ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬಳಿಕ ಮಾಯೆಯಿಂದ ಮುಕ್ತರಾಗಬಹುದು ಎಂದರೆ ಏನಾಗುತ್ತದೆ, ಎಂಬ ಬಗ್ಗೆ ಹೊಳೆದ ವಿಚಾರ ಮತ್ತು ಶೇ. ೬೧ ಮಟ್ಟಕ್ಕಿಂತ ಮುಂದೆ ಹೋಗಲು ಮಾಡಬೇಕಾಗಿರುವ ಪ್ರಯತ್ನಗಳು
ಈ ಲೇಖನದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದವರು ಇನ್ನೂ ಮುಂದೆ ಹೋಗಲು ನಿರ್ದಿಷ್ಠವಾಗಿ ಯಾವ ರೀತಿಯಲ್ಲಿ ಪ್ರಯತ್ನಿಸಬೇಕು, ಎಂಬ ಬಗ್ಗೆ ನೀಡಲಾಗಿದೆ. ಅವರ ದೃಷ್ಟಿಯಲ್ಲಿ ಸಾಧನೆಯ ಯಾವ ಅಂಶಕ್ಕೆ ಮಹತ್ವವಿದೆ, ಎಂಬುದು ಈ ಲೇಖನದಲ್ಲಿ ಸ್ಪಷ್ಟವಾಗುತ್ತದೆ. ಸ್ವಂತ ಮನಸ್ಸಿನಂತೆ ಸಾಧನೆ ಮಾಡದೆ ಗುರುಗಳಿಗೆ ಅಪೇಕ್ಷಿತವಿರುವಂತೆ ಸಾಧನೆ ಮಾಡುವುದು, ಅಂದರೆ ಇದರಲ್ಲಿ ಗುರುಕೃಪಾಯೋಗಾನುಸಾರ ಸಾಧನೆ, ಇದು ಇದರಲ್ಲಿನ ಮೂಲ ವಿಷಯವಾಗಿದೆ. ಈ ತತ್ತ್ವವು ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿದವರಿಗೆ ಮಾತ್ರವಲ್ಲ, ಎಲ್ಲ ಮಟ್ಟದ ಸಾಧಕರಿಗೂ ಅನ್ವಯಿಸುತ್ತದೆ. ಕೇವಲ ವ್ಯತ್ಯಾಸವೆಂದರೆ, ಹಾಗೆ ಸಾಧನೆ ಮಾಡದಿದ್ದರೆ, ಶೇ. ೬೧ ಮತ್ತು ಅದಕ್ಕಿಂತ ಹೆಚ್ಚು ಮಟ್ಟದ ಸಾಧಕರು ತಮಗೆ ಕ್ಷಮತೆಯಿದ್ದರೂ, ಅವರಿಂದ ಆ ರೀತಿ ಕೃತಿ ಆಗದಿದ್ದರೆ ಅವರಿಗೆ ಹೆಚ್ಚು ದೋಷ ತಗಲುತ್ತದೆ. ಹೀಗೆ ಈ ಲೇಖನದಲ್ಲಿ ನೀಡಿರುವ ಬಹಳಷ್ಟು ವಿಷಯಗಳು ಎಲ್ಲರಿಗೂ ಅನ್ವಯಿಸುತ್ತವೆ. ಆದ್ದರಿಂದ ಶೀಘ್ರ ಪ್ರಗತಿಯಾಗಲು ಎಲ್ಲರೂ ಈ ರೀತಿಯಲ್ಲಿ ಪ್ರಯತ್ನಿಸಬೇಕು.
೧. ಭಾವ ನಿರ್ಮಾಣವಾದರೆ ಶೇ. ೬೧ ರಷ್ಟು ಮಟ್ಟ ತಲುಪಲು ಸಾಧ್ಯ
ಸಾಧನೆಯಲ್ಲಿ ನಾನಾ ರೀತಿಯ ಸಂಘರ್ಷಗಳನ್ನು ಎದುರಿಸುತ್ತಾ ಭಾವದ ಹಂತದಲ್ಲಿ ಸಾಧನೆಯನ್ನು ಪ್ರಾರಂಭಿಸಿದರೆ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಲು ಸಾಧ್ಯವಾಗುತ್ತದೆ.
೨. ಮಾಯೆಯಿಂದ ಮುಕ್ತರಾಗಲು ಕ್ರಿಯಮಾಣ ಕರ್ಮವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕಾಗುವುದು
ಈ ಮಟ್ಟದಲ್ಲಿ ಮಾಯೆಯಿಂದ ಮುಕ್ತರಾಗಲು ದೇವರ ಆಶೀರ್ವಾದ ಸಿಗುತ್ತದೆ; ಆದರೆ ಅದು ಪ್ರತ್ಯಕ್ಷವಾಗಿ ನಡೆಯಬೇಕೆಂದರೆ ನಾವು ಕ್ರಿಯಮಾಣ ಕರ್ಮವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಆಧ್ಯಾತ್ಮಿಕ ಮಟ್ಟವು ಕುಸಿಯುವ ಸಾಧ್ಯತೆಯಿದೆ.
೩. ಸಾಧನೆಯಲ್ಲಿನ ಸಮಯ ಅನಾವಶ್ಯಕವಾಗಿ ವ್ಯರ್ಥವಾಗುತ್ತಿಲ್ಲವಲ್ಲ, ಎಂಬ ಬಗ್ಗೆ ಕಡ್ಡಾಯವಾಗಿ ನೋಡಬೇಕು
ಶೇ. ೫೦ ರಷ್ಟು ಮಟ್ಟದವರೆಗೆ ನಾನಾ ಮಾರ್ಗಗಳನ್ನು ಅವಲಂಬಿಸಿ ಸಾಧನೆ ಮಾಡಬೇಕಾಗುತ್ತದೆ; ಆದರೆ ಶೇ. ೬೧ ಮಟ್ಟಕ್ಕಿಂತ ಮುಂದೆ ಪ್ರವಾಸ ಮಾಡುವಾಗ ಮಾತ್ರ ನಮ್ಮ ಸಮಯವು ಅನಾವಶ್ಯಕ ಸ್ಥಳದಲ್ಲಿ ವ್ಯರ್ಥವಾಗುವುದಿಲ್ಲವಲ್ಲ, ಎಂಬುದನ್ನು ಕಟ್ಟುನಿಟ್ಟಾಗಿ ನೋಡಬೇಕಾಗುತ್ತದೆ.
೪. ಗುರುಗಳಿಗೆ ಅಪೇಕ್ಷಿತವಿರುವಂತೆ ಕೃತಿ ಮಾಡದೇ, ಒಂದು ವೇಳೆ ಆ ಕೃತಿಯು ಭಾವದ ಸ್ತರದಲ್ಲಿದ್ದರೂ, ಭಾವನೆಯಲ್ಲಿಯೇ ಪರಿಗಣಿಸಲಾಗುವುದು
ಗುರುಗಳು ಹೇಳಿದ ಸೇವೆಗೆ ಮಹತ್ವ ನೀಡದೆ ತನ್ನ ಸಮಯವು ಇತರರೊಡನೆ ಖರ್ಚಾಗುತ್ತಿದರೆ, ಒಂದು ವೇಳೆ ಅಲ್ಲಿ ಸತ್ಸಂಗದ ವಿಷಯ ಮಾತನಾಡುತ್ತಿದ್ದರೂ, ಅದು ಅನಾವಶ್ಯಕವೆಂದೇ ತಿಳಿಯಬೇಕು; ಏಕೆಂದರೆ ಗುರುಗಳಿಗೆ ಅಪೇಕ್ಷಿತವಿರುವ ಕೃತಿ ಮಾಡದಿರುವುದೆಂದರೆ, ಅದು ಭಾವದ ಸ್ತರದಲ್ಲಿದ್ದರೂ ಅದನ್ನು ಭಾವನೆಯಲ್ಲಿಯೇ ಪರಿಗಣಿಸಲಾಗುತ್ತದೆ.
೫. ಗುರುಗಳಿಗೆ ಅಪೇಕ್ಷಿತ ಕೃತಿ ಮಾಡದೇ ಬೇರೆಯೇ ಕೃತಿ ಮಾಡಿದರೆ ಅದು ಸಾತ್ತ್ವಿಕ ಕೃತಿಯಾಗಿದ್ದರೂ, ಅದನ್ನು ಸ್ವೇಚ್ಛಾಪ್ರಧಾನವೆಂದೇ ತಿಳಿಯಲಾಗುವುದು
ಈ ರೀತಿಯಲ್ಲಿ ನಾವು ಕಾಲಕ್ಕೆ ಅಂದರೆ ಗುರುಗಳಿಗೆ ಅಪೇಕ್ಷಿತವಿರುವ ಸಾಧನೆ ಮಾಡದೆ, ಸಾಧನೆಗೆ ಸಂಬಂಧಪಟ್ಟ, ಆದರೆ ಇತರ ಸಾತ್ತ್ವಿಕ ಕೃತಿ ಮಾಡುವುದರಲ್ಲಿ ಸಮಯ ಕಳೆದರೆ ಅದು ಸಹ ಒಂದು ರೀತಿಯಲ್ಲಿ ಸ್ವೇಚ್ಛೆಯೇ ಆಗುತ್ತದೆ.
೬. ಗುರುಗಳಿಗೆ ಅಪೇಕ್ಷಿತವಿರುವ ಅಂದರೆ ಕಾಲಾನುಸಾರ ಸಾಧನೆ ಮಾಡುವುದು ಆವಶ್ಯಕ !
ಗುರುಗಳು ನೀಡಿದ ಸೇವೆ ಅಥವಾ ಗುರುಗಳಿಗೆ ಅಪೇಕ್ಷಿತವಿರುವ ಸೇವೆಯು ಕಾಲಕ್ಕೂ ಸಮ್ಮತವಾಗಿರುವುದರಿಂದ ಈ ಸೇವೆ ಮಾಡಲು ಹೆಚ್ಚೆಚ್ಚು ಸಮಯ ನೀಡಿದರೆ ಈಶ್ವರೇಚ್ಛೆಯಿಂದ ಸಾಧನೆ ಮಾಡಿದುದರ ಫಲ ದೊರೆತು ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
೭. ಸಾಧನೆಗೆ ಆವಶ್ಯಕವಿರುವುದೇ ಕರ್ತವ್ಯ, ಈ ರೀತಿಯಾಗುವುದು ಆವಶ್ಯಕ
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ವರೆಗೆ ಕಂಡದ್ದು ಕರ್ತವ್ಯವೆಂಬ ಮಾರ್ಗವು ಯೋಗ್ಯವಾಗಿದೆ; ಏಕೆಂದರೆ ಇದು ವ್ಯಷ್ಟಿ ಸಾಧನೆಯ ಪ್ರಮುಖ ಅಂಶವಾಗಿದೆ; ಆದರೆ ಶೇ. ೬೧ ಮಟ್ಟಕ್ಕಿಂತ ಮುಂದೆ ಮಾತ್ರ ಆ ಸಾಧಕನು ಸಮಷ್ಟಿಯವನಾಗುವುದರಿಂದ ಸಾಧನೆಗೆ ಆವಶ್ಯಕವಿರುವುದೇ ಕರ್ತವ್ಯವಾಗಬೇಕು.
೮. ಗುರುಕಾರ್ಯಕ್ಕೆ ಸಹಾಯವಾಗದೇ ಇರುವಂತಹ ಕೃತಿ ಮಾಡಿದರೆ, ಆ ಕೃತಿಯಲ್ಲಿ ಭಾವವಿದ್ದರೂ, ಅದು ಭಾವನೆಯೇ ಆಗುತ್ತದೆ
ಶೇ. ೫೫ ಮಟ್ಟಕ್ಕಿಂತ ಮುಂದೆ ಶಿಷ್ಯಪದವಿ ಲಭಿಸುತ್ತದೆ. ‘ಶಿಷ್ಯನೆಂದರೆ ಗುರುಗಳಿಗೆ ಅಪೇಕ್ಷಿತವಿರುವ ಸೇವೆಯನ್ನು ಮೈಮರೆತು ಮಾಡುವ ಜೀವ’. ಗುರುಗಳಿಗೆ ಅಪೇಕ್ಷಿತವಿಲ್ಲದ ಸೇವೆ ಮಾಡಿದರೆ, ಅಂದರೆ ಗುರುಗಳ ಕಾರ್ಯಕ್ಕೆ ಜೋಡಿಸದ ಕೃತಿ ಮಾಡಿದರೆ, ಆ ಕೃತಿಯಲ್ಲಿ ಭಾವವಿದ್ದರೂ ಅದು ಭಾವನೆಯೇ ಆಗುತ್ತದೆ.
೯. ಶೇ. ೬೧ ಮಟ್ಟದ ಮುಂದೆ ಸ್ಥಳದ್ದಲ್ಲ, ಕಾಲದ ನಿಯಮ ಅನ್ವಯಿಸುತ್ತದೆ
ಶೇ. ೬೧ ಮಟ್ಟದ ಮುಂದೆ ಸ್ಥಳದ ನಿಯಮ ಅನ್ವಯಿಸದೇ, ಇನ್ನೂ ವ್ಯಾಪಕ ಸ್ತರದ ಕಾಲದ ನಿಯಮಗಳು ಅನ್ವಯಿಸುತ್ತವೆ. ಅಂದರೆ ಶೇ. ೬೧ ಮಟ್ಟದ ಮುಂದೆ ಸಾಧಕನು ತನ್ನ ವೈಯಕ್ತಿಕ ಜೀವನವನ್ನು ತ್ಯಜಿಸಿ ಕಾಲದೊಂದಿಗೆ ಜೋಡಿಸಲ್ಪಡುತ್ತಾನೆ; ಆದ್ದರಿಂದ ಅವನ ವಿಷಯದಲ್ಲಿ ಕಾಲದ ಒಂದು ಪ್ರಮಖ ಭಾಗವಾಗಿರುವ ಸಮಯವನ್ನು ಕರಾರುವಾಕ್ಕಾಗಿ ಪಾಲಿಸಿ ‘ತನ್ನ ಸಮಯ ಇತರ ವಿಷಯಗಳನ್ನು ಮಾಡುವುದರಲ್ಲಿ ವ್ಯರ್ಥವಾಗುವುದಿಲ್ಲವಲ್ಲ’ ಎಂಬುದರ ಕಡೆಗೆ ಹೆಚ್ಚು ಎಚ್ಚರಿಕೆಯಿಂದ ಗಮನಿಸುವುದು ಆವಶ್ಯಕವಿರುತ್ತದೆ.
೧೦. ಎರಡು ಸಾತ್ತ್ವಿಕ ವಿಷಯಗಳಲ್ಲಿ ನಿಜವಾಗಿಯೂ ಯಾವ ವಿಷಯವನ್ನು ಮಾಡಬೇಕು, ಎಂಬುದನ್ನು ಅರಿತುಕೊಳ್ಳುವುದು ಆವಶ್ಯಕ !
ಶೇ. ೬೧ ಮಟ್ಟವನ್ನು ತಲುಪಿರುವ ಸಾಧಕರಿಗೆ ತಮ್ಮ ಮಟ್ಟವು ಕಡಿಮೆಯಾದಾಗ ಅಥವಾ ಅದೇ ಮಟ್ಟದಲ್ಲಿ ಉಳಿದಾಗ ‘ಅರೆ, ನಾನು ಸಾಧನೆಯ ಹೊರತು ಬೇರೆ ಎಲ್ಲಿಯೂ ನನ್ನ ಸಮಯವನ್ನು ವ್ಯರ್ಥಗೊಳಿಸಲಿಲ್ಲ, ಆದರೂ ನನ್ನ ಮಟ್ಟ ಏಕೆ ಹೆಚ್ಚಾಗಲಿಲ್ಲ’, ಎಂದೆನಿಸುತ್ತದೆ. ಅದರ ಉತ್ತರವೆಂದರೆ, ಎರಡು ಸಾತ್ತ್ವಿಕ ವಿಷಯಗಳಲ್ಲಿ ನಿಜವಾಗಿಯೂ ಯಾವುದನ್ನು ಮಾಡಬೇಕೆಂಬುದು ಅವರಿಗೆ ತಿಳಿಯುವುದಿಲ್ಲ.
೧೧. ಗುರುಕಾರ್ಯವು ಬೇಗನೆ ಪೂರ್ಣಗೊಳ್ಳುವ ಹಾಗೂ ಗುರುಕಾರ್ಯಕ್ಕೆ ವೇಗ ಬರುವ ವಿಷಯದ ಬಗ್ಗೆ ಸೇವೆ ಮಾಡುವಾಗ ಹೆಚ್ಚು ಗಮನ ನೀಡದೆ ಹೋದರೆ, ನಾವು ಕಾಲದ ಆಶೀರ್ವಾದವನ್ನು ಪಡೆಯುವುದರಲ್ಲಿ ಹಿಂದೆ ಬೀಳುತ್ತೇವೆ
ಓರ್ವ ಸಾಧಕನಿಗೆ ಯಾವುದಾದರೊಂದು ಸೇವೆಯಲ್ಲಿ ಹೆಚ್ಚು ಪರಿಣತಿಯಿರುತ್ತದೆ; ಆದರೆ ಈ ಸೇವೆಯನ್ನು ಬಿಟ್ಟು ಅವನು ಬೇರೆ ಸೇವೆಯನ್ನು ಮಾಡಿದಾಗ ಅವನ ಸಾಧನೆಯ ಫಲನಿಷ್ಪತ್ತಿ ಕಡಿಮೆಯಾಗುತ್ತದೆ; ಏಕೆಂದರೆ ಆ ಸೇವೆಯನ್ನು ಬೇರೆ ಸಾಧಕನು ಮಾಡಬೇಕಾಗುತ್ತದೆ. ಆ ಸಾಧಕನಲ್ಲಿ ಆ ಪ್ರಾವೀಣ್ಯತೆ ಕಡಿಮೆ ಇರುವುದರಿಂದ ಗುರುಕಾರ್ಯವು ಶೀಘ್ರಗತಿಯಲ್ಲಿ ಪೂರ್ಣವಾಗುವುದಿಲ್ಲ ಹಾಗೂ ಗುರುಕಾರ್ಯಕ್ಕೆ ವೇಗ ಸಿಗುವುದಿಲ್ಲ. ಇದರಿಂದ ನಾವು ಕಾಲದ ಆಶೀರ್ವಾದವನ್ನು ಪಡೆಯುವುದರಲ್ಲಿ ಹಿಂದೆ ಬೀಳುತ್ತೇವೆ. ಇಲ್ಲಿ ನಾವು ಸ್ವೇಚ್ಛೆಯಿಂದ ಗುರುಕಾರ್ಯಕ್ಕೆ ಹಾನಿಯನ್ನುಂಟು ಮಾಡುವುದರಿಂದ ನಮಗೆ ಸಮಷ್ಟಿ ಪಾಪ ತಗಲುತ್ತದೆ. ಹೀಗೆ ತುಂಬ ಕೃತಿಗಳನ್ನು ಮಾಡಿದರೆ ನಾವು ಸತತ ಸೇವೆ ಮಾಡುತ್ತಿದ್ದರೂ ನಮ್ಮ ಮಟ್ಟವು ನಿಧಾನವಾಗಿ ಕಡಿಮೆಯಾಗುತ್ತದೆ.
೧೨. ಆಯಾ ಸ್ತರದಲ್ಲಿ ನಮ್ಮ ಪ್ರಗತಿಗಾಗಿ ಆವಶ್ಯಕವಾಗಿರುವ ಸೇವೆ ಮಾಡುವುದು ಆವಶ್ಯಕ !
ಶೇ. ೬೧ ಮಟ್ಟಕ್ಕಿಂತ ಮುಂದೆ ಹೋಗುವಾಗ ಯಾವುದೇ ಸೇವೆಯನ್ನು ಮಾಡುತ್ತಿರುವಾಗ ಅದು ನಮ್ಮ ಮುಂದಿನ ಹಂತದ ಪ್ರಗತಿಗಾಗಿ ಆವಶ್ಯಕವಿದೆಯೇ, ಎಂದು ಪರಿಶೀಲಿಸಿಯೇ ಅದನ್ನು ಮಾಡಬೇಕು. ಇಲ್ಲದಿದ್ದರೆ, ಸಾಧನೆಯ ಮುಂದಿನ ಹಂತಕ್ಕೆ ತಲುಪಲು ಅಡಚಣೆಯಾಗಬಹುದು.
೧೩. ಸೇವೆ ಮಾಡುವಾಗ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದ್ದರೆ, ಸೇವೆಗಿಂತ ಆಧ್ಯಾತ್ಮಿಕ ಉಪಾಯಕ್ಕೆ ಹೆಚ್ಚು ಮಹತ್ವ ನೀಡುವುದು ಆವಶ್ಯಕ !
ಕೆಲವೊಮ್ಮೆ ನಮಗೆ ನೀಡಿದ ಸೇವೆಯನ್ನು ಮಾಡುವಾಗ ಕೆಟ್ಟ ಶಕ್ತಿಗಳ ಅಡಚಣೆ ತುಂಬ ಬರುತ್ತಿದ್ದರೆ ಅಥವಾ ನಮಗೆ ಆಧ್ಯಾತ್ಮಿಕ ತೊಂದರೆ ಯಾಗುತ್ತಿದ್ದರೆ, ಸೇವೆಯನ್ನು ಬದಲಾಯಿಸಬಹುದು; ಆದರೆ ಆ ಬದಲಾವಣೆ ತಾತ್ಕಾಲಿಕವಾಗಿರಬೇಕು. ಅನಂತರ ತಮ್ಮ ಸೇವೆಯ ಕಡೆಗೆ ಶೀಘ್ರವಾಗಿ ಹೇಗೆ ತಲುಪಬಹುದು, ಎಂಬುದರ ಕಡೆಗೆ ಹೆಚ್ಚು ಗಮನ ಹರಿಸಬೇಕು ! ತೊಂದರೆ ತೀವ್ರವಾಗಿದ್ದರೆ, ಸೇವೆಗಿಂತ ಆಧ್ಯಾತ್ಮಿಕ ಉಪಾಯ ಮಾಡಲು ಹೆಚ್ಚು ಗಮನ ಹರಿಸಿರಿ.
೧೪. ಪ್ರತಿಯೊಂದು ಕೃತಿಯೂ ಯೋಗ್ಯವಾಗಿಯೇ ಇರಬೇಕು !
ಶೇ. ೬೧ ಮಟ್ಟಕ್ಕಿಂತ ಮುಂದೆ ಹೋಗುವಾಗ ಪ್ರತಿಯೊಂದು ಕೃತಿಯನ್ನೂ ಸರಿಯಾಗಿಯೇ ಮಾಡಬೇಕು. ಶಿಕ್ಷಣ ಪಡೆಯುತ್ತಿರುವಾಗ ಮುಂದಿನ ಹಂತದ ಪರೀಕ್ಷೆಗಳು ಹೇಗೆ ಬಹಳ ಕಠಿಣವಿರುತ್ತದೆಯೋ, ಹಾಗೆಯೇ ಇದು ಸಹ ಆಗಿದೆ.
೧೫. ಶೇ. ೬೧ ಮಟ್ಟದ ಮುಂದಿನ ಪ್ರವಾಸ ಮಾಡುವಾಗ ಗುರುಕಾರ್ಯವನ್ನು ಮುಂದೆ ಕೊಂಡೊಯ್ಯುವುದಕ್ಕಾಗಿಯೇ ಸಾಧನೆ ! ಎಂಬ ಅಂಶವಿರುತ್ತದೆ
ಸಾಧನೆಯ ಮಾರ್ಗದಲ್ಲಿ ಆಯಾ ಹಂತದಲ್ಲಿ ಪ್ರವಾಸ ಮಾಡುವಾಗ ಸಾಧನೆಯ ನಿಯಮಗಳು ಸಹ ಬದಲಾಗುತ್ತವೆ, ಎಂದರೆ ಶೇ. ೬೧ ಮಟ್ಟವನ್ನು ತಲುಪುವ ವರೆಗೆ ‘ಪ್ರಕೃತಿಗೆ ಅನುರೂಪವಾಗಿರುವ ಸಾಧನೆ !’ ಎಂಬ ರೀತಿಯ ಸ್ವೇಚ್ಛಾದರ್ಶಕ ಅಂಶವಿರುತ್ತದೆ. ಶೇ. ೬೧ ಮಟ್ಟದ ಮುಂದಿನ ಪ್ರವಾಸ ಮಾಡುವಾಗ ‘ಗುರುಕಾರ್ಯವನ್ನು ಮುಂದುವರಿಸುವುದಕ್ಕಾಗಿಯೇ ಸಾಧನೆ !’ ಎಂಬ ಸೂತ್ರ ಅನ್ವಯಿಸುತ್ತದೆ.
– (ಸದ್ಗುರು) ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ