ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತಿನ ಸಂಕಲನ
ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮಶಾಸ್ತ್ರ, ದೇವತೆಗಳ ಉಪಾಸನೆ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಧ್ಯಾತ್ಮಿಕ ಉಪಾಯಗಳು, ಆಪತ್ಕಾಲೀನ ಉಪಚಾರ, ಸಮ್ಮೋಹನ ಉಪಚಾರ ಮುಂತಾದ ವಿವಿಧ ವಿಷಯಗಳ ಗ್ರಂಥಸಂಪತ್ತನ್ನು ಸಂಕಲನ ಮಾಡಿದ್ದಾರೆ. ಅವರು ಜನವರಿ ೨೦೧೭ ರ ವರೆಗೆ ಸಂಕಲನ ಮಾಡಿದ ೨೯೬ ಗ್ರಂಥಗಳು ಭಾರತದ ಕನ್ನಡ, ಹಿಂದಿ, ಆಂಗ್ಲ, ಮರಾಠಿ, ತೆಲುಗು, ತಮಿಳು, ಮಲಯಾಳಮ್, ಗುಜರಾತಿ, ಗುರುಮುಖಿ, ಒಡಿಯಾ, ಬಂಗಾಲಿ, ಅಸ್ಸಾಮಿ ಈ ಭಾಷೆಗಳಲ್ಲಿ ಮತ್ತು ವಿದೇಶದ ನೇಪಾಳಿ, ಜರ್ಮನ್ ಮತ್ತು ಸರ್ಬಿಯನ್ ಈ ೧೫ ಭಾಷೆಗಳಲ್ಲಿ ೬೭ ಲಕ್ಷದ ೪೦ ಸಾವಿರ ಪ್ರತಿಗಳು ಪ್ರಕಾಶಿತಗೊಂಡಿವೆ. ಈಗಲೂ ಸುಮಾರು ೪,೫೦೦ ಗ್ರಂಥಗಳು ಪ್ರಕಾಶಿತವಾಗುವಷ್ಟು ಜ್ಞಾನ ಅವರಲ್ಲಿ ಸಂಗ್ರಹವಾಗಿದೆ. ಇದಕ್ಕಾಗಿ ಅವರು ಎಲ್ಲ ವಿಷಯಗಳಿಗೆ ಅಂದಾಜು ೧೬,೦೦೦ ಸಂಕೇತಾಂಕಗಳನ್ನು ಹಾಕಿ ವಿಂಗಡಿಸಿ ಸಂಗ್ರಹಿಸಿಟ್ಟಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರ ಗ್ರಂಥಗಳ ವೈಶಿಷ್ಟ್ಯ
ಅ. ಅಧ್ಯಾತ್ಮದ ವಿವಿಧ ಅಂಗಗಳ ಕಾರ್ಯಕಾರಣಭಾವ, ಹಾಗೆಯೇ ಅಧ್ಯಾತ್ಮದಲ್ಲಿನ ಪ್ರತಿಯೊಂದು ಕೃತಿಯ ‘ಏಕೆ ಮತ್ತು ಹೇಗೆ ಇವುಗಳ ಶಾಸ್ತ್ರೀಯ ಉತ್ತರಗಳು !
ಆ. ವಿಜ್ಞಾನಯುಗದ ವಾಚಕರಿಗೆ ಅರ್ಥವಾಗುವಂತಹ ಆಧುನಿಕ ವೈಜ್ಞಾನಿಕ ಭಾಷೆಯ (ಉದಾ. ಕೋಷ್ಟಕ, ಶೇಕಡಾವಾರು ಇತ್ಯಾದಿ) ಜ್ಞಾನ !
ಇ. ಕೇವಲ ತಾತ್ತ್ವಿಕ ವಿವೇಚನೆ ಮಾತ್ರವಲ್ಲದೆ ಕಾಲಾನುಸಾರ ಸಾಧನೆಯನ್ನು ಕೃತಿಯಲ್ಲಿ ತರಲು ಮಾರ್ಗದರ್ಶನ
ಈ. ಧಾರ್ಮಿಕ ಕೃತಿ ಮತ್ತು ಸಾಧನೆಯಿಂದ ವ್ಯಕ್ತಿ, ವಸ್ತು, ವಾಸ್ತು ಮತ್ತು ವಾತಾವರಣದ ಮೇಲಾಗುವ ಒಳ್ಳೆಯ-ಕೆಟ್ಟ ಪರಿಣಾಮಗಳ ಸಂದರ್ಭದಲ್ಲಿನ ಸೂಕ್ಷ್ಮ ಸ್ತರದ ಪ್ರಕ್ರಿಯೆಯನ್ನು ತೋರಿಸುವ ಚಿತ್ರಗಳು ಮತ್ತು ಬರಹಗಳು, ಹಾಗೆಯೇ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಪ್ರಯೋಗಗಳ ಬರಹಗಳ ಅಂತರ್ಭೂತ !
ಧ್ವನಿಮುದ್ರಿಕೆ (ಆಡಿಯೋ ಸಿಡಿ) ಮತ್ತು ಧ್ವನಿಚಿತ್ರಮುದ್ರಿಕೆ (ವಿಸಿಡಿ) ಗಳ ನಿರ್ಮಿತಿ !
ದೂರದರ್ಶನಗಳಿಗಾಗಿ ‘ಧರ್ಮಸತ್ಸಂಗ ಮಾಲಿಕೆಗಳ ಧ್ವನಿಚಿತ್ರಮುದ್ರಿಕೆಗಳು (ವಿಸಿಡಿ)
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಡಿಯಲ್ಲಿ ದೂರದರ್ಶನಕ್ಕಾಗಿ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ (ಒಟ್ಟು ೧೬೫ ಭಾಗಗಳು) ಮತ್ತು ‘ಧಾರ್ಮಿಕ ಕೃತಿಗಳ ಶಾಸ್ತ್ರ’ (ಒಟ್ಟು ೨೦೨ ಭಾಗಗಳು) ಈ ಧರ್ಮಸತ್ಸಂಗ ಮಾಲಿಕೆಯನ್ನು ತಯಾರಿಸಲಾಯಿತು. ಈ ಧರ್ಮಸತ್ಸಂಗಗಳ ಮಾಲಿಕೆಗಳು ೩ ರಾಷ್ಟ್ರೀಯ ದೂರದರ್ಶನವಾಹಿನಿಗಳಲ್ಲಿ ಮತ್ತು ೧೦೦ ಕ್ಕೂ ಅಧಿಕ ಸ್ಥಳೀಯ ದೂರದರ್ಶನವಾಹಿನಿಗಳಲ್ಲಿ ಪ್ರಸಾರಗೊಂಡವು.
ಸದ್ಯ ಅವರ ಮಾರ್ಗದರ್ಶನದಡಿಯಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಆಚಾರ-ವಿಚಾರಗಳ ಮಹತ್ವ, ಭಾರತೀಯ ಭಾಷೆಗಳ ಆಧ್ಯಾತ್ಮಿಕ ಮಹತ್ವ, ಭಾರತದ ತೀರ್ಥಕ್ಷೇತ್ರಗಳು, ದೇಗುಲಗಳು, ಸಂತರ ಮಠಗಳು, ಸಂತರ ಸಮಾಧಿಸ್ಥಾನಗಳು, ಐತಿಹಾಸಿಕ ಸ್ಥಳ ಇತ್ಯಾದಿಗಳ ಮಹಾತ್ಮೆ, ಹಾಗೆಯೇ ಆಧ್ಯಾತ್ಮಿಕ ಸಂಶೋಧನೆ, ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯ ಇತ್ಯಾದಿಗಳ ಬಗ್ಗೆ ಸಾವಿರಾರು ಧ್ವನಿಚಿತ್ರಮುದ್ರಿಕೆ (ವಿಸಿಡಿ) ಗಳನ್ನು ತಯಾರಿಸಲಾಗುತ್ತಿದೆ.
ಸಾಧನೆಗಾಗಿ ಉಪಯುಕ್ತ ಧ್ವನಿಮುದ್ರಿಕೆ (ಆಡಿಯೋ ಸಿಡಿ)
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಡಿ ‘ಸಾಧನೆ’, ‘ಅಧ್ಯಾತ್ಮದ ಬಗೆಗಿನ ಸಂದೇಹ ನಿವಾರಣೆ’, ‘ದೇವತೆಗಳ ನಾಮಜಪದ ಯೋಗ್ಯ ಪದ್ಧತಿಗಳು’, ‘ಆರತಿಗಳು’, ‘ಕ್ಷಾತ್ರಗೀತೆಗಳು’ ಮುಂತಾದ ವಿಷಯಗಳ ಧ್ವನಿಮುದ್ರಿಕೆ (ಆಡಿಯೋ ಸಿಡಿ) ಗಳನ್ನು ನಿರ್ಮಿಸಲಾಗಿದೆ.
ಧರ್ಮಪ್ರಸಾರಕ್ಕೆ ಸಂಬಂಧಿಸಿದ ಪ್ರಸಾರಸಾಹಿತ್ಯಗಳು
೮ ಭಾಷೆಗಳಲ್ಲಿ ಪ್ರಕಾಶಿತವಾಗುವ ‘ಸನಾತನ ಪಂಚಾಂಗ’, ‘ಸಂಸ್ಕಾರ ವಹಿ’ (ನೋಟ್‌ಬುಕ್), ಚಿತ್ರಕಲಾ ವಹಿ, ಧರ್ಮಶಿಕ್ಷಣ ನೀಡುವ ಕರಪತ್ರ, ಧರ್ಮಶಿಕ್ಷಣ ಮತ್ತು ರಾಷ್ಟ್ರ-ಧರ್ಮಜಾಗೃತಿಯ ಫಲಕಗಳು, ಸನಾತನದ ಕಾರ್ಯಕ್ಕೆ ಸಂಬಂಧಪಟ್ಟ ಮಾಹಿತಿಪತ್ರ ಮುಂತಾದ ಧರ್ಮಪ್ರಸಾರಕ್ಕೆ ಸಂಬಂಧಿಸಿದ ಪ್ರಸಾರಸಾಹಿತ್ಯದ ವೈಚಾರಿಕ ಬರಹ, ಹಾಗೆಯೇ ಅದರ ಸಾತ್ತ್ವಿಕ ಪ್ರಸ್ತುತಿಯ ದೃಷ್ಟಿಯಿಂದ ಅದರಲ್ಲಿರುವ ಚಿತ್ರ ಮತ್ತು ವರ್ಣಸಂಯೋಜನೆಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಪರಿಶೀಲಿಸಿ ಕೊಡುತ್ತಾರೆ.