ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಎಂಬ ಹೊಸ ಗ್ರಂಥದ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. ಈ ಉಪಾಯಪದ್ಧತಿಯು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ಎಂದಿಗೂ ಉಪಯುಕ್ತವಾಗಿದೆ. ವಾಚಕರು ಈಗಿನಿಂದಲೇ ಈ ಉಪಾಯ ಮಾಡಿ ನೋಡಬೇಕು. ಈ ರೀತಿ ಮಾಡುವುದರಿಂದ ಉಪಾಯಪದ್ಧತಿಯನ್ನು ಹೇಗೆ ಮಾಡಬೇಕು ಎಂಬುದರ ಅಭ್ಯಾಸವಾಗುವುದು ಮತ್ತು ಅದರಲ್ಲಿನ ಸೂಕ್ಷ್ಮ ವಿಷಯಗಳು ಸಹ ಗಮನಕ್ಕೆ ಬರುವವು. ಇದರಿಂದ ಆಪತ್ಕಾಲದಲ್ಲಿ ಬರುವ ರೋಗಗಳನ್ನು ಪ್ರತ್ಯಕ್ಷ ಎದುರಿಸಲು ಆತ್ಮವಿಶ್ವಾಸ ನಿರ್ಮಾಣವಾಗಲು ಸಹಾಯವಾಗುವುದು. ಈ ವಿಷಯದಿಂದ ವಾಚಕರಿಗೆ ಉಪಾಯಪದ್ಧತಿಯ ಪರಿಚಯವಾಗುತ್ತದೆ. ಸವಿಸ್ತಾರ ಮಾಹಿತಿಯನ್ನು ಗ್ರಂಥದಲ್ಲಿ ನೀಡಲಾಗಿದೆ. ಆ ಗ್ರಂಥವನ್ನು ವಾಚಕರು ಅವಶ್ಯವಾಗಿ ಸಂಗ್ರಹಿಸಿಡಬೇಕು.
ಭಾಗ ೩
೪. ಉಪಾಯಗಳ ಸಂದರ್ಭದಲ್ಲಿನ ಸೂಚನೆಗಳು
೪ ಅ. ಉಪಾಯ ಮಾಡುವವನು ಇದನ್ನು ಗಮನದಲ್ಲಿಡಬೇಕು !
೪ ಅ ೧. ಎಲ್ಲರೂ, ವಿಶೇಷವಾಗಿ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರು ನಾಮಜಪ ಮಾಡುತ್ತಾ ಉಪಾಯ ಮಾಡುವುದು ಆವಶ್ಯಕವಾಗಿದೆ
ಅ. ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರ ಬೆರಳುಗಳಿಂದ ತ್ರಾಸದಾಯಕ ಶಕ್ತಿಯು ಪ್ರಕ್ಷೇಪಿತ ವಾಗುತ್ತಿರುತ್ತದೆ. ಇಂತಹ ಬೆರಳುಗಳಿಂದ ಉಪಾಯ ಮಾಡಿದರೆ ಶರೀರದಲ್ಲಿಯೂ ತ್ರಾಸದಾಯಕ ಶಕ್ತಿಯು ಪ್ರಕ್ಷೇಪಿಸುತ್ತದೆ. ಇದರಿಂದಾಗಿ ನಾಮಜಪ ಮಾಡದೇ ಉಪಾಯ ಮಾಡಿದರೆ ತೊಂದರೆಗಳಲ್ಲಿ ಹೆಚ್ಚಳ ವಾಗುತ್ತದೆ. ಯಾರಾದರೊಬ್ಬನಿಗೆ ತೊಂದರೆಯಿಂದಾಗಿ ನಾಮಜಪ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಅವನು ತನ್ನ ಮೇಲೆ ಉಪಾಯ ಮಾಡಿಕೊಳ್ಳಬಾರದು. ಅವನು ಆಯುರ್ವೇದೀಯ ಉಪಚಾರ, ಖಾಲಿ ಪೆಟ್ಟಿಗೆಗಳ ಉಪಾಯದಂತಹ ಇತರ ಉಪಾಯಪದ್ಧತಿಗಳನ್ನು ಅವಲಂಬಿಸಬೇಕು. ಮಂದ ಅಥವಾ ಮಧ್ಯಮ ತೊಂದರೆಯಿರುವವರಿಗೆ ನಾಮಜಪ ಮಾಡಲು ಸಾಧ್ಯವಿರುತ್ತದೆ. ಆದ್ದರಿಂದ ಅವರು ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಲ್ಲರು.
ಆ. ಸದ್ಯದ ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ಪ್ರಕೋಪ ಎಷ್ಟು ಹೆಚ್ಚಾಗಿದೆಯೆಂದರೆ, ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಇದ್ದೇ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಾಮಜಪ ಮಾಡುತ್ತಾ ಉಪಾಯ ಮಾಡುವುದು ಆವಶ್ಯಕವಾಗಿದೆ.
೪ ಆ. ಪ್ರತ್ಯಕ್ಷ ಉಪಾಯ ಮಾಡುವಾಗ ಗಮನ ದಲ್ಲಿಡಬೇಕಾದ ಸೂಚನೆಗಳು
೪ ಆ ೧. ಉಪಾಯ ಮಾಡಲು ಆದಷ್ಟು ಬಲಗೈಯನ್ನು ಉಪಯೋಗಿಸಬೇಕು ! : ಪ್ರಾಣಶಕ್ತಿಯ ವಹನದಲ್ಲಿನ ಅಡಚಣೆಯನ್ನು ದೂರಗೊಳಿಸಲು ಸೂರ್ಯನಾಡಿಗೆ ಸಂಬಂಧಿಸಿದ ಬಲಗೈಯಿಂದ ಉಪಾಯ ಮಾಡುವುದು ಹೆಚ್ಚು ಯೋಗ್ಯವಾಗಿದೆ. ಹೆಚ್ಚಾಗಿ ಉಪಾಯವನ್ನು ಕೆಲವು ಗಂಟೆಗಳ ವರೆಗೆ ಮಾಡಬೇಕಾಗುವುದರಿಂದ ಕೈಗೆ ನೋವಾಗುತ್ತದೆ. ಆಗ ಇನ್ನೊಂದು ಕೈಯಿಂದ ಉಪಾಯ ಮಾಡಬಹುದು.
೪ ಆ ೨. ಅಡಚಣೆಗಳ ಎರಡು ಬೇರೆ ಬೇರೆ ಸ್ಥಾನಗಳು ಸಿಕ್ಕಿದ್ದರೆ, ಒಂದು ಕೈಯಿಂದ ಒಂದು ಅಡಚಣೆಯ ಸ್ಥಾನದಲ್ಲಿ ಮತ್ತು ಇನ್ನೊಂದು ಕೈಯಿಂದ ಇನ್ನೊಂದು ಅಡಚಣೆಯ ಸ್ಥಾನದಲ್ಲಿ ಉಪಾಯ ಮಾಡಬೇಕು ಮತ್ತು ಒಂದೇ ಸ್ಥಾನ ದೊರಕಿದರೆ, ಒಂದು ಕೈಯಿಂದ ಅಡಚಣೆಯ ಸ್ಥಾನದಲ್ಲಿ ಉಪಾಯ ಮಾಡಬೇಕು ಮತ್ತು ಇನ್ನೊಂದು ಕೈಯಿಂದ ಮುದ್ರೆಯನ್ನು ಮಾಡಬೇಕು!
೪ ಆ ೩. ಕುಂಡಲಿನಿಚಕ್ರದ ಸ್ಥಾನದಲ್ಲಿ ಮತ್ತು ಶರೀರದ ವಿವಿಧ ಭಾಗಗಳಲ್ಲಿ ಅಡಚಣೆಗಳಿದ್ದರೆ ಹೆಚ್ಚೆಚ್ಚು ಅಡಚಣೆಗಳಿರುವ ಎರಡೂ ಸ್ಥಾನಗಳಲ್ಲಿ ಉಪಾಯ ಮಾಡಬೇಕು.
೪ ಆ ೪. ಉಪಾಯ ಮಾಡುವಾಗ ಆಗಾಗ ‘ಅಡಚಣೆಯ ಹೊಸ ಸ್ಥಾನ ಎಲ್ಲಿದೆ ? ಎಂದು ಹುಡುಕಿ, ಅದಕ್ಕನುಸಾರ ಉಪಾಯ ಮಾಡಬೇಕು ! : ಪ್ರಯೋಗ ಮಾಡಿ ನ್ಯಾಸದ ಸ್ಥಾನವನ್ನು ಹುಡುಕಿದ ನಂತರ ಉಪಾಯ ಮಾಡುವಾಗ ಪ್ರತಿ ೨೦ ರಿಂದ ೪೦ ನಿಮಿಷಗಳ ನಂತರ ‘ಅಡಚಣೆಯ ಹೊಸ ಸ್ಥಾನ ಎಲ್ಲಿದೆ ? ಎಂದು ಹುಡುಕಬೇಕು ಮತ್ತು ಅದಕ್ಕನುಸಾರ ಉಪಾಯ ಮಾಡಬೇಕು; ಏಕೆಂದರೆ ಅಡಚಣೆಯ ಸ್ಥಾನ ಉಪಾಯಗಳಿಂದ ಬದಲಾಗುತ್ತದೆ. ಕೆಲವೊಮ್ಮೆ ಕೆಟ್ಟ ಶಕ್ತಿಗಳೂ ಅಡಚಣೆಯ ಸ್ಥಾನವನ್ನು ಬದಲಾಯಿಸುತ್ತವೆ.
೪ ಆ ೫. ‘ಪ್ರಯೋಗದ ಮೂಲಕ ನಿರ್ದಿಷ್ಟವಾಗಿ ಯಾವ ಮುದ್ರೆ ಅಥವಾ ನಾಮಜಪವನ್ನು ಮಾಡಬೇಕು ಎಂದು ನಿರ್ಧರಿಸಲು ಆಗದಿದ್ದಲ್ಲಿ ಗಮನದಲ್ಲಿಡಬೇಕಾದ ನಿಯಮ : ಪ್ರಯೋಗದಿಂದ ಮುದ್ರೆಯನ್ನು ಹುಡುಕುವಾಗ ಕೆಲವೊಮ್ಮೆ ಎರಡು ಮುದ್ರೆಗಳ ಸಮಯದಲ್ಲಿ ಒಂದೇ ರೀತಿ ಅರಿವಾಗುತ್ತದೆ. ಇಂತಹ ಸಮಯದಲ್ಲಿ ಆ ಎರಡು ಮುದ್ರೆಗಳನ್ನು ಪುನಃ ಮಾಡಿ ನೋಡಬೇಕು, ಆದರೂ ‘ನಿರ್ದಿಷ್ಟವಾಗಿ ಯಾವ ಮುದ್ರೆಯನ್ನು ಮಾಡಬೇಕು ಎಂದು ಗಮನಕ್ಕೆ ಬರದಿದ್ದರೆ ಪಂಚತತ್ತ್ವಗಳ ಪೈಕಿ ಮುಂದಿನ ಸ್ತರದ ಮುದ್ರೆಯನ್ನು ಮಾಡಬೇಕು. ಅಂಶ ‘೩ ಆ. ಉಚ್ಚ ದೇವತೆಗಳ ಮತ್ತು ನಿರ್ಗುಣಕ್ಕೆ ಸಂಬಂಧಿಸಿದ ನಾಮಜಪ ಮತ್ತು ಮುದ್ರೆ’ ಇದರಲ್ಲಿ ನೀಡಿದಂತೆ ನಾಮಜಪದ ಸಂದರ್ಭದಲ್ಲಿನ ಪ್ರಯೋಗ ಮಾಡುವಾಗಲೂ ಮೇಲಿನ ನಿಯಮವನ್ನು ಗಮನದಲ್ಲಿಡಬೇಕು.
೪ ಆ ೬. ಅಡಚಣೆಗಳ ಜಾಗದಲ್ಲಿ ಶರೀರದಿಂದ ೧-೨ ಸೆಂ.ಮೀ. ಅಂತರದಿಂದ ಉಪಾಯ ಮಾಡಬೇಕು ! : ಅಡಚಣೆಗಳ ಸ್ಥಾನದಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ಉಪಾಯ ಮಾಡುವಾಗ ಶರೀರದಿಂದ ೧-೨ ಸೆಂ.ಮೀ. ಅಂತರದಿಂದ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ಯಬೇಕು, ಹಾಗೆಯೇ ಅಡಚಣೆ ಸ್ಥಾನದಲ್ಲಿ ನ್ಯಾಸವನ್ನು ಮಾಡುವಾಗ ಶರೀರದಿಂದ ೧-೨ ಸೆಂ.ಮೀ. ಅಂತರದಿಂದ ನ್ಯಾಸವನ್ನು ಮಾಡಬೇಕು. ವಯೋವೃದ್ಧರು ಮತ್ತು ಅನಾರೋಗ್ಯವಿರುವ ವ್ಯಕ್ತಿಗಳಿಗೆ ನ್ಯಾಸ ಮಾಡಲು ಆಧಾರದ ಆವಶ್ಯಕತೆಯೆನಿಸಿದರೆ ಅವರು ಶರೀರವನ್ನು ಸ್ಪರ್ಶಿಸಿ ನ್ಯಾಸ ಮಾಡಬೇಕು.
೪ ಇ. ದೇವತೆಯ ನಾಮಜಪಕ್ಕೆ ‘ಓಂ ಅಥವಾ ‘ಮಹಾ ಸೇರಿಸುವುದು
೪ ಇ ೧ . ಉಪಾಯದ ಸಮಯದಲ್ಲಿ ನಾಮಜಪಕ್ಕೆ ‘ಓಂ ಸೇರಿಸುವುದರ ಸಂದರ್ಭದಲ್ಲಿನ ನಿಯಮಗಳು:
೪ ಇ ೧ ಅ. ಸಾಮಾನ್ಯ ವ್ಯಕ್ತಿಗಾಗಿ
ಅ. ಪ್ರಾಣಶಕ್ತಿವಹನ ವ್ಯೂಹದಲ್ಲಿ ನಿರ್ಮಾಣವಾದ ಅಡಚಣೆಯು ಕಡಿಮೆ ಪ್ರಮಾಣದಲ್ಲಿದ್ದರೆ, ‘ಶ್ರೀ ಸೇರಿಸಿದ ಪ್ರಚಲಿತ ನಾಮಜಪ ಮಾಡಬೇಕು. (ಪ್ರಚಲಿತ ನಾಮಜಪದ ಆರಂಭದಲ್ಲಿ ‘ಶ್ರೀ ಇರದಿದ್ದರೆ, ಉದಾ. ‘ಓಂ ನಮೋ ಭಗವತೇ ವಾಸುದೇವಾಯ |, ಆ ನಾಮಜಪವನ್ನು ಹಾಗೆಯೇ ಮಾಡಬೇಕು.)
ಆ. ಪ್ರಾಣಶಕ್ತಿವಹನ ವ್ಯೂಹದಲ್ಲಿ ನಿರ್ಮಾಣವಾದ ಅಡಚಣೆಯು ಮಧ್ಯಮ ಪ್ರಮಾಣದಲ್ಲಿದ್ದರೆ, ಪ್ರಚಲಿತ ನಾಮಜಪಕ್ಕೆ ಆರಂಭದಲ್ಲಿ ಒಂದು ‘ಓಂ ಮತ್ತು ಕೊನೆಯಲ್ಲಿ ಒಂದು ‘ಓಂ ಸೇರಿಸಬೇಕು.
ಇ. ಪ್ರಾಣಶಕ್ತಿವಹನ ವ್ಯೂಹದಲ್ಲಿ ನಿರ್ಮಾಣವಾದ ಅಡಚಣೆಯು ತೀವ್ರ ಪ್ರಮಾಣದಲ್ಲಿದ್ದರೆ, ನಾಮ ಜಪದ ಆರಂಭದಲ್ಲಿ ಎರಡು ‘ಓಂ ಗಳನ್ನು ಮತ್ತು ಕೊನೆಯಲ್ಲಿ ಎರಡು ‘ಓಂ ಗಳನ್ನು ಸೇರಿಸಬೇಕು.
೪ ಇ ೧ ಆ. ಸಾಧನೆಯನ್ನು ಮಾಡುವ ವ್ಯಕ್ತಿಗಾಗಿ : ಸದ್ಯ ಆಪತ್ಕಾಲದ ತೀವ್ರತೆಯು ಹೆಚ್ಚಾಗಿರುವುದರಿಂದ ಸಾಧನೆಯನ್ನು ಮಾಡದ ವ್ಯಕ್ತಿಯ ತುಲನೆಯಲ್ಲಿ ಸಾಧನೆಯನ್ನು ಮಾಡುವ ವ್ಯಕ್ತಿಯ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳಾಗುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದುದರಿಂದ ಯಾವುದೇ ಸಾಧನಾಮಾರ್ಗದಿಂದ ಸಾಧನೆಯನ್ನು ಮಾಡುವವರು ಮತ್ತು ಯಾವುದೇ ಸಂಪ್ರದಾಯದ ಸಾಧಕರು ನಾಮಜಪದ ಪರಿಣಾಮಕಾರಕತೆಯು ಹೆಚ್ಚಾಗುವ ದೃಷ್ಟಿಯಿಂದ ನಾಮಜಪಕ್ಕೆ ಆರಂಭದಲ್ಲಿ ಎರಡು ‘ಓಂ ಮತ್ತು ಕೊನೆಯಲ್ಲಿ ಎರಡು ‘ಓಂ ಸೇರಿಸಿ ಉಪಾಯ ಮಾಡಬೇಕು.
೪ ಇ ೨. ದೇವತೆಯ ನಾಮಜಪಕ್ಕೆ ‘ಮಹಾ ಸೇರಿಸುವುದು : ಓಂ ನಂತೆಯೇ ಕೆಲವು ಪ್ರಚಲಿತ ನಾಮಜಪಗಳ (ಉದಾ. ಗಣಪತಿ, ಲಕ್ಷ್ಮೀ, ವಿಷ್ಣು, ರುದ್ರ) ಆರಂಭದಲ್ಲಿ ‘ಮಹಾ ಶಬ್ದವನ್ನು ಸೇರಿಸುವುದು ಉಪಯುಕ್ತವಾಗಿದೆ. ಇದರಿಂದ ಹೆಚ್ಚು ಪ್ರಮಾಣದಲ್ಲಿ ನಿರ್ಗುಣ ತತ್ತ್ವದ ಲಾಭವಾಗಿ ತೊಂದರೆಯು ಬೇಗನೇ ಕಡಿಮೆಯಾಗಲು ಸಹಾಯವಾಗುತ್ತದೆ.
೪ ಈ. ಇತರ ಸೂಚನೆಗಳು
೧. ಉಪಾಯ ಮಾಡುವವರು ತೊಂದರೆಗಳು ದೂರವಾಗುವವರೆಗೆ ಪ್ರತಿದಿನ ಕನಿಷ್ಠ ೨ ಗಂಟೆ ಉಪಾಯ ಮಾಡಬೇಕು ! : ಕೆಲವೊಮ್ಮೆ ೨ ಗಂಟೆ ಉಪಾಯ ಪೂರ್ಣವಾಗುವ ಮೊದಲೇ ವ್ಯಕ್ತಿಯ ತೊಂದರೆಗಳು ದೂರವಾಗಬಹುದು. ಹೀಗಾದಲ್ಲಿ ಉಪಾಯವನ್ನು ನಿಲ್ಲಿಸಬೇಕು.
೨. ಹುಡುಕಿದ ಉಪಾಯಗಳಿಂದ ೧ ಗಂಟೆಯಲ್ಲಿ ಸ್ವಲ್ಪ ಲಾಭವಾದರೆ ಅದೇ ಉಪಾಯವನ್ನು ಮುಂದುವರಿಸಬೇಕು.
೩. ಹುಡುಕಿದ ಉಪಾಯಗಳಿಂದ ೧ ಗಂಟೆಯಲ್ಲಿ ಏನೂ ಲಾಭವಾಗದಿದ್ದರೆ ಪುನಃ ಉಪಾಯ ಹುಡುಕಬೇಕು ಮತ್ತು ಅದನ್ನು ಮಾಡಬೇಕು.
೪ ಉ. ಉಪಾಯ ಪೂರ್ಣವಾದ ನಂತರ ಉಪಾಸ್ಯದೇವತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
೪ ಊ. ಉಪಾಯಗಳ ಜೊತೆಗೆ ಇತರ ಔಷಧೋಪಚಾರಗಳನ್ನೂ ಮುಂದುವರಿಸಬೇಕು ! : ಉಪಾಯಗಳ ಜೊತೆಗೆ ಖಾಲಿ ಪೆಟ್ಟಿಗೆಗಳ ಉಪಾಯ, ಔಷಧಗಳು, ಆಯಸ್ಕಾಂತ ಚಿಕಿತ್ಸೆ ಇವುಗಳಂತಹ ಉಪಾಯಗಳನ್ನು ಸಹ ಮುಂದುವರಿಸುವುದು ಆವಶ್ಯಕವಾಗಿದೆ.
೫. ಉಪಾಯಗಳನ್ನು ಯಾರು ಹುಡುಕಬಾರದು ?
ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರು ಸ್ವತಃ ಉಪಾಯಗಳನ್ನು ಹುಡುಕಬಾರದು, ಏಕೆಂದರೆ ‘ಕೆಟ್ಟ ಶಕ್ತಿಗಳು ತಪ್ಪು ಉತ್ತರ ಸಿಗುವಂತೆ ಮಾಡುತ್ತವೆ. ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರು ತಮ್ಮಲ್ಲಿ ಭಾವವಿದ್ದರೆ ಸ್ವತಃ ಉಪಾಯಗಳನ್ನು ಹುಡುಕಲು ಪ್ರಯತ್ನಿಸಬೇಕು ಮತ್ತು ಇತರರಿಂದ ಅದನ್ನು ಖಚಿತಪಡಿಸಿಕೊಳ್ಳಬೇಕು ಅಥವಾ ‘ಉಪಾಯಗಳಿಂದ ತಮ್ಮ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತಿದೆಯೇ ಎಂದು ಪರಿಶೀಲನೆ ಮಾಡಬೇಕು. ಉಪಾಯಗಳಿಂದ ಸಕಾರಾತ್ಮಕ ಪರಿಣಾಮವಾಗುತ್ತಿದ್ದಲ್ಲಿ ‘ಉಪಾಯಗಳು ಯೋಗ್ಯವಾಗಿವೆ ಎಂದು ತಿಳಿಯಬೇಕು ಮತ್ತು ಅವುಗಳನ್ನು ಮುಂದುವರಿಸಬೇಕು. (ಮುಕ್ತಾಯ)
ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೧
ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೨
(ಆಧಾರ : ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ)