತಿದ್ದರು ಇಲ್ಲವೇ ಒಪ್ಪಂದ ಮಾಡುತ್ತಿದ್ದರು. ಅದೇ ರೀತಿ ಇಂತಹ ಪ್ರಸಂಗದಲ್ಲಿ ನಾವು ಸಹ ನ್ಯಾಸ, ಮುದ್ರೆ ಮತ್ತು ನಾಮಜಪವನ್ನು ಮಾಡುತ್ತ ಅನಿಷ್ಟ ಶಕ್ತಿಗಳೊಂದಿಗೆ ಎಷ್ಟು ಸಮಯದ ವರೆಗೆ ಹೋರಾಡುವುದು ? ಎಂಬುದರ ಉತ್ತರವನ್ನು ಕಂಡುಕೊಳ್ಳಬೇಕು.
೧೫ ನಿಮಿಷದಿಂದ ಅರ್ಧ ಗಂಟೆಯ ವರೆಗೆ ಈ ಉಪಾಯವನ್ನು ಮಾಡಿದ ನಂತರವೂ ತೊಂದರೆ ಸ್ವಲ್ಪವೂ ಕಡಿಮೆಯಾಗದಿದ್ದರೆ, ಆಗ ಆ ಪ್ರತ್ಯಕ್ಷ ಹೋರಾಡುವ ಉಪಾಯವನ್ನು ನಿಲ್ಲಿಸಿ, ಯಾವುದೇ ನ್ಯಾಸ, ಮುದ್ರೆ ಮತ್ತು ನಾಮಜಪವನ್ನು ಮಾಡದೇ ಮುಂದಿನಂತೆ ಪ್ರರೋಕ್ಷವಾಗಿ (ಯುಕ್ತಿಯಿಂದ) ಹೋರಾಡುವ ಉಪಾಯವನ್ನು ಮಾಡಬೇಕು.
೧. ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು – ಹೇ ಶ್ರೀಕೃಷ್ಣಾ, ನನಗಾಗುವ ತೊಂದರೆಯು ಪ್ರಕಟವಾಗದಿರಲಿ. ನನ್ನನ್ನು ರಕ್ಷಿಸು.
೨. ಪ.ಪೂ. ಭಕ್ತರಾಜ ಮಹಾರಾಜರ ಹಾಗೂ ಶ್ರೀಕೃಷ್ಣನ ಜಯಘೋಷವನ್ನು ಮಾಡಬೇಕು.
೩. ತೊಂದರೆಯು ಕಡಿಮೆಯಾಗುತ್ತಿದ್ದಂತೆ, ಕೇವಲ ಉಸಿರಾಟದತ್ತ ಗಮನ ಕೇಂದ್ರಿತಗೊಳಿಸಬೇಕು. ತೊಂದರೆ ಕಡಿಮೆಯಾಗಲು ಮುಂದಿನಂತೆ ಪ್ರಾರ್ಥನೆ ಮಾಡುವುದರಿಂದ ಪ್ರಭಾವ ಬೀಳುತ್ತದೆ – ಹೇ ಶ್ರೀಕೃಷ್ಣಾ, ನನಗೆ ತೊಂದರೆ ನೀಡುವ ಅನಿಷ್ಟ ಶಕ್ತಿಯು ಶಾಂತವಾಗಲಿ. ಅದರಿಂದ ನನಗೆ ಯಾವುದೇ ರೀತಿಯ ತೊಂದರೆಯಾಗದಿರಲಿ.
– (ಪೂ.) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯ, ಗೋವಾ. (೨೩.೧೦.೨೦೧೬ )