ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕೃಪಾಯೋಗ ಎಂಬ ಯೋಗಮಾರ್ಗದ ಜನಕ !
ಜಿಜ್ಞಾಸುಗಳು ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಕರ್ಮ, ಭಕ್ತಿ ಮತ್ತು ಜ್ಞಾನ ಈ ಯೋಗಮಾರ್ಗಗಳ ಸಂಗಮವಿರುವ ‘ಗುರುಕೃಪಾಯೋಗವನ್ನು ಹೇಳಿದರು. ‘ವ್ಯಕ್ತಿಗಳಷ್ಟು ಪ್ರಕೃತಿಗಳು, ಮತ್ತು ಅಷ್ಟೇ ಸಾಧನಾಮಾರ್ಗಗಳು ಎಂಬ ಸಿದ್ಧಾಂತಕ್ಕನುಸಾರ ಗುರುಕೃಪಾಯೋಗದಲ್ಲಿ ಸಾಧನೆಯನ್ನು ಕಲಿಸುವುದರಿಂದ ಸಾಧಕರಿಗೆ ಶೀಘ್ರ ಉನ್ನತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಾರ್ಚ್ ೨೦೧೭ ರ ವರೆಗೆ ಗುರುಕೃಪಾಯೋಗಾನುಸಾರ ಸಾಧನೆ ಮಾಡಿದ್ದರಿಂದ ೬೯ ಸಾಧಕರು ಸಂತಪದವಿಯಲ್ಲಿ ವಿರಾಜಮಾನರಾದರು ಮತ್ತು ೧೦೦೨ ಸಾಧಕರು ಶೇ. ೬೦ ಕ್ಕಿಂತಲೂ ಹೆಚ್ಚಿನ ಮಟ್ಟವನ್ನು ತಲುಪಿದ್ದು ಅವರ ಆಧ್ಯಾತ್ಮಿಕ ಪ್ರಯಾಣವೂ ಸಂತತ್ವದತ್ತ ಸಾಗುತ್ತಿದೆ. ಈ ಸಾಧನಾಮಾರ್ಗವನ್ನು ವಿದೇಶದ ಸಾಧಕರೂ ಆಚರಣೆಯಲ್ಲಿ ತಂದು ತಮ್ಮ ಜೀವನವನ್ನು ಉದ್ಧರಿಸಿಕೊಳ್ಳುತ್ತಿದ್ದಾರೆ.
(ಇದರ ಸವಿಸ್ತಾರ ಮಾಹಿತಿಯನ್ನು ಸನಾತನ ನಿರ್ಮಿತ ‘ಗುರುಕೃಪಾಯೋಗಾನುಸಾರ ಸಾಧನೆ ಎಂಬ ಗ್ರಂಥದಲ್ಲಿ ಕೊಡಲಾಗಿದೆ.)
ಸಾಧಕರ ಸಾಧನೆಯ ಕಡೆಗೆ ವ್ಯಕ್ತಿಗತ ಗಮನವಿಡಲು
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವರದಿ ನೀಡುವ ಪದ್ಧತಿಯ ನಿರ್ಮಿತಿ!
ಪರಾತ್ಪರ ಗುರು ಆಠವಲೆಯವರು ಸಾಧಕರ ಆಧ್ಯಾತ್ಮಿಕ ಉನ್ನತಿಯ ಕಡೆಗೆ ವ್ಯಕ್ತಿಗತ ಗಮನವಿಡಲು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಪದ್ಧತಿಯನ್ನು ವಿಕಸಿತಗೊಳಿಸಿದ್ದಾರೆ. ವ್ಯಷ್ಟಿ ಸಾಧನೆಯ ವರದಿ ಕೊಡುವ ಪದ್ಧತಿಯಿಂದ ಸಾಧಕರು ತಮ್ಮ ತಪ್ಪುಗಳನ್ನು ಮತ್ತು ತಮ್ಮ ಸ್ವಭಾವದೋಷಗಳನ್ನು ಪ್ರಾಮಾಣಿಕವಾಗಿ ಮಂಡಿಸುವಷ್ಟು ನಿರ್ಮಲರಾದರು ಮತ್ತು ಸಮಷ್ಟಿ ಸಾಧನೆಯ ವರದಿಯನ್ನು ಪಡೆಯುವ ಪದ್ಧತಿಯಿಂದ ಸಮಾಜದೊಂದಿಗೆ ಆತ್ಮೀಯತೆ ಹೊಂದುವಲ್ಲಿ ತಮ್ಮ ಕೊರತೆಗಳು ತಿಳಿದವು, ಹಾಗೆಯೇ ವ್ಯಷ್ಟಿ ಮಟ್ಟದ ಗೋಪಿಭಾವ (ಟಿಪ್ಪಣಿ) ಇರುವ ಸಾಧಕಿಯರಲ್ಲಿ ಸಮಷ್ಟಿ ಭಾವ ನಿರ್ಮಾಣವಾಗಿ ಅವರು ಯುವ ವಯಸ್ಸಿನಲ್ಲಿಯೇ ಅನೇಕ ಜಿಲ್ಲೆಗಳ ಅಧ್ಯಾತ್ಮಪ್ರಸಾರದ ಜವಾಬ್ದಾರಿಯನ್ನು ಸಂಭಾಳಿಸತೊಡಗಿದ್ದಾರೆ.
(ಟಿಪ್ಪಣಿ – ಗೋಪಿಭಾವವೆಂದರೆ ಜೀವನದಲ್ಲಿ ಎಲ್ಲವೂ ಭಗವಾನ್ ಶ್ರೀಕೃಷ್ಣನೇ ಆಗಿದ್ದು ಸತತವಾಗಿ ಅವನ ಅನುಸಂಧಾನದಲ್ಲಿರುವುದು. ಈ ಬಗೆಗಿನ ಮಾಹಿತಿಯನ್ನು ಸನಾತನ ನಿರ್ಮಿತ ‘ಗೋಪಿಭಾವ ಎಂಬ ಗ್ರಂಥಮಾಲಿಕೆಯಲ್ಲಿ ಕೊಡಲಾಗಿದೆ.)
ಗುರುಕುಲಕ್ಕೆ ಸಮನಾದ ಆಶ್ರಮಗಳ ನಿರ್ಮಿತಿ !
ಸಾಧಕರಿಗೆ ಪೂರ್ಣಾವಧಿ ಸಾಧನೆಗೆ ಅನುಕೂಲವಾಗುವ ವಾತಾವರಣ ಲಭ್ಯವಾಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಗುರುಕುಲಗಳಂತಹ ಆಶ್ರಮಗಳನ್ನು ನಿರ್ಮಿಸಿದ್ದಾರೆ. ಅವರ ಪ್ರೇರಣೆಯಿಂದ ರಾಮನಾಥಿ (ಗೋವಾ), ದೇವದ್ (ಮುಂಬೈ), ಮೀರಜ್ (ಸಾಂಗ್ಲಿ), ವಾರಾಣಸಿ ಮುಂತಾದ ಅನೇಕ ಕಡೆಗಳಲ್ಲಿರುವ ಆಶ್ರಮಗಳಲ್ಲಿ ಸುಮಾರು ೮೦೦ ಸಾಧಕರು ಪೂರ್ಣಾವಧಿ ಸಾಧನೆಯನ್ನು ಮಾಡುತ್ತಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಿಂದ ಆಗಿರುವ ಸಾಧಕರ ಆಧ್ಯಾತ್ಮಿಕ ಉನ್ನತಿ !
೧. ‘ಯಾವುದಾದರೊಂದು ವಸ್ತು, ಘಟನೆ ಅಥವಾ ಕಾಲದ ಸಂದರ್ಭದಲ್ಲಿ ಸೂಕ್ಷ್ಮದಲ್ಲಿ ಯಾವ ಪ್ರಕ್ರಿಯೆ ಘಟಿಸಿತು ಎಂಬುದರ ಬಗ್ಗೆ ‘ಸೂಕ್ಷ್ಮ ಪರೀಕ್ಷಣೆ (ಟಿಪ್ಪಣಿ) ಮಾಡಲು ಸಾಧ್ಯವಾಗುವುದು.
೨. ಯಾವುದಾದರೊಂದು ವಿಷಯದ ಬಗ್ಗೆ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿರದ ಜ್ಞಾನವು ಸೂಕ್ಷ್ಮದಲ್ಲಿ (ದೃಶ್ಯ ಅಥವಾ ವಿಚಾರ ಸ್ವರೂಪದಲ್ಲಿ) ಪ್ರಾಪ್ತವಾಗುವುದು
೩. ಇತರರ ಆಧ್ಯಾತ್ಮಿಕ ಮಟ್ಟವನ್ನು ಗುರುತಿಸಲು ಸಾಧ್ಯವಾಗುವುದು
೪. ಪಂಚಮಹಾಭೂತಗಳ ಸ್ಥೂಲ ಮತ್ತು ಸೂಕ್ಷ್ಮ ಒಳ್ಳೆಯ ಮತ್ತು ಕೆಟ್ಟ ಲಕ್ಷಣಗಳನ್ನು ಹೇಳಲು ಸಾಧ್ಯವಾಗುವುದು
೫. ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ಪರಿಣಾಮ ಮತ್ತು ಪ್ರಕಟೀಕರಣವನ್ನು ಗುರುತಿಸುವುದು
೬. ಕೆಟ್ಟ ಶಕ್ತಿಗಳ ಪ್ರಕಟೀಕರಣಕ್ಕೆ ಉಪಾಯ ಹೇಳಲು ಸಾಧ್ಯವಾಗುವುದು
(ಟಿಪ್ಪಣಿ – ಸೂಕ್ಷ್ಮ ಪರೀಕ್ಷೆ : ಯಾವುದಾದರೊಂದು ಘಟನೆ ಹೇಗೆ ಘಟಿಸಿತು ಎಂಬುದರ ಬಗ್ಗೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಬಳಕೆ ಮಾಡದೆ ದೊರೆತ ಮಾಹಿತಿ.)
ಅಧ್ಯಾತ್ಮದ ಅಧಿಕಾರಿಯಾಗಿದ್ದರಿಂದ
ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅನುಭೂತಿಗಳು ಬರುವುದು
‘ಎಲ್ಲಿ ದಿವ್ಯತ್ವ ಇರುತ್ತದೆಯೋ, ಅಲ್ಲಿ ಅನುಭವವಿರುತ್ತದೆ ಎಂಬ ಸಿದ್ಧಾಂತದಂತೆ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಅವರಲ್ಲಿರುವ ದೇವತ್ವದ ಅನುಭವ ನೀಡುತ್ತವೆ. ಅವರ ಮಾರ್ಗದರ್ಶನದಡಿ ಸಾಧನೆ ಮಾಡುವ ಸಾಧಕರಿಗೆ ಮಾತ್ರವಲ್ಲ, ವಿವಿಧ ಸಂಪ್ರದಾಯದವರಿಗೆ, ಹಿಂದುತ್ವವಾದಿಗಳಿಗೆ ಮತ್ತು ವಿವಿಧ ಸಾಧನಾಮಾರ್ಗಗಳಿಗನುಸಾರ ಸಾಧನೆ ಮಾಡುವ ಸಂತರಿಗೂ ಅವರ ಬಗ್ಗೆ ಅನುಭೂತಿಗಳು ಬರುತ್ತವೆ.
(ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ ಅನುಭೂತಿಗಳನ್ನು ಸನಾತನ ನಿರ್ಮಿತ ‘ಸಾಧಕರ ಅನುಭೂತಿಗಳು – ಭಾಗ ೧ ಮತ್ತು ‘ಸಾಧಕರ ಅನುಭೂತಿಗಳು – ಭಾಗ ೨ ಎಂಬ ಗ್ರಂಥಗಳಲ್ಲಿ ಕೊಡಲಾಗಿದೆ.)
ಜ್ಞಾನಶಕ್ತಿಯ ಮೂಲಕ ನಡೆಯುತ್ತಿರುವ ಕಾರ್ಯ
ಯಾವುದೇ ಕಾರ್ಯವನ್ನು ಮಾಡಲು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಇವುಗಳ ಪೈಕಿ ಯಾವುದಾದರೂ ಒಂದರ ಆವಶ್ಯಕತೆಯಿರುತ್ತದೆ. ಇವುಗಳಲ್ಲಿನ ಜ್ಞಾನಶಕ್ತಿಯ ಮೂಲಕ ಮಾಡಿದ ಕಾರ್ಯವು ಕ್ರಿಯಾಶಕ್ತಿಗೆ ದಿಶೆ ಮತ್ತು ಇಚ್ಛಾಶಕ್ತಿಗೆ ಪ್ರೇರಣೆ ನೀಡುವುದರಿಂದ ಅದು ಶ್ರೇಷ್ಠವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯವು ಜ್ಞಾನಶಕ್ತಿಯ ಆಧಾರದಲ್ಲಿ ನಡೆಯುತ್ತಿದೆ. ಅದರ ಸಂಕ್ಷಿಪ್ತ ಸ್ವರೂಪವನ್ನು ಮುಂದೆ ಕೊಡಲಾಗಿದೆ.
ವರ್ಷ | ಜ್ಞಾನಶಕ್ತಿಯ ಕಾರ್ಯ | ಅಪೇಕ್ಷಿತ ಪರಿಣಾಮ | ಪ್ರಮಾಣ (ಶೇ.) |
೧೯೯೦ ರಿಂದ ಇಂದಿನವರೆಗೆ | ಸಾಧಕರಿಗೆ ಸಾಧನೆಯ ಬಗ್ಗೆ ದೃಷ್ಟಿಕೋನ ಕೊಡುವುದು | ೧೫ ಸಾವಿರಕ್ಕೂ ಹೆಚ್ಚು ಸಾಧಕರು ತನು-ಮನ-ಧನವನ್ನು ತ್ಯಾಗ ಮಾಡಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುತ್ತಿದ್ದಾರೆ. ಈ ಸಾಧಕರ ಮಾಧ್ಯಮದಿಂದ ಮುಂದೆ ಅನೇಕರಿಗೆ ಸಾಧನೆಯ ಬಗ್ಗೆ ಯೋಗ್ಯ ದೃಷ್ಟಿಕೋನ ಸಿಗುವುದು. | ೩೦ |
೧೯೯೪ ರಿಂದ ಇಂದಿನವರೆಗ | ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಸುವ ಗ್ರಂಥಗಳ ಸಂಕಲನ | ಸಾವಿರಾರು ವರ್ಷಗಳ ಕಾಲ ಈ ಗ್ರಂಥಗಳು ಮನುಕುಲಕ್ಕೆ ಅಧ್ಯಾತ್ಮ ಮತ್ತು ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವವು. | ೫೦ |
೧೯೯೮ ರಿಂದ ಇಂದಿನವರೆಗೆ | ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕಾರ್ಯಕ್ಕಾಗಿ ವಿಚಾರ ಮತ್ತು ದಿಶೆ ನೀಡುವುದು | ೨೦೨೩ರ ವರೆಗೆ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು | ೧೦ |
೨೦೧೩ ರಿಂದ ಇಂದಿನವರೆಗೆ | ಮುಂಬರುವ ಭೀಕರ ಕಾಲವನ್ನು ಎದುರಿಸುವ ಸಿದ್ಧತೆಯಿರಲು ದಿಶಾದರ್ಶನ ಮಾಡುವುದು | ೨೦೧೮ ರಿಂದ ೨೦೨೩ ರ ಕಾಲದಲ್ಲಿ ಆಗಲಿರುವ ಮಹಾಯುದ್ಧ ಮತ್ತು ನೈಸರ್ಗಿಕ ಆಪತ್ತುಗಳಿಂದ ಸತ್ತ್ವಗುಣಿ ಜನರ ರಕ್ಷಣೆಯಾಗುವುದು. | ೧೦ |
ಒಟ್ಟು | ೧೦೦ |