ಭಯ ಅಥವಾ ಒತ್ತಡ ರಹಿತ ಪರೀಕ್ಷೆ ಬರೆಯಲು ಕೃತಿಯಲ್ಲಿ ತರಬೇಕಾಗಿರುವ ಕೆಲವು ಅಂಶಗಳು ಹಾಗೂ ಪರೀಕ್ಷೆಯಲ್ಲಿ
ಅಪೇಕ್ಷಿತ ಯಶಸ್ಸು ಪಡೆಯಲು ಮಾಡಬೇಕಾಗಿರುವ ಆಧ್ಯಾತ್ಮಿಕ ಉಪಾಯ
ಪರೀಕ್ಷೆಯ ಸಮಯ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಾಳಜಿಯೆನಿಸುತ್ತದೆ. ಕೆಲವರಿಗೆ ಒತ್ತಡವಾಗುತ್ತದೆ. ಒತ್ತಡವಾಗುವುದರಿಂದ ಹಲವು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೈಯಲ್ಲಿ ಹಿಡಿದ ತಕ್ಷಣ ಓದಿದ್ದು ಅಥವಾ ಯಾವುದಾದರೂ ಒಂದು ಮಹತ್ವವಾದ ಅಂಶವು ಮರೆತು ಹೋಗುತ್ತದೆ. ಉತ್ತರ ಪತ್ರಿಕೆಯನ್ನು ಚೆನ್ನಾಗಿ ಬರೆದರೆ ಅಥವಾ ಎಷ್ಟೇ ಕಷ್ಟಪಟ್ಟರೂ, ಯಶಸ್ಸಿನ ಬಗ್ಗೆ ಚಿಂತೆ ಮಾಡುವ ಪೋಷಕರು ಹಾಗೂ ಮಕ್ಕಳು ಹೆಚ್ಚಿನ ಮನೆಗಳಲ್ಲಿ ಕಾಣಸಿಗುತ್ತಾರೆ. ಪರೀಕ್ಷೆಯ ಸಮಯದಲ್ಲಿ ಕೆಲವು ಪೋಷಕರು ಜ್ಯೋತಿಷ್ಯರ ಬಳಿಗೆ ಹೋಗುತ್ತಾರೆ. ಜ್ಯೋತಿಷ್ಯರು ಜಾತಕವನ್ನು ನೋಡಿ ಹಲವಾರು ಉಪಾಯಗಳನ್ನು ಹೇಳುತ್ತಾರೆ. ಪರೀಕ್ಷೆಯ ದಿನಗಳು ಹತ್ತಿರ ಬಂದಂತೆ ಹಣ ಹಾಗೂ ಸಮಯವನ್ನು ಪೋಲು ಮಾಡುವ ಉಪಾಯವನ್ನು ಮಾಡುವುದರ ಬದಲು ವಿದ್ಯಾರ್ಥಿಗಳು ಓದಿನ ಕಡೆ ಗಮನ ನೀಡುವುದು ಮಹತ್ವದ್ದಾಗಿದೆ. ಮನಸ್ಸು ಶಾಂತವಾಗಿದ್ದರೆ ಮಾತ್ರ ಮಾಡಿದ ಅಧ್ಯಯನ ಗಮನದಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ.
೧. ಅಧ್ಯಯನ ಮಾಡುವ ಸಂದರ್ಭದಲ್ಲಿ ಕೆಲವು ಮುಖ್ಯ ಅಂಶಗಳು
ಅ. ಸಾಧನೆಯೆಂದು ಅಧ್ಯಯನ ಮಾಡುವುದು ಎಂಬುದು ಅಧ್ಯಯನದ ಉದ್ದೇಶವಾಗಿರಲಿ.
ಆ. ಜ್ಞಾನ ಪಡೆದುಕೊಳ್ಳುವುದರ ಮಹತ್ವವನ್ನು ಅರಿತು ಅಧ್ಯಯನ ಮಾಡಿದರೆ ತನ್ನಿಂದತಾನೇ ಅಧ್ಯಯನದ ಇಚ್ಛೆ ನಿರ್ಮಾಣವಾಗುತ್ತದೆ. ಇದರಿಂದ ತನ್ನಿಂದ ತಾನೇ ಪರೀಕ್ಷೆಯ ಭಯ ಅಥವಾ ಒತ್ತಡ ದೂರ ವಾಗುತ್ತದೆ. ಒತ್ತಡ ಮಾಡಿಕೊಳ್ಳದೆ ಪರೀಕ್ಷೆ ಬರೆಯುವುದರಿಂದ ಸಹಜವಾಗಿಯೇ ಉತ್ತಮ ಅಂಕ ಹಾಗೂ ಸಮಾಧಾನ ಸಿಗುತ್ತದೆ.
ಇ. ತನ್ನ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಅಧ್ಯಯನ ಚೆನ್ನಾಗಿ ಆಗುತ್ತದೆ.
೨. ಪರೀಕ್ಷೆಯ ಮೊದಲು ಮಾಡಬೇಕಾದ ಕೃತಿಗಳು
ಅ. ಇಚ್ಛೆಯಿಂದ ಹಾಗೂ ಮನಸ್ಸಿಟ್ಟು ಅಧ್ಯಯನ ಮಾಡಿರಿ.
ಆ. ಪರೀಕ್ಷೆಯ ಮೊದಲು ಅಧ್ಯಯನ ಮಾಡುವುದಕ್ಕೆ ಯೋಗ್ಯ ವೇಳಾಪಟ್ಟಿಯನ್ನು ತಯಾರಿಸಿರಿ.
ಇ. ಪರೀಕ್ಷೆಯ ಮೊದಲು ಪ್ರತಿಯೊಂದು ವಿಷಯದ ಅಧ್ಯಯನಕ್ಕಾಗಿ ಸಮಯದ ಬಂಧನವನ್ನು ನಿರ್ಧರಿಸಿಕೊಳ್ಳುವುದರಿಂದ ಮನಸ್ಸಿನ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ.
ಈ. ಬೆಳಗ್ಗಿನ ಸಮಯ ವಾತಾವರಣದಲ್ಲಿ ಸಾತ್ತ್ವಿಕತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಅಧ್ಯಯನ ಮಾಡಿ. ರಾತ್ರಿ ಮಲಗುವ ಮೊದಲು ದಿನವಿಡೀ ಮಾಡಿರುವ ಅಧ್ಯಯನವನ್ನು ನೆನಪಿಸಿಕೊಳ್ಳಿರಿ.
೩. ಪರೀಕ್ಷೆಗೆ ಹೊರಡುವ ಮೊದಲು ಕೃತಿಯಲ್ಲಿ ತರಬೇಕಾದ ಅಂಶಗಳು
ಅ. ಪರೀಕ್ಷೆಗಾಗಿ ಮನೆಯಿಂದ ಹೊರಡುವ ಮೊದಲು ದೇವರಿಗೆ ‘ನನಗೆ ಪರೀಕ್ಷೆಯ ಸಮಯದಲ್ಲಿ ಬರಲಿರುವ ಎಲ್ಲ ಅಡಚಣೆಗಳು ದೂರವಾಗಲಿ. ನನ್ನ ಮನಸ್ಸು ಪ್ರಸನ್ನವಾಗಿರಲಿ ಹಾಗೂ ಮಾಡಿರುವ ಅಭ್ಯಾಸ ನೆನಪಿನಲ್ಲಿರಲಿ’ ಎಂದು ಪ್ರಾರ್ಥಿಸಿರಿ.
ಆ. ಪರೀಕ್ಷೆಗೆ ಬೇಕಾಗಿರುವ ಎಲ್ಲ ಸಾಮಾಗ್ರಿಗಳನ್ನು ತೆಗೆದುಕೊಂಡಿರುವುದರ ಬಗ್ಗೆ ಖಚಿತ ಮಾಡಿಕೊಳ್ಳಿರಿ.
ಇ. ಗೆಳೆಯ-ಗೆಳತಿಯರೊಂದಿಗೆ ಅನಾವಶ್ಯಕವಾಗಿ ಚರ್ಚೆ ಮಾಡದೆ ಹಾಗೂ ಯಾವುದೇ ಒತ್ತಡ ಮಾಡಿಕೊಳ್ಳದೆ ನಾಮಸ್ಮರಣೆ ಮಾಡಿರಿ.
೪. ಪರೀಕ್ಷೆಯಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆದುಕೊಳ್ಳಲು ಮಾಡಬೇಕಾಗಿರುವ ಆಧ್ಯಾತ್ಮಿಕ ಉಪಾಯ
ವಿದ್ಯಾರ್ಥಿಗಳೇ, ದೇವರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟುಕೊಂಡು ಮುಂದೆ ನೀಡಿರುವ ಆಧ್ಯಾತ್ಮಿಕ ಉಪಾಯವನ್ನು ಮಾಡಿದರೆ ಖಂಡಿತವಾಗಿಯೂ ಯಶಸ್ಸು ಪಡೆಯುವಿರಿ, ಎಂಬುದರ ಬಗ್ಗೆ ವಿಶ್ವಾಸವಿಡಿ.
ಅ. ವಿದ್ಯೆಗೆ ಸಂಬಂಧಪಟ್ಟ ದೇವತೆ
ಶ್ರೀ ಗಣಪತಿ, ಶ್ರೀ ಸರಸ್ವತಿದೇವಿ ಹಾಗೂ ಕುಲದೇವರ ಚಿತ್ರಗಳನ್ನು ಅಧ್ಯಯನ ಮಾಡುವ ಕೋಣೆಯಲ್ಲಿಡಿ. ಪ್ರತೀದಿನ ಅಧ್ಯಯನ ಪ್ರಾರಂಭಿಸುವ ಮೊದಲು ದೇವತೆಗಳ ಚರಣಗಳನ್ನು ನೋಡಿ, ‘ಅಧ್ಯಯನ ಉತ್ತಮವಾಗಿ ಆಗಲು ನನಗೆ ಬುದ್ಧಿ ನೀಡು ಹಾಗೂ ನಾನು ಮಾಡುತ್ತಿರುವ ಅಧ್ಯಯನ ನನಗೆ ಚೆನ್ನಾಗಿ ಅರ್ಥವಾಗಲಿ’ ಎಂದು ಪ್ರಾರ್ಥಿಸಬೇಕು.
ಆ. ಅಧ್ಯಯನ ಮಾಡುವಾಗ ಮನಸ್ಸಿನ ಏಕಾಗ್ರತೆಯ ಆವಶ್ಯಕತೆಯಿರುತ್ತದೆ. ಅದಕ್ಕಾಗಿ ಐದು ನಿಮಿಷ ಉಪಾಸ್ಯದೇವತೆಯ ನಾಮಸ್ಮರಣೆಯನ್ನು ಮಾಡಿರಿ. ಇದರಿಂದ ಮನಸ್ಸು ಬೇಗ ಏಕಾಗ್ರವಾಗುತ್ತದೆ.
ಇ. ಪ್ರತೀದಿನ ಪ್ರಜ್ಞಾವರ್ಧನೆಯ ಸ್ತೋತ್ರಗಳನ್ನು ಓದಿರಿ. (ಈ ಸ್ತೋತ್ರದ ಪುಸ್ತಕಗಳು ಅಂಗಡಿಗಳಲ್ಲಿ ಸಹಜವಾಗಿ ಲಭ್ಯವಿರುತ್ತವೆ.)
– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ), ಸನಾತನ ಆಶ್ರಮ, ಗೋವಾ (೩೦.೧.೨೦೧೭)