ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ಸಾಧನೆಯ ವಿಷಯದಲ್ಲಿ ಮಾಡಿದ
ಅಮೂಲ್ಯ ಮಾರ್ಗದರ್ಶನ.
೧. ಸಾಧಕರು ನಿರಪೇಕ್ಷವಾಗಿ ಪ್ರಯತ್ನಿಸಬೇಕು !
‘ಸಾಧನೆಯಲ್ಲಿ ಧ್ಯೇಯವನ್ನು ನಿರ್ಧರಿಸಿದ ಮೇಲೆ ಅನೇಕ ಸಾಧಕರಿಗೆ ‘ಧ್ಯೇಯ ಪೂರ್ಣವಾಗಬೇಕು, ಎಂದು ಅನಿಸುತ್ತದೆ. ಧ್ಯೇಯವು ಪೂರ್ಣವಾಗದಿದ್ದರೆ ಸಾಧಕರು ಅದೇ ವಿಚಾರದಲ್ಲಿ ಸಿಲುಕುತ್ತಾರೆ. ಹೀಗೆ ಸತತ ಆಗುತ್ತಿದ್ದರೆ, ಮನಸ್ಸಿಗೆ ತೊಂದರೆಯಾಗಿ, ನಿರಾಶೆಯಾಗುತ್ತದೆ. ಆಗ ‘ಧ್ಯೇಯ ಇಡಬಾರದು ಎಂದು ಅನಿಸುತ್ತದೆ. ‘ಸಾಧಕರು ಫಲದ ಅಪೇಕ್ಷೆಯನ್ನು ಇಟ್ಟುಕೊಳ್ಳುತ್ತಾರೆ, ಇದು ತಪ್ಪಾಗಿದೆ. ಸಾಧಕರು ನಿರಪೇಕ್ಷವಾಗಿ ಪ್ರಯತ್ನಿಸಬೇಕು.
೨. ಧ್ಯೇಯವು ಯಾವತ್ತೂ ದೊಡ್ಡದಾಗಿರಬೇಕು !
ಯಾವತ್ತೂ ಧ್ಯೇಯವನ್ನು ಇಡಲೇಬೇಕು ಮತ್ತು ಯಾವತ್ತೂ ಅದು ದೊಡ್ಡದಾಗಿರಬೇಕು. ಆಂಗ್ಲದಲ್ಲಿ ಒಂದು ಗಾದೆ ಮಾತಿದೆ. ‘ಲೊ ಎಮ್ ಇಸ್ ಕ್ರೈಮ್, ಎಂದರೆ ‘ಸಣ್ಣ ಧ್ಯೇಯ ಇಡುವುದು, ಅಪರಾಧವಾಗಿದೆ. ನಾವು ಸಹ ‘ಹಿಂದೂ ರಾಷ್ಟ್ರ ಎಂಬ ದೊಡ್ಡ ಧ್ಯೇಯವನ್ನು ಇಟ್ಟಿದ್ದೇವೆ.
೩. ತಳಮಳದಿಂದ ಪ್ರಯತ್ನಿಸುವುದು ಶ್ರೇಯಸ್ಕರ !
ಧ್ಯೇಯವನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿದೆ. ಆದರೆ ಉಳಿದ ಘಟಕಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ೨ ತಿಂಗಳಲ್ಲಿ ಧ್ಯೇಯವು ಪೂರ್ಣವಾಗದಿದ್ದರೆ, ಇನ್ನೂ ಸ್ವಲ್ಪ ಸಮಯವನ್ನು ಹೆಚ್ಚಿಸಬೇಕು. ನಾವು ಧ್ಯೇಯವನ್ನು ನಿರ್ಧರಿಸುತ್ತಿದ್ದೇವೆ ಎಂದರೆ ನಮ್ಮಲ್ಲಿ ತಳಮಳವಿದೆ ಎಂದರ್ಥ. ನಾವು ಕರ್ಮವನ್ನು ಮಾಡುತ್ತಾ ಇರಬೇಕು. ಸಾಧನೆಯಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿದೆ. ಇದರಿಂದ ಸಾಧನೆಯಲ್ಲಿ ಶೀಘ್ರ ಪ್ರಗತಿಯಾಗುತ್ತದೆ. ಫಲದ ಅಪೇಕ್ಷೆಯ ಬಗ್ಗೆ ವಿಚಾರ ಮಾಡುವವರು ಮಾತ್ರ, ಕರ್ಮದ ಮೂಲ ಸಿದ್ಧಾಂತದ ಸ್ವಯಂಸೂಚನೆಯನ್ನು ಕೊಡಬೇಕು.
ಆ ಸಿದ್ಧಾಂತವು ಹೀಗಿದೆ,
ಕರ್ಮಣ್ಯೆವಾಧಿಕಾರಸ್ತೆ ಮಾ ಫಲೇಷು ಕದಾಚನ |
ಮಾ ಕರ್ಮಫಲ ಹೆತುರ್ಭೂರ್ಮಾ ತೆ ಸಙ್ಗೋಸ್ತ್ವಕರ್ಮಣಿ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೪೭
ಅರ್ಥ : ನಿನಗೆ ಕರ್ಮ ಮಾಡುವ ಅಧಿಕಾರವಿದೆ. ಕರ್ಮದ ಫಲದ ಬಗ್ಗೆ ಯಾವತ್ತೂ ಅಧಿಕಾರ ಇರುವುದಿಲ್ಲ. ಆದುದರಿಂದ ನೀನು ಕರ್ಮದ ಫಲವನ್ನು ಇಚ್ಛಿಸುವವನಾಗದಿರು, ಅದೇ ರೀತಿ ಕರ್ಮವನ್ನು ಮಾಡಬೇಡವೆಂದೂ ಆಗ್ರಹಿಸದಿರು.
೪. ಕೊಡು-ಕೊಳ್ಳುವ ಲೆಕ್ಕ ತೀರಿಸಲು ಅನೇಕ ವರ್ಷಗಳು ಬೇಕಾಗುವುದರಿಂದ ಪ್ರಗತಿಯಾಗಲು ತಡವಾಗುತ್ತಿದ್ದರೆ ತನಗೆ ದೋಷ ಕೊಡಬಾರದು !
ಕೆಲವು ಸಾಧಕರು ೧೦ ವರ್ಷ ಸಾಧನೆ ಮಾಡಿ ಸಂತರಾದರೆ ಕೆಲವರು ೩೦-೪೦ ವರ್ಷ ಸಾಧನೆ ಮಾಡಿ ಸಂತರಾದರು. ಪ್ರಗತಿಯಾಗಲು ತಡವಾದವರ ಸಾಧನೆಯು ಕೊಡು-ಕೊಳ್ಳುವ ಲೆಕ್ಕ ತೀರಿಸಲು ಬಳಸಲ್ಪಟ್ಟಿತು. ನಾವು ಪ್ರಯತ್ನ ಮಾಡಲು ಕಡಿಮೆ ಬಿದ್ದರೆ, ನಾವು ನಮಗೇ ದೋಷ ಕೊಡುವುದು ಸರಿ ಇದೆ; ಆದರೆ ಪ್ರಯತ್ನವನ್ನು ಯೋಗ್ಯ ರೀತಿಯಿಂದ ಮಾಡುತ್ತಿದ್ದೇವೆ, ಎನ್ನುವುದಾದರೆ ತನಗೇ ದೋಷ ಕೊಡದಿರಿ. ಮಾನಸಿಕ ಸ್ತರದ ಅಡಚಣೆಗಳು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು (ತಪ್ಪುಗಳನ್ನು ಬರೆಯುವುದು, ಸ್ವಯಂಸೂಚನ ಸತ್ರ ಮಾಡುವುದು ಇತ್ಯಾದಿ ) ಮಾಡಿ ನಿವಾರಣೆ ಮಾಡಬಹುದು; ಆದರೆ ಕೊಡು-ಕೊಳ್ಳುವ ಲೆಕ್ಕವನ್ನು ತೀರಿಸುವುದಕ್ಕೆ ಕೆಲವು ವರ್ಷಗಳು ಬೇಕಾಗಬಹುದು.
೫. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಮಹತ್ವ
ಸಾಧನೆಯಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯು ಅನಿವಾರ್ಯವಾಗಿದೆ. ಈಶ್ವರನಲ್ಲಿ ಒಂದೂ ದೋಷವಿಲ್ಲದಿರುವುದರಿಂದ ನಾವು ದೋಷಸಹಿತ ಈಶ್ವರನೊಡನೆ ಏಕರೂಪರಾಗಲು ಸಾಧ್ಯವಿಲ್ಲ.
೬. ಈಶ್ವರಪ್ರಾಪ್ತಿಗಾಗಿ ಸಂಘರ್ಷವನ್ನು ಮಾಡಲೇಬೇಕು !
ಕೆಲವು ಸಾಧಕರಿಗೆ ‘ಎಲ್ಲವೂ ಸಿದ್ಧವಾಗಿ (ರೆಡಿಮೇಡ್) ಸಿಗಬೇಕು, ಎಂದೆನಿಸುತ್ತದೆ. ಸಂಘರ್ಷ ಬೇಡ ಅನಿಸುತ್ತದೆ. ತೀವ್ರ ಸಾಧನೆ ಮಾಡದೇ ಈಶ್ವರ ಸಿಗುವನೇ ? ನಾವು ಒಂದು ಹೆಜ್ಜೆ ಇಟ್ಟರೆ ಈಶ್ವರನು ಸಹಾಯ ಮಾಡುವನು. ನಾವು ನಮ್ಮ ಕ್ಷಮತೆಗನುಸಾರ ಶ್ರಮವಹಿಸಿ ಪ್ರಯತ್ನ ಮಾಡಬೇಕು.
೭. ಭೂತಕಾಲವನ್ನು ಮರೆತು ಮುಂದೆ ಹೋಗಬೇಕು !
ಇದುವರೆಗೆ ನಮ್ಮಿಂದ ಕೆಲವು ತಪ್ಪುಗಳಾಗಿರಬಹುದು, ಆದರೆ ಅದರ ಬಗ್ಗೆ ವಿಚಾರ ಮಾಡುವುದು ಬೇಡ. ಅದು ಭೂತಕಾಲವಾಗಿದೆ. ಅದನ್ನು ಮರೆತು ಮುಂದೆ ಹೋಗಲು ಪ್ರಯತ್ನಿಸಬೇಕು.
೮. ಸಾಧನೆ ಮಾಡುವುದೆಂದರೆ ಪೂರ್ಣಸಮಯ ನೌಕರಿಯಾಗಿದೆ !
ಸಾಧನೆಯಲ್ಲಿ ಪ್ರಗತಿಯಾಗಲು ತಡವಾದರೆ, ಸಾಧಕರ ಮನಸ್ಸಿನಲ್ಲಿ ಸಾಧನೆ ಬಿಡುವ ಮತ್ತು ನೌಕರಿ ಮಾಡುವ ವಿಚಾರಗಳು ಬರುತ್ತವೆ. ನೌಕರಿ ಮಾಡುವುದಾದರೆ ಭಗವಂತನ ನೌಕರಿ ಮಾಡೋಣ. ದಾಸ ನಾಗುವುದಾದರೆ, ಭಗವಂತನ ದಾಸರಾಗಬೇಕು. ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವುದೆಂದರೆ ಪೂರ್ಣ ಸಮಯ ನೌಕರಿ (ಫುಲ್ ಟೈಮ್‌ಜಾಬ್) ಆಗಿದೆ. – (ಪರಾತ್ಪರ ಗುರು) ಡಾ. ಆಠವಲೆ