ಅಧ್ಯಾತ್ಮಶಾಸ್ತ್ರದ ಎರಡು ಅಂಗಗಳಿವೆ. ಒಂದು ತಾತ್ತ್ವಿಕ ಅಂಗ ಮತ್ತು ಇನ್ನೊಂದು ಪ್ರಾಯೋಗಿಕ ಅಂಗ. ಭಗವದ್ಗೀತೆ, ಜ್ಞಾನೇಶ್ವರಿ, ದಾಸಬೋಧ ಇತ್ಯಾದಿ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುವುದು ಅಧ್ಯಾತ್ಮದ ತಾತ್ತ್ವಿಕ ಅಂಗವಾಗಿದೆ ಮತ್ತು ಶರೀರ, ಮನಸ್ಸು ಮತ್ತು ಬುದ್ಧಿಯಿಂದ ಏನಾದರೂ ಕೃತಿ ಮಾಡುವುದು ಪ್ರಾಯೋಗಿಕ ಅಂಗವಾಗಿದೆ. ಈ ಪ್ರಾಯೋಗಿಕ ಅಂಗವೇ ‘ಸಾಧನೆ’.
ನಮ್ಮ ಸುತ್ತಮುತ್ತಲಿನ ಜಗತ್ತು ಮಾಯೆಯಾಗಿದೆ. ಮಾಯೆಯಲ್ಲಿನ ಯಾವುದೇ ವಿಷಯದ ಗುಣಧರ್ಮವು ‘ಆನಂದ’ವಾಗಿಲ್ಲ. ಆನಂದಪ್ರಾಪ್ತಿಗಾಗಿ ‘ಆನಂದ’ದ ಗುಣಧರ್ಮವಿರುವ ಏನನ್ನಾದರೂ ಪ್ರಾಪ್ತಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಜಗತ್ತಿನಲ್ಲಿ ಕೇವಲ ಈಶ್ವರೀತತ್ತ್ವವೇ (ಈಶ್ವರ) ಆನಂದಮಯವಾಗಿದೆ. ಅಂದರೆ ಆನಂದಪ್ರಾಪ್ತಿಗಾಗಿ ನಮಗೆ ಈಶ್ವರಪ್ರಾಪ್ತಿಯನ್ನೇ ಮಾಡಿಕೊಳ್ಳಬೇಕು. ಈಶ್ವರಪ್ರಾಪ್ತಿ ಎಂದರೆ ಈಶ್ವರನೊಂದಿಗೆ ಏಕರೂಪವಾಗುವುದು, ಈಶ್ವರನ ಗುಣಗಳನ್ನು ನಮ್ಮಲ್ಲಿ ತರುವುದು. ಈಶ್ವರಪ್ರಾಪ್ತಿಗಾಗಿ ನಿಯಮಿತವಾಗಿ ಕನಿಷ್ಟಪಕ್ಷ ಎರಡು-ಮೂರು ಗಂಟೆಗಳಾದರೂ ಶರೀರ, ಮನಸ್ಸು ಮತ್ತು/ಅಥವಾ ಬುದ್ಧಿ ಇವುಗಳಿಂದ ಪ್ರಯತ್ನಿಸುವುದಕ್ಕೆ ‘ಸಾಧನೆ’ ಎನ್ನುತ್ತಾರೆ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಗುರುಕೃಪಾಯೋಗಾನುಸಾರ ಸಾಧನೆ’)