ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ, ಬೊಗಸೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ಮುಂದಿನ ಶ್ಲೋಕವನ್ನು ಹೇಳಬೇಕು.
ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||
ಅರ್ಥ: ಕೈಗಳ ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿಯಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಆದುದರಿಂದ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು.
(ಪರ್ಯಾಯ: ಕೈಗಳ ಮೂಲಭಾಗದಲ್ಲಿ ಬ್ರಹ್ಮನಿದ್ದಾನೆ / ಗೌರಿ ಇದ್ದಾಳೆ.)
ಶ್ಲೋಕದ ಭಾವಾರ್ಥ
ಅ. ಲಕ್ಷ್ಮೀಯ ಮಹತ್ವ : ಕೈಗಳ ಅಗ್ರಭಾಗದಲ್ಲಿ (ಕರಾಗ್ರೆ) ಲಕ್ಷ್ಮೀ ಇದ್ದಾಳೆ, ಅಂದರೆ ಬಾಹ್ಯ ಭೌತಿಕ ಭಾಗವು ಲಕ್ಷ್ಮೀಯ ರೂಪದಲ್ಲಿ ವಿಲಾಸ ಮಾಡುತ್ತಿದೆ. ಅಂದರೆ ಭೌತಿಕ ವ್ಯವಹಾರಕ್ಕಾಗಿ ಲಕ್ಷ್ಮೀಯ (ಧನ ಮಾತ್ರವಲ್ಲ, ಪಂಚಮಹಾಭೂತಗಳು, ಅನ್ನ, ವಸ್ತ್ರ ಇತ್ಯಾದಿ) ಆವಶ್ಯಕತೆಯಿದೆ.
ಆ. ಸರಸ್ವತಿಯ ಮಹತ್ವ : ಧನ ಅಥವಾ ಲಕ್ಷ್ಮೀಯನ್ನು ಪ್ರಾಪ್ತಮಾಡಿಕೊಳ್ಳುವಾಗ ಜ್ಞಾನ ಮತ್ತು ವಿವೇಕವು ಇಲ್ಲದಿದ್ದರೆ ಲಕ್ಷ್ಮೀಯು ಅವಲಕ್ಷ್ಮೀಯಾಗಿ ನಾಶಕ್ಕೆ ಕಾರಣವಾಗುತ್ತಾಳೆ. ಆದುದರಿಂದ ಸರಸ್ವತಿಯ ಆವಶ್ಯಕತೆ ಇದೆ.
ಇ. ಎಲ್ಲವೂ ಗೋವಿಂದನೇ ಆಗಿರುವುದು : ಗೋವಿಂದನೇ ಸರಸ್ವತಿಯ ರೂಪದಲ್ಲಿ ಮಧ್ಯ ಭಾಗದಲ್ಲಿ ಮತ್ತು ಲಕ್ಷ್ಮೀಯ ರೂಪದಲ್ಲಿ ಅಗ್ರಭಾಗದಲ್ಲಿದ್ದಾನೆ. ಸಂತ ಜ್ಞಾನೇಶ್ವರ ಮಹಾರಾಜರು ಅಮೃತಾನುಭವದ ಶಿವ-ಪಾರ್ವತಿ ಸ್ತವನದಲ್ಲಿ ಹೀಗೆ ಹೇಳುತ್ತಾರೆ, ‘ಮೂಲ, ಮಧ್ಯ ಮತ್ತು ಅಗ್ರ ಈ ಮೂರೂ ರೂಪಗಳು ಬೇರೆಬೇರೆ ಕಾಣಿಸುತ್ತಿದ್ದರೂ ಈ ಮೂರರಲ್ಲಿಯೂ ಗೋವಿಂದನೇ ಕಾರ್ಯವನ್ನು ಮಾಡುತ್ತಿದ್ದಾನೆ. ಹೆಚ್ಚುಕಡಿಮೆ ಎಲ್ಲ ಉದ್ಯೋಗಗಳು (ಕಾರ್ಯಗಳು) ಕೈಗಳ ಬೆರಳುಗಳ ಅಗ್ರಭಾಗದಿಂದಲೇ ಆಗುತ್ತವೆ ಆದುದರಿಂದ ಅಲ್ಲಿ ಲಕ್ಷ್ಮೀಯ ವಾಸ್ತವ್ಯವಿದೆ; ಆದರೆ ಆ ಕೈಯಲ್ಲಿ ಮೂಲ ಸ್ರೋತದಿಂದ ಬರುವ ಅನುಭವೀ ಜ್ಞಾನದ ಪ್ರವಾಹವು ಹೋಗದೇ ಇದ್ದರೆ ಅವನು ಕಾರ್ಯವನ್ನು ಮಾಡಲಾರನು.’
– ಪ.ಪೂ.ಪರಶುರಾಮ ಪಾಂಡೆ ಮಹಾರಾಜರು
ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳನ್ನು ಓದಲು ಕ್ಲಿಕ್ ಮಾಡಿ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)
Best and beautiful subject for all Hindus.