ಸಾಧನೆ ಮಾಡುವಾಗ ಸಾಧಕನು ಯಾವಾಗ ಸಿದ್ಧಗೊಳಿಸುವ ಪ್ರಯತ್ನದಲ್ಲಿರುತ್ತಾನೆಯೋ, ಆಗ ಅವನ ಜೀವನದಲ್ಲಿ ಅವನಿಗೆ ಒಂದು ಮಹತ್ವಪೂರ್ಣ ಪ್ರಮೇಯರೂಪಿ ಸಿದ್ಧತೆಗೆ ಎದುರಿಸಬೇಕಾಗುತ್ತದೆ, ಅದು ಅಂದರೆ, ‘ಸದ್ಗುರುಗಳ ಬಗ್ಗೆ ಉತ್ಕಟ ಭಕ್ತಿಭಾವ ಸತತವಾಗಿ ಜಾಗೃತವಿರುವುದು’, ಇದು ಅವನ ಜೀವನದಲ್ಲಿನ ಅನಿವಾರ್ಯ ಘಟಕವಿದೆ. ಈ ಭಕ್ತಿಭಾವವು ಅವನಲ್ಲಿ ಸತತವಾಗಿ ಉರಿಯುತ್ತಿರಲು ಅವನಿಗೆ ಭಾವಭಕ್ತಿಯ ಅವಶ್ಯಕವಿರುತ್ತದೆ. ಭಾವಭಕ್ತಿ ನಿರ್ಮಾಣಗೊಳಿಸುವ ಪ್ರೇರಿತವು ಅವನಿಗೆ ಸದ್ಗುರುಗಳಿಂದ ಸತತವಾಗಿ ನಿರ್ಗುಣ ಸ್ವರೂಪದಲ್ಲಿ ಪ್ರಾಪ್ತವಾಗುತ್ತದೆ. ಇದೊಂದು ಗುರುಕೃಪೆಯ ನಿರಂತರ ಹರಿಯುವ ಧಾರೆಯೇ ಇರುತ್ತದೆ. ಭಾವಭಕ್ತಿಯ ಬಲದಿಂದ ಸಿದ್ಧವಾದ ಸಾಧಕನು ತನ್ನ ಜೀವನಪುಷ್ಪವನ್ನು ಗುರುಚರಣಗಳಲ್ಲಿ ಸಮರ್ಪಣೆ ಮಾಡಿ ಅವರು ವಹಿಸಿದ ಕಾರ್ಯದಲ್ಲಿ ಶಾಶ್ವತವಾಗಿ ಲೀನವಾಗುತ್ತಾನೆ. ಇದೇ ಅವನ ಜೀವನದ ಕರ್ತವ್ಯವಿರುತ್ತದೆ.
ಶಿಷ್ಯನು ಮಾಡುವ ಕೆಲವು ಪ್ರಯತ್ನಗಳು
ಗುರುಗಳ ಬಗ್ಗೆ ಇರುವ ಅನನ್ಯ ಶರಣಾಗತ, ಲೀನ ಮತ್ತು ಸಮರ್ಪಣೆ ಭಾವವು ಹೆಚ್ಚಿಸುವುದು
ಗುರುಗಳ ಬಗ್ಗೆ ಬಿಡಿಸಲಾಗದ ಶ್ರದ್ಧೆ ಇಡುವುದು, ಅಂದರೆ ‘ಅವರು ಹೇಳುತ್ತಿರುವ ಪ್ರತಿಯೊಂದು ಶಬ್ದಗಳು ಶೇ. ೧೦೦ ರಷ್ಟು ಸರಿಯಾಗಿದೆ ಮತ್ತು ಸತ್ಯವಿದೆ’, ಎಂಬ ಶ್ರದ್ಧೆಯನ್ನು ಅಂಗೀಕರಿಸುವುದು ಜಿಗುಟುತನದಿಂದ ಮತ್ತು ಸತತವಾಗಿ ಗುರುವಾಜ್ಞೆಯನ್ನು ಪಾಲಿಸುವುದು ಗುರುಗಳು ಹೇಳುತ್ತಿರುವುದನ್ನೆಲ್ಲ ತಕ್ಷಣ ಮನಃಪೂರ್ವಕ ಮತ್ತು ಸಂಪೂರ್ಣ ಶ್ರದ್ಧೆ ಇಟ್ಟು ಪಾಲಿಸುವುದು, ಗುರುಗಳ ಬಗ್ಗೆ ಸತತವಾಗಿ ಕೃತಜ್ಞತೆ ವ್ಯಕ್ತಪಡಿಸುವುದು ಮತ್ತು ಸಾಧನೆ ಮಾಡುವುದಕ್ಕಾಗಿ ಮನುಷ್ಯಜನ್ಮ ದೊರಕಿರುವುದರಿಂದ ಕೃತಜ್ಞತೆಭಾವದಲ್ಲಿರುವುದು, ಗುರುಚರಣಗಳಲ್ಲಿ ಹೋಗುವ ತೀವ್ರ ತಳಮಳ ಹೆಚ್ಚಿಸುವುದು, ಗುರುಗಳು ಹೇಳುವುದನ್ನು ಕೇಳುವ ವೃತ್ತಿ ಇಡುವುದು.
ಗುರುಗಳ ಬಗ್ಗೆ ಇರುವ ವ್ಯಷ್ಟಿಭಾವದ ಕೆಲವು ಉದಾಹರಣೆಗಳು
ಪ್ರತಿಯೊಂದು ಕರ್ಮವು ‘ಗುರುಚರಣಗಳ ಸೇವೆ ಇದೆ’, ಎಂಬ ಭಾವವಿಟ್ಟು ಮನಃಪೂರ್ವಕ, ಪರಿಪೂರ್ಣ ಮತ್ತು ಭಾವಪೂರ್ಣ ಮಾಡುವುದು
ಪ್ರತಿಯೊಂದು ವಸ್ತುಗಳನ್ನು ಇಡುವಾಗ ಅವುಗಳನ್ನು ಶ್ರೀಗುರುಚರಣಗಳಲ್ಲಿ ಇಡುತ್ತಿದ್ದೇನೆ, ಎಂಬ ಭಾವ ಇಡುವುದು
ಗುರುಗಳಿಗೆ ಶರಣಾಗತಿಯಿಂದ ಪ್ರಾರ್ಥಿಸುವುದು, ‘ಗುರುದೇವಾ, ನನಗೆ ಏನೂ ಬರುವುದಿಲ್ಲ, ತಿಳಿಯುವುದಿಲ್ಲ. ನೀನೇ ಎಲ್ಲವನ್ನೂ ಹೇಳು ಮತ್ತು ನೀನೇ ಎಲ್ಲವನ್ನು ಮಾಡಿಸು.’
ನೀರು ಕುಡಿಯುವಾಗ ‘ಶ್ರೀಗುರುಚರಣಗಳ ತೀರ್ಥವೆಂದು ಸೇವನೆ ಮಾಡುತ್ತಿದ್ದೆನೆ’ ಮತ್ತು ತಿಂಡಿತಿನಿಸು ತಿನ್ನುವಾಗ ‘ಗುರುಗಳು ನೀಡಿದ ಪ್ರಸಾದವನ್ನು ಸ್ವೀಕರಿಸುತ್ತಿದ್ದೇನೆ’, ಎಂಬ ಭಾವವಿಡುವುದು