ರಾತ್ರಿ ಸಮಯದಲ್ಲಿ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮನೆ ಗುಡಿಸುವಾಗ ಕಸಬರಿಕೆಯಿಂದ ಉಂಟಾಗುವ ಶಬ್ದಗಳ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಆಕರ್ಷಿತವಾಗುವುದರಿಂದ ಅವು ವಾಸ್ತುವನ್ನು ಪ್ರವೇಶಿಸುವ ಸಾಧ್ಯತೆಯು ಬಹಳಷ್ಟು ಇರುತ್ತದೆ. ಆದುದರಿಂದ ರಾತ್ರಿ ಸಮಯದಲ್ಲಿ ಕಸ ಗುಡಿಸಬಾರದು.
ಆದಷ್ಟು ಮಟ್ಟಿಗೆ ಜೀವನದಲ್ಲಿನ ಎಲ್ಲ ಕೃತಿಗಳನ್ನು ನಾಮಸಹಿತ ಮಾಡಬೇಕು. ಎಲ್ಲ ಕೃತಿಗಳನ್ನು ನಾಮಸಹಿತ ಮಾಡುವುದರಿಂದ ನಾಮಜಪದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನಾಮಧಾರಕನಿಗೆ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗುತ್ತದೆ.
ಕಸ ತೆಗೆಯುವಾಗ ಬಗ್ಗುವಾಗ ಆಗುವ ಪ್ರಕ್ರಿಯೆ
ಕಸ ಗುಡಿಸುವಾಗ ಬಗ್ಗುವುದರಿಂದ ನಾಭಿಚಕ್ರದ ಮೇಲೆ ಒತ್ತಡವು ಬಂದು ಪಂಚಪ್ರಾಣಗಳು ಜಾಗೃತ ಅವಸ್ಥೆಯಲ್ಲಿ ಉಳಿಯುತ್ತವೆ. (ಬಗ್ಗಿ ಕಸ ತೆಗೆಯುವಾಗ ವ್ಯಕ್ತಿಯ ದೇಹದಲ್ಲಿ ಶಕ್ತಿಯ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ. – ಸಂಕಲನಕಾರರು) ಮೊಣಕಾಲುಗಳನ್ನು ಮಡಚಿ ಕಸ ತೆಗೆಯಬಾರದು. ಏಕೆಂದರೆ ಈ ಮುದ್ರೆಯಿಂದಾಗಿ ಮೊಣಕಾಲುಗಳ ಟೊಳ್ಳಿನಲ್ಲಿ ಸಂಗ್ರಹವಾದ ಅಥವಾ ಘನೀಕೃತವಾಗಿರುವ ರಜ-ತಮಾತ್ಮಕ ವಾಯುವಿಗೆ ವೇಗ ಸಿಗುವ ಸಾಧ್ಯತೆಯಿರುತ್ತದೆ. ಆದುದರಿಂದ ಈ ಮುದ್ರೆಯಲ್ಲಿ ಕಸ ತೆಗೆದರೆ ಕಸ ತೆಗೆಯುವಾಗ ಪಾತಾಳದಿಂದ ವಾಯುಮಂಡಲದಲ್ಲಿ ಹರಡುವ ತೊಂದರೆದಾಯಕ ಸ್ಪಂದನಗಳು ದೇಹದ ಕಡೆಗೆ ಆಕರ್ಷಿತವಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ದೇಹದಲ್ಲಿ ರಜ-ತಮಗಳ ಸಂವರ್ಧನೆಯಾಗುವಂತಹ ಇಂತಹ ಕೃತಿಗಳನ್ನು ಮಾಡಬಾರದು.
ಪೊರಕೆಯನ್ನು ನೆಲಕ್ಕೆ ಬಡಿಯಬಾರದು
ಅಥವಾ ಅದನ್ನು ನೆಲದ ಮೇಲೆ ಜೋರಾಗಿ ತಿಕ್ಕಿ ಕಸ ತೆಗೆಯಬಾರದು
ಶಾಸ್ತ್ರ: ಕಸ ತೆಗೆಯುವಾಗ ಪೊರಕೆಯನ್ನು ನೆಲಕ್ಕೆ ಬಡಿಯುವುದು ಅಥವಾ ನೆಲದ ಮೇಲೆ ಜೋರಾಗಿ ತಿಕ್ಕಿ ಕಸ ತೆಗೆಯುವುದು ಮುಂತಾದ ತೊಂದರೆದಾಯಕ ನಾದಗಳನ್ನು ನಿರ್ಮಾಣ ಮಾಡುವ ಕೃತಿಗಳಿಂದ ಪಾತಾಳದಲ್ಲಿನ ಹಾಗೂ ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳು ಕಾರ್ಯನಿರತವಾಗುತ್ತವೆ ಮತ್ತು ಕಾಲಕ್ರಮೇಣ ಈ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿತವಾಗಲು ಪ್ರಾರಂಭವಾಗುವುದರಿಂದ ವಾಸ್ತುವಿನಲ್ಲಿರುವ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಾಗುತ್ತದೆ. ಆದುದರಿಂದ ಇಂತಹ ಕೃತಿಗಳನ್ನು ಮಾಡಬಾರದು. ಮೇಲಿನ ಎಲ್ಲ ಕೃತಿಗಳು ತಮೋಗುಣಿ ವೃತ್ತಿಯ ನಿದರ್ಶಕವಾಗಿವೆ.
(ಆಧಾರ: ಸನಾತನ ನಿರ್ಮಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)
Good information🙏
Good message🙏