ಮುಂದಿನ ನೂರಾರು ಪೀಳಿಗೆಗಳ ಯೋಗಕ್ಷೇಮದ ದೃಷ್ಟಿಯಿಂದ ಮಾಡಿರುವ ಸಂಶೋಧನೆ
ಮಾನವನ ಶೇ. ೮೦ ರಷ್ಟು ಸಮಸ್ಯೆಗಳಿಗೆ ಮೂಲಭೂತವಾಗಿ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಆದುದರಿಂದ ಸಮಸ್ಯೆಗಳ ನಿವಾರಣೆಗಾಗಿ ಇತರ ಭೌತಿಕ ಪ್ರಯತ್ನಗಳೊಂದಿಗೆ ಆಧ್ಯಾತ್ಮಿಕ ಪ್ರಯತ್ನಗಳನ್ನು ಮಾಡದಿದ್ದರೆ, ಸಮಸ್ಯೆಗಳು ಸಂಪೂರ್ಣ ಮತ್ತು ಶಾಶ್ವತವಾಗಿ ನಿವಾರಣೆಯಾಗುವುದಿಲ್ಲ, ಅಂದರೆ ಆಧ್ಯಾತ್ಮಿಕ ಸ್ತರದ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿದ್ದರೆ ಜೀವನದಲ್ಲಿನ ಶೇ. 80 ರಷ್ಟು ಸಮಸ್ಯೆಗಳಿಂದ ಮಾನವನ ರಕ್ಷಣೆಯಾಗುತ್ತದೆ. ಇದರೊಂದಿಗೆ ಜೀವನದ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮಿಕರಣ, ಅಂದರೆ ದಿನನಿತ್ಯದ ‘ಪ್ರತಿಯೊಂದು ಕೃತಿಯನ್ನು ಈಶ್ವರನ ಅನುಸಂಧಾನದಲ್ಲಿದ್ದು ಈಶ್ವರಪ್ರಾಪ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಮಾಡಿದರೆ’, ಆ ಪ್ರತಿಯೊಂದು ಕೃತಿಯಿಂದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಬಹುದು. ಈ ದೃಷ್ಟಿಯಿಂದ ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ವಿಷಯಗಳ ಬಗ್ಗೆ ಆಧುನಿಕ ವೈಜ್ಞಾನಿಕ ಉಪಕರಣಗಳು ಹಾಗೂ ಸೂಕ್ಷ್ಮ-ಪರೀಕ್ಷಣೆಗಳ ಮಾಧ್ಯಮದಿಂದ ಸವಿಸ್ತಾರ ಸಂಶೋಧನೆಯನ್ನು ಮಾಡಿ ಅದನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿನಾದ್ಯಂತ ಉಚಿತವಾಗಿ ನೀಡಿದ್ದಾರೆ. ಈ ಸಂಶೋಧನೆಯ ವ್ಯಾಪ್ತಿಯು ಎಷ್ಟಿದೆ ಎಂದರೆ, ಅದರ ಮಾಹಿತಿ ಯನ್ನು ನೀಡಲು ಒಂದು ಪ್ರತ್ಯೇಕ ಗ್ರಂಥವೇ ಬೇಕಾಗಬಹುದು ! ಸ್ಥಳಾವಕಾಶದ ಮಿತಿಯಿಂದಾಗಿ ಈ ಸಂಶೋಧನೆಯಲ್ಲಿನ ಕೆಲವು ಮುಖ್ಯ ವಿಷಯ ಗಳನ್ನು ಮಾತ್ರ ಇಲ್ಲಿ ಕೊಡುತ್ತಿದ್ದೇವೆ.
೧. ಆಚಾರಧರ್ಮ
ಸಾತ್ತ್ವಿಕ ಮತ್ತು ಅಸಾತ್ತ್ವಿಕ ಉಡುಗೆ-ತೊಡುಗೆ, ಕೇಶರಚನೆ, ಆಹಾರ, ಪಾನೀಯ, ಬಣ್ಣ ಇತ್ಯಾದಿ.
೨. ಧಾರ್ಮಿಕ ಕೃತಿಗಳು
ಹಿಂದೂ ಧರ್ಮಕ್ಕನುಸಾರ ಶ್ರಾದ್ಧ ವಿಧಿಯನ್ನು ಮಾಡುತ್ತಿರುವ ಆಸ್ಟ್ರೇಲಿಯಾದ ಶ್ರೀ. ಶಾನ್ ಕ್ಲಾರ್ಕ್
ನಮಸ್ಕಾರದ ಪದ್ಧತಿಗಳು, ವಿವಿಧ ಧಾರ್ಮಿಕ ವಿಧಿಗಳು, ಉದಾ. ವಿವಿಧ ಯಜ್ಞಗಳಿಗೆ ಸಂಬಂಧಿಸಿದ ವ್ಯಕ್ತಿ ಮತ್ತು ವಸ್ತುಗಳ ಮೇಲೆ ಆಧ್ಯಾತ್ಮಿಕ ದೃಷ್ಟಿ ಯಿಂದಾಗುವ ಪರಿಣಾಮಗಳು
೩. ಸಾಮಾಜಿಕ ಕೃತಿಗಳು
ಹುಟ್ಟುಹಬ್ಬವನ್ನು ಆಚರಿಸುವುದು, ಮೇಣದ ಬತ್ತಿಯಿಂದ ಮತ್ತು ಕೈದೀಪದಿಂದ ದೀಪಪ್ರಜ್ವಲನೆ ಮಾಡುವುದು ಇತ್ಯಾದಿ.
೪. ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ಘಟನೆಗಳು
ಸನಾತನದ ಆಶ್ರಮದಲ್ಲಿನ ಹಾಸುಗಲ್ಲುಗಳ ಮೇಲೆ ಮೂಡಿದ ಓಂ ಅನ್ನು ಗೋಲಾಕಾರದಲ್ಲಿ ದೊಡ್ಡದು ಮಾಡಿ ತೋರಿಸಲಾಗಿದೆ. (ವರ್ಷ 2017)
ದೇವತೆಗಳ ಚಿತ್ರಗಳ ಪ್ರತಿಮೆಗಳು ಅಥವಾ ಸಂತರು ಉಪಯೋಗಿಸುತ್ತಿದ್ದ ವಸ್ತುಗಳು ತಾವಾಗಿಯೇ ಸೀಳುವುದು, ಅವುಗಳ ಮೇಲೆ ಗೆರೆಗಳು ಮೂಡುವುದು, ಅವು ಕಾರಣವಿಲ್ಲದೇ ಸುಟ್ಟು ಹೋಗುವುದು ಇತ್ಯಾದಿ ಕೆಟ್ಟ ಶಕ್ತಿಗಳಿಂದ ವ್ಯಕ್ತಿ ಮತ್ತು ವಸ್ತುಗಳ ಮೇಲೆ ಕಣ್ಣಿಗೆ ಕಾಣಿಸುವಂತಹ ನಕಾರಾತ್ಮಕ ಪರಿಣಾಮಗಳನ್ನು ತೋರಿಸುವ ಘಟನೆಗಳ ಬಗ್ಗೆ ಬಹಳಷ್ಟು ಸಂಶೋಧನೆಯನ್ನು ಮಾಡಲಾಗಿದೆ ಉದಾಹರಣೆಗಾಗಿ ಓರ್ವ ಸಾಧಕಿಯ ಮನೆಯಲ್ಲಿ ದೊರಕಿದೆ ಮೊಳೆ ಹೊಡೆದ ತೆಂಗಿನಕಾಯಿ, ಸನಾತನ ಆಶ್ರಮದ ಸುತ್ತಲಿನ ಗಿಡಗಳ ಮೇಲ್ಭಾದಲ್ಲಿ ಕಟ್ಟಿದ್ದ ದಾರಗಳ ಬಗ್ಗೆ ವೈಜ್ಞಾನಿಕ ಉಪಕರಣ ಹಾಗೂ ಸೂಕ್ಷ್ಮ ಪರೀಕ್ಷೆಯಿಂದ ಸಂಶೋಧನೆ ಮಾಡಲಾಗಿದೆ. ಇದರಲ್ಲಿನ ವೈಶಿಷ್ಟ್ಯಪೂರ್ಣ ವಿಷಯವೆಂದರೆ, ಈ ವಸ್ತುಗಳನ್ನು ‘ಪಿಪ್’ ಮತ್ತು ‘ಯೂ.ಟಿ.ಎಸ್.’ ಎಂಬ ಎರಡು ಸ್ವತಂತ್ರ ಉಪಕರಣಗಳ ಮೂಲಕ ಮಾಡಿದ ಪರೀಕ್ಷಣೆಗಳ ನಿಷ್ಕರ್ಷಗಳು ಸಂಪೂರ್ಣ ಹೋಲುತ್ತವೆ. ಎರಡೂ ಪರೀಕ್ಷಣೆಗಳಲ್ಲಿ ಈ ವಸ್ತುಗಳಲ್ಲಿ ತುಂಬಾ ನಕಾರಾತ್ಮಕ ಶಕ್ತಿಯಿರುವುದಾಗಿ ಕಂಡು ಬಂದಿತು ಇದಲ್ಲದೇ ಯಾವುದೇ ಸ್ಥೂಲ ಕಾರಣಗಳಿಲ್ಲದೇ ಕೆಲವು ವಸ್ತುಗಳಿಗೆ ಸುಗಂಧ ಬರುವುದು, ವಸ್ತುಗಳ ಬಣ್ಣ ಗುಲಾಬಿ, ಹಳದಿ ಅಥವಾ ಸುವರ್ಣ ಬಣ್ಣದ್ದಾಗುವುದು, ಸಂತರ ದೇಹದ ಮೇಲೆ , ಸ್ವಸ್ತಿಕ, ಕಮಲಗಳಂತಹ ಶುಭ ಚಿಹ್ನೆಗಳು ತನ್ನಿಂತಾನೆ ಏಳುವುದು.
ಇಂತಹ ಸೂಕ್ಷ್ಮದಲ್ಲಿನ ಒಳ್ಳೆಯ ಶಕ್ತಿಯಿಂದ ವ್ಯಕ್ತಿ ಮತ್ತು ವಸ್ತುಗಳ ಮೇಲಿನ ದೃಶ್ಯ ಸಕಾರಾತ್ಮಕ ಬದಲಾವಣೆಗಳನ್ನು ತೋರಿಸುವ ಘಟನೆಗಳ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಲಾಗಿದೆ.
೫. ಆಧ್ಯಾತ್ಮಿಕ ಉಪಾಯಗಳು
ಉಪ್ಪಿನ ನೀರಿನಲ್ಲಿ ಕೆಲವು ಸಮಯ ಕಾಲು ಮುಳುಗಿಸಿ ಕುಳಿತುಕೊಳ್ಳುವುದು, ಖಾಲಿ ಪೆಟ್ಟಿಗೆಗಳ ಉಪಾಯ ಮಾಡುವುದು, ಗೋಮೂತ್ರ ಹಾಕಿದ ನೀರಿನಿಂದ ಸ್ನಾನ ಮಾಡುವುದು, ಗೋಮೂತ್ರ ಹಾಕಿದ ನೀರನ್ನು ಸೇವಿಸುವುದು ಇತ್ಯಾದಿ. ಈ ಸಂದರ್ಭದಲ್ಲಿ ‘ಯೂ.ಟಿ.ಎಸ್.’ ಉಪಕರಣದಿಂದ ಮಾಡಿದ ಪರೀಕ್ಷಣೆಗಳಲ್ಲಿ ಈ ಉಪಾಯಗಳನ್ನು ಮಾಡುವ ಮೊದಲು ವ್ಯಕ್ತಿಯಲ್ಲಿ ಕಂಡುಬಂದ ನಕಾರಾತ್ಮಕ ಊರ್ಜೆ ಉಪಾಯದ ನಂತರ ನಾಶವಾಗಿ ಅವನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುತ್ತಿರುವುದು ಕಂಡು ಬಂದಿತು.
೬. ಸಂಗೀತ ಮತ್ತು ನೃತ್ಯ
ಸಾತ್ತ್ವಿಕ ಮತ್ತು ಅಸಾತ್ತ್ವಿಕ ಸಂಗೀತ ಮತ್ತು ನೃತ್ಯಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮ, ಹಾಗೆಯೇ ವಿವಿಧ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವ್ಯಾಧಿಗಳಿಗೆ ವಿಶಿಷ್ಟ ರಾಗಗಳಿಂದಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ವಿವಿಧ ಪ್ರಯೋಗಗಳನ್ನು ಮಾಡಲಾಯಿತು.
೭. ಸಮಾಜೋಪಯೋಗಿ ವಿಷಯಗಳು
ರಾಷ್ಟ್ರದ ಸರ್ವಾಂಗೀಣ ವಿಕಾಸಕ್ಕಾಗಿ ಆಧ್ಯಾತ್ಮಿಕ ಉನ್ನತರ ದಾರ್ಶನಿಕ ಮುಂದಾಳತ್ವವು ಏಕೆ ಆವಶ್ಯಕವಾಗಿದೆ, ಎಂಬುದನ್ನು ಸ್ಪಷ್ಟಪಡಿಸುವ ಒಂದು ದೇಶದ ಸರ್ವಾಧಿಕಾರಿ, ಒಂದು ಪ್ರಜಾಪ್ರಭುತ್ವವುಳ್ಳ ದೇಶದ ರಾಜಕೀಯ ಮುಖಂಡ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕಾರ್ಯನಿರತ ಪರಾತ್ಪರ ಗುರು ಡಾ. ಆಠವಲೆಯವರ ತುಲನಾತ್ಮಕ ಅಧ್ಯಯನ ಮಾಡುವ ‘ಪಿಪ್’ ಮತ್ತು ‘ಯೂ.ಟಿ.ಎಸ್.’ ಪ್ರಯೋಗ, ಹಾಗೆಯೇ ನ್ಯಾಯವಾದಿಗಳ ಪ್ರಸ್ತುತ ಪ್ರಚಲಿತ ಕಪ್ಪು ಕೋಟ್ ಇರುವ ವೇಶಭೂಷಣವನ್ನು ಕೇವಲ ೧೫ ನಿಮಿಷ ಧರಿಸಿದಾಗ ನ್ಯಾಯವಾದಿಗಳ ಮೇಲೆ ಎಷ್ಟು ಹಾನಿಕರ ಪರಿಣಾಮವಾಗುತ್ತದೆ, ಎಂಬುದನ್ನು ತೋರಿಸುವ ‘ಯೂ.ಟಿ.ಎಸ್.’ ಪ್ರಯೋಗವನ್ನು ಮತ್ತು ಓರ್ವ ಭಾರತೀಯ ಮತ್ತು ಹಿಂದೂಯೇತರ ವ್ಯಕ್ತಿಯು ಶ್ರಾದ್ಧವಿಧಿ ಮಾಡಿದ ನಂತರ ಅವನ ಮೇಲೆ ವಿಧಿಯಿಂದಾಗುವ ಸಕಾರಾತ್ಮಕ ಪರಿಣಾಮ ಗಳನ್ನು ತೋರಿಸುವ ‘ಯೂ.ಟಿ.ಎಸ್.’ ಪ್ರಯೋಗ ಇತ್ಯಾದಿ.
೮. ಸಾತ್ತ್ವಿಕ ಪ್ರಾಣಿ-ಪಕ್ಷಿಗಳ ವಿಷಯದಲ್ಲಿ ಸಂಶೋಧನೆ
ಸಾತ್ತ್ವಿಕ ಹುಂಜದ ಎದುರಿಗೆ ತಟ್ಟೆಯಲ್ಲಿ ಕೊಕಾಕೋಲಾ ಮತ್ತು ಹಾಲು ಇಟ್ಟಾಗ ಅದು ಹಾಲಿನತ್ತ ಆಕರ್ಷಿತವಾಯಿತು
ಕೆಲವೊಮ್ಮೆ ಸಾಧನೆಯನ್ನು ಮಾಡುವ ಯಾವುದಾದ ರೊಂದು ಜೀವಕ್ಕೆ ಪೂರ್ವಕರ್ಮದಿಂದಾಗಿ ಮನುಷ್ಯೇತರ (ಪಶು-ಪಕ್ಷಿ, ವನಸ್ಪತಿ ಇತ್ಯಾದಿ) ಯೋನಿಯಲ್ಲಿ ಜನ್ಮ ದೊರೆಯಬಹುದು.
ಶ್ರೀಮದ್ ಭಗವದ್ಗೀತೆಯಲ್ಲಿನ ಜಿಂಕೆಯ ಜನ್ಮ ಸಿಕ್ಕಿದ ಭರತ ರಾಜನ ಉದಾಹರಣೆ ಎಲ್ಲರಿಗೂ ತಿಳಿದಿದೆ. ಮನುಷ್ಯೇತರ ಯೋನಿಗಳು ಭೋಗಯೋನಿಗಳಾಗಿರುವುದರಿಂದ ಅವುಗಳಲ್ಲಿ ಜೀವದ ಪ್ರಾರಬ್ಧಭೋಗವನ್ನು ಅನುಭವಿಸಿ ಮುಗಿಸಲಾಗುತ್ತದೆ. ಅದರಲ್ಲಿ ಕ್ರಿಯಮಾಣ ಕರ್ಮ ಇರುವುದಿಲ್ಲ, ಆದುದರಿಂದ ಹೊಸ ಪ್ರಾರಬ್ಧ ನಿರ್ಮಾಣವಾಗುವುದಿಲ್ಲ. ಆದುದರಿಂದ ಹಿಂದಿನ ಜನ್ಮದಲ್ಲಿನ ಕೆಲವು ಉನ್ನತ ಸಾಧಕರು ಮನುಷ್ಯೇತರ ಯೋನಿಯಲ್ಲಿ ಜನ್ಮ ಪಡೆದು ತೀವ್ರ ಪ್ರಾರಬ್ಧಭೋಗವನ್ನು ತೀರಿಸುತ್ತಾರೆ ಮತ್ತು ಸಾಧನೆಯನ್ನು ಮಾಡುತ್ತಾರೆ. ಸನಾತನದ ರಾಮನಾಥಿ (ಗೋವಾ) ಮತ್ತು ದೇವದ (ಪನವೇಲ, ಮಹಾರಾಷ್ಟ್ರ ಆಶ್ರಮಗಳಲ್ಲಿ ಹಾಗೆಯೇ ಕೆಲವು ಸಾಧಕರ ಮನೆಯಲ್ಲಿ ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು ತಾವಾಗಿಯೇ ಬಂದವು. ‘ಅವು ಸ್ವತಃ ಆಶ್ರಮ ಅಥವಾ ಸಾಧಕರ ಕಡೆಗೆ ಆಕರ್ಷಿತವಾದವು’. ಇದರಿಂದ ಅವುಗಳಲ್ಲಿ ಮೂಲತಃ ಸಾತ್ತ್ವಿಕತೆಯಿದೆ, ಎಂಬುದು ಗಮನಕ್ಕೆ ಬಂದಿತು. ಈ ಸಂದರ್ಭದಲ್ಲಿ ಸಂಶೋಧನೆ ಮಾಡುವ ದೃಷ್ಟಿಯಿಂದ ಅವುಗಳನ್ನು ವಿವಿಧ ಸಾತ್ತ್ವಿಕ ಮತ್ತು ಅಸಾತ್ತ್ವಿಕ ಸಂವೇದನೆಗಳ ಸಂಪರ್ಕದಲ್ಲಿ ಇಡಲಾಯಿತು. ಉದಾ. ಭಜನೆ ಮತ್ತು ಪಾಪ್ ಸಂಗೀತ, ಬೇಳೆಸಾರು-ಅನ್ನ ಮತ್ತು ಪಿಜ್ಜಾ ಇತ್ಯಾದಿ. ಈ ಪ್ರಾಣಿ ಮತ್ತು ಪಕ್ಷಿಗಳು ಸತತ ಸಾತ್ತ್ವಿಕ ಸಂವೇದನೆಗಳ ಕಡೆಗೆ ಆಕರ್ಷಿತವಾಗುವುದು ಮತ್ತು ಅಸಾತ್ತ್ವಿಕ ಸಂವೇದನೆಗಳಿಂದ ದೂರ ಹೋಗುವುದು ಕಂಡು ಬಂದಿತು.
೯. ಮಾನವನಿಂದ ಭೂಮಿ ಮತ್ತು ನೀರಿನ ಮೇಲಾಗುವ ಸೂಕ್ಷ್ಮ ಪರಿಣಾಮದ ಗಹನ ಸಂಶೋಧನೆ
ಮಾನವನ ಅವಿಚಾರಿ ರಜತಮ ಪ್ರಧಾನ ವರ್ತನೆಯಿಂದಾಗಿ ಭೂಮಿ ಮತ್ತು ನೀರು ಇವುಗಳ ಪ್ರದೂಷಣೆ ಆಗುವುದರೊಂದಿಗೆ ಅನೇಕ ವಿಧದ ಹಾನಿಯಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ; ಆದರೆ ಮಾನವನಿಂದ ಭೂಮಿ ಮತ್ತು ನೀರು ಇವುಗಳ ಮೇಲೆ ಸೂಕ್ಷ್ಮ ಸ್ತರದಲ್ಲಿಯೂ (ಅಂದರೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ತಿಳುವಳಿಕೆಯನ್ನು ಮೀರಿದ) ಪರಿಣಾಮವಾಗುತ್ತದೆ, ಇದರ ಬಗ್ಗೆ ಇದು ವರೆಗೆ ಬಹುತೇಕ ಇಡೀ ಜಗತ್ತು ಅಜ್ಞಾನದಲ್ಲಿದೆ. ಜಗತ್ತಿನ ಈ ಅತ್ಯಂತ ಮಹತ್ವ ಪೂರ್ಣ ವಿಷಯದ ಬಗ್ಗೆ ಪ್ರಬೋಧನೆ ಮಾಡುವ ದೃಷ್ಟಿಯಿಂದ ಫೆಬ್ರವರಿ ೨೦೧೮ ರಿಂದ ಒಂದು ಮಹತ್ವಾಕಾಂಕ್ಷಿ ಸಂಶೋಧನೆ ಹಮ್ಮಿಕೊಳ್ಳಲಾಗಿದೆ. ಈ ಸಂಶೋಧನೆಯ ಅಂತರ್ಗತ ಜಗತ್ತಿನಾದ್ಯಂತದ ವಿವಿಧ ಕಡೆಗಳಲ್ಲಿನ ಮಣ್ಣು ಮತ್ತು ನೀರಿನ ೧ ಸಾವಿರ ಮಾದರಿಗಳ ಆಧುನಿಕ ಉಪಕರಣ ಹಾಗೂ ಸೂಕ್ಷ್ಮ-ಪರೀಕ್ಷಣೆಯ ಮಾಧ್ಯಮದಿಂದ ಸಂಶೋಧನೆ ಮಾಡುವ ಸಂಕಲ್ಪವಿದೆ.
೯ ಅ. ಜಗತ್ತಿನ ಅನೇಕ ಕಡೆಗಳಿಂದ ತಂದಿರುವ ೧೬೯ ಮಣ್ಣಿನ ಮಾದರಿಗಳಲ್ಲಿನ ಬಹುತೇಕ ಮಾದರಿಗಳಲ್ಲಿ ನಕಾರಾತ್ಮಕತೆ ಕಂಡುಬಂದಿತು : ಒಟ್ಟು ಮಾದರಿಗಳ ಪೈಕಿ 25 ಅಕ್ಟೋಬರ್ 2018 ರ ಕೊನೆಯಲ್ಲಿ 24 ದೇಶಗಳಲ್ಲಿನ ಒಟ್ಟು 169 ಮಣ್ಣಿನ ಮಾದರಿಗಳ ಅಧ್ಯಯನ ಪೂರ್ಣವಾಯಿತು. ಈ ಅಧ್ಯಯನದಿಂದ ಭಾರತದಲ್ಲಿನ ಮಣ್ಣಿನ ಕೆಲವು ಮಾದರಿಗಳನ್ನು ಬಿಟ್ಟು ಭಾರತದಲ್ಲಿನ, ಹಾಗೆಯೇ ಸಂಪೂರ್ಣ ಜಗತ್ತಿನಲ್ಲಿನ ಇತರ ಮಾದರಿಗಳಲ್ಲಿ ತೀವ್ರ ನಕಾರಾತ್ಮಕ ಊರ್ಜೆಯಿದೆ ಎಂಬುದು ಗಮನಕ್ಕೆ ಬಂದಿತು. ಇದು ವರೆಗೆ ಅಧ್ಯಯನ ಮಾಡಿದ ಮಣ್ಣುಗಳ ಮಾದರಿಗಳ ಪೈಕಿ ಕೇವಲ ಶ್ರೀಲಂಕಾದ ರಾಮಸೇತುವಿನ ಮಣ್ಣು, ಭಾರತದಲ್ಲಿನ ನೃಸಿಂಹವಾಡಿ, ಕೊಲ್ಹಾಪೂರದ ದತ್ತಮಂದಿರ ಮತ್ತು ರಾಮನಾಥಿ ಗೋವಾದಲ್ಲಿನ ಸನಾತನದ ಆಶ್ರಮದಲ್ಲಿನ ಮಣ್ಣಿನ ಮಾದರಿಗಳಲ್ಲಿ ಮಾತ್ರ ಸಕಾರಾತ್ಮಕತೆ ಕಂಡು ಬಂದಿದೆ.
೯ ಆ. ಜಗತ್ತಿನಾದ್ಯಂತದ 261 ನೀರಿನ ಮಾದರಿಗಳ ಪೈಕಿ ಹೆಚ್ಚಿನ ಮಾದರಿಗಳಲ್ಲಿ ನಕಾರಾತ್ಮಕವೇ ಕಂಡುಬಂದಿದೆ : ಈ ಸಂಶೋಧನೆಯ ಅಂತರ್ಗತ 20 ಮಾರ್ಚ್ 2019 ರ ಕೊನೆಯಲ್ಲಿ 26 ದೇಶಗಳ ಒಟ್ಟು 261 ನೀರಿನ ಮಾದರಿಗಳ ಅಧ್ಯಯನ ಮಾಡಲಾಯಿತು. ಮಣ್ಣಿನ ನಮೂನೆಗಳಂತೆಯೇ ನೀರಿನ ನಮೂನೆಗಳ ಬಗ್ಗೆಯೂ ಹಾಗೆಯೇ ಅನುಭವ ಬಂದಿತು. ರಾಮನಾಥಿಯ ಸನಾತನ ಆಶ್ರಮ, ಪ್ರಯಾಗರಾಜ, ಉತ್ತರಪ್ರದೇಶದ ತ್ರಿವೇಣಿಸಂಗಮದ ನೀರು, ಕೇರಳದ ವಡುಕ್ಕನ್ ದೇವಸ್ಥಾನದಲ್ಲಿನ ಕುಂಡದಲ್ಲಿನ ನೀರಿನಲ್ಲಿ ಸಕಾರಾತ್ಮಕತೆ ಕಂಡುಬಂದಿದ್ದರೆ, ಉಳಿದ ಬಹುತೇಕ ಎಲ್ಲ ನೀರಿನ ಮಾದರಿಗಳಲ್ಲಿ ತುಂಬಾ ನಕಾರಾತ್ಮಕತೆ ಕಂಡುಬಂದಿತು. ಈ ಅಧ್ಯಯನದ ಅಂತರ್ಗತ ವಿವಿಧ ದೇಶಗಳಲ್ಲಿನ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರಿನಲ್ಲಿಯೂ (ಮಿನರಲ್ ವಾಟರ್‌ನಲ್ಲಿಯೂ) ನಕಾರಾತ್ಮಕತೆಯೇ ಕಂಡುಬಂದಿತು. ಇದರಿಂದ ‘ಪ್ಯಾಕ್ ಮಾಡಿದ ಬಾಟಲಿಯ ನೀರು ಆಧ್ಯಾತ್ಮಿಕ ದೃಷ್ಟಿಯಲ್ಲಿ ಹಾನಿಕರವಾಗಿದೆ’, ಎಂಬುದು ಗಮನಕ್ಕೆ ಬಂದಿತು.
೯ ಇ. ಭೂಮಿ ಮತ್ತು ನೀರಿನ ಸೂಕ್ಷ್ಮದಲ್ಲಿನ ಪ್ರದೂಷಣೆಯಿಂದ ನಮ್ಮ ರಕ್ಷಣೆ ಮಾಡಿಕೊಳ್ಳಲು ಮತ್ತು ಈ ಪ್ರದೂಷಣೆಯನ್ನು ತಡೆಯಲು ಸಾಧನೆ ಮಾಡುವುದೊಂದೇ ಉಪಾಯ ! : ಜಗತ್ತಿನಾದ್ಯಂತದ ಮಣ್ಣು ಮತ್ತು ನೀರು ಆಧ್ಯಾತ್ಮಿಕ ದೃಷ್ಟಿಯಿಂದ ತುಂಬಾ ಕಲುಷಿತವಾಗಿವೆ, ಎಂಬುದು ಈ ಅಧ್ಯಯನದಿಂದ ಸ್ಪಷ್ಟವಾಯಿತು. ಯಾವುದಾದರೊಬ್ಬ ಸಾಮಾನ್ಯ ವ್ಯಕ್ತಿಯು ವೈಯಕ್ತಿಕವಾಗಿ ಸಮಾಜದಲ್ಲಿ ಆಧ್ಯಾತ್ಮಿಕ ಪರಿವರ್ತನೆಗಳನ್ನು ಮಾಡುವುದು ಕಠಿಣವಾಗಿದೆ; ಆದರೆ ಆ ವ್ಯಕ್ತಿಯು ಸಾಧನೆ ಮಾಡಿದರೆ ಅವನ ಸುತ್ತಲೂ ಸಂರಕ್ಷಣಾ ಕವಚ ನಿರ್ಮಾಣವಾಗುತ್ತದೆ ಮತ್ತು ಅವನ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಪ್ರದೂಷಿತ ಭೂಮಿ ಮತ್ತು ನೀರಿನ ಪರಿಣಾಮ ತುಂಬಾ ಕಡಿಮೆಯಾಗುತ್ತದೆ. ಇದರಿಂದ ಇಂತಹ ವ್ಯಕ್ತಿಯ ಜೀವನದ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತದೆ. ಸಾಧನೆಯನ್ನು ನಿರಂತರ ಮಾಡುವುದರಿಂದ ವ್ಯಕ್ತಿಯು ಮುಂದಿನ ವಾತಾವರಣದಲ್ಲಿನ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಭೂಮಿ ಮತ್ತುನೀರಿನ ಪ್ರದೂಷಣೆಯ ಮೇಲೆ ಸಾಧನೆಯೊಂದೇ ಪರ್ಯಾಯ ವಾಗಿದೆ; ಆದುದರಿಂದಲೇ ಅಖಂಡ ಸಾಧನೆ ಮಾಡುವುದು ವ್ಯಕ್ತಿಯ ಮಾನವಕಲ್ಯಾಣದ ದೃಷ್ಟಿಯಿಂದ ಎಲ್ಲಕ್ಕಿಂತ ದೊಡ್ಡ ಯೋಗದಾನ ವಾಗಿದೆ.
– ಡಾ. (ಸೌ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.