ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?

ದೇವರಕೋಣೆ/ಮಂಟಪವು ಯಾವಾಗಲೂ ಪೂರ್ವ-ಪಶ್ಚಿಮ ದಿಕ್ಕಿನಲ್ಲಿಯೇ ಇರಬೇಕು.

ದೇವರಕೋಣೆ/ಮಂಟಪದ ಮುಖವನ್ನು ಪೂರ್ವದಿಕ್ಕಿಗೆ ಮಾಡುವುದರಿಂದ ದೇವತೆಗಳಿಂದ ಪ್ರಕ್ಷೇಪಿತವಾಗುವ ಲಹರಿಗಳು ಪೂರ್ವದಿಕ್ಕಿನ ಟೊಳ್ಳಿನಲ್ಲಿ ಸ್ಥಿರವಾಗಿರುವ ಕ್ರಿಯಾಶಕ್ತಿಯ ಬಲದಿಂದ ಗತಿಮಾನವಾಗುತ್ತವೆ. ಇದರಿಂದ ದೇವತೆಗಳ ನಿರ್ಗುಣ ಅಪ್ರಕಟ ಲಹರಿಗಳು ಸಗುಣ ಪ್ರಕಟ ಲಹರಿಗಳಲ್ಲಿ ರೂಪಾಂತರವಾಗಲು ಸಹಾಯವಾಗುತ್ತದೆ. ಯಾವಾಗ ಪೂರ್ವ-ಪಶ್ಚಿಮ ದಿಕ್ಕಿನೊಂದಿಗೆ ಹೊಂದಿಕೊಂಡಿರುವ ಬ್ರಹ್ಮಾಂಡದಲ್ಲಿನ ಕ್ರಿಯಾಶಕ್ತಿಯು ದೇವತೆಗಳಿಂದ ಪ್ರಕ್ಷೇಪಿತ ವಾಗುವ ಲಹರಿಗಳಿಂದ ಪ್ರಕಟವಾಗುತ್ತದೆಯೋ, ಆಗ ಅದರ ದಿಕ್ಕು ಹೆಚ್ಚಾಗಿ ಮೇಲ್ಮುಖವಾಗಿರುತ್ತದೆ. ವಾತಾವರಣದಲ್ಲಿ ಮೇಲ್ಮುಖ ವಾಗಿ ಸಂಚರಿಸುವ ಲಹರಿಗಳ ಪರಿಣಾಮವು ಕೆಳಮುಖವಾಗಿ ಸಂಚರಿಸುವ ಲಹರಿಗಳಿಗಿಂತಲೂ ಹೆಚ್ಚು ಸಮಯ ಉಳಿಯುತ್ತದೆ. ದೇವತೆಗಳಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳ ಪರಿಣಾಮವು ದೀರ್ಘಕಾಲ ಉಳಿಯಬೇಕೆಂದು ಯಾವಾಗಲೂ ದೇವರಕೋಣೆ/ಮಂಟಪವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿಯೇ ಇರಬೇಕು.

devanchi+rachana1.jpg

ಇದಕ್ಕೆ ವಿರುದ್ಧವಾಗಿ ಯಾವಾಗ ದಕ್ಷಿಣೋತ್ತರ ದಿಕ್ಕಿನಲ್ಲಿ ಸ್ಥಿರವಾಗಿರುವ ಇಚ್ಛಾಶಕ್ತಿಯು ಕಾರ್ಯನಿರತವಾಗುತ್ತದೆಯೋ, ಆಗ ಅದರ ಸಂಚಾರವು ಹೆಚ್ಚಾಗಿ ಕೆಳಮುಖವಾಗಿರುತ್ತದೆ. ಇದರ ಪರಿಣಾಮದಿಂದ ವಾತಾವರಣದಲ್ಲಿನ ತಿರ್ಯಕ ಲಹರಿಗಳು (ತ್ರಾಸದಾಯಕ ರಜ-ತಮ ಲಹರಿಗಳು) ಕಾರ್ಯನಿರತವಾಗಿ ದೇವತೆಗಳಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆಗೆ ಅಡಚಣೆಯುಂಟಾಗುವುದರಿಂದ ಮೊದಲಿನ ತುಲನೆಯಲ್ಲಿ ಜೀವಕ್ಕೆ ಕಡಿಮೆ ಲಾಭವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆಯ ಕಿರುಗ್ರಂಥ ‘ದೇವರಕೋಣೆ ಮತ್ತು ಪೂಜೆಯ ಉಪಕರಣಗಳು’)

Leave a Comment