ಪ.ಪೂ. ಡಾಕ್ಟರರು ಅಪಾರ ಪರಿಶ್ರಮಪಟ್ಟು ನಿರ್ಮಿಸಿದ ಧ್ವನಿಚಿತ್ರೀಕರಣ ಸೇವೆ ಮತ್ತು ಸಂಸ್ಥೆಯ ಪ್ರಥಮ ಉತ್ಪಾದನೆಗಳು !

ಪ.ಪೂ. ಡಾಕ್ಟರರು ವಿವಿಧ ಸ್ಥಳಗಳಲ್ಲಿ ಅಧ್ಯಾತ್ಮಶಾಸ್ತ್ರದ ಅಭ್ಯಾಸ ವರ್ಗಗಳನ್ನು ತೆಗೆದುಕೊಳ್ಳುತ್ತಿದ್ದರು.

ಶ್ರೀ. ದಿನೇಶ ಶಿಂದೆ

೧೯೯೭ ರಲ್ಲಿ ಪ.ಪೂ. ಡಾಕ್ಟರರು ಠಾಣೆಯಲ್ಲಿ ತೆಗೆದುಕೊಳ್ಳುತ್ತಿದ್ದ ಅಭ್ಯಾಸ ವರ್ಗಕ್ಕೆ ಶ್ರೀ. ಶ್ರೀಕಾಂತ ಪಾಟೀಲ ಎಂಬ ಸಾಧಕರು ಬರುತ್ತಿದ್ದರು. ಅವರ ಬಳಿ ಅವರ ಸ್ವಂತ ವಿಡಿಯೋ ಕ್ಯಾಮೆರಾ ಇತ್ತು. ಅವರು ಪ.ಪೂ ಡಾಕ್ಟರರ ಡೊಂಬಿವಿಲಿಯ ಅಭ್ಯಾಸವರ್ಗದ ಚಿತ್ರೀಕರಣ ಮಾಡಿದ್ದರು. ಮುಂದೆ ಸಂಸ್ಥೆಯ ಕಾರ್ಯವನ್ನು ನೋಡಿ ಅವರು ಅವರ ವಿಡಿಯೋ ಕ್ಯಾಮೆರಾವನ್ನು ಸಂಸ್ಥೆಯ ಕಾರ್ಯಕ್ಕಾಗಿ ಅರ್ಪಣೆ ಮಾಡಿದರು. ಆ ಸಮಯದಲ್ಲಿ ಆ ವಿಡಿಯೋ ಕ್ಯಾಮೆರಾದ ಬೆಲೆ ಸುಮಾರು ೭೦ ರಿಂದ ೮೦ ಸಾವಿರ ರೂಪಾಯಿಗಳಷ್ಟಿತ್ತು. ಆ ಕ್ಯಾಮೆರಾ ಧ್ವನಿ ಚಿತ್ರೀಕರಣ ಸೇವೆಗಾಗಿ ಅರ್ಪಣೆಯಲ್ಲಿ ದೊರೆತ ಮೊದಲ ವಿಡಿಯೋ ಕ್ಯಾಮೆರಾ ಆಗಿತ್ತು.


ಪ.ಪೂ. ಡಾಕ್ಟರರು ಸೇವೆಗಾಗಿ ಒಬ್ಬರನ್ನು ಸಿದ್ಧಪಡಿಸುವುದು ಮತ್ತು ಅವನು ಅನೇಕ ಸಾಧಕರನ್ನು ಸಿದ್ಧಪಡಿಸುವುದು, ಈ ದೃಷ್ಟಿಕೋನದಿಂದ ಸಮಷ್ಟಿ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದರು.

ಪ.ಪೂ. ಭಕ್ತರಾಜ ಮಹಾರಾಜರ ಎಲ್ಲ ಧ್ವನಿಮುದ್ರಿಕೆಗಳ ಮತ್ತು ಧ್ವನಿಚಿತ್ರಸುರುಳಿಗಳ ಸಂಕಲನವನ್ನು ಪ.ಪೂ. ಡಾಕ್ಟರರು ಮಾಡಿಸಿಕೊಂಡರು. ಈ ಸಂಕಲನವನ್ನು ಅವರು ತಾವೇ ಸ್ವತಃ ಪರಿಶೀಲಿಸುತ್ತಿದ್ದರು ಮತ್ತು ಅದರಲ್ಲಿರುವ ತಪ್ಪುಗಳನ್ನು ತೋರಿಸುತ್ತಿದ್ದರು. ಇದರಿಂದ ಪ್ರತಿಯೊಂದು ಸಲ ಏನಾದರೂ ಹೊಸತು ಕಲಿಯಲು ಸಿಗುತ್ತಿತ್ತು. ಆ ಸಮಯದಲ್ಲಿ ಅವರು ಹೇಳಿದ ವಾಕ್ಯ ನನಗೆ ಇಂದಿಗೂ ನೆನಪಿದೆ, ಅವರು, ಸಂಕಲನ ಮಾಡುವವರು ಮತ್ತು ಚಿತ್ರೀಕರಣ ಮಾಡುವವರು ಹೇಗೆ ತಯಾರಿರಬೇಕೆಂದರೆ, ಅವರು ಇತರರನ್ನು ತಯಾರು ಮಾಡಬೇಕು. ಇದರಿಂದ ಚಿತ್ರೀಕರಣಕ್ಕಾಗಿ ಮತ್ತು ಸಂಕಲನಕ್ಕಾಗಿ ನಮ್ಮ ಬಳಿ ಸಾಧಕರಿಲ್ಲ ಎಂಬ ಪರಿಸ್ಥಿತಿ ಬರುವುದಿಲ್ಲ. ಪ.ಪೂ. ಡಾಕ್ಟರರ ಈ ಉದ್ಗಾರದ ಸತ್ಯತೆಯನ್ನು ಇಂದು ನಾನು ೨೫ ವರ್ಷಗಳ ಬಳಿಕ ಪ್ರತ್ಯಕ್ಷ ಅನುಭವಿಸುತ್ತಿದ್ದೇನೆ. ಇಂದು ಧ್ವನಿಚಿತ್ರೀಕರಣದ ಸೇವೆಯಲ್ಲಿ ಅನೇಕ ಉಪ ಸೇವೆಗಳು ನಿರ್ಮಾಣವಾಗಿವೆ ಮತ್ತು ಈ ಎಲ್ಲ ಸೇವೆಗಳಲ್ಲಿ ಅನೇಕ ಸಾಧಕರು ಭಾಗವಹಿಸುತ್ತಿದ್ದಾರೆ. ಈ ರೀತಿ ಅವರು ನನ್ನನ್ನು ಸಿದ್ಧಪಡಿಸಿ ಮುಂದೆ ಸಮಷ್ಟಿ ಸಾಧನೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟರು. ಇದಕ್ಕಾಗಿ ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. – ಶ್ರೀ. ದಿನೇಶ ಶಿಂದೆ.

೧. ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣಕ್ಕಾಗಿ ಬೇಕಾಗುವ ಉಪಕರಣಗಳನ್ನು ಇತರರಿಂದ ಕೇಳಿ ತರುವುದು ಅಥವಾ ಬಾಡಿಗೆಯಿಂದ ತರುವುದು.

ನಾನು ಪ.ಪೂ. ಡಾಕ್ಟರರ ಮಾರ್ಗದರ್ಶನಕ್ಕನುಸಾರ ಧ್ವನಿಚಿತ್ರೀಕರಣದ ಸೇವೆಯನ್ನು ಮಾಡತೊಡಗಿದೆ. ಸನಾತನದ ನಿರ್ಮಿತಿಯೇ ಮೂಲದಲ್ಲಿ ಶೂನ್ಯದಿಂದ ಪ್ರಾರಂಭವಾಗಿರುವುದರಿಂದ ೧೯೯೦ ರಿಂದ ೧೯೯೭ ರ ಕಾಲಾವಧಿಯಲ್ಲಿ ಧ್ವನಿವರ್ಧಕ (ಮೈಕ್), ಧ್ವನಿಮುದ್ರೀಕರಣ ಯಂತ್ರ (ಟೇಪರಿಕಾರ್ಡರ್), ಧ್ವನಿಚಿತ್ರೀಕರಣ ಯಂತ್ರ (ವೀಡಿಯೋ ಕ್ಯಾಮರಾ), ಛಾಯಾಚಿತ್ರೀಕರಣ ಯಂತ್ರ (ಫೊಟೋ ಕ್ಯಾಮೆರಾ), ಸಂಕಲನಕ್ಕಾಗಿ ಬೇಕಾಗುವ ವಿ.ಸಿ.ಆರ್. ಮುಂತಾದ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣ ಮಾಡಲು ಬೇಕಾಗುವ ಉಪಕರಣಗಳು ನಮ್ಮಲ್ಲಿ ಇರಲಿಲ್ಲ. ಇವೆಲ್ಲ ಉಪಕರಣಗಳನ್ನು ಪ.ಪೂ. ಡಾಕ್ಟರರು ಇತರರಿಂದ ಕೇಳಿ ತರುತ್ತಿದ್ದರು ಅಥವಾ ಸಾಧ್ಯವಾದರೆ ಬಾಡಿಗೆಗೆ ತಂದು ಕಾರ್ಯಕ್ರಮದ ಧ್ವನಿಮುದ್ರಣ ಅಥವಾ ಧ್ವನಿಚಿತ್ರೀಕರಣ ಮಾಡಲಾಗುತ್ತಿತ್ತು; ಆದರೆ ಹೀಗೆ ಯಾವಾಗಲೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.

೨. ಬಹಳ ಕಷ್ಟಪಟ್ಟು ಪ.ಪೂ. ಡಾಕ್ಟರರು ಧ್ವನಿಮುದ್ರಣ ಮತ್ತು ಧ್ವನಿಚಿತ್ರಮುದ್ರಿಕೆಗಳ ಸಂಕಲನದ ವಿವಿಧ ಸೂಕ್ಷ್ಮ ವಿಷಯಗಳನ್ನು ಕಲಿಸುವುದು.

ಧ್ವನಿಚಿತ್ರೀಕರಣದ ಸೇವೆಯನ್ನು ಪ್ರಾರಂಭ ಮಾಡಿದ ಬಳಿಕ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣವನ್ನು ಹೇಗೆ ಮಾಡಬೇಕು ? ಅದಕ್ಕಾಗಿ ಬೆಳಕಿನ ವ್ಯವಸ್ಥೆ ಹೇಗಿರಬೇಕು ? ಸಂಕಲನವನ್ನು ಹೇಗೆ ಮಾಡಬೇಕು ? ಈ ಎಲ್ಲ ವಿಷಯಗಳನ್ನು ಸ್ವತಃ ಪ.ಪೂ. ಡಾಕ್ಟರರು ನನಗೆ ಕಲಿಸಿದರು. ಬಾಬಾರವರು (ಪ.ಪೂ. ಡಾಕ್ಟರರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರನ್ನು ಎಲ್ಲರೂ ಬಾಬಾ ಎಂದು ಕರೆಯುತ್ತಿದ್ದರು) ಆಗಾಗ ಹೇಳಿರುವ ಭಜನೆಗಳು, ಭಕ್ತರೊಂದಿಗಿನ ಅವರ ಸಂಭಾಷಣೆ ಮತ್ತು ಪ.ಪೂ. ಬಾಬಾರವರ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಕಾರ್ಯಕ್ರಮ ಇವೆಲ್ಲವುಗಳ ಧ್ವನಿಮುದ್ರಿಕೆ ಮತ್ತು ಧ್ವನಿಚಿತ್ರಮುದ್ರಿಕೆಗಳನ್ನು ಪ.ಪೂ. ಬಾಬಾರ ಭಕ್ತರಿಂದ ಪಡೆದು ಪ.ಪೂ. ಡಾಕ್ಟರರು ಅವುಗಳನ್ನು ಸಂಗ್ರಹಿಸಿಟ್ಟಿದ್ದರು. ಪ್ರಾರಂಭದಲ್ಲಿ ಪ.ಪೂ. ಡಾಕ್ಟರರು ನನಗೆ ಪ.ಪೂ. ಬಾಬಾರವರು ಹಾಡಿದ ಭಜನೆಗಳ ಧ್ವನಿಮುದ್ರಣದ ಸಂಕಲನ (ಆಡಿಯೋ ಎಡಿಟಿಂಗ್) ಮಾಡಲು ಕಲಿಸಿದರು.

ಅನಂತರ ಬಾಬಾರವರ ಬೇರೆ ಬೇರೆ ಕಾರ್ಯಕ್ರಮಗಳ ಧ್ವನಿಚಿತ್ರಮುದ್ರಿಕೆಗಳ ಸಂಕಲನ (ವೀಡಿಯೋ ಎಡಿಟಿಂಗ್) ಮಾಡಲು ಕಲಿಸಿದರು ಕಾರ್ಯಕ್ರಮಕ್ಕನುಗುಣವಾಗಿ ಶೀರ್ಷಿಕೆಯನ್ನು ಹೇಗೆ ಕೊಡಬೇಕು ? ಕಾರ್ಯಕ್ರಮದ ಸ್ಥಳ, ದಿನಾಂಕ ಮತ್ತು ವಿಳಾಸವನ್ನು ಎಲ್ಲಿ ಹಾಕಬೇಕು ? ಸಂತರು ಮತ್ತು ಭಕ್ತರ ಹೆಸರುಗಳ ಸ್ಕ್ರೋಲಿಂಗ / ತಳಪಟ್ಟಿಯನ್ನು ಹೇಗೆ ಹಾಕಬೇಕು ? ಇವೆಲ್ಲವುಗಳ ಬಣ್ಣಗಳ ಸಂಯೋಜನೆಯನ್ನು ಸಾತ್ತ್ವಿಕವಾಗಿ ಹೇಗೆ ಮಾಡಬೇಕು ? ಯಾವ ದೃಶ್ಯದಿಂದ ಕಾರ್ಯಕ್ರಮವನ್ನು ಆರಂಭಿಸಬೇಕು. ದೃಶ್ಯಗಳ ಸಮನ್ವಯತೆಯನ್ನು ಕಾಯ್ದುಕೊಳ್ಳಲು ಯಾವ ದೃಶ್ಯಗಳನ್ನು ತೆಗೆದು ಕೊಳ್ಳಬೇಕು ? ತೆಗೆದುಕೊಂಡ ದೃಶ್ಯಗಳ ಸಮಯಾವಧಿ (ಕೌಂಟರ್ಸ)ಯನ್ನು ಹೇಗೆ ಬರೆಯಬೇಕು ? ನಿವೇದನೆಯನ್ನು ಹೇಗೆ ಬರೆಯ ಬೇಕು ? ವಿ.ಸಿ.ಆರ್. ಟೇಪಿನ ಹೆಡ್ಡನ್ನು ಯಾವಾಗ ಮತ್ತು ಹೇಗೆ ಸ್ವಚ್ಛಗೊಳಿಬೇಕು ? ಹೀಗೆ ಸಂಕಲನದಲ್ಲಿನ ಮತ್ತು ತಾಂತ್ರಿಕ ಸ್ತರದಲ್ಲಿನ ಅನೇಕ ಸೂಕ್ಷ್ಮ ವಿಷಯಗಳನ್ನು ಪ.ಪೂ.ಡಾಕ್ಟರರು ಸ್ವತಃ ನನಗೆ ಕಲಿಸಿದರು. ನನಗೆ ಕಲಿಸಿ ನನ್ನನ್ನು ತಯಾರಿಸಲು ಅವರು ಬಹಳ ಕಷ್ಟಪಟ್ಟರು. ಅದಕ್ಕಾಗಿ ನಾನು ಅವರಿಗೆ ಎಷ್ಟು ಕೃತಜ್ಞತೆಗಳನ್ನು ಅರ್ಪಿಸಿದರೂ ಕಡಿಮೆಯೇ ಆಗಿದೆ.

೩. ಪ.ಪೂ. ಭಕ್ತರಾಜ ಮಹಾರಾಜರು ಹಾಡಿದ ಭಜನೆಗಳ ಧ್ವನಿಮುದ್ರಿಕೆಗಳನ್ನು ತಯಾರಿಸುವುದು.

೩ ಅ. ಪ.ಪೂ. ಡಾಕ್ಟರರು ಸಮಷ್ಟಿಗೆ ಆಧ್ಯಾತ್ಮಿಕ ಸ್ತರದಲ್ಲಿ ಉಪಯೋಗವಾಗುವ ಸಂಗತಿಗಳ ವಿಚಾರ ಮಾಡಿ ಧ್ವನಿಮುದ್ರಿಕೆಗಳನ್ನು ತಯಾರಿಸಲು ಭಜನೆಗಳನ್ನು ಆರಿಸಿಕೊಂಡರು : ೧೯೯೨ ರ ಗುರುಪೂರ್ಣಿಮೆಯು ಮುಂಬಯಿಯಲ್ಲಿತ್ತು. ಅದರಲ್ಲಿ ಪ.ಪೂ. ಬಾಬಾರವರು ಉಪಸ್ಥಿತರಿರುವರಿದ್ದರು. ಆದುದರಿಂದ ಪ.ಪೂ. ಬಾಬಾರವರು ಹಾಡಿದ ಭಜನೆಗಳ ಧ್ವನಿಮುದ್ರಿಕೆಗಳನ್ನು ತಯಾರಿಸಲು ಪ.ಪೂ. ಡಾಕ್ಟರರು ನಿರ್ಧರಿಸಿದರು. ಈ ಭಜನೆಗಳನ್ನು ವಿಷಯಕ್ಕನುಗುಣವಾಗಿ ವರ್ಗೀಕರಿಸಿ ೧೨ ಭಾಗಗಳನ್ನು ಮಾಡಲು ಅವರು ನಿರ್ಧರಿಸಿದರು. ಇದಕ್ಕಾಗಿ ಪ.ಪೂ. ಡಾಕ್ಟರರು ಸ್ವತಃ ಪ.ಪೂ. ಬಾಬಾರವರ ಭಕ್ತರಿಂದ ಸಂಗ್ರಹಿಸಿದ ೨೦೦ ರಿಂದ ೨೫೦ ರಷ್ಟು ಧ್ವನಿಮುದ್ರಿಕೆಗಳನ್ನು ಕೇಳಿದರು. ಅದರಲ್ಲಿನ ಕೆಲವು ಆಯ್ದ ಭಜನೆಗಳನ್ನು ತೆಗೆದುಕೊಳ್ಳುವುದೆಂದು ನಿರ್ಧರಿಸಿದರು. ಇದಕ್ಕಾಗಿ ಹಿನ್ನೆಲೆ ಸಂಗೀತಕ್ಕೆ ಮಹತ್ವವನ್ನು ನೀಡದೇ ಪ.ಪೂ. ಬಾಬಾರವರ ಶಬ್ದಗಳು ಸರಿಯಾಗಿ ಕೇಳಿಸುತ್ತಿವೆಯೇ ? ಭಜನೆಗಳನ್ನು ಕೇಳುವಾಗ ಯಾವ ಅನುಭೂತಿಗಳು ಬರುತ್ತವೆ ? ಈ ರೀತಿ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡಿ ಭಜನೆಗಳನ್ನು ತೆಗೆದು ಕೊಂಡರು. ಇಂತಹ ಭಜನೆಗಳನ್ನು ತೆಗೆದುಕೊಳ್ಳುವುದರ ಹಿಂದೆ ಪ.ಪೂ. ಡಾಕ್ಟರರಲ್ಲಿ ಸಮಷ್ಟಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗ ಬೇಕೆನ್ನುವ ಒಂದೇ ವಿಚಾರವಿತ್ತು.

೩ ಆ. ಸಂಕಲನಗೊಳಿಸಿದ ಪ್ರತಿಯೊಂದು ಭಜನೆಯನ್ನು ಪ.ಪೂ. ಡಾಕ್ಟರರು ತಾವೇ ಸ್ವತಃ ಪರಿಶೀಲಿಸಿ ಅಂತಿಮಗೊಳಿಸಿದರು : ಪ. ಪೂ. ಬಾಬಾರವರ ಭಜನೆಗಳನ್ನು ಹೇಳುವಾಗ ಬಹಳಷ್ಟು ಸಲ ಕೆಲವು ಸಾಲುಗಳನ್ನು ಪುನಃ ಪುನಃ ಹೇಳುತ್ತಿದ್ದರು. ಇಂತಹ ಭಜನೆಗಳ ಸಂಕಲನ ಮಾಡುವಾಗ ಒಂದೇ ಸಾಲು ತೆಗೆದು ಕೊಳ್ಳಲು ಪ.ಪೂ. ಡಾಕ್ಟರರು ಹೇಳುತ್ತಿದ್ದರು. ಆ ಸಮಯದಲ್ಲಿ ಈಗಿನಂತೆ ಗಣಕಯಂತ್ರದಲ್ಲಿ ಸಂಕಲನಗೊಳಿಸುವ ಯಂತ್ರಗಳು ಇರಲಿಲ್ಲ. ಟೇಪರಿಕಾರ್ಡರ ಮೇಲೆ ಆ ಭಜನೆಗಳನ್ನು ಸಂಕಲನ ಮಾಡಲಾಗುತ್ತಿತ್ತು. ಆ ಸಾಲು ಒಮ್ಮೆ ತೆಗೆದುಕೊಂಡು ಉಳಿದ ಸಾಲುಗಳನ್ನು ಅಳಿಸಿ ಹಾಕಲು ಅನೇಕ ಗಂಟೆಗಳ ಕಾಲಾವಧಿ ತಗಲುತ್ತಿತ್ತು. ಇಂತಹ ಪದ್ಧತಿಯಿಂದ ಸಂಕಲನಗೊಳಿಸಿದ ಪ್ರತಿಯೊಂದು ಭಜನೆಯನ್ನು ಪ.ಪೂ. ಡಾಕ್ಟರರು ಸ್ವತಃ ಕೇಳಿ ಅಂತಿಮಗೊಳಿಸುತ್ತಿದ್ದರು.

೩. ಇ. ಭಜನೆಗಳನ್ನು ಸಂಕಲನ ಮಾಡುವಾಗ ಭಜನೆಗಳಿಂದ ಬರುವ ಅನುಭೂತಿಗಳಲ್ಲಿ ರಮಿಸದೇ ಪ.ಪೂ. ಡಾಕ್ಟ್ಟರರು ಸಮಷ್ಟಿಯ ವಿಚಾರ ಮತ್ತು ಸಮಯದ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸುವುದು: ಪ.ಪೂ. ಬಾಬಾರವರು ಹಾಡಿದ ಭಜನೆಗಳ ಸಂಕಲನ ಮಾಡುವಾಗ ಭಜನೆಗಳನ್ನು ಪುನಃ ಪುನಃ ಕೇಳಬೇಕು, ಶಾಂತವೆನಿಸುವುದು, ಧ್ಯಾನ ತಗಲುವುದು ಹೀಗೆ ವಿವಿಧ ಪ್ರಕಾರದ ಅನುಭೂತಿಗಳು ಬರುತ್ತಿದ್ದವು. ಕೆಲವೊಮ್ಮೆ ಆ ಅನುಭೂತಿಗಳಲ್ಲಿಯೇ ನನ್ನ ಬಹಳಷ್ಟು ಸಮಯ ವ್ಯಯವಾಗುತ್ತಿತ್ತು. ಆ ಸಮಯದಲ್ಲಿ ಸಮಷ್ಟಿಯ ವಿಚಾರ ಮತ್ತು ಸಮಯಪಾಲನೆಯ ಮಹತ್ವವನ್ನು ಪ.ಪೂ. ಡಾಕ್ಟರರು ಅರಿವು ಮಾಡಿಕೊಡುತ್ತಿದ್ದರು. ನನ್ನ ಸಮಷ್ಟಿ ಸಾಧನೆಯಾಗಬೇಕೆನ್ನುವುದೇ ಅವರ ತಳಮಳವಾಗಿರುತ್ತಿತ್ತು.

೩ ಈ. ಪ.ಪೂ. ಭಕ್ತರಾಜ ಮಹಾರಾಜರು ಹಾಡಿದ ಭಜನೆಗಳ ಧ್ವನಿಸುರುಳಿಗಳು ಸಂಸ್ಥೆಯು ತಯಾರಿಸಿದ ಪ್ರಪ್ರಥಮ ಉತ್ಪಾದನೆಯಾಗಿವೆ : ಪ.ಪೂ. ಬಾಬಾರವರು ಹಾಡಿದ ಭಜನೆಗಳ ೧೨ ಭಾಗಗಳು ಸಿದ್ಧವಾದವು. ಇವು ಸನಾತನದ ಪ.ಪೂ. ಬಾಬಾರವರ ಭಕ್ತರಿಗಾಗಿ ಮತ್ತು ಸನಾತನ ಸಂಸ್ಥೆಯ ಸಾಧಕರಿಗಾಗಿ ಲಾಭ-ನಷ್ಟವಿಲ್ಲದ ಪ್ರಪ್ರಥಮ ಉತ್ಪಾದನೆಯಾಗಿತ್ತು. ನಿರ್ಧರಿಸಲ್ಪಟ್ಟಂತೆ ಈ ಧ್ವನಿಮುದ್ರಣದ ಪ್ರಕಾಶನವು ೧೯೯೨ ರಲ್ಲಿ ಮುಂಬಯಿಯಲ್ಲಿ ಜರುಗಿದ ಗುರುಪೂರ್ಣಿಮೆಯ ಮಹೋತ್ಸವದ ಸಮಯದಲ್ಲಿ ಪ್ರತ್ಯಕ್ಷ ಪ.ಪೂ. ಬಾಬಾರವರ ಕರಕಮಲಗಳಿಂದ ಜರುಗಿತು. ಪ್ರಾರಂಭದಲ್ಲಿ ಆರ್ಥಿಕ ಮಿತಿಯನ್ನು ಗಮನದಲ್ಲಿಟ್ಟು ಕೊಂಡು ಕಡಿಮೆ ಸಂಖ್ಯೆಯಲ್ಲಿ ಧ್ವನಿಮುದ್ರಣದ ಪ್ರತಿಗಳನ್ನು ತಯಾರಿಸಲಾಯಿತು ಮತ್ತು ಅವುಗಳನ್ನು ಮಾರಾಟಕ್ಕೆ ಇಡಲಾಯಿತು. ಬಳಿಕ ಎಷ್ಟು ಧ್ವನಿಸುರುಳಿಗಳು ಮಾರಾಟವಾಗುತ್ತಿದ್ದವೋ, ಅಷ್ಟೇ ಧ್ವನಿಸುರುಳಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಪುನಃ ಮೂಲ ಪ್ರತಿಗಳನ್ನು ತಯಾರಿಸಲಾಗುತ್ತಿತ್ತು. ಇದೆಲ್ಲವನ್ನು ನಾನೊಬ್ಬನೇ ಮಾಡುತ್ತಿದ್ದೆನು, ಆದುದರಿಂದ ನನಗೆ ಸಾಕಾಗಿ ಹೋಗುತ್ತಿತ್ತು ; ಆದರೆ ಅದರಲ್ಲಿ ಅಷ್ಟೇ ಆನಂದವೂ ಸಿಗುತ್ತಿತ್ತು.

೪. ಪ.ಪೂ. ಡಾಕ್ಟರರ ಪ್ರವಚನ ಮತ್ತು ಮಾರ್ಗದರ್ಶನಗಳ ಧ್ವನಿಚಿತ್ರಮುದ್ರಿಕೆಗಳನ್ನು ತಯಾರಿಸುವುದು.

೪ ಅ. ಮನೆಯಲ್ಲಿ ಉಪಯೋಗಿಸುವ ಧ್ವನಿಮುದ್ರಕದ (ಟೇಪ್ ರಿಕಾರ್ಡರ್) ಮೇಲೆ ಧ್ವನಿಮುದ್ರಣವನ್ನು ಮಾಡಿ ಪ.ಪೂ. ಡಾಕ್ಟರರ ಪ್ರವಚನ ಮತ್ತು ಮಾರ್ಗದರ್ಶನದ ಧ್ವನಿಮುದ್ರಣಗಳನ್ನು ತಯಾರಿಸುವುದು : ೧೯೯೦ ರಿಂದ ೧೯೯೭ ರ ಕಾಲಾವಧಿಯಲ್ಲಿ ಅಧ್ಯಾತ್ಮ ಪ್ರಸಾರದ ಭಾಗವೆಂದು ಅನೇಕ ಸ್ಥಳಗಳಲ್ಲಿ ಪ.ಪೂ. ಡಾಕ್ಟರರ ಪ್ರವಚನಗಳನ್ನು ಮತ್ತು ಸಾಧಕರಿಗೆ ಮಾರ್ಗದರ್ಶನವನ್ನು ಆಯೋಜಿಸಲಾಗುತ್ತಿತ್ತು. ಅವೆಲ್ಲವುಗಳ ಧ್ವನಿಮುದ್ರಣ ಮತ್ತು ಚಿತ್ರೀಕರಣ ಮಾಡುವುದು ಸಾಧ್ಯವಾಗಲಿಲ್ಲ. ಕೆಲವು ಸ್ಥಳಗಳಲ್ಲಿ ಮಾತ್ರ ಸಾಧಕರ ಬಳಿ
ಉಪಲಬ್ಧವಿರುವ ಮನೆಯಲ್ಲಿ ಉಪಯೋಗಿಸುವ ಧ್ವನಿಮುದ್ರಣದ ಮೇಲೆ (ಟೇಪ್‌ರಿಕಾರ್ಡರ್) ನಮಗೆ ಪ್ರವಚನ ಮತ್ತು ಮಾರ್ಗದರ್ಶನಗಳನ್ನು ಧ್ವನಿಮುದ್ರಣ ಮಾಡಲು ಸಾಧ್ಯವಾಯಿತು. ಆದುದರಿಂದ ಅವುಗಳ ಗುಣಮಟ್ಟವು ತಾಂತ್ರಿಕದೃಷ್ಟಿಯಿಂದ ಅಷ್ಟು ಚೆನ್ನಾಗಿರಲಿಲ್ಲ. ಅಧ್ಯಾತ್ಮಪ್ರಸಾರವೇ ಪ.ಪೂ. ಡಾಕ್ಟರರ ಕಾರ್ಯದ ಉದ್ದೇಶವಾಗಿರುವುದರಿಂದ ಆ ಪ್ರವಚನಗಳ ಮತ್ತು ಮಾರ್ಗದರ್ಶನಗಳ ಕೆಲವು ಧ್ವನಿಸುರುಳಿಗಳನ್ನು ನಾವು ತಯಾರಿಸಿದೆವು. ಮುಂದೆ ಅವುಗಳ ವಿತರಣೆಯೂ ಆಗತೊಡಗಿತು.

೪ ಆ. ತಾಂತ್ರಿಕದೃಷ್ಟಿಯಿಂದ ಕಡಿಮೆ ಗುಣಮಟ್ಟದ ಧ್ವನಿಸುರುಳಿಗಳು ಪ.ಪೂ. ಡಾಕ್ಟರರ ಚೈತನ್ಯಮಯ ವಾಣಿಯಿಂದಾಗಿ ಸಾಧನೆಯನ್ನು ಮಾಡುವ ಜೀವಗಳನ್ನು ಇಂದಿಗೂ ಆಕರ್ಷಿಸುತ್ತಿವೆ : ತಾಂತ್ರಿಕದೃಷ್ಟಿಯಿಂದ ಧ್ವನಿಸುರುಳಿಗಳ ಗುಣಮಟ್ಟವು ಒಳ್ಳೆಯದಾಗದಿದ್ದರೂ. ಪ.ಪೂ. ಡಾಕ್ಟರರು ವಿಷಯವನ್ನು ಅತ್ಯಂತ ಸಹಜವಾಗಿ ವಿವರಿಸಿರುವುದರಿಂದ ಮತ್ತು ಅವರ ಚೈತನ್ಯಮಯ ವಾಣಿಯಿಂದಾಗಿ ಅವರ ಪ್ರವಚನಗಳು ಮತ್ತು ಸಾಧಕರಿಗೆ ಅವರು ಮಾಡಿರುವ ಮಾರ್ಗದರ್ಶನಗಳ ಧ್ವನಿಸುರುಳಿಗಳನ್ನು ಇಂದಿಗೂ ಪುನಃ ಪುನಃ ಕೇಳಬೇಕೆನಿಸುತ್ತದೆ. ಅದರಲ್ಲಿರುವ ಚೈತನ್ಯವು ಸಾಧನೆಯನ್ನು ಮಾಡುವ ಜೀವಗಳನ್ನು ಆಕರ್ಷಿಸುತ್ತದೆ. ಇಂದಿಗೂ ಸಾಧಕರಿಗೆ ಮಾರ್ಗದರ್ಶನ ಮತ್ತು ಪ್ರವಚನಗಳನ್ನು ಕೇಳುವಾಗ ಆಧ್ಯಾತ್ಮಿಕ ಉಪಾಯಗಳಾಗುತ್ತವೆ, ಮನಸ್ಸು ನಿರ್ವಿಚಾರವಾಗುತ್ತದೆ. ಧ್ಯಾನತಗಲುತ್ತದೆ ಈ ರೀತಿ ಪ.ಪೂ. ಡಾಕ್ಟರರ ಅಸ್ತಿತ್ವದ ಅರಿವಾಗುವುದಲ್ಲದೇ, ಅನುಭೂತಿಗಳು ಬರುತ್ತವೆ. ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡಿದಲ್ಲಿ ಈ ಧ್ವನಿಚಿತ್ರಸುರುಳಿಗಳಲ್ಲಿರುವ ಮಾಧುರ್ಯ ವರ್ಣಿಸಲಸಾಧ್ಯವಾಗಿದೆ.

– ಶ್ರೀ. ದಿನೇಶ ಶಿಂದೆ, ಸನಾತನ ಆಶ್ರಮ ರಾಮನಾಥಿ, ಗೋವಾ (೧೨.೫.೨೦೧೬)

Leave a Comment