೧. ಸಾಧಕನ ಮನಸ್ಸನ್ನು ಅರಿತು ಅದಕ್ಕನುಸಾರ ಸಾಧಕನಿಗೆ ಆನಂದವನ್ನು ನೀಡುವ ಗುರುಮಾತೆ !
೧. ಅ. ಸಭೆಯ ಸಮಯದಲ್ಲಿ ಗೋವಾಗೆ ಬಂದ ನಂತರ ಮನೆಗೆ ಹೋಗಿ ತಾಯಿ-ತಂದೆಯರನ್ನು ಭೇಟಿ ಮಾಡಲು ಮತ್ತು ಸಭೆ ಮುಗಿದ ನಂತರ ಸಭೆಯ ಸ್ಥಳದಿಂದಲೇ ಮುಂಬೈಗೆ ಹೊರಡಲು ಹೇಳುವುದು : ‘ಪ್ರಾರಂಭದಲ್ಲಿ ಪರಾತ್ಪರ ಗುರು ಡಾ.ಆಠವಲೆಯವರು ಅಧ್ಯಾತ್ಮ ಪ್ರಸಾರಕ್ಕಾಗಿ ಗೋವಾಕ್ಕೆ ಬರುತ್ತಿದ್ದರು. ಆ ಸಮಯದಲ್ಲಿ ಗೋವಾದಲ್ಲಿ ೫ ಕಡೆಗಳಲ್ಲಿ ದೊಡ್ಡ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಗೆ ಬಂದಿದ್ದೆನು. ಗೋವಾ ತಲುಪಿದ ನಂತರ ಅವರು, ‘ಮನೋಜ್, ನೀನು ಮನೆಗೆ ಹೋಗಿ ತಾಯಿ-ತಂದೆಯರನ್ನು ಭೇಟಿ ಮಾಡು ಮತ್ತು ನಂತರ ಫೋಂಡಾದ ಸಭೆಯ ಸ್ಥಳಕ್ಕೆ ಬಾ. ಅಲ್ಲಿಯೇ ನಾವು ಭೇಟಿಯಾಗೋಣ ಮತ್ತು ಗೋವಾದ ಪೆಡಣೆಯಲ್ಲಿ ಕೊನೆಯ ಸಭೆ ಮುಗಿದ ನಂತರ ಅಲ್ಲಿಂದಲೇ ನಾವು ಮುಂಬೈಗೆ ಹೊರಡೋಣ. ನಮಗೆ ಬಹಳಷ್ಟು ಸೇವೆಯನ್ನು ಮಾಡುವುದು ಬಾಕಿಯಿದೆ’ ಎಂದು ಹೇಳಿದರು. ಪರಾತ್ಪರ ಗುರು ಡಾ. ಆಠವಲೆಯವರ ಹೇಳಿದಂತೆ ನಾನು ಮನೆಗೆ ಹೋದೆನು ಮತ್ತು ಫೋಂಡಾದಲ್ಲಿ ನಡೆಯಲಿರುವ ಸಭೆಯ ಸ್ಥಳಕ್ಕೆ ಬಂದು ಅವರನ್ನು ಭೇಟಿಯಾದೆನು.
೧ ಆ. ಗೋವಾಕ್ಕೆ ಬಂದ ನಂತರ ಒಬ್ಬ ಸಾಧಕನ ಹೇಳಿಕೆಗನುಸಾರ ಶಕ್ತಿರಥದಲ್ಲಿ ಮೋಜು ಮಾಡುತ್ತಾ ಹೋಗಬೇಕೆಂದೆನಿಸುವುದು : ಶಕ್ತಿರಥದೊಂದಿಗೆ ಸೇವೆಗಾಗಿ ಬಂದಂತಹ ಓರ್ವ ಸಾಧಕರಾದ ಶ್ರೀ. ವಿಜಯ ಕದಮ ಇವರು ನನಗೆ ಭೇಟಿಯಾದರು. ಅವರು ನನಗೆ, ‘ನೀನು ನಮ್ಮೊಂದಿಗೆ ಶಕ್ತಿರಥದಲ್ಲಿ ಬಾ. ನಾವು ಮೋಜು ಮಾಡುತ್ತಾ ಹೋಗೋಣ’ ಎಂದರು. ನಾನು ಅವರಿಗೆ ‘ಸರಿ’ ಎಂದೆನು; ಆದರೆ ಆ ಸಮಯದಲ್ಲಿ ನನಗೆ, ನಾನು ಪರಾತ್ಪರ ಗುರು ಡಾ.ಆಠವಲೆಯವರೊಂದಿಗೆ ‘ಬರುತ್ತೇನೆ’ ಎಂದು ಹೇಳಿದ್ದು ನೆನಪಾಯಿತು. ನನಗೆ ಆರಾಮವಾಗಿ ಮತ್ತು ಮೋಜು ಮಾಡುತ್ತಾ ಹೋಗೋಣವೆಂದೆನಿಸಿತ್ತು. ‘ನಾನು ಸೇವೆಯನ್ನು ಮಾಡುತ್ತಿದ್ದರೆ, ಪರಾತ್ಪರಗುರು ಡಾ. ಆಠವಲೆಯವರು ಹೋಗುತ್ತಾರೆ ಮತ್ತು ನನಗೆ ಶಕ್ತಿರಥದಲ್ಲಿ ಹೋಗಲು ಸಿಗುವುದು’, ಎಂದು ವಿಚಾರ ಮಾಡಿ ಸಭೆ ಮುಗಿದ ನಂತರ ನಾನು ಶಕ್ತಿರಥದಲ್ಲಿ ತುಂಬಲು ಸಾಮಾನುಗಳನ್ನು ತೆಗೆಯುವ ಸೇವೆ ಮಾಡತೊಡಗಿದೆನು.
೧ ಇ. ತಮ್ಮೊಂದಿಗೆ ಸಾಧಕನು ಬರದಿರುವುದು ಗಮನಕ್ಕೆ ಬಂದ ತಕ್ಷಣ ಪರಾತ್ಪರ ಗುರು ಡಾ. ಆಠವಲೆಯವರು ವಾಹನವನ್ನು ಮತ್ತೆ ತಿರುಗಿಸಿ, ಸಾಧಕನು ವಿಚಾರಿಸುವ ಮೊದಲೇ ಅವನಿಗೆ ಇಷ್ಟವಿದ್ದ ರೀತಿಯಲ್ಲಿ ಇತರ ಸಾಧಕರೊಂದಿಗೆ ಮೋಜು ಮಾಡುತ್ತಾ ಬರಲು ಹೇಳಿ ಹೊರಡುವುದು : ಸಭೆಯ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಹೊರಡಲು ತಯಾರಾದರು. ಅವರೊಂದಿಗೆ ಹೋಗುವ ಸಾಧಕರು ವಾಹನದಲ್ಲಿ ಕುಳಿತ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಹೊರಟರು. ಅದನ್ನು ನೋಡಿ ನನಗೆ ಒಳ್ಳೆಯದೆನಿಸಿತು; ಆದರೆ ಸ್ವಲ್ಪ ದೂರ ಹೋದ ನಂತರ ನಾನು ಅವರೊಂದಿಗೆ ಇರದಿರುವುದು ಅವರ ಗಮನಕ್ಕೆ ಬಂದಿತು. ಅವರು ಅಲ್ಲಿಯೇ ವಾಹನವನ್ನು ತಿರುಗಿಸಿ ಸಭೆಯ ಸ್ಥಳಕ್ಕೆ ಬಂದರು. ನನ್ನನ್ನು ಕರೆಯಲು ಅವರು ಓರ್ವ ಸಾಧಕನನ್ನು ಕಳುಹಿಸಿದರು. ಆ ಸಾಧಕನೊಂದಿಗೆ ನಾನು ಪರಾತ್ಪರ ಗುರು ಡಾ. ಆಠವಲೆಯವರ ಎದುರು ಬಂದೆನು. ನನ್ನನ್ನು ನೋಡಿ ಅವರು, ‘ನೀನು ಬರುವುದಿಲ್ಲವೇನು ?’ ಎಂದು ಕೇಳಿದರು. ನಾನು ಅವರಿಗೆ ‘ಶಕ್ತಿರಥದೊಂದಿಗೆ ಬರಲೇನು ?’, ಎಂದು ವಿಚಾರಿಸುವ ಮೊದಲೇ ಅವರು ನನಗೆ, ‘ನಿನಗೆ ಶಕ್ತಿರಥದಲ್ಲಿನ ಸಾಧಕರೊಂದಿಗೆ ಮೋಜು ಮಾಡುತ್ತಾ ಬರುವುದಿದೆಯೇ ?’ ಎಂದು ವಿಚಾರಿಸಿದರು. ಆಗ ನಾನು ಅವರಿಗೆ ‘ಹೂಂ’ ಎಂದೆನು. ‘ಸರಿ. ಮೋಜು ಮಾಡುತ್ತಾ ಬಾ’, ಎಂದು ಹೇಳಿ ಪರಾತ್ಪರ ಗುರು ಡಾ. ಆಠವಲೆಯವರು ಹೊರಟು ಹೋದರು. ನನಗೆ ಆನಂದ ವಾಯಿತು. ಈ ಪ್ರಸಂಗದಿಂದ ಪರಾತ್ಪರಗುರು ಡಾ. ಆಠವಲೆಯವರು ಎಷ್ಟು ದಯಾಳುವಾಗಿದ್ದಾರೆ ಎಂದು ನನಗೆ ಕಲಿಯಲು ಸಿಕ್ಕಿತು.
೨. ಮನೆಯಲ್ಲಿನ ಪೂರ್ವಜರ ತೊಂದರೆಯನ್ನು ದೂರ ಮಾಡಲು ಸಾಧಕನಿಗೆ ಧಾರ್ಮಿಕ ವಿಧಿಯನ್ನು ಮಾಡಲು ಹೇಳಿ ಅವನ ರಕ್ಷಣೆಯನ್ನು ಮಾಡುವ ಮತ್ತು ವಿಧಿಯನ್ನು ಮಾಡಲಿಕ್ಕಾಗಿ ಅವನಿಗೆ ಸಹಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !
೨ ಅ. ತಂದೆಯವರು ಒಪ್ಪದಿದ್ದರೂ, ಮನೆಯಲ್ಲಿ ಪೂರ್ವಜರ ತೊಂದರೆಯಿರುವುದರಿಂದ ಸಾಧಕನಿಗೆ ನಾರಾಯಣ-ನಾಗಬಲಿ ವಿಧಿ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು : ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ನಿಮಿತ್ತ ಗೋವಾಕ್ಕೆ ಬಂದಿದ್ದರು. ಫೋಂಡಾದಲ್ಲಿ ಸಾಧಕರಿಗಾಗಿ ಸತ್ಸಂಗವಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಕ್ಕೆ ಬಂದಿದ್ದೆನು. ಸತ್ಸಂಗ ಮುಗಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡಿದ ನಂತರ ಅವರೊಂದಿಗೆ ನಾನು ಮುಂಬೈಗೆ ಹೊರಟೆನು. ಹೋಗುವಾಗ ವಾಹನದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ನನಗೆ, ‘ನಿಮ್ಮ ಮನೆಯಲ್ಲಿ ಪೂರ್ವಜರ ತೊಂದರೆಯಿದೆ. ನಾರಾಯಣ-ನಾಗಬಲಿ ಮಾಡಬೇಕು. ನೀನು ಅಧ್ಯಾತ್ಮದಲ್ಲಿರುವುದರಿಂದ ನಿನಗೆ ಪೂರ್ವಜರು ಹೆಚ್ಚು ತೊಂದರೆ ನೀಡುತ್ತಾರೆ’ ಎಂದು ಹೇಳಿದರು. ‘ಈ ವಿಧಿಯನ್ನು ಕುಟುಂಬದಲ್ಲಿನ ಹಿರಿಯ ವ್ಯಕ್ತಿಯು ಮಾಡಬೇಕು ಮತ್ತು ಅದಕ್ಕಾಗಿ ಖರ್ಚು ಹೆಚ್ಚಾಗುತ್ತದೆ’, ಎಂದು ನಾನು ಹೇಳಿದ್ದೆನು. ಆದುದರಿಂದ ‘ವಿಧಿಯನ್ನು ಮಾಡಲು ನನ್ನ ತಂದೆಯವರು ಒಪ್ಪುವುದಿಲ್ಲ’, ಎಂದು ನನ್ನ ಮನಸ್ಸಿನಲ್ಲಿ ವಿಚಾರ ಬಂತು. ಅದನ್ನು ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದೆನು. ಆಗ ಅವರು, ‘ತಂದೆಯವರು ಮಾಡುವುದಿಲ್ಲವೆಂದರೆ, ನೀನೇ ಈ ವಿಧಿಯನ್ನು ಮಾಡು’ ಎಂದು ಹೇಳಿದರು.
೨ ಆ. ನಾರಾಯಣ-ನಾಗಬಲಿ ವಿಧಿಯನ್ನು ಮಾಡಲು ಹೇಳಿದರೂ ಸಾಧಕನು ಅದರ ಕಡೆಗೆ ದುರ್ಲಕ್ಷ ಮಾಡುವುದು, ಪರಾತ್ಪರ ಗುರು ಡಾ. ಆಠವಲೆಯವರು ವಿಧಿಯನ್ನು ಮಾಡಲು ಪುನಃ ಹೇಳುವುದು : ಎಷ್ಟು ಹೇಳಿದರೂ ನಾನು ನಾರಾಯಣ-ನಾಗಬಲಿ ಮಾಡುವುದರ ಕಡೆಗೆ ದುರ್ಲಕ್ಷ ಮಾಡುತ್ತಾ ಹೋದೆನು. ರಜೆಯ ದಿನಗಳಲ್ಲಿ ನಾನು ಕೆಲವೊಮ್ಮೆ ಮಿತ್ರರೊಂದಿಗೆ ತಿರುಗಾಡಲು ಹೋಗುತ್ತಿದ್ದೆನು ಮತ್ತು ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳದೆಯೇ ಅಲ್ಲಿ ದ್ವಿಚಕ್ರವಾಹನ ಓಡಿಸಲು ಕಲಿಯುತ್ತಿದ್ದೆನು. ವಾಹನ ಸಂಚಾರ ಕಡಿಮೆ ಇರುವ ಒಳ ರಸ್ತೆಯಲ್ಲಿ ಕಲಿಯುವಾಗ ಒಮ್ಮೆ ನಾನು ದ್ವಿಚಕ್ರವಾಹನದಿಂದ ಬಿದ್ದೆನು. ನನಗೆ ಹೆಚ್ಚು ಪೆಟ್ಟಾಗಲಿಲ್ಲ. ಎರಡನೇ ಬಾರಿ ಪುನಃ ಬಿದ್ದೆನು. ಆಗ ನಾನು ‘ಲೆನ್ ಹೈವೆ’ಯಲ್ಲಿ ದ್ವಿಚಕ್ರವನ್ನು ಓಡಿಸಲು ಪ್ರಯತ್ನಿಸುತ್ತಿದ್ದೆನು. ನನ್ನ ಅದೃಷ್ಟ ಚೆನ್ನಾಗಿತ್ತೆಂದು ಆ ಸಮಯದಲ್ಲಿ ಯಾವುದೇ ವಾಹನ ಆ ರಸ್ತೆಯಲ್ಲಿರಲಿಲ್ಲ. ಆಗ ನನಗೆ ಮೊದಲಿಗಿಂತ ಹೆಚ್ಚು ಪೆಟ್ಟಾಗಿತ್ತು. ಮುಖಕ್ಕೆ ಪೆಟ್ಟು ಬಿದ್ದಿತ್ತು. ಮಿತ್ರನ ದ್ವಿಚಕ್ರ ವಾಹನದ ಹ್ಯಾಂಡಲ್ ತಿರುಗಿತ್ತು. ಅದಕ್ಕೂ ಸ್ವಲ್ಪ ಪೆಟ್ಟು ತಗಲಿತ್ತು. ಸ್ವಲ್ಪ ಸಮಯದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಾವಿರುವ ಕೋಣೆಗೆ ಬಂದರು. ಅವರು ನನ್ನನ್ನು ನೋಡಿ, ‘ದ್ವಿಚಕ್ರ ವಾಹನ ಓಡಿಸಲು ಕಲಿಯುವಾಗ ಬಿದ್ದು ಬಂದೆಯಲ್ಲಾ ?’ ಎಂದು ಕೇಳಿದರು. ಆಗ ನಾನು ‘ಹೌದು’ ಎಂದೆನು. ಆಗ ಅವರು ನಾರಾಯಣ-ನಾಗಬಲಿ ವಿಧಿಯನ್ನು ಮಾಡುವ ಬಗ್ಗೆ ಪುನಃ ನೆನಪಿಸಿದರು.
೨ ಇ. ಪರಾತ್ಪರ ಗುರು ಡಾ. ಆಠವಲೆಯವರು ಅರಿವು ಮಾಡಿಕೊಟ್ಟ ನಂತರ ನಾರಾಯಣ – ನಾಗಬಲಿ ವಿಧಿಗಳನ್ನು ಮಾಡಲು ತಯಾರಾಗುವುದು ಮತ್ತು ವಿಧಿಗಳನ್ನು ಮಾಡಲು ಪುರೋಹಿತರು ಕಡಿಮೆ ಹಣವನ್ನು ತೆಗೆದುಕೊಳ್ಳುವುದು : ಪರಾತ್ಪರ ಗುರು ಡಾ. ಆಠವಲೆಯವರು ಅರಿವು ಮಾಡಿ ಕೊಟ್ಟಿದ್ದರಿಂದ ನಾನು ನಾರಾಯಣ – ನಾಗಬಲಿ ವಿಧಿಗಳನ್ನು ಮಾಡಲು ತಯಾರಾದೆ. ಶ್ರೀಕ್ಷೇತ್ರ ತ್ರ್ಯಂಬಕೇಶ್ವರದಲ್ಲಿ ನಾರಾಯಣ – ನಾಗಬಲಿ ವಿಧಿಗಳನ್ನು ಮಾಡುವ ಓರ್ವ ಪುರೋಹಿತರ ಕಡೆಗೆ ಹೋದೆವು. ನಾರಾಯಣ – ನಾಗಬಲಿ ವಿಧಿಗಳನ್ನು ಮಾಡಲು ಆ ಪುರೋಹಿತರು ೫ ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು; ಆದರೆ ಅವರು ನನ್ನಿಂದ ಕೇವಲ ೨ ಸಾವಿರದ ೫೦೦ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡರು. ಈ ಪ್ರಸಂಗದಿಂದ ಗುರುಗಳು ಹೇಳಿದ ವಿಷಯವನ್ನು ತತ್ಪರತೆಯಿಂದ ಆಜ್ಞಾಪಾಲನೆ ಮಾಡುವುದರ ಮಹತ್ವ ನನ್ನ ಗಮನಕ್ಕೆ ಬಂದಿತು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದಾಗಿ ಸಾಧಕರ ಕಾಳಜಿ ಹೇಗೆ ತೆಗೆದುಕೊಳ್ಳಲಾಗುತ್ತದೆ, ಎಂಬುವುದೂ ಕಲಿಯಲು ಸಿಕ್ಕಿತು.
೩. ಸಾಧಕರ ಸಮಯಕ್ಕೆ ಮತ್ತು ಸೇವೆಗೆ ಮಹತ್ವವನ್ನು ಕೊಡುವ ಪರಾತ್ಪರ ಗುರು ಡಾ. ಆಠವಲೆ !
ಶ್ರೀ. ಮನೋಜ ನಾರಾಯಣ ಕುವೇಲಕರ
೩ ಅ. ಪರಾತ್ಪರ ಗುರು ಡಾ. ಆಠವಲೆಯವರು ವಾಹನವನ್ನು ಚಲಾಯಿಸಲು ಕಲಿಯಲು ಹೇಳುವುದು, ಅದಕ್ಕಾಗಿ ಲರ್ನಿಂಗ್ ಲೈಸನ್ಸ್ ಪಡೆಯಲು ವಿಳಾಸದ ಅಡಚಣೆಯಿರುವುದು ಗಮನಕ್ಕೆ ಬಂದ ನಂತರ ತಮ್ಮ ವಿಳಾಸವನ್ನು ಅರ್ಜಿಯಲ್ಲಿ ನಮೂದಿಸಿ ಅಡಚಣೆಯನ್ನು ದೂರಗೊಳಿಸುವುದು : ನನಗೆ ಪ.ಪೂ. ಡಾಕ್ಟರರು ದ್ವಿಚಕ್ರ ವಾಹನ ಮತ್ತು ಚತುಶ್ಚಕ್ರ ವಾಹನವನ್ನು ಚಲಾಯಿಸಲು ಕಲಿಯಲು ಹೇಳಿದ್ದರು. ಅದಕ್ಕಾಗಿ ಪ್ರತಿದಿನ ೧ ಗಂಟೆ ಕಲಿಯುವ ಆಯೋಜನೆಯನ್ನೂ ಮಾಡಿದ್ದರು. ಯಾವುದೇ ವಾಹನವನ್ನು ಚಲಾಯಿಸಲು ಕಲಿಯುವ ಮೊದಲು ಲರ್ನಿಂಗ್ ಲೈಸನ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಯಾವ ಊರಲ್ಲಿ ಈ ಅನುಮತಿಯನ್ನು ಪಡೆಯುವುದಿರುತ್ತದೆಯೋ, ಆ ಊರಿನ ವಿಳಾಸವನ್ನು ಕೊಡಬೇಕಾಗುತ್ತದೆ ಮತ್ತು ನಮ್ಮ ಪಡಿತರ ಕಾರ್ಡನ್ನೂ (ರೇಶನ್‌ಕಾರ್ಡ್) ತೋರಿಸಬೇಕಾಗುತ್ತದೆ. ನಾನು ಮುಂಬೈಯಲ್ಲಿ ಅನುಮತಿ ಪಡೆಯುವವನಿದ್ದೆನು, ಆದುದರಿಂದ ನನಗೆ ಮುಂಬೈಯ ವಿಳಾಸವನ್ನು ನೀಡಬೇಕಾಗಿತ್ತು. ನನ್ನ ಪಡಿತರ ಚೀಟಿ (ರೇಶನ್ ಕಾರ್ಡ್) ಗೋವಾದ್ದಾಗಿತ್ತು, ಆದುದರಿಂದ ನನ್ನ ವಿಳಾಸ ಗೋವಾ ದ್ದಾಗಿತ್ತು. ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಈ ಅಡಚಣೆಯನ್ನು ಹೇಳಿದೆನು.
ಆಗ ಅವರು, ಹಾಗಾದರೆ ಗೋವಾದ ಪಡಿತರ ಚೀಟಿಯಲ್ಲಿನ ನಿನ್ನ ಹೆಸರನ್ನು ರದ್ದುಗೊಳಿಸಿ ಆ ಬಗ್ಗೆ ಲಿಖಿತ ಮಾಹಿತಿಯನ್ನು ಇಲ್ಲಿಗೆ ಕಳುಹಿಸಲು ಹೇಳು ಎಂದು ಹೇಳಿದರು. ಅದಕ್ಕನುಸಾರ ಮನೆಯವರು ಗೋವಾದಿಂದ ಲಿಖಿತ ಮಾಹಿತಿಯನ್ನು ಮುಂಬೈಗೆ ಕಳುಹಿಸಿದರು; ಆದರೆ ಮುಂಬೈಯಲ್ಲಿ ರೇಶನ್ ಕಾರ್ಡಿನಲ್ಲಿ ಹೆಸರು ನೊಂದಾಯಿಸುವುದಿದ್ದರೆ, ಅಲ್ಲಿನ ವಿಳಾಸ ಮತ್ತು ಯಾರೊಂದಿಗೆ ವಾಸಿಸುತ್ತಿದ್ದೇವೆಯೋ, ಅವರೊಂದಿಗಿನ ನಮ್ಮ ಸಂಬಂಧವನ್ನು ನೋಂದಣಿ ಮಾಡಬೇಕಾಗುತ್ತದೆ. ಮುಂಬೈಯಲ್ಲಿ ನನ್ನ ಸಂಬಂಧಿಕರು ಯಾರೂ ಇರಲಿಲ್ಲ. ಶ್ರೀ. ಸತ್ಯವಾನ ದಾದಾರವರ (ಈಗಿನ ಸದ್ಗುರು (ಶ್ರೀ.) ಸತ್ಯವಾನ ದಾದಾರವರ) ಸಂಬಂಧಿಕರು ಮುಂಬೈಯಲ್ಲಿದ್ದರು ಮತ್ತು ಶ್ರೀ. ದಿನೇಶ ಶಿಂದೆಯವರ ಮನೆಯೂ ಮುಂಬೈ ಯಲ್ಲಿರುವುದರಿಂದ ಅವರ ರೇಶನ್ ಕಾರ್ಡ ಮುಂಬೈಯಲ್ಲಿತ್ತು. ಇದರ ಬಗ್ಗೆ ನಾನು ವಿಚಾರ ಮಾಡುತ್ತಿದ್ದೆ. ನನ್ನ ಅಡಚಣೆ ತಿಳಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು, ನಿನ್ನ ವಿಳಾಸ ಇಲ್ಲವಾದರೆ ಏನಾಯಿತು ? ನಮ್ಮ ರೇಶನ್ ಕಾರ್ಡ್ ಇದೆಯಲ್ಲವೇ ! ಅದರಲ್ಲಿ ನಿನ್ನ ಹೆಸರನ್ನು ಸೇರಿಸೋಣ, ಎಂದು ಹೇಳಿದರು. ಅವರು ಕೇವಲ ಹೇಳಿ ಸುಮ್ಮನೆ ಕುಳಿತು ಕೊಳ್ಳಲಿಲ್ಲ, ಅದಕ್ಕನುಸಾರ ಅವರು ಅರ್ಜಿಯ ಮೇಲೆ ತಮ್ಮ ವಿಳಾಸವನ್ನು ಬರೆದರು. ಈ ಪ್ರಸಂಗದಿಂದ ನನಗೆ ಅವರಲ್ಲಿರುವ ಪ್ರೇಮಭಾವ ಕಲಿಯಲು ಸಿಕ್ಕಿತು.
೩. ಆ. ಆರ್.ಟಿ.ಒ. ಕಾರ್ಯಾಲಯದಲ್ಲಿ ಸೇವೆಯಲ್ಲಿರುವ ಓರ್ವ ಸಾಧಕನಿಗೆ ವಾಹನ ಅನುಮತಿ ಸಿಗುವ ಬಗ್ಗೆ ಪ್ರಯತ್ನಿಸಲು ಹೇಳಿ ಅದರಲ್ಲಿನ ಅಡಚಣೆಗಳನ್ನೂ ದೂರ ಮಾಡುವುದು : ಸನಾತನದ ಓರ್ವ ಸಾಧಕನು ಮುಂಬೈಯಲ್ಲಿನ ಆರ್.ಟಿ.ಒ. ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದನು. ಪಡಿತರ ಚೀಟಿಯಲ್ಲಿ ನನ್ನ ಹೆಸರು ನೋಂದಣಿಯಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಆರ್.ಟಿ.ಒ. ಕಾರ್ಯಾಲಯದಲ್ಲಿನ ಸಾಧಕನಿಗೆ ನನಗೆ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನ ಚಲಾಯಿಸಲು ಅನುಮತಿ ಪಡೆಯುವುದಿದೆ ಎಂಬುದರ ಬಗ್ಗೆ ಹೇಳಿದರು. ಅದಕ್ಕನುಸಾರ ಆ ಸಾಧಕನು ನನಗೆ ಆರ್.ಟಿ.ಒ. ಕಾರ್ಯಾಲಯಕ್ಕೆ ಬರಲು ಹೇಳಿದನು. ಓರ್ವ ಸಾಧಕನೊಂದಿಗೆ ಹೋಗಿ ನಾನು ಅರ್ಜಿ ತುಂಬಿದೆನು. ಕಾರಣಾಂತರಗಳಿಂದಾಗಿ ಅವನು ನನಗೆ ಇನ್ನೊಂದು ದಿನ ಬರಲು ಹೇಳಿದನು. ಅವನು ಹೇಳಿದ ದಿನ ನಾನು ಹೊರಡುವ ಮೊದಲು ಪರಾತ್ಪರ ಗುರು ಡಾ. ಆಠವಲೆಯವರು ದೂರವಾಣಿಯಲ್ಲಿ ಆ ಸಾಧಕನಿಗೆ ನಾನು ಬರುವವನಿದ್ದೇನೆ ಎಂದು ಹೇಳಿದರು. ನಾನು ಹೋದ ನಂತರ ಅವನು ಸಮಯವನ್ನು ವ್ಯರ್ಥ ಕಳೆಯದೇ ನನ್ನ ವಾಹನ ಚಲಾಯಿಸುವ ಪರೀಕ್ಷೆಯನ್ನು ತೆಗೆದುಕೊಂಡನು ಮತ್ತು ವಾಹನ ಚಲಾಯಿಸುವ ಅನುಮತಿಯನ್ನು ನೀಡಿದನು.
೪. ಕ್ಷಮಾಶೀಲ ಮತ್ತು ದಯಾಳು ಪರಾತ್ಪರ ಗುರು ಡಾ. ಆಠವಲೆ !
೪ ಅ. ಪರಾತ್ಪರ ಗುರು ಡಾ. ಆಠವಲೆಯವರು ದ್ವಿಚಕ್ರ ವಾಹನವನ್ನು ಕಲಿಯಲು ಹೇಳುವುದು, ಅಭ್ಯಾಸಕ್ಕಾಗಿ ಬೇರೆ ಮಾರ್ಗದಿಂದ ಬರಲು ಮತ್ತು ಬರುವಾಗ ಓರ್ವ ಸಾಧಕನಿಂದ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಬೇಗನೇ ಬರಲು ಹೇಳುವುದು ಮತ್ತು ಅವರು ಬೇಗನೇ ಬರಲು ಹೇಳಿದರೂ ರಾತ್ರಿ ತಡವಾಗಿ ಹೋಗುವುದು : ಪರಾತ್ಪರ ಗುರು ಡಾ. ಆಠವಲೆಯವರು ನನಗೆ ದ್ವಿಚಕ್ರ ವಾಹನವನ್ನು ಕಲಿಯಲು ಹೇಳಿದ್ದರು. ಪ್ರತಿ ದಿನ ೧ ಗಂಟೆ ಕಲಿಯುವ ನಿಯೋಜನೆಯನ್ನೂ ಮಾಡಿದ್ದರು. ಮಧ್ಯಾಹ್ನದ ಸಮಯದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರವು ಅಲ್ಪ ಪ್ರಮಾಣದಲ್ಲಿರುವುದರಿಂದ ಆ ಸಮಯದಲ್ಲಿ ನಾನು ದ್ವಿಚಕ್ರ ವಾಹನವನ್ನು ಚಲಾಯಿಸಲು ಕಲಿಯುತ್ತಿದ್ದೆನು. ಕೆಲವು ದಿನಗಳ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನನಗೆ, ‘ನೀನು ಮಧ್ಯಾಹ್ನದ ಸಮಯದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆಯಿದ್ದಾಗ ದ್ವಿಚಕ್ರ ವಾಹನವನ್ನು ಚಲಾಯಿಸಲು ಅಭ್ಯಾಸ ಮಾಡಿದರೆ ನಿನ್ನ ಅಭ್ಯಾಸ ಹೇಗೆ ಉತ್ತಮವಾಗಿ ಆಗುವುದು ? ಜನ ಸಂದಣಿಯಲ್ಲಿ ವಾಹನವನ್ನು ಚಲಾಯಿಸಿದರೆ, ನಿನಗೆ ನಿಜವಾದ ಅಭ್ಯಾಸವಾಗುವುದು; ಆದುದರಿಂದ ನೀನು ಇಂದು ಸಾಯಂ ಕಾಲ ೫.೦೦ ರಿಂದ ೫.೩೦ ರ ಸಮಯದಲ್ಲಿ ಹೆದ್ದಾರಿಯಲ್ಲಿ ವಾಹನವನ್ನು ಚಲಾಯಿಸು. ಬರುವಾಗ ಒಬ್ಬ ಸಾಧಕನಲ್ಲಿರುವ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಬಾ. ಇದರಿಂದ ನಿನಗೆ ರಸ್ತೆಯ ಮತ್ತು ದ್ವಿಚಕ್ರ ವಾಹನವನ್ನು ಚಲಾಯಿಸಲು ಅಂದಾಜು ಸಿಗುವುದು. ನಮ್ಮಲ್ಲಿ ಬಹಳಷ್ಟು ಸೇವೆಗಳಿವೆ. ಆದುದರಿಂದ ಎಲ್ಲಿಯೂ ನಿಲ್ಲಬೇಡ. ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಬೇಗನೆ ಬಾ’ ಎಂದು ಹೇಳಿದರು. ಅದಕ್ಕನುಸಾರ ನಾನು ನನಗೆ ದ್ವಿಚಕ್ರ ವಾಹನವನ್ನು ಚಲಾಯಿಸಲು ಕಲಿಸುವ ಸಾಧಕನನ್ನು ಜೊತೆಗೆ ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೋದೆನು. ಆ ಸಾಧಕನ ಬಳಿ ಹೋದ ನಂತರ ಅವನು ನಮಗೆ ಊಟ ಮಾಡಿ ಹೋಗಲು ಹೇಳಿದನು. ಈ ಸಮಯದಲ್ಲಿ ರಸ್ತೆಯಲ್ಲಿ ಜನಸಂದಣಿಯಿರುತ್ತದೆ, ಆದುದರಿಂದ ರಾತ್ರಿ ತಡವಾಗಿ ಹೋಗಿರಿ, ಎಂದು ಹೇಳಿದನು. ಆಗ ನನ್ನೊಂದಿಗೆ ಬಂದ ಸಾಧಕನು ಆ ಸಾಧಕನು ಹೇಳಿದ ರೀತಿಯಲ್ಲಿ ಊಟ ಮಾಡಿ ತಡವಾಗಿ ಹೊರಡಲು ನಿಶ್ಚಿಯಿಸಿದನು. ನಾನೂ ಅವನ ಮಾತನ್ನು ಒಪ್ಪಿಕೊಂಡೆನು. ಅದಕ್ಕನುಸಾರ ಊಟ ಮಾಡಿ ನಾವು ರಾತ್ರಿ ಸುಮಾರು ೧೦.೩೦ ಕ್ಕೆ ಆ ಸಾಧಕನ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಟೆವು.
೪ ಆ. ಅಡ್ಡರಸ್ತೆಯಿಂದ (ಶಾರ್ಟ್‌ಕಟ್‌ನಿಂದ ಹೋಗ ಬೇಕೆಂದು ನಿಶ್ಚಿಯಿಸಿ ಆ ಮಾರ್ಗಕ್ಕೆ ತಿರುಗಿಸುವಾಗ ವಾಹನ ಬಂದ್ ಬೀಳುವುದು, ವೇಗದಿಂದ ಬರುವ ಬಸ್ಸು ಸಮೀಪದಿಂದ ಹೋಗುವುದು ಮತ್ತು ನಿಂತಿದ್ದ ನನ್ನ ದ್ವಿಚಕ್ರ ವಾಹನವು ಮುಂದೆ ಹೋದುದರಿಂದ ಜೀವ ಉಳಿಯುವುದು : ಸೇವಾಕೇಂದ್ರಕ್ಕೆ ಹೋಗಲು ಒಂದು ಸಮೀಪದ ಅಡ್ಡರಸ್ತೆಯಿತ್ತು. ಆ ರಸ್ತೆಯಲ್ಲಿ ವಾಹನಗಳ ಸಂಚಾರವೂ ಹೆಚ್ಚಿರಲಿಲ್ಲ. ಆ ರಸ್ತೆಯಲ್ಲಿ ಹೋಗಲು ವಾಹನವನ್ನು ತಿರುಗಿಸುವಾಗ ವಾಹನದ ಗೇರ್‌ಅನ್ನು ತಪ್ಪಿ ಬದಲಿಸಿದಾಗ ವಾಹನವು ರಸ್ತೆಯಲ್ಲೇ ನಿಂತುಬಿಟ್ಟಿತು. ಅಷ್ಟರಲ್ಲೇ ಆ ರಸ್ತೆಯಿಂದ ಒಂದು ಬಸ್ ಬಂದಿತು. ರಸ್ತೆಯು ಖಾಲಿ ಇದ್ದುದರಿಂದ ಆ ಬಸ್ಸು ವೇಗವಾಗಿ ಬಂತು ಮತ್ತು ನನ್ನ ಅತೀ ಸಮೀಪದಿಂದ ಹೋಯಿತು. ನಿಂತಿದ್ದ ನನ್ನ ದ್ವಿಚಕ್ರ ವಾಹನವು ರಸ್ತೆಯಲ್ಲಿ ಹೇಗೆ ಮುಂದೆ ಹೋಯಿತು ?, ಎಂಬುದೇ ನನಗೆ ತಿಳಿಯಲಿಲ್ಲ. ನಾನು ಸ್ವಲ್ಪ ಹಿಂದೆ ಉಳಿದಿದ್ದರೆ, ಆ ಬಸ್ಸು ನನ್ನ ಮೇಲೆ ಹಾಯ್ದು ಹೋಗುತ್ತಿತ್ತು. ಇಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದಲೇ ನಾನು ಬದುಕಿದೆನು.
೪ ಇ. ತಡವಾಗಿ ತಲುಪಿದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸಿಟ್ಟು ಮಾಡಿಕೊಳ್ಳುವುದು, ಹೇಳಿದ್ದನ್ನು ಕೇಳಲಿಲ್ಲ ಎಂದು ಆ ದಿನ ಸೇವೆಯನ್ನು ಮಾಡಬಾರದೆಂದು ಹೇಳುವುದು ಮತ್ತು ಕ್ಷಮೆ ಕೇಳಿದ ನಂತರ ನಗುತ್ತಾ ಸೇವೆಯನ್ನು ಮಾಡಲು ಹೇಳುವುದು : ನಂತರ ನಾವು ಸೇವಾಕೇಂದ್ರವನ್ನು ತಲುಪಿದೆವು. ಮೆಟ್ಟಿಲು ಹತ್ತಿ ಮೇಲೆ ಹೋಗುವಾಗ ಓರ್ವ ಸಾಧಕನು (ಶ್ರೀ. ಗಣೇಶ ನಾಯಿಕ) ಮನೆಗೆ ಹೊರಟಿದ್ದನು. ಅವನು ನನಗೆ, ‘ಪರಾತ್ಪರ ಗುರು ಡಾ. ಆಠವಲೆಯವರು ನಿನ್ನ ಮೇಲೆ ಬಹಳ ಕೋಪಗೊಂಡಿದ್ದಾರೆ. ನಿನಗೆ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಬೇಗನೆ ಬರಲು ಹೇಳಿದ್ದರಲ್ಲ ?’ ಎಂದು ಹೇಳಿದನು. ನಾನು ಮೇಲೆ ಸೇವಾಕೇಂದ್ರಕ್ಕೆ ಹೋದೆನು ಆಗ ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಕೋಣೆಯಲ್ಲಿದ್ದರು. ನನ್ನನ್ನು ನೋಡಿ ಸೇವಾಕೇಂದ್ರದಲ್ಲಿದ್ದ ಸಾಧಕಿ ಕು. ಅನುರಾಧಾ ವಾಡೇಕರ್‌ರವರು (ಈಗಿನ ಸನಾತನದ ಸದ್ಗುರುಗಳಾದ (ಕು.) ಅನುರಾಧಾ ವಾಡೇಕರ್) ನನಗೆ, ‘ಪರಾತ್ಪರ ಗುರು ಡಾ. ಆಠವಲೆಯವರು ಬಹಳ ಕೋಪಗೊಂಡಿದ್ದಾರೆ. ಹೋಗಿ ಅವರಲ್ಲಿ ಕ್ಷಮಾಯಾಚನೆ ಮಾಡು,’ ಎಂದು ಹೇಳಿದರು. ಅದಕ್ಕನುಸಾರ ನಾನು ಅವರ ಕೋಣೆಗೆ ಹೋದೆನು.
ಆಗ ಅವರು ನನಗೆ, ‘ಇಷ್ಟೇಕೆ ತಡವಾಯಿತು ? ನಾನು ನಿನಗೆ ಬೇಗನೇ ಇನ್ನೊಂದು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಬರಲು ಹೇಳಿದ್ದೆನಲ್ಲಾ ಎಂದರು. ಆಗ ನಾನು ಸಹ ಸಾಧಕನು ಊಟ ಮಾಡಿ ಹೋಗೋಣ ಎಂದು ಹೇಳಿದ್ದನ್ನು ಅವರಿಗೆ ಹೇಳಿದೆನು. ಆಗ ಪರಾತ್ಪರ ಗುರು ಡಾ. ಆಠವಲೆಯವರು, ಅವನಿಗೇನೂ ತಿಳಿಯುವುದಿಲ್ಲ; ನಿನಗೂ ತಿಳಿಯುವುದಿಲ್ಲವೇ ? ನಮ್ಮಲ್ಲಿ ಎಷ್ಟೊಂದು ಸೇವೆಗಳಿವೆ. ಇಂದು ನೀನು ಸೇವೆಯನ್ನು ಮಾಡುವುದು ಬೇಡ. ಹೋಗಿ ಮಲಗು, ಎಂದು ಹೇಳಿದರು. ನಾನು ಅವರಲ್ಲಿ ಕ್ಷಮೆ ಕೇಳಿದೆನು ಮತ್ತು ಇನ್ನೊಮ್ಮೆ ಇಂತಹ ತಪ್ಪು ಮಾಡುವುದಿಲ್ಲ, ಎಂದು ಹೇಳಿದೆನು. ಆಗ ಅವರು ನಕ್ಕು ಕೈಯಿಂದ ತೋರಿಸಿ ‘ಅಲ್ಲಿ ನೋಡು ನಿನಗಾಗಿ ಸೇವೆಯನ್ನು ತೆಗೆದಿಟ್ಟಿದ್ದೇನೆ. ಅದನ್ನು ತೆಗೆದುಕೊಂಡು ಸೇವೆ ಮಾಡಲು ಪ್ರಾರಂಭಿಸು’, ಎಂದು ಹೇಳಿದರು. ಈ ಪ್ರಸಂಗದಿಂದ ಸಮಯದ ಮಹತ್ವ ಮತ್ತು ಆಜ್ಞಾಪಾಲನೆ ಮಾಡದಿದ್ದರೆ ಏನಾಗುತ್ತದೆ, ಎಂಬುದು ಕಲಿಯಲು ಸಿಕ್ಕಿತು ಮತ್ತು ಪ.ಪೂ. ಡಾಕ್ಟರರ ಕ್ಷಮಾಶೀಲ, ದಯಾಳು ಸ್ವಭಾವ ನೋಡಲು ಸಿಕ್ಕಿತು.
೫. ಇತರರಿಗಾಗಿ ಸ್ವತಃ ಆರ್ಥಿಕ ಹಾನಿಯನ್ನು ಸಹಿಸುವ ಮತ್ತು ಎಲ್ಲರನ್ನೂ ಪ್ರೀತಿಸುವ ಪರಾತ್ಪರ ಗುರು ಡಾ. ಆಠವಲೆ !
೫ ಅ. ವಾಹನವನ್ನು ವಾಹನ ನಿಲ್ದಾಣದಲ್ಲಿ ನಿಲ್ಲಿಸುವಾಗ ನಮ್ಮ ವಾಹನ ಇನ್ನೊಂದು ವಾಹನಕ್ಕೆ ತಾಗಿ ವಾಹನದ ಸಿಗ್ನಲ್ ಲೈಟ್ ಒಡೆಯುವುದು, ವಾಹನ ಚಾಲಕನು ರೇಗಾಡುವುದು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ನಂತರ ಅವರಲ್ಲಿ ಕ್ಷಮೆಯನ್ನು ಯಾಚಿಸಿ ಹಣವನ್ನು ನೀಡಲು ಹೇಳುವುದು : ಒಂದು ಸಲ ನಾವು ೩ – ೪ ಜನ ಸಾಧಕರು ಶ್ರೀ. ಆಶೀಷ ಸಾವಂತರ ಮನೆಗೆ ಊಟಕ್ಕೆಂದು ಹೋಗಿದ್ದೆವು. ಹೋಗುವಾಗ ನಾವು ಚತುಶ್ಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದೆವು. ಊಟ ಮಾಡಿ ಬರುವಾಗ ಶ್ರೀ.ಸತ್ಯವಾನ್ ದಾದಾರವರು (ಈಗಿನ ಸದ್ಗುರುಗಳಾದ (ಶ್ರೀ.) ಸತ್ಯವಾನ್ ಕದಮ್) ನನಗೆ ಚತುಶ್ಚಕ್ರ ವಾಹನವನ್ನು ಚಲಾಯಿಸಲು ನೀಡಿದರು. ರಾತ್ರಿ ಬಹಳ ತಡವಾದುದರಿಂದ ರಸ್ತೆಯಲ್ಲಿ ಅಷ್ಟು ವಾಹನಗಳಿರಲಿಲ್ಲ. ಆದುದರಿಂದ ನಾನು ಸೇವಾಕೇಂದ್ರದವರೆಗೆ ಚತುಶ್ಚಕ್ರ ವಾಹನವನ್ನು ನಡೆಸುತ್ತಾ ಬಂದೆನು; ಆದರೆ ಸೇವಾಕೇಂದ್ರದ ಬಳಿ ವಾಹನವನ್ನು ನಿಲ್ಲಿಸುವಾಗ ಎದುರಿಗೆ ನಿಂತಿರುವ ಒಂದು ಬಾಡಿಗೆಯ ಚತುಶ್ಚಕ್ರ ವಾಹನದ ಹಿಂದಿನ ಭಾಗಕ್ಕೆ ತಾಗಿತು. ಇದರಿಂದ ಆ ವಾಹನದ ಎಡಗಡೆಯ ಸಿಗ್ನಲ್ ಲೈಟ್ ಒಡೆಯಿತು.
ನಾವು ಯಾರಿಗೂ ಏನೂ ಹೇಳದೇ ಹೋಗಿ ಮಲಗಿದೆವು. ಬೆಳಗ್ಗೆ ಎದ್ದ ನಂತರ ಆ ಚತುಶ್ಚಕ್ರ ವಾಹನದ ಚಾಲಕನು ಬಂದು ವಾಹನದ ಸಿಗ್ನಲ್ ಲೈಟ್ ಒಡೆದುದ್ದನ್ನು ನೋಡಿ ಕೂಗಾಡತೊಡಗಿದನು. ಅದನ್ನು ಕೇಳಿ ನಾವು ಪರಾತ್ಪರ ಗುರು ಡಾ. ಆಠವಲೆಯವರ ಕಡೆಗೆ ಹೋದೆವು ಮತ್ತು ಅವರಿಗೆ ನಡೆದ ಎಲ್ಲ ವಿಷಯವನ್ನು ಹೇಳಿದೆವು. ಆಗ ಅವರು, ‘ಮನೋಜನು ವಾಹನ ನಡೆಸುತ್ತಿದ್ದನು, ಆದರೆ ಅವನ ಪಕ್ಕದಲ್ಲಿ ಯಾರು ಕುಳಿತಿದ್ದರು ? ಸತ್ಯವಾನನಿಗೂ ತಿಳಿಯಲಿಲ್ಲವೇ ? ಒಳ್ಳೆಯದು, ಆದದ್ದು ಆಯಿತು. ಅವರಲ್ಲಿ ಕ್ಷಮೆ ಕೇಳು ಮತ್ತು ಆ ಒಡೆದ ವಸ್ತುವನ್ನು ಸರಿಪಡಿಸಲು ಎಷ್ಟು ಖರ್ಚಾಗುತ್ತದೆ, ಎಂಬುದನ್ನು ವಿಚಾರಿಸಿ ಅವರಿಗೆ ಅಷ್ಟು ಹಣವನ್ನು ಕೊಡು’ ಎಂದು ಹೇಳಿದರು. ನನ್ನ ತಪ್ಪಿನಿಂದಾಗಿ ಪರಾತ್ಪರ ಗುರು ಡಾ. ಆಠವಲೆಯವರು ಆರ್ಥಿಕ ಹಾನಿಯನ್ನು ಸಹಿಸಬೇಕಾಯಿತು. ಈ ಪ್ರಸಂಗದಿಂದ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಇತರರಿಗಾಗಿ ಸ್ವತಃ ಆರ್ಥಿಕ ಹಾನಿಯನ್ನು ಸಹಿಸುವ ಸಿದ್ಧತೆ ಮತ್ತು ಪ್ರೇಮಭಾವ ಕಲಿಯಲು ಸಿಕ್ಕಿತು. – ಶ್ರೀ. ಮನೋಜ ನಾರಾಯಣ ಕುವೇಲಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೫.೨೦೧೬)