೧. ರಷ್ಯಾದ ಜೀವಶಾಸ್ತ್ರಜ್ಞ ವ್ಲಾದಿಮೀರ ನಿಕಿತಿನ : ಇವರು ಇಲಿಗಳ ಮೇಲೆ ಪ್ರಯೋಗವನ್ನು ಮಾಡಿದರು. ‘ಉಪವಾಸದಿಂದ ಇಲಿಗಳ ಎರಡೂವರೆ ವರ್ಷಗಳ ಆಯಸ್ಸು ೪ ವರ್ಷಗಳ ವರೆಗೆ ಹೆಚ್ಚಾಗುತ್ತದೆ’ ಎಂದು ಅವರು ಪ್ರಯೋಗದಿಂದ ಸಿದ್ಧಪಡಿಸಿದ್ದಾರೆ. ಅವರು ಹೇಳುವುದೇನೆಂದರೆ, ‘ಉಪವಾಸದಿಂದ ತಾರುಣ್ಯವು ಚಿರಕಾಲ ಉಳಿಯುತ್ತದೆ. ವೃದ್ಧರೂ ತರುಣರಾಗಬಲ್ಲರು. ಅನಾವಶ್ಯಕವಾಗಿ ತಿನ್ನುವುದರಿಂದಲೇ ಸಾವು ಹತ್ತಿರ ಬರುತ್ತದೆ.’ ಅವರ ಸಂಶೋಧನೆಯಲ್ಲಿನ ವೈಜ್ಞಾನಿಕ ಸ್ಪಷ್ಟೀಕರಣ ಹೀಗಿದೆ, ನಮ್ಮ ಆಹಾರ ಮತ್ತು ಶರೀರದಲ್ಲಿನ ಉದ್ವೇಗಕಾರಕ ಗ್ರಂಥಿಗಳು (ಸುಪ್ರಾರೀನಲ್ ಗ್ಲ್ಯಾಂಡಸ್) ವೃದ್ಧಾಪ್ಯದ ಪ್ರಕ್ರಿಯೆಯ ಕಾರ್ಯವನ್ನು ಮಾಡುತ್ತಿರುತ್ತವೆ. ಕಾಲಾಂತರ ದಲ್ಲಿ ಮೇದೋಜೀರಕ ಗ್ರಂಥಿಯಲ್ಲಿ (‘ಪ್ಯಾನ್ಕ್ರಿಯಾಜ್’ನಲ್ಲಿ) ಅಸಾಧಾರಣ ಪರಿವರ್ತನೆಯಾಗಿ ಅದರ ಹಾರ್ಮೋನ್‌ನ ಉತ್ಪಾದನೆಯ ಕ್ಷಮತೆಯು ಕುಂಠಿತವಾಗುತ್ತಾ ಹೋಗುತ್ತದೆ. ಈ ಹಾರ್ಮೋನ್‌ವು ಶರೀರದಲ್ಲಿನ ಪೋಷಕ ತತ್ತ್ವಕ್ಕೆ ಸಂಬಂಧಿಸಿದ ಜೀವಕೋಶಗಳ ಗುಂಪಿಗೆ (ಟಿಶ್ಯೂಗಳಿಗೆ) ಸಹಾಯಕವಾಗಿರುತ್ತದೆ; ಆದರೆ ಉದ್ವೇಗಕಾರಕ ಗ್ರಂಥಿಗಳು ವಿಭಿನ್ನ ರೀತಿಯ ಹಾರ್ಮೋನುಗಳನ್ನು ಉತ್ಪಾದನೆಮಾಡಿ ಉದ್ವೇಗಕಾರಕ ಗ್ರಂಥಿಗಳ ಉತ್ಪಾದನೆಯ ಕ್ಷಮತೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಅವು ಆಯುಷ್ಯವೃದ್ಧಿಯ ಕಾರ್ಯವನ್ನು ಮಾಡಲಾರವು. ನಿಕಿತಿನ ಹೇಳುವುದೇನೆಂದರೆ, ಈ ರೀತಿ ಈ ಹಾರ್ಮೋನವು ಎರಡು ಕಾರ್ಯಗಳಲ್ಲಿ ಸಮತೋಲನವನ್ನು ತಪ್ಪಿಸುತ್ತದೆ ಮತ್ತು ಇದರಿಂದಲೇ ಆಯುಷ್ಯವು ಕಡಿಮೆಯಾಗುತ್ತದೆ. ಈ ಸಮತೋಲನವನ್ನು ವ್ಯವಸ್ಥಿತವಾಗಿಡುವ ಕಾರ್ಯವು ಉಪವಾಸದಿಂದ ಆಗುತ್ತದೆ. ಉಪವಾಸದಿಂದ ಉದ್ವೇಗಕಾರಕ ಗ್ರಂಥಿಗಳಿಂದ ಉತ್ಪನ್ನವಾಗುವ ಅನಿಷ್ಟ ಹಾರ್ಮೋನ್‌ಗಳ ವೃದ್ಧಿಯು ಕುಂಠಿತವಾಗುತ್ತದೆ ಮತ್ತು ದುಷ್ಪರಿಣಾಮಗಳು ತಪ್ಪುತ್ತವೆ. ಇದರಿಂದ ತಾರುಣ್ಯವು ಸ್ಥಿರವಾಗಿ ಉಳಿಯುತ್ತದೆ ಮತ್ತು ವೃದ್ಧಾಪ್ಯದ ಪ್ರಕ್ರಿಯೆ ನಿಲ್ಲುತ್ತದೆ. ಉಪವಾಸ ಮಾಡುವಾಗ ಶುದ್ಧ ನೀರು ಮತ್ತು ಯೋಗ್ಯ ಹಣ್ಣಿನ ರಸವನ್ನು ಯಥೇಚ್ಛವಾಗಿ ಕುಡಿಯಬೇಕು.
೨. ಅಮೇರಿಕಾದ ವಿಜ್ಞಾನಿ ಬರ್ನೇರ್ ಮ್ಯಾಕಫರ್ಡ್ : ಇವರು ಆಯುಷ್ಯವಿಡೀ ಯೌವನ ಮತ್ತು ಆಹಾರದ ಬಗ್ಗೆ ಸಂಶೋಧನೆಯನ್ನು ಮಾಡಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅವರು ಹೇಳುವುದೇನೆಂದರೆ, ಗ್ರೀಕ್ ಮತ್ತು ರೋಮನ್ ಸಂಸ್ಕ್ಕೃತಿಯು ಉಚ್ಚ ಮಟ್ಟದಲ್ಲಿತ್ತು, ಆಗ ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿಯಿತ್ತು. ಎರಡು ಊಟಗಳ ನಡುವೆ ಕನಿಷ್ಠ ೧೨ ಗಂಟೆಗಳ ಅಂತರವಿರುತ್ತಿತ್ತು. ಆಗ ಇಡೀ ವಿಶ್ವದಲ್ಲೇ ಅವರ ಆಯುಷ್ಯವು ಎಲ್ಲಕ್ಕಿಂತ ಹೆಚ್ಚಿಗೆ ಇತ್ತು.
೩. ಪ್ಯೂರಿಂಗ್ಟನ್ : ಈ ವಿಜ್ಞಾನಿಯು ಹೇಳುವುದೇನೆಂದರೆ, ‘ಹುಟ್ಟಿದಾಗಿನಿಂದ ೧೫ ದಿನಕ್ಕೊಮ್ಮೆ ಒಂದು ದಿನ ಪೂರ್ಣ ಉಪವಾಸ ಮಾಡಿದರೆ ವೃದ್ಧಾಪ್ಯವೇ ಬರುವುದಿಲ್ಲ.’ – ಹ.ಭ.ಪ. ಸುಧಾತಾಯಿ ಧಾಮಣಕರ
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)