ವ್ಯಕ್ತಿಗೆ ಹೇಗೆ ದೃಷ್ಟಿ ತಗಲುತ್ತದೆಯೇ, ಹಾಗೆಯೇ ವಾಸ್ತುಗೂ ದೃಷ್ಟಿ ತಗಲುತ್ತದೆ. ವಾಸ್ತುಗೆ ದೃಷ್ಟಿ ತಗಲುವುದರಿಂದ ವಾಸ್ತುವಿನಲ್ಲಿ ವಾಸಿಸುವವರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ಮನೆಯಲ್ಲಿ ಅಸ್ವಸ್ಥವೆನಿಸುವುದು, ನಕಾರಾತ್ಮಕ ವಿಚಾರಗಳ ಪ್ರಮಾಣ ಹೆಚ್ಚಾಗುವುದು, ಸಣ್ಣಪುಟ್ಟ ಕಾರಣಗಳಿಗೆ ಮನೆಯಲ್ಲಿ ವಾದವಿವಾದಗಳಾಗುವುದು, ಅರ್ಥಿಕ ಹಾನಿಯಾಗುವುದು, ಸತತವಾಗಿ ಯಾರಾದರೂ ಅನಾರೋಗಿಗಳಾಗುವುದು ಇವುಗಳಂತಹ ವಿವಿಧ ಸಮಸ್ಯೆಗಳು ಈ ತೊಂದರೆಯ ಲಕ್ಷಣಗಳಾಗಿವೆ. ವಾಸ್ತುವಿಗೆ ದೃಷ್ಟಿಯೇ ತಗಲಬಾರದು ಎಂಬುದಕ್ಕಾಗಿ ಮೊದಲಿನಿಂದಲೇ ಪ್ರಯತ್ನಿಸುವುದು ಯಾವಾಗಲೂ ಒಳ್ಳೆಯದು. ವ್ಯಕ್ತಿಗಿಂತ ವಾಸ್ತುವಿಗೆ ಬೇಗನೇ ದೃಷ್ಟಿ ಏಕೆ ತಗಲುತ್ತದೆ, ಈ ಸಂದರ್ಭದಲ್ಲಿನ ಪ್ರಕ್ರಿಯೆ ಮತ್ತು ವಾಸ್ತುವಿನಲ್ಲಿನ ತೊಂದರೆಗಳ ಸಂದರ್ಭದಲ್ಲಿ ಆ ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಗಳ ಸಾಧನೆಯ ಮಹತ್ವ ಇಂತಹ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
೧. ಒಬ್ಬ ವ್ಯಕ್ತಿಯನ್ನು ತ್ರಾಸದಾಯಕ ಸ್ಪಂದನಗಳಿಂದ ಬಾಧಿಸುವುದಕ್ಕಿಂತ (ತೊಂದರೆಯನ್ನು ಕೊಡುವುದು) ಯಾವುದಾದರೊಂದು ವಾಸ್ತುವನ್ನು ಬಾಧಿಸುವುದು ಸುಲಭವಾಗಿರುವುದರ ಕಾರಣಗಳು
ಅ. ಪವಿತ್ರ ವಾಸ್ತುವನ್ನು ಬಾಧಿಸುವುದು ಕಠಿಣವಾಗಿದೆ
ಪವಿತ್ರ ವಾಸ್ತುವನ್ನು (ಉದಾ.ದೇವಸ್ಥಾನವನ್ನು) ತ್ರಾಸದಾಯಕ ಸ್ಪಂದನಗಳಿಂದ ಬಾಧಿಸುವುದು (ತೊಂದರೆಗೀಡು ಮಾಡುವುದು) ಕಠಿಣವಾಗಿರುತ್ತದೆ; ಏಕೆಂದರೆ ಅದರ ವಾಯುಮಂಡಲದಲ್ಲಿ ಚೈತನ್ಯವಿರುತ್ತದೆ, ಹಾಗೆಯೇ ಅಲ್ಲಿ ಸಾತ್ತ್ವಿಕ ಲಹರಿಗಳ ಕಾರ್ಯಕಾರೀ ಲಹರಿಗಳ ಭ್ರಮಣವಿರುವುದರಿಂದ ಇಂತಹ ವಾಸ್ತುಗಳಲ್ಲಿ ಕೆಟ್ಟ ಶಕ್ತಿಗಳಿಗೆ ಸೇರಿಕೊಳ್ಳುವುದು ಕಠಿಣವಾಗಿರುತ್ತದೆ.
ಆ. ತ್ರಾಸದಾಯಕ (ಕೆಟ್ಟ) ಕರ್ಮಗಳನ್ನು ಮಾಡುವ ವ್ಯಕ್ತಿಗಳಿರುವ ವಾಸ್ತುವನ್ನು ಬಾಧಿಸುವುದು ಸುಲಭವಾಗಿರುತ್ತದೆ
ಯಾವ ವಾಸ್ತುವಿನಲ್ಲಿ ತ್ರಾಸದಾಯಕ (ಕೆಟ್ಟ) ಕರ್ಮಗಳನ್ನು ಮಾಡುವ ವ್ಯಕ್ತಿಗಳು ವಾಸಿಸುತ್ತಾರೆಯೋ, ಅಲ್ಲಿ ಸತತವಾಗಿ ಅವರ ಕೆಟ್ಟ ವಿಚಾರಗಳಲ್ಲಿನ ತಮೋಗುಣೀ ಸ್ಪಂದನಗಳು ಘನೀಭೂತವಾಗಿ ಆ ವಾಸ್ತುವು ತ್ರಾಸದಾಯಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆ. ಹೀಗೆ ಸತತವಾಗಿ ಕೆಲವು ವರ್ಷಗಳ ವರೆಗೆ ಆಗುತ್ತಿದ್ದರೆ ವಾಸ್ತುವು ಪೂರ್ಣತಃ ಬಾಧಿತಗೊಳ್ಳುತ್ತದೆ. ತಮೋಗುಣೀ ವಿಚಾರಗಳ ವ್ಯಕ್ತಿಗಳಿರುವ ವಾಸ್ತುವಿನ ತುಲನೆಯಲ್ಲಿ ಸತ್ವಗುಣೀ ವಿಚಾರಗಳ ವ್ಯಕ್ತಿಗಳಿರುವ ವಾಸ್ತುವನ್ನು ಬಾಧಿಸುವುದು ಕಠಿಣವಾಗಿರುತ್ತದೆ.
(ವಾಸ್ತುವಿನಲ್ಲಿರುವ ವ್ಯಕ್ತಿಗಳ ವಿಚಾರಸರಣಿ, ಗುಣ-ದೋಷಗಳು ಮತ್ತು ಅವರ ಸಾಧನೆ ಈ ವಿಷಯಗಳು ಆ ವಾಸ್ತುವಿನಲ್ಲಿ ನಿರ್ಮಾಣವಾಗುವ ಒಳ್ಳೆಯ-ಕೆಟ್ಟ ಸ್ಪಂದನಗಳಿಗೆ ಕಾರಣೀಭೂತವಾಗಿರುತ್ತವೆ. ಆದುದರಿಂದ ವ್ಯಕ್ತಿಯು ಯೋಗ್ಯ ಮಾರ್ಗದಿಂದ ಆಧ್ಯಾತ್ಮಿಕ ಸಾಧನೆ ಮಾಡುವುದು ಜೀವನದಲ್ಲಿನ ಪ್ರತಿಯೊಂದು ಸಮಸ್ಯೆಯ ಮೇಲಿನ ಎಲ್ಲಕ್ಕಿಂತ ಮಹತ್ವದ ಉಪಾಯವಾಗಿದೆ. – ಸಂಕಲನಕಾರರು (ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ನಾಮಸಂಕೀರ್ತನಯೋಗ’))
ಇ. ವಾಸ್ತುವು ನಿರ್ಜೀವವಾಗಿರುವುದರಿಂದ ಅದರಲ್ಲಿ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ಕ್ಷಮತೆ ಇರುವುದಿಲ್ಲ
ವಾಸ್ತುವು ನಿರ್ಜೀವವಾಗಿರುವುದರಿಂದ ಮತ್ತು ಅದು ಸಾಧನೆಯನ್ನು ಮಾಡಿ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ತನ್ನ ಕ್ಷಮತೆಯನ್ನು ಹೆಚ್ಚಿಸುವುದು ಸಾಧ್ಯವಿಲ್ಲದಿರುವುದರಿಂದ, ಹಾಗೆಯೇ ಅದು ಭಾವದ ಸ್ತರದಲ್ಲಿ ಹೋರಾಡುವುದು ಸಾಧ್ಯವಿಲ್ಲ ದಿರುವುದರಿಂದ ಅದನ್ನು ಬಾಧಿಸುವುದು, ಒಬ್ಬ ವ್ಯಕ್ತಿಗಿಂತ ಸುಲಭವಾಗಿದೆ; ಆದರೆ ವ್ಯಕ್ತಿಯು ತಮೋಗುಣೀಯಾಗಿದ್ದರೆ, ಅವನನ್ನು ಬಾಧಿಸುವುದು ಸತ್ತ್ವಗುಣೀ ವ್ಯಕ್ತಿಗಿಂತ ಸುಲಭವಾಗಿರುತ್ತದೆ.
೨. ವಾಸ್ತುವಿಗೆ ದೃಷ್ಟಿ ತಗಲುವ ಪ್ರಕ್ರಿಯೆ ಮತ್ತು ಪರಿಣಾಮ
ಅ. ವಾಸ್ತುವು ಸ್ವತಃ ನಿರ್ಜೀವವಾಗಿರುವುದರಿಂದ ಮತ್ತು ಅದು ಸಾಧನೆ ಮಾಡದಿರುವುದರಿಂದ ಅದಕ್ಕೆ ಅದರಲ್ಲಿನ ತ್ರಾಸದಾಯಕ (ಕೆಟ್ಟ) ಸ್ಪಂದನಗಳನ್ನು ತೆಗೆಯುವುದು ಕಠಿಣವಾಗಿದೆ; ಆದುದರಿಂದ ವಾಸ್ತುವಿನ ಮೇಲೆ ತ್ರಾಸದಾಯಕ ಕೆಟ್ಟ ಸ್ಪಂದನಗಳ ಪ್ರಭಾವವು ಬೀಳತೊಡಗಿ ತೆಂದರೆ, ಆ ಸ್ಪಂದನಗಳು ಕಾಲಾಂತರದಲ್ಲಿ ಆ ವಾಸ್ತುವಿನಲ್ಲಿ ಘನೀಭೂತವಾಗತೊಡಗುತ್ತವೆ.
ಆ. ವಾಸ್ತುವಿನ ಆಯುಷ್ಯವು ಮನುಷ್ಯನ ಆಯುಷ್ಯಕ್ಕಿಂತ ಹೆಚ್ಚಿರುತ್ತದೆ; ಆದುದರಿಂದ ತ್ರಾಸದಾಯಕ ವಾಸ್ತುವು ಅಧಿಕ ಕಾಲದವರೆಗೆ ತ್ರಾಸದಾಯಕ ಸ್ಪಂದನಗಳ ಮಾಧ್ಯಮದಿಂದ ಕಾರ್ಯವನ್ನು ಮಾಡಬಹುದು.
೩. ತ್ರಾಸದಾಯಕ ವಾಸ್ತುವಿನಿಂದ ವ್ಯಕ್ತಿಯ ಮೇಲಾಗುವ ಪರಿಣಾಮ
ಅ. ವ್ಯಕ್ತಿಯಲ್ಲಿ ಕೆಟ್ಟ ಶಕ್ತಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ
ವಾಸ್ತುವಿನಲ್ಲಿ ಘನೀಭೂತವಾಗಿರುವ ತ್ರಾಸದಾಯಕ ಸ್ಪಂದನಗಳು ಕಾಲಾಂತರದಲ್ಲಿ ಅದರಲ್ಲಿನ ಸೀಮಿತ ವಾಯುಮಂಡಲವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುವುದರಿಂದ ಬಹಳಷ್ಟು ವರ್ಷಗಳವರೆಗೆ ಅಲ್ಲಿ ವಾಸಿಸುವ ವ್ಯಕ್ತಿಗಳ ಮೇಲೆ ಈ ತ್ರಾಸದಾಯಕ ಸ್ಪಂದನಗಳ ಪ್ರಭಾವವು ಬಿದ್ದು ಆ ವ್ಯಕ್ತಿಗಳಲ್ಲಿ ಕೆಟ್ಟ ಶಕ್ತಿಗಳು ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ; ಆದುದರಿಂದ ತ್ರಾಸದಾಯಕ ವಾಸ್ತುವನ್ನು ತ್ಯಜಿಸುವುದು ವ್ಯಕ್ತಿಯ ಐಹಿಕ, ಹಾಗೆಯೇ ಪಾರಮಾರ್ಥಿಕ ಉನ್ನತಿಯ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ.
ಆ. ವ್ಯಕ್ತಿಯ ಸಾಧನೆಯು ವ್ಯಯವಾಗುವುದು
ಸಾಧನೆಯನ್ನು ಮಾಡುವ ವ್ಯಕ್ತಿಯ ಸಾಧನೆಯು ವಾಸ್ತುವಿನಲ್ಲಿನ ತ್ರಾಸದಾಯಕ ಸ್ಪಂದನಗಳನ್ನು ಕಡಿಮೆ ಮಾಡಲು ವ್ಯಯವಾಗುತ್ತದೆ.
ಇ. ವಾಸ್ತುವು ಕೆಟ್ಟ ಶಕ್ತಿಗಳು ವಾಸಿಸುವ ಸ್ಥಾನವಾಗುವುದರಿಂದ ಅಲ್ಲಿ ವಾಸಿಸುವ ವ್ಯಕ್ತಿಗಳಿಗೆ ವ್ಯಾಪಕ ಸ್ತರದಲ್ಲಿ ತೊಂದರೆಯಾಗುವ ಸಾಧ್ಯತೆ ಇರುವುದು.
ತ್ರಾಸದಾಯಕ (ಕೆಟ್ಟ) ವಾಸ್ತುವು ಕಾಲಾಂತರದಲ್ಲಿ ಕೆಟ್ಟ ಶಕ್ತಿಗಳು ವಾಸಿಸುವ ಸ್ಥಾನವಾಗುವುದರಿಂದ ಅಲ್ಲಿ ವಾಸಿಸುವ ವ್ಯಕ್ತಿಗಳಿಗೆ ಶಾರೀರಿಕ, ಮಾನಸಿಕ, ಹಾಗೆಯೇ ಆಧ್ಯಾತ್ಮಿಕ, ಹೀಗೆ ಎಲ್ಲ ಸ್ತರಗಳಲ್ಲಿ ತೊಂದರೆಯಾಗುವ, ಅಂದರೆ ವ್ಯಾಪಕ ಸ್ತರದಲ್ಲಿ ತೊಂದರೆಗಳಾಗುವ ಸಾಧ್ಯತೆಯಿರುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಆಷಾಢ ಶು.೧೪, ಕಲಿಯುಗ ವರ್ಷ ೫೧೧೧, ೬.೭.೨೦೦೯, ರಾತ್ರಿ ೮.೪೩)
(ಹೆಚ್ಚಿನ ಮಾಹಿತಿ ಮತ್ತು ವಿವರವಾದ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ನಿವಾಳಿಸುವುದು ಮತ್ತು ಮಾನಸ ದೃಷ್ಟಿ’)