ಈ ವರ್ಷ ೭.೮.೨೦೧೭ ರಂದು ರಕ್ಷಾಬಂಧನ ಮತ್ತು ಚಂದ್ರಗ್ರಹಣ ಒಂದೇ ದಿನ ಇರುವುದರಿಂದ ರಕ್ಷಾಬಂಧನವನ್ನು ಯಾವ ಸಮಯದಲ್ಲಿ ಮಾಡಬೇಕು ಎಂಬ ವಿಷಯದಲ್ಲಿ ಗೊಂದಲ ನಿರ್ಮಾಣವಾಗಿದೆ. ಇದರ ಬಗ್ಗೆ ಜನರು ವೇಧಕಾಲದಲ್ಲಿ, ಎಂದರೆ ರಾತ್ರಿ ೧೦ ಗಂಟೆಯವರೆಗೆ ರಕ್ಷಾಬಂಧನ ಆಚರಿಸಬಹುದೆಂದು ಪಂಚಾಂಗ ನಿರ್ಮಾಪಕರಾದ ಶ್ರೀ. ಮೋಹನ ದಾತೆಯವರು ಮಾಹಿತಿಯನ್ನು ನೀಡಿದ್ದಾರೆ.
೧. ಗ್ರಹಣ ಮತ್ತು ವೇಧಕಾಲ
೭.೮.೨೦೧೭ ರ ರಾತ್ರಿ ೧೦.೫೨ ರಿಂದ ೧೨.೪೯ ರ ವರೆಗೆ ಗ್ರಹಣದ ಪರ್ವಕಾಲ (ಪ್ರತ್ಯಕ್ಷ ಗ್ರಹಣಕಾಲ) ಇರುವುದು ಹಾಗೂ ಈ ಗ್ರಹಣದ ವೇಧಕಾಲ ಮಧ್ಯಾಹ್ನ ೧ ಗಂಟೆಯಿಂದ ಗ್ರಹಣ ಮೋಕ್ಷಕಾಲದ ವರೆಗೆ ಪಾಲಿಸಬೇಕು. ವೇಧಕಾಲದಲ್ಲಿ ಭೋಜನ ಮಾಡಬಾರದು. ಸ್ನಾನ, ದೇವರ ಪೂಜೆ, ನಿತ್ಯಕರ್ಮ, ಜಪ-ತಪ ಮತ್ತು ಶ್ರಾದ್ಧ ಮುಂತಾದವುಗಳನ್ನು ಮಾಡಬಹುದು. ಬಾಲಕರು, ರೋಗಿಗಳು, ನಿಶಕ್ತಿ ಇರುವವರು ಮತ್ತು ಗರ್ಭವತಿ ಸ್ತ್ರೀಯರು ಸಾಯಂಕಾಲ ೫ ರಿಂದ ಗ್ರಹಣದ ನಿಯಮಗಳನ್ನು ಪಾಲಿಸಬೇಕು.
೨. ಉಪವಾಸವಿದ್ದರೆ ಏನು ಮಾಡಬೇಕು ?
ಹುಣ್ಣಿಮೆ ಅಥವಾ ಶ್ರಾವಣ-ಸೋಮವಾರದ ವ್ರತದ ಉಪವಾಸವಿದ್ದರೆ, ಮಧ್ಯಾಹ್ನ ಒಂದು ಗಂಟೆಯ ಮೊದಲು ಫಲಹಾರ ಮಾಡಬೇಕು. ಸಾಯಂಕಾಲ ಸೋಮವಾರದ ನಿತ್ಯ ಪೂಜೆ ಮಾಡಿ ಉಪವಾಸ ಬಿಡುತ್ತೇನೆಂದು ಎಂದು ಪ್ರಾರ್ಥನೆ ಮಾಡಿ ಕೇವಲ ತೀರ್ಥವನ್ನು ಸ್ವೀಕರಿಸುವುದು ಒಳ್ಳೆಯದು, ಏಕೆಂದರೆ ವೇಧಕಾಲದಲ್ಲಿ ಭೋಜನ ಮಾಡುವುದು ನಿಷಿದ್ಧವಿದೆ.
೩. ರಕ್ಷಾಬಂಧನದ ಯೋಗ್ಯ ಸಮಯ
ವೇಧಕಾಲದಲ್ಲಿ ರಕ್ಷಾಬಂಧನ ಬಂದಿರುವುದರಿಂದ ರಾತ್ರಿ ೧೦ ಗಂಟೆಯವರೆಗೆ ರಕ್ಷಾಬಂಧನ (ರಾಖಿ ಕಟ್ಟುವುದು) ಮಾಡಬಹುದು. ಬೆಳಿಗ್ಗೆ ೭.೩೦ ರಿಂದ ೯.೦೦ ರ ವರೆಗೆ ರಾಹುಕಾಲ ಮತ್ತು ಅನಂತರ ಮುಂಜಾನೆಯಿಂದ ಬೆಳಗ್ಗಿನ ವರೆಗೆ ೧೧.೦೮ ನಿಮಿಷದ ವರೆಗೆ ವಿಷ್ಟೀಕರಣ (ಭದ್ರಾ) ಎಂಬ ಅಶುಭ ಕಾಲವಿದೆ. ಅದರಿಂದ ಬೆಳಿಗ್ಗೆ ೧೧.೦೮ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ (ವೇಧಕಾಲದ ಆರಂಭವಾಗುವ ಮೊದಲು) ರಕ್ಷಾಬಂಧನ ಆಚರಿಸಿದರೆ ಹೆಚ್ಚು ಲಾಭದಾಯಕವಾಗುವುದು.
೪. ಈ ಮೊದಲು ರಕ್ಷಾಬಂಧನದ ದಿನ ಇರುವ ಗ್ರಹಣ
ಈ ಮೊದಲು ಸೋಮವಾರ ೬.೮.೧೯೯೦ ಮತ್ತು ಶನಿವಾರ ೧೬.೮.೨೦೦೮ ರಂದು ಶ್ರಾವಣ ಹುಣ್ಣಿಮೆಯಂದು ಚಂದ್ರಗ್ರಹಣ ಬಂದಿತ್ತು ಎಂದು ಪಂಚಾಂಗ ನಿರ್ಮಾಪಕರಾದ ಶ್ರೀ. ದಾತೆಯವರು ಹೇಳಿದ್ದಾರೆ.
– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಜ್ಯೋತಿಷ್ಯ ವಿಭಾಗ, ಸನಾತನ ಆಶ್ರಮ, ರಾಮನಾಥಿ ಗೋವಾ.
( ಆಧಾರ : ಸನಾತನ ಪ್ರಭಾತ )