- ದೇವಿ ಪ್ರತಿಮೆಗೆ ಅನಾಮಿಕಾ ಬೆರಳಿನಿಂದ ಚಂದನವನ್ನು ಹಚ್ಚಿರಿ.
- ನಂತರ ಅರಿಶಿನ-ಕುಂಕುಮ ಅರ್ಪಿಸಿರಿ.
- ತೊಟ್ಟಿನ ಭಾಗವು ದೇವಿಯೆಡೆಗೆ ಬರುವಂತೆ ಹೂವನ್ನು ಅರ್ಪಿಸಿರಿ.
- ಸಾಧ್ಯವಿದ್ದಲ್ಲಿ ಹೂವಿನ ಮಾಲೆಯನ್ನು ಅರ್ಪಿಸಿರಿ.
- ದೇವಿಗೆ ಒಂದು ಅಥವಾ ಒಂಬತ್ತರ ಪಟ್ಟಿನ ಸಂಖ್ಯೆಯಲ್ಲಿ ಹೂವುಗಳನ್ನು ಅರ್ಪಿಸಿರಿ.
- ಹೂವುಗಳನ್ನು ಗೋಲಾಕಾರದಲ್ಲಿ ಅರ್ಪಿಸಿ ಮಧ್ಯದಲ್ಲಿ ಟೊಳ್ಳು ಜಾಗವನ್ನು ನಿರ್ಮಿಸಿರಿ.
ವಿಶಿಷ್ಟ ದೇವತೆಗೆ ವಿಶಿಷ್ಟ ಹೂವುಗಳನ್ನು ಅರ್ಪಿಸುವುದು ಮಹತ್ವಪೂರ್ಣವಾಗಿದೆ.
ದೇವಿಪೂಜೆಯಲ್ಲಿ ನಿಷಿದ್ಧವಾದ ಹೂವುಗಳು
೧. ಅಪವಿತ್ರ ಸ್ಥಳದಲ್ಲಿ ಬೆಳೆದಿದ್ದ
೨. ಅರಳದೇ ಇರುವ ಅಂದರೆ ಮೊಗ್ಗುಗಳು
೩. ದಳಗಳು ಉದುರಿರುವ
೪. ನಿರ್ಗಂಧ ಅಥವಾ ತೀವ್ರ ಗಂಧವಿರುವ
೫. ಪರಿಮಳವನ್ನು ಅನುಭವಿಸಲಾದ
೬. ಭೂಮಿಯ ಮೇಲೆ ಉದುರಿದ
೭. ಎಡಗೈಯಲ್ಲಿ ತರಲಾದ
೮. ನೀರಿನಲ್ಲಿ ಅದ್ದಿ ತೊಳೆಯಲಾದ
೯. ಇತರರನ್ನು ಅಪ್ರಸನ್ನಗೊಳಿಸಿ ತರಲಾದ
೧೦. ಒಳ ಉಡುಪುಗಳನ್ನು ಮಾತ್ರವೇ ಧರಿಸಿ ತರಲಾದ ಹೂವುಗಳನ್ನು ದೇವಿಗೆ ಅರ್ಪಿಸಬೇಡಿ.
ಇಂತಹ ಹೂವುಗಳನ್ನು ದೇವಿಗೆ ಅರ್ಪಿಸುವುದರಿಂದ ಪೂಜಕನಿಗೆ ಯಾವುದೇ ರೀತಿಯ ಆಧ್ಯಾತ್ಮಿಕ ಲಾಭವಾಗುವುದಿಲ್ಲ; ಆದುದರಿಂದ ಯೋಗ್ಯ ಹೂವುಗಳನ್ನು ಆಯ್ಕೆ ಮಾಡಬೇಕು.
ದೀಪ: ಪೂರ್ಣ ವೃತ್ತಾಕಾರ ಪದ್ಧತಿಯಲ್ಲಿ ದೇವಿಗೆ ದೀಪವನ್ನು ತೋರಿಸಿ.
ನೈವೇದ್ಯ: ನಂತರ ನೈವೇದ್ಯವನ್ನು ನಿವೇದಿಸಿರಿ.
ಊದುಬತ್ತಿ: ದೇವಿಯ ತಾರಕ ರೂಪವನ್ನು ಉಪಾಸನೆ ಮಾಡಲು ಚಂದನ, ಗುಲಾಬಿ, ಮಲ್ಲಿಗೆ, ಕೇದಗೆ, ಚಂಪಾ, ಚಮೇಲಿ, ಜಾಜಿ, ಖಸ, ರಾತ್ರಿ ರಾಣಿ ಹಾಗೂ ಕನಕಾಂಬರ ಮುಂತಾದ ಸುಗಂಧ ಭರಿತ ಊದುಬತ್ತಿಯನ್ನು ಉಪಯೋಗಿಸಿ. ದೇವಿಯ ಮಾರಕ ರೂಪದ ಉಪಾಸನೆಗಾಗಿ ಹೀನಾ ಹಾಗೂ ದರಬಾರ ಸುಗಂಧವುಳ್ಳ ಊದುಬತ್ತಿಯನ್ನು ಉಪಯೋಗಿಸಿ.
ಊದುಬತ್ತಿ ತೋರಿಸುವಾಗ ಎರಡು ಊದುಬತ್ತಿಗಳನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಅಂದರೆ ‘ಕ್ಲಾಕ್ ವೈಸ್’ ದಿಕ್ಕಿನಲ್ಲಿ ವೃತ್ತಾಕಾರದಲ್ಲಿ ದೇವಿಯ ಪ್ರತಿಮೆಯ ನಾಲ್ಕೂ ದಿಕ್ಕಿನಲ್ಲಿ ನಿಧಾನವಾಗಿ ಮೂರುಬಾರಿ ಬೆಳಗಿರಿ. ಈ ಎಲ್ಲ ಕೃತಿಯನ್ನು ಮಂತ್ರಪಠಣ, ಪ್ರಾರ್ಥನೆ ಅಥವಾ ನಾಮಜಪ ಸಹಿತ ಮಾಡುವುದರಿಂದ ಅಪೇಕ್ಷೆಗಿಂತ ಹೆಚ್ಚು ಲಾಭವಾಗುತ್ತದೆ.
ಕುಂಕುಮಾರ್ಚನೆ
ದೇವಿಯ ಉಪಾಸನೆ ಮಾಡುವಾಗ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪವನ್ನು ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸಲ್ಪಡುವುದನ್ನು ‘ಕುಂಕುಮಾರ್ಚನೆ’ ಎನ್ನುತ್ತಾರೆ.
ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ. ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.
(ಆಧಾರ ಗ್ರಂಥ : ಸನಾತನ ಸಂಸ್ಥೆಯು ಪ್ರಕಾಶಿಸಿದ ಗ್ರಂಥ “ಶಕ್ತಿ”)
ಸನಾತನ ಸಂಸ್ಥೆ ಗೆ ನಮಸ್ತೆ
very nice sir
Jai Sri Marikambe
udi alli en en idabeku
ನಮಸ್ಕಾರ ಸೀಮಾ ರವರೇ
ತಾವು ಕೇಳಿರುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ನೀಡಲಾಗಿದೆ – https://www.sanatan.org/kannada/256.html
ಇಂತಿ,
ಸನಾತನ ಸಂಸ್ಥೆ