ಆನಂದಮಯ ಜೀವನವನ್ನು ಅನುಭವಿಸುವ ಪರಾತ್ಪರ ಗುರು ಡಾ. ಆಠವಲೆಯವರ ಆದರ್ಶ ಕುಟುಂಬ !
ಪೂ. (ಸೌ.) ನಲಿನಿ ಬಾಳಾಜಿ ಆಠವಲೆ (೧೯೧೬ ರಿಂದ ೨೦೦೩)
ಮತ್ತು ಪೂ. (ಶ್ರೀ.) ಬಾಳಾಜಿ ವಾಸುದೇವ ಆಠವಲೆ (೧೯೦೫ ರಿಂದ ೧೯೯೫)
‘ಬೀಜ ಶುದ್ಧವಾಗಿದ್ದರೆ | ಒಳ್ಳೆಯ ಫಲ ಪ್ರಾಪ್ತವಾಗುತ್ತದೆ |’
ಎಂಬ ಸಂತ ತುಕಾರಾಮರ ಅಭಂಗದಂತೆ (ತುಕಾರಾಮ ಗಾಥಾ, ಅಭಂಗ ೩೭, ದ್ವಿಪದಿ ೧) ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ೬ ಮೇ ೧೯೪೨ (ವೈಶಾಖ ಕೃಷ್ಣ ಪಕ್ಷ ಸಪ್ತಮಿ, ಕಲಿಯುಗ ವರ್ಷ ೫೦೪೪) ರಂದು ಶ್ರೀ. ಬಾಳಾಜಿ ವಾಸುದೇವ ಆಠವಲೆ (೧೯೦೫ ರಿಂದ ೧೯೯೫) ಮತ್ತು ಸೌ. ನಲಿನಿ ಬಾಳಾಜಿ ಆಠವಲೆ (೧೯೧೬ ರಿಂದ ೨೦೦೩) ಇವರಿಗೆ ಜನಿಸಿದರು. ಮುಂದೆ ಇಬ್ಬರೂ ಸಂತಪದವಿಯನ್ನು ಪ್ರಾಪ್ತಮಾಡಿಕೊಂಡರು.
“ನಮ್ಮ ತಂದೆ ಮತ್ತು ತಾಯಿ ಇಬ್ಬರು ಕೂಡ ನಮ್ಮ ಐವರಲ್ಲಿ ವ್ಯಾವಹಾರಿಕ ಶಿಕ್ಷಣದೊಂದಿಗೆ ಸಾತ್ವಿಕತೆಯ ಮತ್ತು ಸಾಧನೆಯ ಸಂಸ್ಕಾರವನ್ನು ಮೂಡಿಸಿದಕ್ಕೆ ನಾವೆಲ್ಲರೂ ಸಾಧನೆಯ ಮಾರ್ಗಕ್ಕೆ ಬಂದೆವು. ನಮ್ಮಲ್ಲಿ ಯಾರೂ ಕೂಡ ನಮ್ಮ ತಂದೆ ತಾಯಿ ಜಗಳವಾಡಿದ್ದನ್ನು ನೋಡಿಲ್ಲ. ಅದಲ್ಲದೆ, ನಮ್ಮ ಐವರಲ್ಲಿ ಕೂಡ ಇಂದಿಗೂ ಯಾವುದೇ ಕಾರಣಕ್ಕಾಗಿ ವೈಮನಸ್ಸು ಆಗಿಲ್ಲ. ನಮ್ಮೆಲ್ಲರಿಗೂ ಒಬ್ಬರಿಗಿನ್ನೊಬ್ಬರ ಬಗ್ಗೆ ಅಪಾರ ಪ್ರೇಮವಿತ್ತು ಮತ್ತು ಇಂದಿಗೂ ಇದೆ. ನಮ್ಮ ತಂದೆ ತಾಯಿಗಳು ನೀಡಿದ ಸುಸಂಸ್ಕಾರಗಳ ಫಲವಿದು. ೧೯೬೬ ರಿಂದ ಪ್ರಾರಂಭಿಸಿ ೧೯೯೫ ರಲ್ಲಿ ಅವರು ದೇಹ ತ್ಯಜಿಸುವ ತನಕ, ಅಂದರೆ ಸುಮಾರು ೩೦ ವರ್ಷಗಳ ಕಾಲ ನಮ್ಮ ತಂದೆಯವದು ಅನೇಕ ಲೇಖನಗಳನ್ನು ಬರೆದರು. ಜೀವನದ ಕೊನೆಯ ೫ ವರ್ಷಗಳು ಅವರು ಹಾಸಿಗೆ ಬಿಟ್ಟು ಹೋಗುವ ಸ್ಥಿತಿಯಲ್ಲಿ ಇರಲಿಲ್ಲ, ಆದರೂ ಅಧ್ಯಾತ್ಮಶಾಸ್ತ್ರದ ಬಗ್ಗೆ ಅವರು ಬರೆಯುವುದನ್ನು ನಿಲ್ಲಿಸಲಿಲ್ಲ. ಇತರ ಸಮಯದಲ್ಲಿ ಅವರು ನಾಮಜಪ ಮತ್ತು ಅಧ್ಯಯನ ನಡೆಸುತ್ತಿದ್ದರು.”
– (ಪರಾತ್ಪರ ಗುರು) ಡಾ. ಆಠವಲೆ
ನಿಂತವರು (ಎಡಗಡೆಯಿಂದ) ಡಾ. ವಿಲಾಸ ಮತ್ತು ಡಾ. ಸುಹಾಸ; ಕುಳಿತವರು (ಎಡಗಡೆಯಿಂದ) ಪರಾತ್ಪರ ಗುರು ಡಾ. ಜಯಂತ ಆಠವಲೆ, ಪೂ. ಡಾ. ವಸಂತ ಮತ್ತು ಶ್ರೀ. ಅನಂತ
(ಮುಂಬೈ, ೯.೧೨.೨೦೦೨)
ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ ಮತ್ತು ಖ್ಯಾತ ಬಾಲರೋಗತಜ್ಞ, ವೈದ್ಯಾಚಾರ್ಯ ಪೂ. ಡಾ. ವಸಂತ ಆಠವಲೆ (೧೯೩೩ ರಿಂದ ೨೦೧೩) ಇವರೂ ಸಹ ಸಾಧನೆ ಮಾಡಿ ಸಂತಪದವಿಯನ್ನು ತಲುಪಿದ್ದಾರೆ. ಎರಡನೆಯ ಹಿರಿಯ ಸಹೋದರರಾದ ಶ್ರೀ. ಅನಂತ ಆಠವಲೆ ಇವರ ಆಧ್ಯಾತ್ಮಿಕ ಮಟ್ಟ (ಟಿಪ್ಪಣಿ) ವೂ ಶೇ. ೬೯ ರಷ್ಟಿದೆ, ಅವರ ಕಿರಿಯ ಸಹೋದರರಾದ ದಿ. ಡಾ. ಸುಹಾಸ್ ಆಠವಲೆ (೧೯೪೪ ರಿಂದ ೨೦೦೭) ಯವರ ಆಧ್ಯಾತ್ಮಿಕ ಮಟ್ಟವೂ ಶೇ. ೬೪ ರಷ್ಟಿತ್ತು. ಎಲ್ಲರಿಗಿಂತ ಕಿರಿಯ ಸಹೋದರರಾದ ಡಾ. ವಿಲಾಸ್ ಆಠವಲೆ ಇವರ ಆಧ್ಯಾತ್ಮಿಕ ಉನ್ನತಿಯೂ ಆಗಿದ್ದು ಅವರೂ ಎಲ್ಲೆಡೆ ಹೋಗಿ ಸಾಧನೆಯ ಮಾರ್ಗದರ್ಶನ ಮಾಡುತ್ತಾರೆ.
(ಟಿಪ್ಪಣಿ – ಆಧ್ಯಾತ್ಮಿಕ ಮಟ್ಟ : ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೨೦ರಷ್ಟಿರುತ್ತದೆ ಮತ್ತು ಮೋಕ್ಷವೆಂದರೆ ಶೇ. ೧೦೦ ಎಂದು ಗ್ರಹಿಸಿದರೆ, ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯು ಸಂತತ್ವದೆಡೆಗೆ ಮಾರ್ಗಕ್ರಮಣ ಮಾಡಲು ಪ್ರಾರಂಭಿಸುತ್ತಾನೆ ಮತ್ತು ಸಂತರ ಆಧ್ಯಾತ್ಮಿಕ ಮಟ್ಟವು ಶೇ. ೭೦ ಕ್ಕಿಂತಲೂ ಹೆಚ್ಚಿರುತ್ತದೆ.)
ಶಿಕ್ಷಣ ಮತ್ತು ವಿದ್ಯಾರ್ಥಿಜೀವನದಲ್ಲಿ ಮಾಡಿದ ಕಾರ್ಯ
೭ ನೇ ತರಗತಿಯಲ್ಲಿ ಮಾಧ್ಯಮಿಕ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಕ್ಕೆ ಪರಾತ್ಪರ ಗುರು ಡಾ. ಆಠವಲೆಯವರಿಗೆ ಪ್ರತೀ ತಿಂಗಳು ಆರು ರೂಪಾಯಿಗಳಂತೆ ಸತತ ೪ ವರ್ಷಗಳ ಕಾಲ ವಿದ್ಯಾರ್ಥಿವೇತನ ಸಿಗುತ್ತಿತ್ತು. ಹನ್ನೊಂದನೇ ತರಗತಿಯ ವರೆಗಿನ ಶಿಕ್ಷಣ ನಡೆಯುತ್ತಿರುವಾಗಲೇ ಅವರು ಚಿತ್ರಕಲೆಯ ‘ಎಲಿಮೆಂಟರಿ’ ಮತ್ತು ‘ಇಂಟರ್‌ಮೀಡಿಯೆಟ್’ ಪರೀಕ್ಷೆಗಳು, ಹಾಗೆಯೇ ರಾಷ್ಟ್ರಭಾಷೆ ಹಿಂದಿಯ ‘ಕೋವಿದ’ ಪದವಿಪರೀಕ್ಷೆಯಲ್ಲಿ ಉತ್ತೀರ್ಣರಾದರು. ಶಾಲಾಂತ್ಯದ ಮಾಧ್ಯಮಿಕ ಪರೀಕ್ಷೆಯಲ್ಲಿಯೂ ಉತ್ಕೃಷ್ಟ ದರ್ಜೆಯಲ್ಲಿ ಉತ್ತೀರ್ಣರಾದರು. ೧೯೬೪ ರಲ್ಲಿ ಅವರು ‘ಎಮ್.ಬಿ.ಬಿ.ಎಸ್.’ ವೈದ್ಯಕೀಯ ಪದವಿಯನ್ನು ಪಡೆದರು.
೨ ಅ. ವಿದ್ಯಾರ್ಥಿಜೀವನದಲ್ಲಿ ವಿವಿಧ ಸಂಸ್ಥೆಗಳಲ್ಲಿ ನಿಭಾಯಿಸಿದ ಕಾರ್ಯ : ಶಾಲಾ ಜೀವನದಿಂದ ವೈದ್ಯಕೀಯ ಪದವಿಯನ್ನು ಗಳಿಸಿ ನೌಕರಿಗಾಗಿ ಇಂಗ್ಲೆಂಡ್‌ಗೆ ಹೋಗುವ ವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಸಂಸ್ಥೆಗಳಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರು. ಈ ಕಾರ್ಯದ ಸಂಕ್ಷಿಪ್ತ ಪಟ್ಟಿಯನ್ನು ಮುಂದೆ ಕೊಡಲಾಗಿದೆ.
ವರ್ಷ | ಶಾಲೆ / ಸಂಘಟನೆ | ಶಾಖೆ | ಕಾರ್ಯ |
೧೯೫೬ – ೧೯೫೭ | ‘ಆರ್ಯನ್ ಎಜ್ಯುಕೇಶನ್ ಸೊಸೈಟಿ’ ಹೈಸ್ಕೂಲ್, ಮುಂಬೈ | ಆರ್ಯಸಭೆ | ಗ್ರಂಥಾಲಯ ಮಂತ್ರಿ |
೧೯೫೬ – ೧೯೫೭ | ‘ಆರ್ಯನ್ ಎಜ್ಯುಕೇಶನ್ ಸೊಸೈಟಿ’ ಹೈಸ್ಕೂಲ್, ಮುಂಬೈ | ಆರ್ಯ ಸಂಪಾದಕ ಮಂಡಳಿ | ಸಂಪಾದಕರು (ವಿದ್ಯಾರ್ಥಿ ಪ್ರತಿನಿಧಿ) |
೧೯೫೮ – ೧೯೫೯ | ವಿಲ್ಸನ್ ಮಹಾವಿದ್ಯಾಲಯ, ಮುಂಬೈ. | ಜ್ಯೂನಿಯರ್ ಕೆಮಿಸ್ಟ್ರಿ ಅಸೋಸಿಯೇಶನ್ | ಅಧ್ಯಕ್ಷರು |
೧೯೫೮ – ೧೯೫೯ | ವಿಲ್ಸನ್ ಮಹಾವಿದ್ಯಾಲಯ, ಮುಂಬೈ. | ಹಿಂದಿ ವಾಙ್ಮಯ ಮಂಡಳಿ | ತರಗತಿ ಪ್ರತಿನಿಧಿ |
೧೯೬೫ | ಯೂತ್ ಫೋರಮ್ (ರಾಜಕೀಯ ಪಕ್ಷಗಳಿಗೆ ಸಂಬಂಧವಿರದ ವಿದ್ಯಾರ್ಥಿಗಳ ಸಂಘಟನೆ) | ಅಧ್ಯಕ್ಷರು | |
೧೯೬೯ – ೧೯೭೧ | ಶಿವಸೇನೆ | ಭಾರತೀಯ ವಿದ್ಯಾರ್ಥಿ ಸೇನೆ | ಸಂಘಟಕರು |
೧೯೭೦ – ೧೯೭೧ | ‘ಆರ್ಯನ್ ಎಜ್ಯುಕೇಶನ್ ಸೊಸೈಟಿ’ | ಹಳೆ ವಿದ್ಯಾರ್ಥಿ ಸಂಘ, ಮುಂಬೈ | ಕಾರ್ಯಾಧ್ಯಕ್ಷರು |
೩. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನಕಾರ್ಯ
ಮುಂಬೈಯ ವಿವಿಧ ಆಸ್ಪತ್ರೆಗಳಲ್ಲಿ ೫ ವರ್ಷಗಳ ಕಾಲ ನೌಕರಿ ಮಾಡಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ೧೯೭೧ ರಿಂದ ೧೯೭೮ ರ ಕಾಲಾವಧಿಯಲ್ಲಿ ನೌಕರಿ ನಿಮಿತ್ತ ಬ್ರಿಟನ್‌ನಲ್ಲಿ ವಾಸ್ತವ್ಯಕ್ಕಿದ್ದರು. ಈ ಕಾಲದಲ್ಲಿ ಅವರು ಮುಂದಿನ ಸಂಶೋಧನೆಯನ್ನು ಮಾಡಿದರು.
ಅ. ಮನೋರೋಗಗಳಿಗೆ ಸಮ್ಮೋಹನ ಉಪಚಾರಪದ್ಧತಿಯ ಬಗ್ಗೆ ಸಂಶೋಧನೆ ಮಾಡಿದರು.
ಆ. ಬಳಸಿ ಎಸೆಯುವಂತಹ (Use & Throw) ಕಿವಿ ತಪಾಸಣೆಯ ಪ್ಲಾಸ್ಟಿಕ್ ಉಪಕರಣ (Disposable Aural Speculum) ವನ್ನು ವೈದ್ಯಕೀಯ ಶಾಸ್ತ್ರದಲ್ಲೇ ಮೊದಲ ಬಾರಿಗೆ ತಯಾರಿಸಿದರು.
ಇ. ಬಳಸಿ ಎಸೆಯುವ ಮೂಗು ತಪಾಸಣೆಯ ಪ್ಲಾಸ್ಟಿಕ್ ಉಪಕರಣ (disposable nasal speculum)ತಯಾರಿಸಲು ವಿಚಾರ ನಡೆಯುತ್ತಿದ್ದಾಗ ಭಾರತಕ್ಕೆ ಹಿಂತಿರುಗುವುದು ನಿಗದಿಯಾಗಿದ್ದರಿಂದ ಸಂಶೋಧನಾ ಕಾರ್ಯವು ಅಪೂರ್ಣವಾಯಿತು.