ಚಾತುರ್ಮಾಸದ ಕಾಲದಲ್ಲಿ ಮಾಡಬೇಕಾದ ಸಾಧನೆಯ ಮಹತ್ವ

ಚಾತುರ್ಮಾಸದ ಕಾಲದಲ್ಲಿ ಮಾಡಬೇಕಾದ ಸಾಧನೆಯ ಮಹತ್ವ

ಸೌ. ಪ್ರಾಜಕ್ತಾ ಜೋಶಿ

೧. ಚಾತುರ್ಮಾಸ ಎಂದರೇನು ?

ಆಷಾಢ ಶುಕ್ಲ ಪಕ್ಷ ಏಕಾದಶಿ (ದೇವಶಯನಿ ಏಕಾದಶಿ)ಯಿಂದ ಕಾರ್ತಿಕ ಶುಕ್ಲ ಪಕ್ಷ ಏಕಾದಶಿ (ಪ್ರಬೋಧಿನಿ ಏಕಾದಶಿ) ಈ ನಾಲ್ಕು ತಿಂಗಳುಗಳನ್ನು ಚಾತುರ್ಮಾಸವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಶ್ರೀವಿಷ್ಣು ಶೇಷಶಯನದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ. ಮನುಷ್ಯನ ಒಂದು ವರ್ಷವೆಂದರೆ ದೇವರ ಒಂದು ಅಹೋರಾತ್ರಿಯಾಗಿದೆ. ಅಹೋರಾತ್ರಿ ಅಂದರೆ ಮನುಷ್ಯನ ಒಂದು ವರ್ಷದ ಮೊದಲ ಆರು ತಿಂಗಳು ಎಂದರೆ ದೇವರ ಒಂದು ದಿನ ಮತ್ತು ಮನುಷ್ಯನ ಇನ್ನುಳಿದ ಆರು ತಿಂಗಳು ಎಂದರೆ ದೇವರ ಒಂದು ರಾತ್ರಿಯಾಗಿದೆ; ಆದರೆ ದೇವತೆಗಳು ಚಾತುರ್ಮಾಸದಲ್ಲಿ ಕೇವಲ ನಾಲ್ಕು ತಿಂಗಳುಗಳಷ್ಟೇ ನಿದ್ರಿಸುತ್ತಾರೆ ಮತ್ತು ಒಂದು ತೃತೀಯಾಂಶ ರಾತ್ರಿ ಉಳಿದಿರುವಾಗಲೇ ಎಚ್ಚರಗೊಳ್ಳುತ್ತಾರೆ.


೨. ಚಾರ್ತುಮಾಸದ ಎರಡು ಮುಖ್ಯ ಉದ್ದೇಶಗಳು !

ಪರಮಾರ್ಥಕ್ಕಾಗಿ ಪೋಷಕವಾಗಿರುವ ಮತ್ತು ಈಶ್ವರನ ಗುಣವನ್ನು ಅಂಗೀಕರಿಸಲು ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ ಮುಂತಾದ ವಿಷಯಗಳನ್ನು ಮಾಡುವುದು. ಹಾಗೆಯೇ ಪ್ರಪಂಚ ಮತ್ತು ಪರಮಾರ್ಥಗಳಿಗೆ ಮಾರಕವಾಗಿರುವ ವಿಷಯಗಳನ್ನು ಅಂದರೆ ಷಡ್ರಿಪುಗಳನ್ನು ನಿಷೇಧಿಸುವುದು ಇದೇ ಚಾತುರ್ಮಾಸದ ಎರಡು ಮುಖ್ಯ ಉದ್ದೇಶಗಳಾಗಿವೆ.

೩. ಚಾತುರ್ಮಾಸದಲ್ಲಿ ವ್ರತಸ್ಥರಾಗಿದ್ದರೆ !

ಆರೋಗ್ಯದ ದೃಷ್ಟಿಯಿಂದ ಇರುವ ಮಹತ್ವಗಳು
ಚಾತುರ್ಮಾಸದಲ್ಲಿ ದೇವತೆಗಳು ಯೋಗನಿದ್ರೆಯಲ್ಲಿರುವುದರಿಂದ ವಾತಾವರಣದಲ್ಲಿ ರಜ-ತಮಗಳು ವೃದ್ಧಿಸುತ್ತದೆ. ಈ ಕಾರಣದಿಂದ ಸಾತ್ತ್ವಿಕತೆಯನ್ನು ವೃದ್ಧಿಸಲು ಚಾತುರ್ಮಾಸದಲ್ಲಿ ವ್ರತಸ್ಥರಾಗಿರಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಚಾತುರ್ಮಾಸದಲ್ಲಿ ಪಚನಶಕ್ತಿ ಮಂದವಾಗುವುದರಿಂದ ಈ ಕಾಲಾವಧಿಯಲ್ಲಿ ವ್ರತಸ್ಥರಾಗಿರುವುದರಿಂದ ಲಾಭವಾಗುತ್ತದೆ. ಏಕಭುಕ್ತ (ಒಂದು ವೇಳೆ ಊಟ ಮಾಡುವುದು), ದಿನವಿಡೀ ಉಪವಾಸ ಮಾಡುವುದು, ಸೂರ್ಯಾಸ್ತದ ಮೊದಲು ಊಟ ಮಾಡುವುದು, ವಿಶಿಷ್ಟ ದಿನದಂದು ವಿಶಿಷ್ಟ ಆಹಾರವನ್ನು ಸೇವಿಸುವುದು ಮುಂತಾದ ವಿಷಯಗಳು ಶಾರೀರಿಕ ದೃಷ್ಟಿಯಿಂದ ಲಾಭದಾಯಕವಾಗಿರುವುದರಿಂದ ಹಿಂದೂ ಸಂಸ್ಕೃತಿಯಲ್ಲಿ ಚಾತುರ್ಮಾಸದಲ್ಲಿ ವ್ರತಸ್ಥರಾಗಿರುವುದು ಉಪಯುಕ್ತವಾಗಿದೆ.

೪. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಚಾತುರ್ಮಾಸದ ಮಹತ್ವ !

ಈಶ್ವರಪ್ರಾಪ್ತಿಗಾಗಿ ಮನುಷ್ಯ ಜನ್ಮದ ಮಹತ್ವ ಅಧಿಕವಾಗಿದೆ. ಆಷಾಢ ಶುಕ್ಲ ಪಕ್ಷ ಏಕಾದಶಿಯಂದು ಸೂರ್ಯನು ಮಿಥುನ ರಾಶಿಯಲ್ಲಿರುತ್ತಾನೆ ಮತ್ತು ಕಾರ್ತಿಕ ಶುಕ್ಲ ಪಕ್ಷ ಏಕಾದಶಿಗೆ ಸೂರ್ಯನು ತುಲಾ ರಾಶಿಯಲ್ಲಿರುತ್ತಾನೆ. ಚಾತುರ್ಮಾಸದ ಕಾಲಾವಧಿಯಲ್ಲಿ ಮಿಥುನ, ಸಿಂಹ ಮತ್ತು ಕನ್ಯಾ ಈ ರಾಶಿಯ ರವಿಯು ಶುಭಕಾರಕನಾಗಿರುತ್ತಾನೆ. ತುಲಾ ರಾಶಿಯ ರವಿಯು ಅಶುಭವೆಂದು ಪರಿಗಣಿಸಲಾಗುತ್ತದೆ. ರವಿ ಗ್ರಹ ಆತ್ಮಕಾರಕನಾಗಿದ್ದಾನೆ. ಆತ್ಮೋದ್ಧಾರಕ್ಕಾಗಿ, ಅಂದರೆ ಆತ್ಮದ ಶುದ್ಧಿಗಾಗಿ ಈ ಕಾಲ ಪೂರಕವಾಗಿದೆ.

೫. ಚಾತುರ್ಮಾಸದಲ್ಲಿ ತೀರ್ಥಸ್ನಾನ ಮಾಡುವುದರ ಮಹತ್ವ !

ಚಾತುರ್ಮಾಸದಲ್ಲಿ ಶ್ರೀವಿಷ್ಣು ಕ್ಷೀರಸಾಗರದಲ್ಲಿ ಶಯನ ಮಾಡುತ್ತಾನೆ. ಇದರಿಂದ ತೀಥಸ್ನಾನಕ್ಕೆ ವಿಶೇಷ ಮಹತ್ವವಿದೆ. ತೀರ್ಥಸ್ನಾನ ಮಾಡುವುದರಿಂದ ಈಶ್ವರಿ ಶಕ್ತಿ ಮತ್ತು ಚೈತನ್ಯ ದೊರೆಯುತ್ತದೆ. ಯಾರಿಗೆ ತೀರ್ಥಸ್ನಾನ ಮಾಡಲು ಸಾಧ್ಯವಿಲ್ಲವೋ, ಅವರು ಸ್ನಾನದ ನೀರಿನಲ್ಲಿ ಬಿಲ್ವಪತ್ರೆಯನ್ನು ಹಾಕಿಕೊಂಡು ಕಡಿಮೆಪಕ್ಷ ೧೧ ಸಲ ಓಂ ನಮಃ ಶಿವಾಯ ಈ ನಾಮಜಪವನ್ನು ಮಾಡುತ್ತ ಸ್ನಾನ ಮಾಡಬೇಕು.

೬. ಚಾತುರ್ಮಾಸದಲ್ಲಿ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಯಿಂದ ಆಗುವ ತೊಂದರೆಗಳ ಪ್ರಮಾಣ ಕಡಿಮೆಯಾಗಲು ಸಾಧನೆಯನ್ನು ಹೆಚ್ಚಿಸುವುದರ ಮಹತ್ವ !

ಚಾತುರ್ಮಾಸದಲ್ಲಿ ಜೀವಸೃಷ್ಟಿಯ ಪಾಲಕನಾದ ಶ್ರೀವಿಷ್ಣು ಶಯನಿಸುತ್ತಿರುವುದರಿಂದ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಗಳ ತೊಂದರೆಗಳ ಪ್ರಮಾಣ ವೃದ್ಧಿಸುತ್ತದೆ. ಇದರಿಂದ ಸಾಧನೆಯನ್ನು ಮಾಡುವಾಗ ಈ ಕಾಲಾವಧಿಯಲ್ಲಿ ಅಧಿಕ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ನಿವಾರಿಸಲು ಚಾತುರ್ಮಾಸದಲ್ಲಿ ಅನೇಕ ವ್ರತವೈಕಲ್ಯಗಳನ್ನು ಮಾಡಲಾಗುತ್ತದೆ. ಇದರಿಂದ ಸಾಧನೆಯು ವೃದ್ಧಿಯಾಗಿ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಯಿಂದ ಆಗುವ ತೊಂದರೆಗಳ ಪ್ರಮಾಣ ಕಡಿಮೆಯಾಗುತ್ತದೆ.

ಉಪಾಯ

ಪ್ರತಿಕೂಲ ಪ್ರಸಂಗ ಮತ್ತು ಗ್ರಹಮಾನಗಳಿರುವಾಗ ಸಾಧನೆ ಹೆಚ್ಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಗುರು ಮತ್ತು ದೇವರನ್ನು ಅನನ್ಯಭಾವದಿಂದ ಶರಣಾಗಿ ಅವರ ಕುರಿತು ಶ್ರದ್ಧೆ ಹೆಚ್ಚಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ ಪ್ರತಿಕೂಲತೆಯ ತೊಂದರೆಯಾಗದೇ ಆನಂದ ಅನುಭವಿಸಬಹುದು. ಪರಾತ್ಪರ ಗುರುದೇವರ ಕೃಪೆಯಿಂದ ಅರಿವಿಗೆ ಬಂದ ಈ ಅಂಶಗಳನ್ನು ಬರೆಯಲು ಸಾಧ್ಯವಾಯಿತು. ಇದಕ್ಕಾಗಿ ಅವರ ಚರಣಗಳಿಗೆ ಭಾವಪೂರ್ಣ ನಮಸ್ಕಾರಗಳು !

– ಸೌ.ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಜ್ಯೋತಿಷ್ಯ ವಿಭಾಗ, ಸನಾತನ ಆಶ್ರಮ, ಗೋವಾ.

 

2 thoughts on “ಚಾತುರ್ಮಾಸದ ಕಾಲದಲ್ಲಿ ಮಾಡಬೇಕಾದ ಸಾಧನೆಯ ಮಹತ್ವ”

  1. Useful a d googi formation but when God is in yoganidra canwe worship is it reachy them please clarify Dattatreyays jaisriram

    Reply

Leave a Comment