ಸಾಮಾನ್ಯ ಜನರ ಮತ್ತು ಸಾಧನೆ ಮಾಡದಿರುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. 20 ರಷ್ಟು ಇರುತ್ತದೆ ಮತ್ತು ದಿನನಿತ್ಯ ದೇವರಪೂಜೆ, ಗ್ರಂಥ ಅಧ್ಯಯನ, ಉಪವಾಸ ಇತ್ಯಾದಿ ಕರ್ಮಕಾಂಡದ ಸಾಧನೆ ಪ್ರತಿನಿತ್ಯ ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ.25 ರಿಂದ 30 ರಷ್ಟು ಇರುತ್ತದೆ. ಶೇ. 70 ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ ವ್ಯಕ್ತಿಯು ಸಂತಪದವಿಯಲ್ಲಿ ವಿರಾಜಮಾನರಾಗುತ್ತಾರೆ. ಈ ಸಂತರು ಸಮಷ್ಟಿ ಕಲ್ಯಾಣಕ್ಕಾಗಿ ನಾಮಜಪ ಮಾಡಬಹುದು. ಮೃತ್ಯುನಂತರ ಅವರಿಗೆ ಪುರ್ನಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಮತ್ತು ಮನುಕುಲದ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯ ಮೇಲೆ ಜನ್ಮ ತಾಳಿ ಬರಬಹುದು.
ಇಂದು ಸಮಾಜವು ಧರ್ಮಾಚರಣೆಯಿಂದ ದೂರವಾಗಿರುವುದರಿಂದ ಸಮಾಜದಲ್ಲಿ ರಜ-ತಮಗಳ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ದುಶ್ಚಟಗಳು, ಅಪರಾಧ, ಭ್ರಷ್ಟಾಚಾರ, ಅನೈತಿಕತೆ ಮುಂತಾದ ಅಸುರಿ ಗುಣಗಳ ಪ್ರಾಬಲ್ಯವೂ ಹೆಚ್ಚಿದೆ. ವಾಯುಮಾಲಿನ್ಯ, ಜಲಮಾಲಿನ್ಯ ಮುಂತಾದವುಗಳಿಗಿಂತಲೂ ಈ ರಜ-ತಮಗಳ ಮಾಲಿನ್ಯ ಹೆಚ್ಚು ಅಪಾಯಕಾರಿಯಾಗಿದೆ. ಸತ್ವ-ಗುಣದ ಪ್ರಾಬಲ್ಯ ಹೆಚ್ಚಿಸುವುದು, ಇಂದೊಂದೇ ರಜ-ತಮಗಳ ಮಾಲಿನ್ಯವನ್ನು ತಡೆಯುವ ಪ್ರಭಾವಶಾಲಿ ಉಪಾಯವಾಗಿದೆ. ಇದೇ ಕಾರ್ಯ ಸಂತರಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದಾಗಿ ಸೂಕ್ಷ್ಮದಿಂದ ಆಗುತ್ತಿರುತ್ತದೆ. ‘ಸನಾತನ ಸಂಸ್ಥೆ’ ಹೇಳುತ್ತಿರುವ ಹಿಂದೂ ರಾಷ್ಟ್ರದ (ಈಶ್ವರಿ ರಾಜ್ಯದ) ಸ್ಥಾಪನೆಗಾಗಿ ರಜ-ತಮದ ಪ್ರಾಬಲ್ಯ ಕಡಿಮೆಯಾಗಿ ಸತ್ವಗುಣ ಹೆಚ್ಚುವ ಆವಶ್ಯಕತೆಯಿದೆ. ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಪ್ರಗತಿಗಾಗಿ ಸದೈವ ಕಾರ್ಯನಿರತವಿದ್ದು ಶಾರೀರಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಸ್ತರದಗಳಲ್ಲಿ ಸನಾತನದ ಸಂತರು ಈ ಕಾರ್ಯವನ್ನು ಮಾಡುತ್ತಿದ್ದಾರೆ.
ಸನಾತನದ ಸಂತರ ಆಧ್ಯಾತ್ಮಿಕ ವೈಶಿಷ್ಟ್ಯಗಳು
1. ಸಂತರ ಮನೋಲಯ ಆಗಿರುತ್ತದೆ, ಅಂದರೆ ಅವರ ಮನಸ್ಸಿನಲ್ಲಿ ಕೇವಲ ಗುರುಗಳು ಕೊಟ್ಟ ‘ನಾಮ’ದ ಸ್ಮರಣೆ ನಿರಂತರವಾಗಿ ನಡೆದಿರುತ್ತದೆ ಅಥವಾ ಅವರು ನಿರ್ವಿಚಾರ ಅವಸ್ಥೆಯಲ್ಲಿರುತ್ತಾರೆ.
2. ಸಂತರಲ್ಲಿ ಪ್ರೇಮಭಾವ ಮತ್ತು ಸಾಕ್ಷೀಭಾವ ನಿರ್ಮಾಣವಾಗಿರುತ್ತದೆ. ಅದರ ಬಗ್ಗೆ ಸಾಧಕರಿಗೆ ಅನುಭೂತಿ ಬರುತ್ತದೆ.
3. ಅವರ ಸಹವಾಸದಲ್ಲಿದ್ದಾಗ ಉಪಾಯವಾಗುವುದು, ನಾಮಜಪ ತನ್ನಷ್ಟಕ್ಕೆ ಆಗುವುದು, ಮನಸ್ಸು ನಿರ್ವಿಚಾರವಾಗುವುದು, ತುಂಬಾ ಆನಂದವೆನಿಸುವುದು ಮತ್ತು ಶಾಂತ ಅನಿಸುವುದು ಇತ್ಯಾದಿಗಳ ಅನುಭೂತಿ ಬರುತ್ತವೆ.
4. ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯವು ವಾಯುಮಂಡಲವನ್ನು ನಿತ್ಯವೂ ಶುದ್ಧವಾಗಿಡುತ್ತದೆ.
5. ಸಂತರಿಗೆ ಅಹಂ ಅತ್ಯಲ್ಪವಿರುವುದರಿಂದ ‘ದೇವರು ಅಥವಾ ಗುರುಗಳು (ಪ.ಪೂ. ಡಾಕ್ಟರ) ನಮ್ಮ ಮಾಧ್ಯಮದಿಂದ ಎಲ್ಲವನ್ನು ಮಾಡುತ್ತಾರೆ’, ಎಂಬುದನ್ನು ಅವರಿಗೆ ಕ್ಷಣಕ್ಷಣಕ್ಕೆ ಅದರ ಅರಿವಾಗುತ್ತದೆ. ಆದುದರಿಂದ ಅವರಿಗೆ ಅತ್ಯಲ್ಪ ಪ್ರಮಾಣದಲ್ಲಿ ತಮ್ಮ ಅಸ್ತಿತ್ವದ ಅರಿವಿರುತ್ತದೆ.
6. ಸಂತರು ಸತತವಾಗಿ ಶರಣಾಗತ ಭಾವದಲ್ಲಿ ಇರುತ್ತಿರುವುದರಿಂದ ಅವರು ದೀರ್ಘಕಾಲ ಮತ್ತು ಹೆಚ್ಚು ಪರಿಣಾಮಕಾರಕ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುತ್ತದೆ.
ಈ ರೀತಿ ಸಂತರು ಸತತವಾಗಿ ಇತರರ ಕಲ್ಯಾಣಕ್ಕಾಗಿ ಶ್ರಮಪಡುತ್ತಿರುತ್ತಾರೆ.