ಕೃಷಿಭೂಮಿಯಲ್ಲಿ ಅಥವಾ ಮನೆಯಲ್ಲಿನ ಕುಂಡಗಳಲ್ಲಿ ಬಹುಗುಣಿ ಆಯುರ್ವೇದ ವನಸ್ಪತಿಗಳನ್ನು ಬೆಳೆಸಿ ಆಪತ್ಕಾಲವನ್ನು ಎದುರಿಸಲು ಸಿದ್ಧರಾಗಿರಿ !

ವನೌಷಧಿಗಳನ್ನು ಬೆಳೆಸಿದಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಾಗುವ ಲಾಭಗಳುವನೌಔಷಧಿಗಳ ತೋಟಗಾರಿಕೆಯನ್ನು ಕೇವಲ ವ್ಯವಸಾಯವೆಂದು ಮಾಡದೇ ಈಶ್ವರಪ್ರಾಪ್ತಿಗಾಗಿ ಸಾಧನೆಯೆಂದು ಮಾಡಿದರೆ ಒಳ್ಳೆಯ ಯೋಗ್ಯ ಫಸಲಿನೊಂದಿಗೆ ಮನಸ್ಸಿಗೆ ಶಾಂತಿಯೂ ದೊರೆಯುವುದು. ಧನ್ವಂತರಿ ದೇವತೆಗೆ ಪ್ರಾರ್ಥಿಸಿ, ತೋಟಗಾರಿಕೆಯನ್ನು ಮಾಡಿದರೆ ಆಪತ್ಕಾಲದಲ್ಲಿಯೂ ರೋಗಮುಕ್ತರಾಗಲು ಧನ್ವಂತರಿ ದೇವತೆಯ ಆಶೀರ್ವಾದ ಖಂಡಿತವಾಗಿಯೂ ಎಲ್ಲರಿಗೂ ಲಭಿಸುವುದು !

೧. ನೈಸರ್ಗಿಕ ವಿಕೋಪಗಳಿಂದ ರೋಗರುಜಿನಗಳು ಹರಡಿದರೆ ಔಷಧಿಗಳ ಕೊರತೆಯಾಗುವುದರಿಂದ ಔಷಧಿಗಳ ಬಗ್ಗೆ ಸ್ವಾವಲಂಬಿಯಾಗಲು ಆಪತ್ಕಾಲದಮೊದಲೇ ವನೌಷಧಿಗಳನ್ನು ಬೆಳಸುವ ಅವಶ್ಯಕತೆ !

‘ನೆರೆಹಾವಳಿ, ಭೂಕಂಪಗಳಂತಹ ನೈಸರ್ಗಿಕ ಆಪತ್ತು ಬಂದಾಗ ದೊಡ್ಡ ಪ್ರಮಾಣದಲ್ಲಿ ರೋಗರುಜಿನಗಳು ಹರಡುತ್ತವೆ. ಜನಜೀವನ ಮತ್ತು ವಿದ್ಯುತ್ ಸಂಪರ್ಕ ಮುಂತಾದವುಗಳು ಕಡಿತಗೊಳ್ಳುವುದರಿಂದ ಔಷಧಿಗಳನ್ನು ಎಲ್ಲೆಡೆ ಪೂರೈಸಲು ಸಾಧ್ಯವಾಗುವುದಿಲ್ಲ. ‘ಗಡಿಯಲ್ಲಿ ಯುದ್ಧದ ಕಿಡಿ ಹತ್ತಿದರೆ ಸರಕಾರಕ್ಕೆ ತನ್ನಲ್ಲಿರುವ ಔಷಧಿಗಳನ್ನು ಸೈನ್ಯಕ್ಕೆಪೂರೈಸಬೇಕೋ ? ಅಥವಾ ಜನರಿಗೋ ? ಎಂಬ ಪ್ರಶ್ನೆ ಎದುರಾಗಲಿದೆ ಮತ್ತು ಸಹಜವಾಗಿಯೇ ಎಲ್ಲ ಸೌಲಭ್ಯಗಳನ್ನು ಸೈನ್ಯಕ್ಕೆ ಒದಗಿಸಲಾಗುತ್ತದೆ. ಹಿಂದೆ ನೇಪಾಳದಲ್ಲಿ ದೊಡ್ಡ ಭೂಕಂಪವಾದಾಗ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಮರಣ ಹೊಂದಿದರು. ಅಲ್ಲಿಯೂ ದೊಡ್ಡ  ಪ್ರಮಾಣದಲ್ಲಿ ಔಷಧಿಗಳ ಕೊರತೆಯಾಗಿತ್ತು. ಇಂತಹ ಸಮಯದಲ್ಲಿ ಸರಕಾರವನ್ನು ಅವಲಂಬಿಸದೇ ಔಷಧಿಗಳ ಸಂದರ್ಭದಲ್ಲಿ ಸ್ವಾವಲಂಬಿಗಳಾಗಬೇಕೆಂದು ಪ್ರತಿಯೊಬ್ಬರೂ ಈಗಿನಿಂದಲೇ ಕಡಿಮೆ ಪಕ್ಷ ತನಗಾಗಿಯಾದರೂ ಕೆಲವು ಔಷಧಿ ವನಸ್ಪತಿಗಳನ್ನು ಬೆಳೆಸಬೇಕು.

೨. ಜನರೇ, ಮನೆಔಷಧಿಗಳ ಮಹತ್ವವನ್ನು ತಿಳಿಯಿರಿ ಮತ್ತು ತಮ್ಮ ಮನೆಯಲ್ಲಿ ವನಸ್ಪತಿಗಳ ತೋಟಗಾರಿಕೆ ಮಾಡಿರಿ !

ಯುದ್ಧದ ಸಮಯದಲ್ಲಿ ಆಧುನಿಕ ವೈದ್ಯರು (ಡಾಕ್ಟರ್) ಮತ್ತು ಔಷಧಿಗಳು ದೊರೆಯದಿದ್ದಲ್ಲಿ ಆರೋಗ್ಯವು ಹದಗೆಡಬಹುದು. ಇಂತಹ ಸಮಯದಲ್ಲಿ ತಮ್ಮೊಂದಿಗೆ ಮನೆಔಷಧಿಯನ್ನು ಇಟ್ಟುಕೊಂಡರೆ ಅವುಗಳನ್ನು ಉಪಯೋಗಿಸಬಹುದು. ಇಂತಹ ಔಷಧಿಗಳು ತಕ್ಷಣ ದೊರೆಯಲು ಪ್ರತಿಯೊಬ್ಬರೂ ತಮ್ಮ  ಕ್ಷಮತೆಗನುಸಾರ ವನೌಷಧಿಗಳನ್ನು ಬೆಳೆಸಬೇಕು. ತಮ್ಮ ಮನೆಯಂಗಳದಲ್ಲಿ ಅಥವಾ ಟೆರೇಸಿನ ಮೇಲೆ ಲಕ್ಕಿ, ಅಜ್ವಾನ, ತುಳಸಿ, ದಾಸವಾಳ, ಲೋಳೆಸರ ಮುಂತಾದ ವನಸ್ಪತಿ ಔಷಧಿ ಗಿಡಗಳನ್ನು ನಾವು ಬೆಳೆಸಬಹುದು. ನಗರದಲ್ಲಿ ಬಹುತೇಕ ಜನರು ಫ್ಲ್ಯಾಟ್‌ಗಳಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಅವರು ಕುಂಡಗಳಲ್ಲಿ ಬೆಳೆಸಲು ಸಾಧ್ಯವಿರುವ ಕೆಲವು ವನಸ್ಪತಿ ಔಷಧಿಗಳ ಗಿಡಗಳನ್ನು ಬೆಳೆಸಬಹುದು.

೩. ಭೂಮಿಯಿರುವವರು ಅದನ್ನು ಉಪಯೋಗಿಸದೇ ಇದ್ದರೆ, ಹಾಗೆಯೇ ಪಾಳು ಬೀಳುವುದಕ್ಕಿಂತಅದರಲ್ಲಿ ವನಸ್ಪತಿಯ ಗಿಡಗಳನ್ನು ಬೆಳೆಸಬಹುದು !

ಕೆಲವು ಜನರಲ್ಲಿ ತುಂಬಾ ಜಾಗವಿದ್ದರೂ ಅವುಗಳಲ್ಲಿ ಏನನ್ನೂ ಬೆಳೆಸದೇ ಹಾಗೆಯೇ ಪಾಳು ಬಿದ್ದಿರುತ್ತವೆ. ಅಂತಹ ಭೂಮಿಯಲ್ಲಿ ಸ್ವಲ್ಪ ಶ್ರಮ ವಹಿಸಿದರೆ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ವನಸ್ಪತಿ ಔಷಧಿ ಗಿಡಗಳನ್ನು ಬೆಳೆಸಬಹುದು. ಈಗ ಮಳೆಗಾಲವಿರುವುದರಿಂದ ಭೂಮಿಯಲ್ಲಿ ಔಷದಿ ವನಸ್ಪತಿಗಳ ಬೀಜಗಳನ್ನು ಬಿತ್ತಿದಲ್ಲಿ ಅದರಲ್ಲಿ ಕೆಲವು ವನಸ್ಪತಿಗಳು ಕೂಡಲೇ ಬೆಳೆಯುತ್ತವೆ. ವನೌಷಧಿಗಳ ಗಿಡಗಳನ್ನು ಬೆಳೆಸುವುದರಿಂದ ಮುಂದೆ ಒಳ್ಳೆಯ ಪರಿಣಾಮವನ್ನು ಗಮನಿಸಿ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯವು ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಆಯುರ್ವೇದ ಶಾಖೆಯಿಂದ ಪ್ರತಿಯೊಂದು ಜಿಲ್ಲೆಯ ಸ್ಥಳೀಯ ವಾತಾವರಣವನ್ನು ಅಭ್ಯಾಸ ಮಾಡಿ ಯಾವ ಆಯುರ್ವೇದ ಔಷಧಿಯ ತೋಟಗಾರಿಕೆ ಮಾಡಬಹುದು ? ಎಂಬುದರ ಪೂರ್ಣ ಅಭ್ಯಾಸ ಮಾಡಿ ಅದರ ಮಾಹಿತಿಯನ್ನು ನೀಡುವಆಯೋಜನೆ ಮಾಡಿದೆ. ಈ ತೋಟಗಾರಿಕೆಯನ್ನು ಆಯಾಯ ಪ್ರದೇಶದಲ್ಲಿರುವವರು ವೈಯಕ್ತಿಕವಾಗಿಯೇ ಮಾಡಲಿಕ್ಕಿರುತ್ತದೆ ಸಾಧಕರು, ವಾಚಕರು, ಹಿತಚಿಂತಕರು, ಜಿಜ್ಞಾಸುಗಳು ಹಾಗೂ ಧರ್ಮಪ್ರೇಮಿಗಳು ವನೌಷಧಿಗಳನ್ನು ಬೆಳೆಸಲು ಆಸಕ್ತಿ ಹೊಂದಿರುವವರು ಈ ಬಗ್ಗೆ ಮುಂದಿನ ಮಾಹಿತಿಯನ್ನು ಕಳುಹಿಸಿರಿ. ವನೌಷಧಿಗಳ ಬಗ್ಗೆ ವಿಶೇಷ ಮಾಹಿತಿಯಿರುವವರು ಅಥವಾ ಔಷಧಿ ಗಿಡಗಳ ತೋಟಗಾರಿಕೆಯಲ್ಲಿ ಆಸಕ್ತಿಯಿರುವವರು [email protected] ಈ ವಿ-ಅಂಚೆಗೆ ಅಥವಾ ಅಂಚೆಯ ಮೂಲಕ ಮಾಹಿತಿಯನ್ನು ತಿಳಿಸಬೇಕು. ಅದರಲ್ಲಿ ಸಂದೇಹ ವಿದ್ದಲ್ಲಿ 8600935533 ಈ ಕ್ರಮಾಂಕದಲ್ಲಿ ಸಂಪರ್ಕಿಸಬಹುದು.

(ಅಂಚೆ ವಿಳಾಸ: ಶ್ರೀ. ವಿಷ್ಣು ಜಾಧವ, ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.)

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೯.೨೦೧೭)

 

Leave a Comment