ಬ್ರಹ್ಮಧ್ವಜದ ಮೇಲೆ ತಾಮ್ರದ ಕಲಶವನ್ನು ಮಗುಚಿ ಹಾಕುತ್ತಾರೆ. ಸದ್ಯ ಕೆಲವು ಜನರು ಸ್ಟೀಲಿನ ಅಥವಾ ತಾಮ್ರದ ಲೋಟ ಅಥವಾ ಮಡಿಕೆಯ ಆಕಾರದಂತಹ ಪಾತ್ರೆಗಳನ್ನು ಬ್ರಹ್ಮಧ್ವಜದ ಮೇಲಿಡುವುದು ಕಂಡುಬರುತ್ತದೆ. ‘ತಾಮ್ರದ ಕಲಶವನ್ನು ಬ್ರಹ್ಮಧ್ವಜದ ಮೇಲೆ ಮಗುಚಿ ಹಾಕಬೇಕು’ ಎಂದು ಧರ್ಮಶಾಸ್ತ್ರವು ಏಕೆ ಹೇಳುತ್ತದೆ, ಎಂಬುದನ್ನು ತಿಳಿದುಕೊಳ್ಳಲು ಅದರ ಹಿಂದಿರುವ ಅಧ್ಯಾತ್ಮಶಾಸ್ತ್ರದ ವಿವೇಚನೆಯನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಿಂದ ನಮ್ಮ ಸಂಸ್ಕೃತಿಯ ಶ್ರೇಷ್ಠತೆ ಹಾಗೂ ಪ್ರತಿಯೊಂದು ಕೃತಿಯನ್ನು ಧರ್ಮಶಾಸ್ತ್ರಕ್ಕನುಸಾರ ಏಕೆ ಮಾಡಬೇಕು ಎಂಬುದು ಗಮನಕ್ಕೆ ಬರಬಹುದು !
೧. ಬ್ರಹ್ಮಧ್ವಜದ ಮೇಲಿನ ಕಲಶವನ್ನು ಏಕೆ ಮಗುಚಿಡುತ್ತಾರೆ ?
ಕಲಶದ ಮುಖವನ್ನು ಭೂಮಿಯ ಕಡೆಗೆ ಇಡುವುದರಿಂದ ತಾಮ್ರದ ಕಲಶದ ಟೊಳ್ಳಿನಿಂದ ಪ್ರಕ್ಷೇಪಿತಗೊಳ್ಳುವ ಲಹರಿಗಳಿಂದಾಗಿ ಕಲಶದಲ್ಲಿರುವ ಬೇವಿನ ಎಲೆ ಮತ್ತು ರೇಷ್ಮೆವಸ್ತ್ರ (ಬ್ರಹ್ಮಧ್ವಜದ ಮೇಲಿನ ರೇಷ್ಮೆವಸ್ತ್ರ) ಗಳು ಸಾತ್ತ್ವಿಕ ಲಹರಿಗಳಿಂದ ಭರಿತಗೊಳ್ಳುತ್ತವೆ. ಭೂಮಿಯ ಆಕರ್ಷಣಾಶಕ್ತಿಯಿಂದಾಗಿ ಈ ಪರಿವರ್ತನೆಯಾದ ಸಗುಣ ಶಕ್ತಿಯ ಪ್ರವಾಹವು ಭೂಮಿಯ ದಿಶೆಯತ್ತ ಸಂಕ್ರಮಿತಗೊಳ್ಳಲು ಮತ್ತು ಅದರಿಂದ ಭೂಮಿಯ ಮೇಲೆ ಸೂಕ್ಷ್ಮ-ಆಚ್ಛಾದನೆಯಾಗಲು ಸಹಾಯವಾಗುತ್ತದೆ. ಕಲಶವನ್ನು ಮಗುಚಿಡದೇ ನೆಟ್ಟಗೆ ಇಟ್ಟರೆ, ಸಂಪೂರ್ಣವಾಗಿ ಊರ್ಧ್ವ ದಿಕ್ಕಿನತ್ತ ಲಹರಿಗಳು ಪ್ರಕ್ಷೇಪಿತಗೊಳ್ಳುವುದರಿಂದ ಭೂಮಿಯ ಸಮೀಪದಲ್ಲಿನ ಕನಿಷ್ಠ ಹಾಗೂ ಮಧ್ಯಮ ಸ್ತರದ ಶುದ್ಧೀಕರಣವಾಗದಿರುವುದರಿಂದ ವಾಯುಮಂಡಲದಲ್ಲಿನ ಕೇವಲ ನಿರ್ದಿಷ್ಠ ಊರ್ಧ್ವ ಪಟ್ಟಿಯ ಶುದ್ಧೀಕರಣವಾಗಲು ಸಹಾಯವಾಗುತ್ತದೆ. ತದ್ವಿರುದ್ಧ ತಾಮ್ರದ ಕಲಶದ ಮುಖವನ್ನು ಭೂಮಿಯ ಕಡೆಗೆ ಮಗುಚಿಟ್ಟರೆ ಅದರಿಂದ ಭೂಮಿಯ ಸಮೀಪದ ಮತ್ತು ಮಧ್ಯಮ ಪಟ್ಟಿಯ ವಾಯುಮಂಡಲಕ್ಕೆ, ಅದರ ಜೊತೆಗೆ ಊರ್ಧ್ವಮಂಡಲಕ್ಕೆ ಈ ಲಹರಿಗಳ ಲಾಭವಾಗಲು ಸಹಾಯವಾಗುತ್ತದೆ.
– ಓರ್ವ ವಿದ್ವಾಂಸರು (ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೩.೨೦೧೫, ಸಾಯಂ. ೬.೩೩)
೨. ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದು !
ಬ್ರಹ್ಮಧ್ವಜದ ಮೇಲಿರುವ ತಾಮ್ರದ ಕಲಶಕ್ಕೆ ಬ್ರಹ್ಮಾಂಡದಲ್ಲಿನ ಉಚ್ಚತತ್ತ್ವಗಳಿಗೆ ಸಂಬಂಧಿಸಿರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುವುದರಿಂದ ಈ ಕಲಶದಿಂದ ಪ್ರಕ್ಷೇಪಿತಗೊಳ್ಳುವ ಸಾತ್ತ್ವಿಕ ಲಹರಿಗಳಿಂದಾಗಿ ಕಹಿಬೇವಿನ ಎಲೆಗಳಲ್ಲಿನ ಬಣ್ಣದ ಕಣಗಳು ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಎಲೆಗಳ ಬಣ್ಣದ ಕಣಗಳ ಮೂಲಕ ರಜೋಗುಣವಿರುವ ಶಿವ ಮತ್ತು ಶಕ್ತಿ ಲಹರಿಗಳು ವಾಯು ಮಂಡಲದಲ್ಲಿ ಪರಿಣಾಮಕಾರಿಯಾಗಿ ಪ್ರಕ್ಷೇಪಣೆಯಾಗಲು ಆರಂಭವಾಗುತ್ತವೆ.
೩. ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಲಹರಿಗಳಿಂದಾಗಿ ಕಹಿಬೇವಿನ ಎಲೆ ಮತ್ತು ರೇಷ್ಮೆ ವಸ್ತ್ರ ಇವುಗಳಿಂದ ಪರಿಣಾಮಕಾರಿಯಾಗಿ ಗ್ರಹಣ ಮತ್ತು ಪ್ರಕ್ಷೇಪಣೆಯಾಗುವುದು
ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಕಾರ್ಯನಿರತ ಲಹರಿಗಳು ಕಹಿಬೇವಿನ ಎಲೆಗಳ ಮಟ್ಟಕ್ಕೆ ಸಗುಣ ಲಹರಿಗಳಾಗಿ ಪರಿವರ್ತನೆಯಾಗುತ್ತವೆ. ಅನಂತರ ಈ ಲಹರಿಗಳು ರೇಷ್ಮೆವಸ್ತ್ರದ ಮೂಲಕ ಪರಿಣಾಮಕಾರಿ ಆಕರ್ಷಣೆಯಾಗಿ ಅವುಗಳು ಆವಶ್ಯಕತೆಯಂತೆ ಅಧೋದಿಕ್ಕಿನಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ.
೪. ಕಹಿಬೇವಿನ ಎಲೆ, ಕಲಶ ಮತ್ತು ರೇಷ್ಮೆವಸ್ತ್ರ ಈ ಮೂರರಿಂದ ನಿರ್ಮಾಣವಾಗುವ ಲಹರಿಗಳಿಂದ ವಾಯುಮಂಡಲವು ಶುದ್ಧವಾಗುವುದು
ಕಹಿ ಬೇವಿನ ಎಲೆಗಳಿಂದ ಪ್ರಕ್ಷೇಪಿತವಾಗುವ ಶಿವ-ಶಕ್ತಿಗಳಿಗೆ ಸಂಬಂಧಿಸಿದ ಕಾರ್ಯನಿರತ ರಜೋಗುಣಿ ಲಹರಿಗಳಿಂದಾಗಿ ಅಷ್ಟದಿಕ್ಕುಗಳ ವಾಯುಮಂಡಲ ಮತ್ತು ತಾಮ್ರದ ಕಲಶದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದಾಗಿ ಊರ್ಧ್ವದಿಶೆಯ ವಾಯುಮಂಡಲ ಮತ್ತು ರೇಷ್ಮೆ ವಸ್ತ್ರದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಅಧೋದಿಕ್ಕಿನ ವಾಯುಮಂಡಲ ಶುದ್ಧ ಮತ್ತು ಚೈತನ್ಯಮಯವಾಗಲು ಸಹಾಯವಾಗುತ್ತದೆ.
೫. ಕಲಶದ ಮುಖವು ಭೂಮಿಯ ಕಡೆಗೆ ಇದ್ದೂ ಊರ್ಧ್ವ ದಿಕ್ಕಿನ ವಾಯುಮಂಡಲವು ಶುದ್ಧವಾಗುವುದು
ಬ್ರಹ್ಮಧ್ವಜದೊಳಗಿನ ಘಟಕಗಳಿಗೆ ದೇವತ್ವವು ಪ್ರಾಪ್ತಿಯಾಗಿದ್ದರಿಂದ ತಾಮ್ರದ ಕಲಶದ ಟೊಳ್ಳಿನಲ್ಲಿ ಘನೀಕೃತವಾದ ನಾದಲಹರಿಗಳು ಕಾರ್ಯನಿರತವಾಗುತ್ತವೆ. ಈ ನಾದಲಹರಿಯಲ್ಲಿ ವಾಯು ಮತ್ತು ಆಕಾಶ ಈ ಎರಡು ಉಚ್ಚ ತತ್ತ್ವಗಳು ಸಮಾವೇಶಗೊಂಡಿದ್ದರಿಂದ ಲಹರಿಗಳ ಪ್ರಕ್ಷೇಪಣೆಯಿಂದಾಗಿ ಊರ್ಧ್ವ ದಿಶೆಯ ವಾಯುಮಂಡಲವು ಶುದ್ಧವಾಗುತ್ತದೆ.
೬. ಕಲಶದ ಮೇಲೆ ಸ್ವಸ್ತಿಕವನ್ನು ಏಕೆ ಬಿಡಿಸುತ್ತಾರೆ ?
ಸ್ವಸ್ತಿಕ ಇದು ಶುಭಚಿಹ್ನೆಯಾಗಿದೆ. ಸ್ವಸ್ತಿಕದಿಂದ ಸಾತ್ತ್ವ್ವಿಕ ಸ್ಪಂದನಗಳು ಹೊರ ಬೀಳುತ್ತವೆ ಮತ್ತು ಅದರಲ್ಲಿನ ಚೈತನ್ಯದಿಂದಾಗಿ ವಾತಾವರಣದಲ್ಲಿನ ಕಪ್ಪು ಆವರಣವು ದೂರವಾಗಲು ಸಹಾಯವಾಗುತ್ತದೆ. ಆದುದರಿಂದ ಕಲಶದ ಮೇಲೆ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಬೇಕು.
(ಆಧಾರ ಗ್ರಂಥ : ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)
ಸನಾತನ ಸಂಸ್ಥೆಯ ವತಿಯಿಂದ ನಮ್ಮ ಸನಾತನ ಧರ್ಮ ಹಿಂದೂ ಧರ್ಮದ ಏಳಗೆಯಾಗುವದು