ನಿಗಡೀ ಪ್ರಾಧೀಕರಣ (ಪುಣೆ) – ಪ್ರತಿಯೊಬ್ಬ ಮಾನವನಿಗೂ ಸದ್ಗುರು ಲಭಿಸಿ ಆ ಸದ್ಗುರುವು ಸಂಸ್ಕಾರ ಮಾಡುವುದು ಎಲ್ಲದ್ದಕ್ಕಿಂತ ಮಹತ್ವದ್ದಾಗಿದೆ. ಆತ್ಮಜ್ಞಾನಿಯಾಗಲು ಸಂಸ್ಕಾರವಿರುವುದು ಅಗತ್ಯವಾಗಿರುತ್ತದೆ. ನಮ್ಮ ಮೇಲೆ ಆ ರೀತಿಯ ಸಂಸ್ಕಾರವಾಗಿದ್ದರೆ, ಆಗ ನಮಗೂ ಆತ್ಮಜ್ಞಾನವಾಗುತ್ತದೆ. ಈ ರೀತಿಯ ಎಲ್ಲ ಸಂಸ್ಕಾರಗಳನ್ನೂ ಋಷಿಮುನಿಗಳು ಧಾರ್ಮಿಕ ಗ್ರಂಥಗಳಲ್ಲಿ ಬರೆದಿಟ್ಟಿದ್ದರು. ಅಮೇರಿಕಾದ ‘ನಾಸಾ ಸಂಸ್ಥೆಯ ಜರ್ಮನಿಯಲ್ಲಿರುವ ಒಂದು ಪ್ರಯೋಗಶಾಲೆಯಲ್ಲಿ ೩ ಕಿಲೋಮೀಟರ್ ಭೂಮಿಯ ಕೆಳಗೆ ಗ್ರಂಥಾಲಯವಿದೆ. ಈ ಗ್ರಂಥಾಲಯದಲ್ಲಿ ಶೇಕಡಾ ೩೦ ರಷ್ಟು ಪ್ರಾಚೀನ ಗ್ರಂಥಗಳೆಂದು ಧಾರ್ಮಿಕ ಗ್ರಂಥಗಳನ್ನಿಟ್ಟಿದ್ದಾರೆ. ನನಗೆ ಇದು ನೋಡಲು ಸಿಕ್ಕಿತು. ಋಷಿಮುನಿಗಳು ನಮಗೆ ಯಾವ ಜ್ಞಾನವನ್ನು ಧಾರ್ಮಿಕ ಗ್ರಂಥಗಳ ಮಾಧ್ಯಮದಿಂದ ನೀಡಿದ್ದಾರೋ, ಆ ಜ್ಞಾನವನ್ನು ಉಪಯೋಗಿಸಿಕೊಳ್ಳಲು ನಾವು ಕಡಿಮೆ ಬೀಳುತ್ತಿದ್ದೇವೆ, ಎಂದು ಪೂ. ಡಾ. ರಘುನಾಥ ಶುಕ್ಲರವರು ಪ್ರತಿಪಾದಿಸಿದ್ದಾರೆ. ಸಂಸ್ಕೃತಿ ಸಂವರ್ಧನೆ ಹಾಗೂ ವಿಕಾಸ ಮಹಾಸಂಘದ ೭ ನೇ ವರ್ಧಂತ್ಯೋತ್ಸವದ ನಿಮಿತ್ತ ಫೆಬ್ರುವರಿ ೧೧ ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಸಂಸ್ಕೃತಿ ಹಾಗೂ ವಿಜ್ಞಾನ ವಿಷಯದ ಮೇಲೆ ಪೂ. ಡಾ. ಶುಕ್ಲಾರವರು ಮಾರ್ಗದರ್ಶನ ಮಾಡುತ್ತಿದ್ದರು.
ಪೂ. ಡಾ. ಶುಕ್ಲಾರವರು ಮುಂದೆ ಮಾತನಾ ಡುತ್ತಾ ಹೀಗೆಂದರು,
೧. ನಮ್ಮ ಶರೀರದೊಳಗೆ ಆತ್ಮವಿರುವಾಗ ಅದಕ್ಕೆ ‘ಶಿವ ಎಂದು ಕರೆಯುತ್ತಾರೆ ಹಾಗೂ ಆ ಆತ್ಮವು ಹೊರಟು ಹೋದ ಬಳಿಕ, ಅದಕ್ಕೆ ‘ಶವ ಎಂದು ಕರೆಯುತ್ತಾರೆ. ಆತ್ಮಜ್ಞಾನಿಯಾಗಲು ಆತ್ಮವೇ ಕಾರಣ ವಾಗಿರುತ್ತದೆ. ಆತ್ಮದ ಮೇಲಾಗುವ ಸಂಸ್ಕಾರ ಎಂದಿಗೂ ಬದಲಾಗುವುದಿಲ್ಲ.
೨. ಸಂಸ್ಕಾರವು ಶಬ್ಧಬದ್ಧವಾಗಿರುತ್ತದೆ. ಬ್ರಹ್ಮಾಂಡದಲ್ಲಿನ ಶಕ್ತಿ ಎಂದಿಗೂ ನಾಶವಾಗುವುದಿಲ್ಲ. ಕೇವಲ ಅದು ರೂಪಾಂತರಗೊಂಡು ಬೇರೆ ಶಕ್ತಿಯಾಗುತ್ತದೆ. ಇದೇ ವಿಜ್ಞಾನದ ಸಿದ್ಧಾಂತದಿಂದ ವಿಶಿಷ್ಟ ಅಕ್ಷರ ಹಾಗೂ ಶಬ್ದಗಳ ವಿಶಿಷ್ಟ ಸ್ಪಂದನಗಳು ಸಂಪೂರ್ಣ ಬ್ರಹ್ಮಾಂಡದಲ್ಲಿ ನಾದರೂಪದಲ್ಲಿ ಅಸ್ತಿತ್ವದಲ್ಲಿರುತ್ತವೆ. ಅದೇ ಸ್ಪಂದನಗಳನ್ನು ಆತ್ಮವು ಎಳೆದುಕೊಳ್ಳುತ್ತದೆ ಆದ್ದರಿಂದಲೇ ನಾವು ಆ ಶಬ್ದಗಳನ್ನು ಸರಿಯಾದ ರೀತಿಯಲ್ಲಿ ಉಚ್ಚರಿಸಬಹುದು.
೩. ಪ.ಪೂ. ಗುಳವಣಿ ಮಹಾರಾಜರ ಬಳಿ ನಾನು ಹೋಗಿದ್ದಾಗ ಅವರು ತಮ್ಮ ಎದುರಿದ್ದ ವ್ಯಕ್ತಿಯನ್ನು ನೋಡಿದ ತಕ್ಷಣ ‘ಆತನಿಗೆ ಯಾವ ರೋಗವಿದೆ ಎಂದು ಹೇಳುತ್ತಿದ್ದರು. ನಾನು ಅವರನ್ನು ಆ ಬಗ್ಗೆ ಕೇಳಿದಾಗ ಅವರು ಎದುರಿಗಿರುವ ವ್ಯಕ್ತಿಯ ಹೊಟ್ಟೆ ನೋವಾಗುತ್ತಿದ್ದರೆ, ನನ್ನ ಹೊಟ್ಟೆ ನೋವಾಗುತ್ತದೆ. ಕಿವಿ ನೋವಾಗುತ್ತಿದ್ದರೆ, ಆಗ ನನ್ನ ಕಿವಿ ನೋವಾಗುತ್ತದೆ. ಇದರಿಂದ ನಾನು ಹೇಳುತ್ತಿದ್ದೆ, ಎಂದರು. ಇದರ ಅರ್ಥ ಪಿಂಡದಿಂದ ಬ್ರಹ್ಮಾಂಡದ ಸಂಬಂಧ ಕೂಡಿದಾಗ ಎಲ್ಲವೂ ಜ್ಞಾತವಾಗುತ್ತದೆ.
೪. ಒಮ್ಮೆ ಗಾಯತ್ರಿಮಂತ್ರವನ್ನು ಉಚ್ಛರಿಸಿದರೆ ೨ ಲಕ್ಷ ೪೨ ಸಾವಿರ ೧೧೬ ಕಂಪನಗಳು ವಾತಾವರಣದಲ್ಲಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ಮಂತ್ರಕ್ಕೂ ಕಂಪನವಿರುತ್ತದೆ. ಪರಮೇಶ್ವರನು ಪ್ರತಿಯೊಬ್ಬ ಮಾನವನ ಕೂದಲಿನ ತುದಿಯಿಂದ ಕಾಲಿನ ಬೆರಳಿನ ತನಕ ೩೨ ಲಕ್ಷ ೨ ಸಾವಿರ ೨೦೨ ಇಷ್ಟು ಶಕ್ತಿ ಕೇಂದ್ರಗಳನ್ನು ನೀಡಿದ್ದಾನೆ, ಅಲ್ಲಿ ವಿಶೇಷ ಕಂಪನಗಳು ನಿರ್ಮಾಣ ವಾಗುತ್ತಿರುತ್ತವೆ.
೫. ವೈದ್ಯರಿಗೆ ಯಾವ ರೋಗವನ್ನು ಗುಣ ಪಡಿಸಲು ಆಗುತ್ತಿರಲಿಲ್ಲವೋ, ಆ ರೋಗವನ್ನು ಮಂತ್ರೋಚ್ಛಾರದಿಂದ ಗುಣಪಡಿಸುವ ಶ್ರೀ. ಶ್ಯಾಮ ಜವಳೀಕರರೆಂಬ ಹೆಸರಿನ ಗೃಹಸ್ಥರಿದ್ದರು. ಅವರು ೬೪ ರೀತಿಯಲ್ಲಿ ಓಂಕಾರದ ಉಚ್ಛರಣೆಯನ್ನು ಮಾಡಬಲ್ಲವರಾಗಿದ್ದರು. ನನ್ನ ವಾಸ್ತುಶಾಸ್ತ್ರದ ಗುರುಗಳು ಓಂಕಾರವನ್ನು ಉಚ್ಛರಿಸಿ ಯಾವ ವಸ್ತು ಎಲ್ಲಿದೆ, ಆ ವಸ್ತುವಿನ ಬಣ್ಣ ಯಾವುದು, ಎಂಬುದನ್ನು ನೋಡದೆಯೇ ಹೇಳುತ್ತಿದ್ದರು. (ಹಿಂದೂ ಧರ್ಮದ ಮೇಲೆ ಯಾವಾಗಲೂ ಟೀಕೆ ಮಾಡುವ ಪುರೋಗಾಮಿಗಳಿಗೆ ತಪರಾಕಿ ! ಹಿಂದೂ ಧರ್ಮವನ್ನು ಹೇಗೆ ಅಭ್ಯಾಸ ಮಾಡಬೇಕೆಂಬ ಬೋಧನೆಯನ್ನು ಪುರೋಗಾಮಿಗಳು ಖ್ಯಾತ ವಿಜ್ಞಾನಿಗಳಿಂದ ಪಡೆದುಕೊಳ್ಳುವರೇ? – ಸಂಪಾದಕರು)
೬. ನಾನು ಇಂದಿನ ತನಕ ೨ ಸಾವಿರಕ್ಕಿಂತ ಹೆಚ್ಚು ಸ್ಥಳಗಳಿಗೆ ಹೋಗಿ ಬಂದಿದ್ದೇನೆ. ನಮ್ಮ ಪ್ರಾಚೀನ ಭಾರತೀಯ ಹಿಂದೂ ದೇವಾಲಯಗಳಲ್ಲಿ ಯಾವ ಪ್ರಮಾಣದಲ್ಲಿ ನನಗೆ ಶಕ್ತಿಯನ್ನು ಎಣಿಸಲು ಸಾಧ್ಯವಾಯಿತೋ, ಆ ಪ್ರಮಾಣದಲ್ಲಿ ಇತರ ಮತದವರ ಪ್ರಾರ್ಥನಾಸ್ಥಳದಲ್ಲಿ ಎಣಿಸಲು ಆಗಲಿಲ್ಲ, ಇದು ಹಿಂದೂ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ, ಇದು ನನಗೆ ಹೇಳಲು ಅಭಿಮಾನ ವೆನಿಸುತ್ತದೆ. (ಇದರಿಂದ ಪ್ರಾಚೀನ ಹಿಂದೂ ಸಂಸ್ಕೃತಿ ಎಷ್ಟು ಮಹಾನ್ ಆಗಿದೆ ಎಂಬುದು ಗಮನಿಸುವ ವಿಷಯವಾಗಿದೆ ! ಶಕ್ತಿಕೇಂದ್ರವಾಗಿರುವ ದೇವಾಲಯಗಳನ್ನು ಸರಕಾರೀಕರಣ ಗೊಳಿಸಿ ಸರಕಾರವು ಜನತೆಗೆ ಎಷ್ಟು ಹಾನಿ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿರಿ ! – ಸಂಪಾದಕರು)
೭. ವೇದಪಾಠಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಿರುವ ಶಾರೀರಿಕ ಹಾಗೂ ಮಾನಸಿಕ ಕ್ಷಮತೆ ಬೇರೆ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕಾಣಿಸುವುದಿಲ್ಲ. ‘ಭಾರತೀಯರ ಮೇಲೆ ರಾಜ್ಯವಾಳಬೇಕೆಂದರೆ ಪ್ರಾಚೀನ ಸಂಸ್ಕಾರವನ್ನು ನಾಶ ಮಾಡಬೇಕು, ಎಂಬುದು ಆಂಗ್ಲರಿಗೆ ತಿಳಿಯಿತು. ಈ ಸಂಸ್ಕಾರವು ಬೇರುಸಹಿತ ನಾಶ ವಾಗಲಿ, ಎಂಬುದಕ್ಕಾಗಿ ಆಂಗ್ಲರು ಮೆಕಾಲೆ ಶಿಕ್ಷಣಪದ್ಧತಿಯನ್ನು ಭಾರತದಲ್ಲಿ ಬೇರೂರಿಸಿ ನಮ್ಮ ಸಂಸ್ಕೃತಿಯನ್ನು ಕೆಡಿಸಿದರು.
‘ವಿಶ್ವಾಮಿತ್ರ ಸಂಹಿತೆ ಗ್ರಂಥದಲ್ಲಿ ಬರೆದಿಟ್ಟಿರುವ ಅಕಾಶಯಾನದ ಮಾಹಿತಿಯ ಮೇರೆಗೆ ಅಮೇರಿಕಾವು ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಿತು ! – ಪೂ. ಡಾ. ರಘುನಾಥ ಶುಕ್ಲ
ವಿಶ್ವಾಮಿತ್ರ ಋಷಿಗಳು ೨೪ ವರ್ಷ ತಪಶ್ಚರ್ಯೆ ಮಾಡಿ ದೇವತೆಗಳನ್ನು ಪ್ರಸನ್ನಗೊಳಿಸಿದರು. ಅನಂತರ ಯಾವುದೇ ಜೀವವನ್ನು ನಿರ್ಮಿಸುವ ಶಕ್ತಿ ಅವರಿಗೆ ಪ್ರಾಪ್ತವಾಯಿತು. ಅವರು ತಮಗೆ ಬೇರೆ ಬೇರೆ ಗ್ರಂಥಗಳಿಂದ ಸಿಕ್ಕಿದ ಜ್ಞಾನವನ್ನು ಬರೆದಿಟ್ಟಿದ್ದರು. ಕಾಶಿ- ವಾರಣಾಸಿಯಲ್ಲಿ ಶ್ರೀಪಾದ ದೇವ ಎಂಬ ಹೆಸರಿನ ಪುರೋಹಿತರ ಅಡುಗೆ ಮನೆಯಲ್ಲಿರುವ ಕೆಳಮನೆಯಲ್ಲಿ ಎಷ್ಟೋ ಪ್ರಾಚೀನ ಗ್ರಂಥಗಳಿದ್ದವು. ನನಗೆ ಅಲ್ಲಿ ಒಂದು ಪೆಟ್ಟಿಗೆಯಲ್ಲಿ ‘ವಿಶ್ವಾಮಿತ್ರ ಸಂಹಿತೆ‘ ಎಂಬ ಹೆಸರಿನ ೯೬೦ ಅಧ್ಯಾಯಗಳಿರುವ ಪ್ರಾಚೀನ ಗ್ರಂಥ ಸಿಕ್ಕಿತು. ಆ ಗ್ರಂಥದಲ್ಲಿ ಎಡಗಡೆಯ ಪುಟದಲ್ಲಿ ಸಂಸ್ಕೃತದ ಶ್ಲೋಕವಿದೆ ಹಾಗೂ ಬಲಗಡೆಯಲ್ಲಿ ಚಿತ್ರವಿತ್ತು. ವಿಜ್ಞಾನವು ಯಾವ ಏಕಾಣು ಸೂಕ್ಷ್ಮ ಜೀವವನ್ನು ಕಂಡು ಹಿಡಿಯಿತೋ, ಆ ರೀತಿಯ ೧೫ ಬೇರೆ ಬೇರೆ ರೀತಿಯ ಚಿತ್ರಗಳು ಆ ಗ್ರಂಥದಲ್ಲಿತ್ತು. ‘ಪರಗ್ರಹಕ್ಕೆ ಹೋಗಲು ಬೇಕಾಗಿರುವ ಶಕ್ತಿ, ಆ ಶಕ್ತಿಯನ್ನು ನಿರ್ಮಿಸಲು ಅಗತ್ಯವಾಗಿರುವ ವಿಷಯ ಇದರ ಕೋಷ್ಟಕಗಳನ್ನು ಈ ಗ್ರಂಥದಲ್ಲಿ ನಮೂದಿಸಲಾಗಿದೆ. ಆ ಗ್ರಂಥವನ್ನು ಖರೀದಿಸುವ ಉದ್ದೇಶದಿಂದ ನಾನು ಆಗ ಉದ್ಯಮಿಗಳಾದ ಟಾಟಾ, ಬಿರ್ಲಾ, ಅಬಾಸಾಹೇಬ ಗರವಾರೆರಂತಹ ಪ್ರಸಿದ್ಧ ಜನರ ಬಳಿಗೆ ಹೋಗಿ ಆ ಗ್ರಂಥದ ಛಾಯಾಚಿತ್ರವನ್ನು ತೋರಿಸಿದೆ ಹಾಗೂ ಗ್ರಂಥವನ್ನು ಖರೀದಿಸಲು ಆರ್ಥಿಕ ಸಹಾಯ ಮಾಡಲು ವಿನಂತಿಸಿದೆ. ಅದರಂತೆ ನನಗೆ ೩೫ ಲಕ್ಷ ರೂಪಾಯಿಗಳ ಸಹಾಯ ಸಿಕ್ಕಿದ ಬಳಿಕ ನಾನು ಮತ್ತೆ ಆ ಪುರೋಹಿತರ ಬಳಿಕಗೆ ಹೋಗಿದ್ದಾಗ ಅವರು ಆ ಗ್ರಂಥವನ್ನು ೫೦ ಸಾವಿರ ಡಾಲರ್ ಮೊತ್ತಕ್ಕೆ ಓರ್ವ ಸ್ಮಿಥ್ ಹೆಸರಿನ ವ್ಯಕ್ತಿಗೆ ಮೊದಲೇ ಮಾರಾಟ ಮಾಡಿರುವುದಾಗಿ, ತಿಳಿದು ಬಂದಿತು. ಅಮೇರಿಕಾಗೆ ಚಂದ್ರನ ಮೇಲೆ ೨೦ ವರ್ಷಗಳ ತನಕ ಮನುಷ್ಯನನ್ನು ಕಳುಹಿಸಲು ಆಗಿರಲಿಲ್ಲ; ಆದರೆ ಈ ಘಟನೆ ನಡೆದ ೨ ತಿಂಗಳಿನಲ್ಲಿಯೇ ಅಮೇರಿಕಾವು ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಿತು. ಇದೆಲ್ಲವೂ ನಮ್ಮ ‘ವಿಶ್ವಾಮಿತ್ರ ಸಂಹಿತೆಯು ನೀಡಿದ ಜ್ಞಾನವಾಗಿದೆ. (ಹಿಂದಿನ ಕಾಲದ ಋಷಿಗಳು ವಿಜ್ಞಾನದ ಮೇಲೆ ಸಂಶೋಧನೆ ನಡೆಸಿದರು, ಎಂಬುದು ಕಟ್ಟುಕಥೆ ಎಂದು ತಿಳಿದುಕೊಳ್ಳುವ ತಥಾಕಥಿತ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ತಪರಾಕಿ ! – ಸಂಪಾದಕರು)
ಇಂದು ನಮ್ಮಲ್ಲಿ ಲಭ್ಯವಿರುವ ಜ್ಞಾನದ ಮೇಲೆ ಅಭ್ಯಾಸ ಮಾಡಿ ೨೦೨೦ರ ತನಕ ಜಗತ್ತಿನಲ್ಲಿಯೇ ಉಚ್ಛ ಜ್ಞಾನದ ವಿಜ್ಞಾನಿಗಳು ಭಾರತದಲ್ಲಿ ಖಂಡಿತವಾಗಿಯೂ ನಿರ್ಮಾಣವಾಗುವರು, ಎಂಬ ಮಾನ್ಯತೆ ನನಗಿದೆ. ಇದರಲ್ಲಿ ಡಾ. ವಿಜಯ ಭಟಕರ್, ಡಾ. ರಘುನಾಥ ಮಾಶೇಲಕರ್, ಡಾ. ಜಯಂತ ನಾರಳೀಕರ್‌ರಂತಹ ವಿಜ್ಞಾನಿಗಳು ಮುನ್ನಡೆಯುತ್ತಿದ್ದಾರೆ. ವಿಜ್ಞಾನಿ ಡಾ. ಜಯಂತ ನಾರಳೀಕರರ ಪತ್ನಿಯ ಮೇಲೆ ಕೆಲವು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಗ ಅವರು ತುಂಬಾ ಶಾಂತರಾಗಿದ್ದರು. ಅದನ್ನು ನೋಡಿ ಡಾ. ನಾರಳೀಕರರು ಅವರನ್ನು ‘ನೀನು ಈ ರೀತಿ ಹೇಗೆ ಶಾಂತಳಾಗಿರುವಿ ? ಎಂದು ಕೇಳಿದಾಗ ಅವರು, ‘ನನಗೆ ಸತತ ಸ್ವಾಮಿ ಸಮರ್ಥರು ನನ್ನ ಎದುರಿಗೆ ಕಾಣಿಸುತ್ತಿದ್ದಾರೆ. ಅವರು ನನಗೆ ಧೈರ್ಯ ತುಬುತ್ತಾ ‘ಭಯ ಪಡಬೇಡ, ನಾನು ನಿನ್ನ ಹಿಂದಿದ್ದೇನೆ ಎನ್ನುತ್ತಿದ್ದಾರೆ ಎಂದರು.