ಬ್ರಹ್ಮಧ್ವಜದ ಪೂಜೆಯನ್ನು ಶಾಸ್ತ್ರಾನುಸಾರ ಹೇಗೆ ಮಾಡಬೇಕು, ಎಂಬುದನ್ನು ಮಂತ್ರಸಹಿತ ಇಲ್ಲಿ ನೀಡುತ್ತಿದ್ದೇವೆ. ಪ್ರತ್ಯಕ್ಷ ಬ್ರಹ್ಮಧ್ವಜವನ್ನು ಎಲ್ಲಿ ನಿಲ್ಲಿಸಲಿಕ್ಕಿದೆಯೋ ಅಲ್ಲಿ ನಿಲ್ಲಿಸಿ ಪೂಜೆ ಮಾಡಬೇಕು.
೧. ಬ್ರಹ್ಮಧ್ವಜವನ್ನು ಸೂರ್ಯೋದಯದ ನಂತರ ತಕ್ಷಣ ಏರಿಸಬೇಕು. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ. ತಿಥಿಕ್ಷಯ) ಪಂಚಾಂಗ ನೋಡಿ ಬ್ರಹ್ಮಧ್ವಜ ಏರಿಸಬೇಕು.
೨. ದೊಡ್ಡ ಬಿದಿರಿನ ಕೋಲಿನ ತುದಿಗೆ ಹಳದಿ ಬಣ್ಣದ ರೇಶ್ಮೆ ವಸ್ತ್ರ ಕಟ್ಟಬೇಕು. ಅದರ ಮೇಲೆ ಸಕ್ಕರೆಯ ಬತ್ತಾಸು, ಕಹಿಬೇವಿನ ಎಳೆಯ ಎಲೆಗಳು, ಮಾವಿನ ಟೊಂಗೆ ಮತ್ತು ಕೆಂಪು ಹೂವಿನ ಹಾರ ಕಟ್ಟಿ ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಕಲಶವನ್ನು ಶೃಂಗರಿಸಿ ಬ್ರಹ್ಮಧ್ವಜವನ್ನು ಏರಿಸಲಾಗುತ್ತದೆ. ಬ್ರಹ್ಮಧ್ವಜ ಏರಿಸುವಾಗ ಅದನ್ನು ಮುಖ್ಯದ್ವಾರದ ಹೊರಗೆ ಆದರೆ ಹೊಸ್ತಿಲಿಗೆ ತಾಗಿಸಿ ಬಲಭಾಗದಲ್ಲಿ (ಮನೆಯೊಳಗಿಂದ ನೋಡುವಾಗ) ಭೂಮಿಯ ಮೇಲೆ ಮಣೆಯನ್ನಿಟ್ಟು ಅದರ ಮೇಲೆ ನಿಲ್ಲಿಸಬೇಕು. ಬ್ರಹ್ಮಧ್ವಜವನ್ನು ನೇರವಾಗಿ ನಿಲ್ಲಿಸದೇ ಮುಂಭಾಗಕ್ಕೆ ಸ್ವಲ್ಪ ವಾಲಿದ ಸ್ಥಿತಿಯಲ್ಲಿರಬೇಕು. ಬ್ರಹ್ಮಧ್ವಜದ ಎದುರು ಸುಂದರವಾದ ರಂಗೋಲಿ ಹಾಕಬೇಕು. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯ ತೋರಿಸಿ ಬ್ರಹ್ಮಧ್ವಜವನ್ನು ಇಳಿಸಬೇಕು.
(ಬ್ರಹ್ಮಧ್ವಜದಿಂದಾಗುವ ಲಾಭ, ಬ್ರಹ್ಮಧ್ವಜ ಏರಿಸುವಾಗ ಮತ್ತು ಇಳಿಸುವಾಗ ಮಾಡಬೇಕಾದ ಪ್ರಾರ್ಥನೆ, ಸೂಕ್ಷ್ಮದಲ್ಲಾಗುವ ಪರಿಣಾಮಗಳನ್ನು ತೋರಿಸುವ ಚಿತ್ರ, ಇವೆಲ್ಲವುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.)
ಸರ್ವೇಭ್ಯೋ ದೇವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ |
೧. ಆಚಮನ ಮಾಡುವುದು
ಎಡಗೈಯಲ್ಲಿ ಉದ್ಧರಣೆ ತೆಗೆದುಕೊಳ್ಳಬೇಕು. ಬಲಗೈಯನ್ನು ಬೊಗಸೆಯನ್ನಾಗಿಸಬೇಕು. ಉದ್ಧರಣೆಯಿಂದ ಬಲಗೈ ಮೇಲೆ ನೀರು ತೆಗೆದುಕೊಳ್ಳಬೇಕು. ಮುಂದಿನ ಹೆಸರುಗಳನ್ನು ಉಚ್ಚರಿಸಿ ಕೃತಿ ಮಾಡಬೇಕು.
ಶ್ರೀ ಕೇಶವಾಯ ನಮಃ |
(ನೀರನ್ನು ಕುಡಿಯಬೇಕು )
ಶ್ರೀ ನಾರಾಯಣಾಯ ನಮಃ |
(ನೀರನ್ನು ಕುಡಿಯಬೇಕು)
ಶ್ರೀ ಮಾಧವಾಯ ನಮಃ |
(ನೀರನ್ನು ಕುಡಿಯಬೇಕು)
ಶ್ರೀ ಗೋವಿಂದಾಯ ನಮಃ |
(ಎಂದು ಹೇಳುತ್ತಾ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.)
(ಕೈಯನ್ನು ಒರೆಸಿಕೊಳ್ಳಬೇಕು ಮತ್ತು ಕೈಗಳನ್ನು ಜೋಡಿಸಬೇಕು)
‘ಶ್ರೀ ವಿಷ್ಣವೇ ನಮಃ |’ ದಿಂದ ‘ಶ್ರೀಕೃಷ್ಣಾಯ ನಮಃ |’ ದ ವರೆಗಿನ ಶ್ರೀವಿಷ್ಣುವಿನ ೨೦ ಹೆಸರುಗಳನ್ನು ಉಚ್ಚರಿಸಬೇಕು.
‘ಶ್ರೀ ವಿಷ್ಣವೇ ನಮಃ | ಶ್ರೀ ಮಧುಸೂದನಾಯ ನಮಃ | ಶ್ರೀ ತ್ರಿವಿಕ್ರಮಾಯ ನಮಃ | ಶ್ರೀ ವಾಮನಾಯ ನಮಃ | ಶ್ರೀಧರಾಯ ನಮಃ | ಶ್ರೀ ಹೃಷೀಕೇಶಾಯ ನಮಃ | ಶ್ರೀ ಪದ್ಮನಾಭಾಯ ನಮಃ | ಶ್ರೀ ದಾಮೋದರಾಯ ನಮಃ | ಶ್ರೀ ಸಂಕರ್ಷಣಾಯ ನಮಃ | ಶ್ರೀ ವಾಸುದೇವಾಯ ನಮಃ | ಶ್ರೀ ಪ್ರದ್ಯುಮ್ನಾಯ ನಮಃ | ಶ್ರೀ ಅನಿರುದ್ಧಾಯ ನಮಃ | ಶ್ರೀ ಪುರುಷೋತ್ತಮಾಯ ನಮಃ | ಶ್ರೀ ಅಧೋಕ್ಷಜಾಯ ನಮಃ | ಶ್ರೀ ನಾರಸಿಂಹಾಯ ನಮಃ | ಶ್ರೀ ಅಚ್ಯುತಾಯ ನಮಃ | ಶ್ರೀ ಜನಾರ್ದನಾಯ ನಮಃ | ಶ್ರೀ ಉಪೇಂದ್ರಾಯ ನಮಃ | ಶ್ರೀ ಹರಯೇ ನಮಃ | ಶ್ರೀಕೃಷ್ಣಾಯ ನಮಃ |’
೨. ಪುನರಾಚಮನ
ಪುನರಾಚಮನ ಎಂದರೆ ಮೇಲಿನಂತೆ ಪುನಃ ಆಚಮನ ಮಾಡುವುದು
೩. ಕೈಗಳನ್ನು ಜೋಡಿಸಿ ಹೇಳುವುದು
ಬ್ರಹ್ಮಧ್ವಜಕ್ಕೆ ನಮಸ್ಕಾರ ಮಾಡುವಾಗ
ಇಷ್ಟದೇವತಾಭ್ಯೋ ನಮಃ | ಕುಲದೇವತಾಭ್ಯೋ ನಮಃ | ಗ್ರಾಮದೇವತಾಭ್ಯೋ ನಮಃ | ಸ್ಥಾನ ದೇವತಾಭ್ಯೋ ನಮಃ | ವಾಸ್ತುದೇವತಾಭ್ಯೋ ನಮಃ | ಆದಿತ್ಯಾದಿ ನವಗ್ರಹದೇವತಾಭ್ಯೋ ನಮಃ | ಸರ್ವೇಭ್ಯೋ ದೇವೇಭ್ಯೋ ನಮಃ | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ |
೪. ದೇಶಕಾಲ
ಕಣ್ಣುಗಳಿಗೆ ನೀರನ್ನು ಹಚ್ಚಿಕೊಳ್ಳಬೇಕು (ಭಾರತದ ಜನರು ಹೇಳಬೇಕಾದ ದೇಶಕಾಲ)
ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತ-ವಾರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಕಲಿ ಪ್ರಥಮ ಚರಣೇ ಜಂಬುದ್ವೀಪೇ ಭರತವರ್ಷೇ ಭರತಖಂಡೇ ದಕ್ಷಿಣಾಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ಭಾರತವರ್ಷೇ ಶಾಲಿವಾಹನ ಶಕೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಕ್ರೋಧೀ ನಾಮ ಸಂವತ್ಸರೇ, ಉತ್ತರಾಯಣೇ, ವಸಂತಋತೌ, ಚೈತ್ರಮಾಸೇ, ಶುಕ್ಲಪಕ್ಷೇ, ಪ್ರತಿಪದ್ ತಿಥೌ, ಭೌಮ(ಮಂಗಳ) ವಾಸರೇ, ರೇವತೀ ದಿವಸ ನಕ್ಷತ್ರೇ, ವೈಧೃತಿ ಯೋಗೇ, ಕಿಂಸ್ತುಘ್ನ ಕರಣೇ, ಮೀನ ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ಮೀನ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ಮೇಷ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್ಚರೇ … ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಂ ಗ್ರಹಗುಣವಿಶೇಷೇಣವಿಶಿಷ್ಟಾಯಾಂ ಶುಭಪುಣ್ಯತಿಥೌ…
೫. ಸಂಕಲ್ಪ ಮಾಡುವುದು
ಪಾತ್ರೆಯಲ್ಲಿರುವ ಅಕ್ಷತೆಯನ್ನು ಬಲಗೈಯ ಬೆರಳುಗಳಿಂದ ತೆಗೆದುಕೊಂಡು ಅಂಗೈಯನ್ನು ಮೇಲಿನ ದಿಕ್ಕಿಗೆ ಮಾಡಬೇಕು. ಅನಂತರ ಹೆಬ್ಬೆರಳನ್ನು ಬಿಟ್ಟು ಉಳಿದ ನಾಲ್ಕು ಬೆರಳುಗಳಿಂದ ಅಕ್ಷತೆಯನ್ನು ನಿಧಾನವಾಗಿ ಅಂಗೈಯತ್ತ ಸರಿಸುತ್ತಾ ತರಬೇಕು. ತಮ್ಮ ಗೋತ್ರ ಮತ್ತು ಹೆಸರನ್ನು ಉಚ್ಚರಿಸಬೇಕು, ಉದಾ. ಕಾಶ್ಯಪ ಗೋತ್ರ ಮತ್ತು ಬಾಲಕೃಷ್ಣ ಹೆಸರು’ ಇದ್ದರೆ ಕಾಶ್ಯಪ ಗೋತ್ರೇ ಉತ್ಪನ್ನಃ ಬಾಲಕೃಷ್ಣ ಶರ್ಮಾ ಅಹಂ’, ಹೀಗೆ ಹೇಳಬೇಕು ಮತ್ತು ಮುಂದಿನ ಸಂಕಲ್ಪ ಮಾಡಬೇಕು.
ಅಸ್ಮಾಕಂ ಸರ್ವೇಷಾಂ, ಸಹ ಕುಟುಂಬಾನಾಂ, ಸಹ ಪರಿವಾರಾಣಾಂ, ಕ್ಷೇಮ, ಸ್ಥೈರ್ಯ, ಅಭಯ, ವಿಜಯ, ಆಯುಃ ಆರೋಗ್ಯ ಪ್ರಾಪ್ತ್ಯರ್ಥಂ ಅಸ್ಮಿನ್ ಪ್ರಾಪ್ತ ನೂತನ ವತ್ಸರೇ, ಅಸ್ಮದ್ ಗೃಹೇ, ಅಬ್ದಾಂತಃ ನಿತ್ಯ ಮಂಗಲ ಅವಾಪ್ತಯೇ ಧ್ವಜಾರೋಪಣ ಪೂರ್ವಕಂ ಪೂಜನಂ ತಥಾ ಆರೋಗ್ಯ ಅವಾಪ್ತಯೇ ನಿಂಬಪತ್ರ ಭPಣಂ ಚ ಕರಿಷ್ಯೇ | ನಿರ್ವಿಘ್ನತಾ ಸಿದ್ಯರ್ಥಂ ಮಹಾಗಣಪತಿ ಪೂಜನಂ / ಸ್ಮರಣಂ ಕರಿಷ್ಯೇ | ಕಲಶ, ಘಂಟಾ, ದೀಪ ಪೂಜಾಂ ಕರಿಷ್ಯೇ |’
(‘ಕರಿಷ್ಯೇ’ ಎಂದು ಹೇಳುವಾಗ ಬಲಗೈಯಲ್ಲಿನ ಅಕ್ಷತೆಯ ಮೇಲೆ ನೀರನ್ನು ಹಾಕಿ ಹರಿವಾಣದಲ್ಲಿ ಬಿಡಬೇಕು ಮತ್ತು ಕೈಯನ್ನು ಒರೆಸಿಕೊಳ್ಳಬೇಕು. ಯಾರಿಗೆ ಗಣಪತಿ ಪೂಜೆ ಮಾಡಲು ಬರುತ್ತದೆಯೋ ಅವರು ಪೂಜನಂ ಕರಿಷ್ಯೇ’, ಎಂದು ಹೇಳಬೇಕು ಮತ್ತು ಅಡಿಕೆಗೆ ಅಥವಾ ತೆಂಗಿನಕಾಯಿಗೆ ಗಣಪತಿಯ ಪೂಜೆ ಮಾಡಬೇಕು. ಯಾರಿಗೆ ಬರುವುದಿಲ್ಲವೋ ಅವರು ‘ಸ್ಮರಣಂ ಕರಿಷ್ಯೇ’, ಎಂದು ಹೇಳಬೇಕು ಮತ್ತು ಕೆಳಗಿನಂತೆ ಗಣಪತಿಯ ಸ್ಮರಣೆ ಮಾಡಬೇಕು.)
೬. ಶ್ರೀ ಗಣಪತಿಸ್ಮರಣ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರೂ ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಮಹಾಗಣಪತಿಂ ಚಿಂತಯಾಮಿ ನಮಃ |
೭. ಕಲಶ, ಘಂಟೆ, ದೀಪ ಇವುಗಳ ಪೂಜೆ ಮಾಡುವುದು
ಗಂಧ-ಹೂವು-ಅಕ್ಷತೆಯನ್ನು ಅರ್ಪಿಸಿ ಕಲಶ, ಘಂಟೆ, ದೀಪ ಇವುಗಳ ಪೂಜೆ ಮಾಡಬೇಕು.
೧. ಕಲಶಾಯ ನಮಃ | ಸಕಲ ಪೂಜಾರ್ಥೇ ಗಂಧಾಕ್ಷತ ಪುಷ್ಪಂ ಸಮರ್ಪಯಾಮಿ |
೨. ಘಂಟಿಕಾಯೈ ನಮಃ | ಸಕಲ ಪೂಜಾರ್ಥೇ ಗಂಧಾಕ್ಷತ ಪುಷ್ಪಂ ಸಮರ್ಪಯಾಮಿ |
೩. ದೀಪದೇವತಾಭ್ಯೋ ನಮಃ | ಸಕಲ ಪೂಜಾರ್ಥೇ ಗಂಧಾಕ್ಷತ ಪುಷ್ಪಂ ಸಮರ್ಪಯಾಮಿ |
೮. ಬ್ರಹ್ಮಧ್ವಜ ಪೂಜೆ
ಬ್ರಹ್ಮಧ್ವಜದ ಪೂಜೆ
ಓಂ ಬ್ರಹ್ಮಧ್ವಜಾಯ ನಮಃ | ಧ್ಯಾಯಾಮಿ |
(ಕೈ ಜೋಡಿಸಬೇಕು.)
ಓಂ ಬ್ರಹ್ಮಧ್ವಜಾಯ ನಮಃ | ವಿಲೇಪನಾರ್ಥೇ ಚಂದನಂ ಸಮರ್ಪಯಾಮಿ |
(ಗಂಧ ಹಚ್ಚಬೇಕು)
ಓಂ ಬ್ರಹ್ಮಧ್ವಜಾಯ ನಮಃ | ಮಂಗಲಾರ್ಥೇ ಹರಿದ್ರಾಂ ಸಮರ್ಪಯಾಮಿ |
(ಅರಿಶಿಣ ಹಚ್ಚಬೇಕು)
ಓಂ ಬ್ರಹ್ಮಧ್ವಜಾಯ ನಮಃ | ಮಂಗಲಾರ್ಥೇ ಕುಂಕುಮಂ ಸಮರ್ಪಯಾಮಿ |
(ಕುಂಕುಮ ಹಚ್ಚಬೇಕು)
ಓಂ ಬ್ರಹ್ಮಧ್ವಜಾಯ ನಮಃ | ಅಲಂಕಾರಾರ್ಥೇ ಅಕ್ಷತಾಂ ಸಮರ್ಪಯಾಮಿ |
(ಅಕ್ಷತೆ ಅರ್ಪಿಸಬೇಕು)
ಓಂ ಬ್ರಹ್ಮಧ್ವಜಾಯ ನಮಃ | ಪೂಜಾರ್ಥೇ ಪುಷ್ಪಂ, ತುಲಸೀಪತ್ರಂ, ದುರ್ವಾಂಕುರಾನ್, ಪುಷ್ಪಮಾಲಾಂಚ ಸಮರ್ಪಯಾಮಿ |
(ಹೂವು, ತುಳಸಿ ಎಲೆ ಮತ್ತು ಗರಿಕೆ ಅರ್ಪಿಸಬೇಕು ಮತ್ತು ಹೂವಿನ ಹಾರ ಹಾಕಬೇಕು.)
ಓಂ ಬ್ರಹ್ಮಧ್ವಜಾಯ ನಮಃ, ಧೂಪಂ ಸಮರ್ಪಯಾಮಿ |
(ಊದುಬತ್ತಿ ಬೆಳಗಬೇಕು)
ಓಂ ಬ್ರಹ್ಮಧ್ವಜಾಯ ನಮಃ, ದೀಪಂ ಸಮರ್ಪಯಾಮಿ |
(ನೀಲಾಂಜನ ಬೆಳಗಬೇಕು)
೯. ನೈವೇದ್ಯ
ಬಲಗೈಯಲ್ಲಿ ತುಳಸಿಯ ಎರಡು ಎಲೆ ತೆಗೆದುಕೊಂಡು ಅದರ ಮೇಲೆ ನೀರು ಹಾಕಬೇಕು. ನೈವೇದ್ಯದ ತಟ್ಟೆಯ ಸುತ್ತಲೂ ಗಡಿಯಾರದ ಮುಳ್ಳು ತಿರುಗುವ ದಿಕ್ಕಿನಲ್ಲಿ ಒಮ್ಮೆ ನೀರನ್ನು ತಿರುಗಿಸಬೇಕು. ನೈವೇದ್ಯದ ಮೇಲೆ ತುಳಸಿಯ ಎರಡು ಎಲೆಗಳಿಂದ ನೀರನ್ನು ಪ್ರೋಕ್ಷಿಸಿ ಒಂದು ಎಲೆಯನ್ನು ನೈವೇದ್ಯದ ಮೇಲಿಡಬೇಕು ಮತ್ತೊಂದು ಬ್ರಹ್ಮಧ್ವಜದ ಚರಣಕ್ಕೆ ಅರ್ಪಿಸಬೇಕು.
ಓಂ ಬ್ರಹ್ಮಧ್ವಜಾಯ ನಮಃ | ನೈವೇದ್ಯಾರ್ಥೇ ಪುರಸ್ಥಾಪಿತ (ನೈವೇದ್ಯದ ಹೆಸರನ್ನು ಉಚ್ಚರಿಸಬೇಕು) ನೈವೇದ್ಯಂ ನಿವೇದಯಾಮಿ |’ ಅನಂತರ ಓಂ ಪ್ರಾಣಾಯ ಸ್ವಾಹಾ, ಓಂ ಅಪಾನಾಯ ಸ್ವಾಹಾ, ಓಂ ವ್ಯಾನಾಯ ಸ್ವಾಹಾ, ಓಂ ಉದಾನಾಯ ಸ್ವಾಹಾ, ಓಂ ಸಮಾನಾಯ ಸ್ವಾಹಾ, ಓಂ ಬ್ರಹ್ಮಣೇ ಸ್ವಾಹಾ, ಈ ಮಂತ್ರ ಉಚ್ಚರಿಸುತ್ತಾ ಬಲಗೈಯ ಐದೂ ಬೆರಳುಗಳ ತುದಿಯಿಂದ ಅಂಗೈ ದೇವರತ್ತ ಬರುವಂತೆ ನೈವೇದ್ಯದ ಪರಿಮಳವನ್ನು ದೇವರತ್ತ ಒಯ್ಯಬೇಕು ಅಥವಾ ಕೈ ಜೋಡಿಸಿ ‘ಓಂ ಪ್ರಾಣಾಯ ಸ್ವಾಹಾ, ಓಂ ಅಪಾನಾಯ ಸ್ವಾಹಾ, ಓಂ ವ್ಯಾನಾಯ ಸ್ವಾಹಾ, ಓಂ ಉದಾನಾಯ ಸ್ವಾಹಾ, ಓಂ ಸಮಾನಾಯ ಸ್ವಾಹಾ, ಓಂ ಬ್ರಹ್ಮಣೇ ಸ್ವಾಹಾ’, ಈ ಮಂತ್ರ ಉಚ್ಚರಿಸುತ್ತಾ ದೇವರಿಗೆ ನೈವೇದ್ಯ ಸಮರ್ಪಿಸಬೇಕು. ನಂತರ ಬಲಗೈ ಮೇಲೆ ನೀರನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಹೇಳುತ್ತಾ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು. ಬ್ರಹ್ಮಧ್ವಜಾಯ ನಮಃ | ನೈವೇದ್ಯಂ ಸಮರ್ಪಯಾಮಿ | ಮಧ್ಯೇ ಪಾನೀಯಂ ಸಮರ್ಪಯಾಮಿ, ಉತ್ತರಾಪೋಶನಂ ಸಮರ್ಪಯಾಮಿ, ಹಸ್ತ ಪ್ರಕ್ಷಾಲನಂ ಸಮರ್ಪಯಾಮಿ, ಮುಖ ಪ್ರಕ್ಷಾಲನಂ ಸಮರ್ಪಯಾಮಿ |’ (ಬಲಗೈಯಲ್ಲಿ ಗಂಧ-ಹೂವನ್ನು ತೆಗೆದುಕೊಂಡು ಬ್ರಹ್ಮಧ್ವಜದ ಚರಣಕ್ಕೆ ಅರ್ಪಿಸಬೇಕು.) ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ |’ ‘ಓಂ ಬ್ರಹ್ಮಧ್ವಜಾಯ ನಮಃ | ಮುಖವಾಸಾರ್ಥೇ ಪೂಗೀಫಲ ತಾಂಬೂಲಂ ಸಮರ್ಪಯಾಮಿ |’ (ವೀಳ್ಯೆದೆಲೆಯ ಮೇಲೆ ನೀರನ್ನು ಬಿಡಬೇಕು.) ಓಂ ಬ್ರಹ್ಮಧ್ವಜಾಯ ನಮಃ | ಫಲಾರ್ಥೇ ನಾರಿಕೇಲ ಫಲಂ ಸಮರ್ಪಯಾಮಿ |’(ತೆಂಗಿನಕಾಯಿಯ ಮೇಲೆ ನೀರನ್ನು ಬಿಡಬೇಕು.)
೧೦. ಆರತಿ ಬೆಳಗುವುದು
(ಗಣಪತಿಯ ಆರತಿ ಹೇಳಬೇಕು)
‘ಓಂ ಬ್ರಹ್ಮಧ್ವಜಾಯ ನಮಃ | ಮಂಗಲಾರ್ತಿಕ್ಯ ದೀಪಂ ಸಮರ್ಪಯಾಮಿ |’
೧೧. ಕರ್ಪೂರ ಬೆಳಗುವುದು
‘ಓಂ ಬ್ರಹ್ಮಧ್ವಜಾಯ ನಮಃ | ಕರ್ಪೂರ ದೀಪಂ ಸಮರ್ಪಯಾಮಿ |’
೧೨. ಪ್ರದಕ್ಷಿಣೆ ಹಾಕುವುದು
‘ಓಂ ಬ್ರಹ್ಮಧ್ವಜಾಯ ನಮಃ | ಪ್ರದಕ್ಷಿಣಾಂ ಸಮರ್ಪಯಾಮಿ |’
(ತನ್ನ ಸುತ್ತಲೂ ಪ್ರದಕ್ಷಿಣೆ ಹಾಕಬೇಕು. ಸಾಧ್ಯವಿದ್ದರೆ ಬ್ರಹ್ಮಧ್ವಜಕ್ಕೆ ಪ್ರದಕ್ಷಿಣೆ ಹಾಕಬೇಕು.)
೧೩. ನಮಸ್ಕಾರ ಮಾಡುವುದು
‘ಓಂ ಬ್ರಹ್ಮಧ್ವಜಾಯ ನಮಃ | ನಮಸ್ಕಾರಾನ್ ಸಮರ್ಪಯಾಮಿ |’
(ನಮಸ್ಕಾರ ಮಾಡಬೇಕು.)
೧೪. ಪ್ರಾರ್ಥನೆ
‘ಬ್ರಹ್ಮಧ್ವಜ ನಮಸ್ತೇಸ್ತು ಸರ್ವಾಭೀಷ್ಟ ಫಲಪ್ರದ |
ಪ್ರಾಪ್ತೇಸ್ಮಿನ್ ವತ್ಸರೇ ನಿತ್ಯಂ ಮದ್ಗೃಹೇ ಮಂಗಲಂ ಕುರು ||’
ಅರ್ಥ : ಸರ್ವ ಇಷ್ಟ ಫಲಗಳನ್ನು ನೀಡುವ ಹೇ ಬ್ರಹ್ಮಧ್ವಜ ದೇವತೆಯೇ, ನಿನಗೆ ನಾನು ನಮಸ್ಕರಿಸುತ್ತೇನೆ. ಈ ಹೊಸ ವರ್ಷದಲ್ಲಿ ನನ್ನ ಮನೆಯಲ್ಲಿ ಮಂಗಳ, ಅಂದರೆ ಒಳ್ಳೆಯದೇ ಘಟಿಸಲಿ.
‘ಅನೇನ ಕೃತ ಪೂಜನೇನ ಬ್ರಹ್ಮಧ್ವಜಃ ಪ್ರೀಯತಾಮ್ |’ (ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಅದನ್ನು ಹರಿವಾಣದಲ್ಲಿ ಬಿಡಬೇಕು. ‘ವಿಷ್ಣವೇ ನಮೋ |, ವಿಷ್ಣವೇ ನಮೋ | ವಿಷ್ಣವೇ ನಮಃ |’, ಎಂದು ಹೇಳಬೇಕು ಮತ್ತು ಆರಂಭದಲ್ಲಿ ಹೇಳಿದಂತೆ ಎರಡು ಬಾರಿ ಆಚಮನ ಮಾಡಬೇಕು.)
೧೫. ಪ್ರಸಾದ ಸ್ವೀಕರಿಸುವುದು
ಕಹಿಬೇವಿನ ಎಲೆಯನ್ನು ಸೇವಿಸಬೇಕು.
– ಶ್ರೀ. ದಾಮೋದರ ವಝೆ, ಸನಾತನದ ಸಾಧಕ-ಪುರೋಹಿತ, ಢವಳಿ-ಫೋಂಡಾ, ಗೋವಾ.
(ಆಧಾರ ಗ್ರಂಥ : ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)