ದಕ್ಷಿಣ ಭಾರತೀಯರಿಗೆ ತಮ್ಮ ಪಾರಂಪರಿಕ ವೇಷಭೂಷಣವಾದ ‘ಮುಂಡು (ಲುಂಗಿಯಂತಹ ವಸ್ತ್ರ)ವಿನ ಬಗ್ಗೆ ವಿಶೇಷ ಅಭಿಮಾನವಿದೆ. ನಿಜವಾಗಿ ನೋಡಿದರೆ ಋಷಿಮುನಿಗಳ ಕಾಲದಿಂದಲೂ ನಡೆದುಕೊಂಡು ಬಂದಿರುವ ಹಿಂದೂಗಳ ವೇಷಭೂಷಣವಾದ ‘ಧೋತಿಯು ಹಿಂದೂಗಳ ಪ್ರಾಚೀನ ಪರಂಪರೆಯಾಗಿದ್ದು ಅದು ಹಿಂದೂ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೇ ಆಗಿದೆ. ಪಾಶ್ಚಾತ್ಯರ ಅಂಧಾನುಕರಣೆ, ಧರ್ಮಶಿಕ್ಷಣದ ಅಭಾವ ಇತ್ಯಾದಿ ಕಾರಣಗಳಿಂದ ಧೋತಿ ಉಡುವ ಹಿಂದೂಗಳ ಪ್ರಾಚೀನ ಸಂಸ್ಕೃತಿಯು ನಿಧಾನವಾಗಿ ನಶಿಸುತ್ತಿದ್ದು, ಮುಂಡು ಧರಿಸುವ ರೂಢಿಯನ್ನು ಹಿಂದೂಗಳು ಸ್ವೀಕರಿಸಿದ್ದಾರೆ. ಇಂದಿನ ಫ್ಯಾಶನ್ ಜಗತ್ತಿನಲ್ಲಿ ‘ಧೋತಿ ಉಡುವುದು ಹಿಂದುಳಿದಿರುವ ಲಕ್ಷಣ’ವೆಂದು ಪರಿಗಣಿಸಲಾಗುತ್ತದೆ; ಏಕೆಂದರೆ ‘ಧೋತಿಯು ಕೇವಲ ರೈತರು ಮತ್ತು ಪುರೋಹಿತರು ಧರಿಸುವ ವಸ್ತ್ರವಾಗಿದೆ’ ಎಂದು ಜನರಲ್ಲಿ ತಪ್ಪು ಕಲ್ಪನೆ ನಿರ್ಮಾಣವಾಗಿದೆ. ಹೆಚ್ಚಿನ ಹಿಂದೂಗಳಿಗೆ ಧೋತಿ ಉಡುವುದು ಕಠಿಣವೆನಿಸುತ್ತದೆ ಅಥವಾ ಅದನ್ನು ಉಡಲು ಬೇಸರವಾಗುತ್ತದೆ. ಯಾವುದಾದರೊಂದು ಅನುಷ್ಠಾನ ಅಥವಾ ಧಾರ್ಮಿಕ ವಿಧಿ ಮಾಡುವಾಗ ಅಥವಾ ದೇವಸ್ಥಾನಕ್ಕೆ ಹೋಗುವಾಗಲೂ ಹೆಚ್ಚಿನ ಹಿಂದೂಗಳು ಧೋತಿ ಉಡಲು ತಯಾರಿರುವುದಿಲ್ಲ.
ಮುಂಡು ಧರಿಸುವುದು ಅಸಾತ್ತ್ವಿಕವಾಗಿದೆ. ಮುಂಡು ಧರಿಸಿದ ವ್ಯಕ್ತಿಯ ಕಡೆಗೆ ಅಸುರೀ ಶಕ್ತಿಗಳು ಆಕರ್ಷಿಸುತ್ತವೆ ಮತ್ತು ಅದರಿಂದ ವ್ಯಕ್ತಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮುಂಡು ಧರಿಸಲು ಧರ್ಮಶಾಸ್ತ್ರದ ಅನುಮತಿಯೂ ಇಲ್ಲ. ತದ್ವಿರುದ್ಧ ಧೋತಿ ಉಡುವುದು ಸಾತ್ತ್ವಿಕವಾಗಿದ್ದು, ಅದನ್ನು ಉಡುವುದರಿಂದ ಈಶ್ವರೀ ಚೈತನ್ಯ ಆಕರ್ಷಿಸುತ್ತದೆ ಮತ್ತು ಧರ್ಮಪಾಲನೆಯೂ ಆಗುತ್ತದೆ.
೧. ಮುಂಡು (ಮುಂಡ, ಲುಂಗಿಯಂತಹ ವಸ್ತ್ರ)
ಮುಂಡುವು ಹತ್ತಿಯ (ನೂಲಿನ) ಅಥವಾ ರೇಷ್ಮೆಯದ್ದಾಗಿರುತ್ತದೆ ಮತ್ತು ಅದು ಬಿಳಿ, ಕೇಸರಿ ಅಥವಾ ತಿಳಿ ಹಳದಿ ಬಣ್ಣದ್ದಾಗಿರುತ್ತದೆ. ಅದನ್ನು ಗೋಲಾಕಾರದಲ್ಲಿ ಹೊಲಿದಿರುವುದಿಲ್ಲ. ಮುಂಡುವಿಗೆ ಚಿಕ್ಕ ಹಳದಿ ಅಥವಾ ಬಣ್ಣದ ಅಂಚಿರುತ್ತದೆ. ಅದರ ಉದ್ದ ಧೋತಿಗಿಂತ ಕಡಿಮೆಯಿರುತ್ತದೆ. ಸಾಮಾನ್ಯವಾಗಿ ದಕ್ಷಿಣಭಾರತದ ಪುರುಷರು ಧಾರ್ಮಿಕ ವಿಧಿಗಳ ಸಮಯದಲ್ಲಿ ರೇಷ್ಮೆಯ ಮುಂಡು ಮತ್ತು ದಿನಬಳಕೆಯಲ್ಲಿ ಹತ್ತಿಯ ಮುಂಡುವನ್ನು ಉಪಯೋಗಿಸುತ್ತಾರೆ.
೧ ಅ. ಮುಂಡು ಧರಿಸುವುದು ಹಿಂದೂಗಳ ಧರ್ಮ ಗ್ರಂಥಗಳಿಗನುಸಾರವೂ ಅಯೋಗ್ಯವೇ ಆಗಿದೆ
೧ ಅ ೧. ಕಚ್ಚೆಯನ್ನು ಹಾಕದೇ (ಸಿಕ್ಕಿಸದೇ) ವಸ್ತ್ರವನ್ನು ಧರಿಸುವುದು ಅಸುರರ ಪದ್ಧತಿಯಾಗಿದೆ : ವಸ್ತ್ರದ, ಉದಾ. ಧೋತಿಯ ನೆರಿಗೆಗಳನ್ನು ತೆಗೆದು ಅದನ್ನು ಸೊಂಟದ ಹಿಂಭಾಗದಲ್ಲಿ ಸಿಲುಕಿಸುವುದಕ್ಕೆ, ‘ಕಚ್ಚೆ ಹಾಕುವುದು ಎನ್ನುತ್ತಾರೆ.
ಪರಿಧಾನಾದ್ ಬಹಿಃ ಕಕ್ಷಾ ನಿಬದ್ಧಾ ಹ್ಯಾಸುರೀ ಭವೇತ್ | – ಯಾಜ್ಞವಲ್ಕ್ಯಸ್ಮೃತಿ
ಅರ್ಥ : ಗೋಲಾಕಾರದಲ್ಲಿ ಸುತ್ತಿಕೊಂಡ ವಸ್ತ್ರದ ಕಚ್ಚೆಯನ್ನು ಹೊರಗೆ ಬಿಡುವುದು (ಅಂದರೆ ಕಚ್ಚೆಯನ್ನು ಹಿಂದೆ ಸಿಕ್ಕಿಸದೇ ವಸ್ತ್ರವನ್ನು ಧರಿಸುವುದು) ಅಸುರರ ಪದ್ಧತಿಯಾಗಿದೆ.
೧ ಆ. ಮುಂಡು ಧರಿಸುವುದರಿಂದಾಗುವ ದುಷ್ಪರಿಣಾಮಗಳು
೧ ಆ ೧. ಲಿಂಗ ಮತ್ತು ಗುದದ್ವಾರದಿಂದ ಸಂಕ್ರಮಿತವಾಗುವ ರಜ-ತಮ ಲಹರಿಗಳು ಅಥವಾ ದೇಹದಲ್ಲಿನ ನಿರುಪಯುಕ್ತ ವಾಯು ಮತ್ತು ಮಲಮೂತ್ರಗಳಿಂದ ಮುಂಡುವಿನ ಟೊಳ್ಳು ಭರಿತವಾಗಿ ಅದರಿಂದ ಪಾತಾಳದಲ್ಲಿನ ಕಪ್ಪು ಲಹರಿಗಳು ಆಕರ್ಷಿತವಾಗುತ್ತವೆ : ಮುಂಡು ಧರಿಸುವುದರಿಂದ ಪುರುಷರ ಕಾಲುಗಳ ಸುತ್ತಲೂ ಟೊಳ್ಳು ನಿರ್ಮಾಣವಾಗುತ್ತದೆ. ಮುಂಡುವನ್ನು ನಾಭಿಯ ಮೇಲೆ ಕಟ್ಟುವುದರಿಂದ ಲಿಂಗ ಮತ್ತು ಗುದದ್ವಾರದಿಂದ ಸಂಕ್ರಮಿತವಾಗುವ ರಜ-ತಮ ಲಹರಿಗಳು ಅಥವಾ ದೇಹದಲ್ಲಿನ ನಿರುಪಯುಕ್ತ ವಾಯು ಮತ್ತು ಮಲಮೂತ್ರಗಳಿಂದ ಮುಂಡುವಿನ ಟೊಳ್ಳು ಭರಿತವಾಗಿ ಅದು ಪಾತಾಳದಲ್ಲಿನ ಕಪ್ಪು ಲಹರಿಗಳನ್ನು ಆಕರ್ಷಿಸುವ ಕಾರ್ಯವನ್ನು ಮಾಡುತ್ತದೆ. ಮುಂಡುವಿನ ಟೊಳ್ಳಿನಲ್ಲಿ ನಿರ್ಮಾಣವಾದ ಪಾತಾಳದಲ್ಲಿನ ಲಹರಿಗಳು ಮೂಲಾಧಾರಚಕ್ರದಿಂದ ಮಣಿಪುರ ಚಕ್ರದ ಭಾಗದಲ್ಲಿ ಹರಡಿ ಜೀವವನ್ನು ಪಾತಾಳದಲ್ಲಿನ ಕಪ್ಪು ಶಕ್ತಿಯಿಂದ ತುಂಬಿಸುತ್ತದೆ. ಆದುದರಿಂದ ಮುಂಡು ಉಡುವುದು ಹಿಂದೂ ಧರ್ಮದಲ್ಲಿ ನಿಷಿದ್ಧವಾಗಿದೆ.
೧ ಆ ೨. ಮುಂಡುವಿನಿಂದ ಮಾಯಾವಿ ಶಕ್ತಿ ಪ್ರಕ್ಷೇಪಿಸುತ್ತದೆ : ವಸ್ತ್ರದ (ಉದಾ. ಧೋತಿಯ) ನೆರಿಗೆಗಳಿಂದ ಗ್ರಹಿಸಲ್ಪಡುವ ಸಾತ್ತ್ವಿಕ ಲಹರಿಗಳು ನಾಭಿಯ ಸ್ಥಳದಲ್ಲಿ ಘನೀಭವಿಸುತ್ತವೆ. ವಸ್ತ್ರಕ್ಕೆ(ಉದಾ. ಪೈಜಾಮ, ಲಂಗ ಇವುಗಳಿಗೆ) ಗಂಟು ಹಾಕುವುದರಿಂದಲೂ ಸಾತ್ತ್ವಿಕ ಲಹರಿಗಳು ನಾಭಿಯ ಸ್ಥಳದಲ್ಲಿ ಘನೀಭವಿಸುತ್ತವೆ, ಹಾಗೆಯೇ ವಸ್ತ್ರದ ಟೊಳ್ಳಿನಿಂದ ಆಕರ್ಷಿತವಾಗುವ ಕಪ್ಪು ಶಕ್ತಿಯನ್ನೂ ತಡೆಯಲಾಗುತ್ತದೆ. ತದ್ವಿರುದ್ಧ ಮುಂಡುವಿಗೆ ಲಾಡಿಯ ಗಂಟು ಇಲ್ಲದಿರುವುದರಿಂದ ಅದರ ಟೊಳ್ಳಿನಿಂದ ಆಕರ್ಷಿತವಾಗುವ ಕಪ್ಪು ಶಕ್ತಿಯು ಯಾವುದೇ ಮಾಧ್ಯಮದಿಂದ ತಡೆಯದೇ ಇರುವುದರಿಂದ ವ್ಯಕ್ತಿಯ ಕುಂಡಲಿನಿಚಕ್ರಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಮುಂಡುವಿನಲ್ಲಿ ಪಾತಾಳದಲ್ಲಿನ ಕಪ್ಪು ಶಕ್ತಿ ಆಕರ್ಷಿತವಾಗುವುದರಿಂದ ಅದರ ಮಾಧ್ಯಮದಿಂದ ಇತರ ಜೀವಗಳ ಮೇಲೆ ಮತ್ತು ವಾಯುಮಂಡಲದ ಮೇಲೆ ಮಾಯಾವಿ ಶಕ್ತಿ ಪ್ರಕ್ಷೇಪಿತವಾಗುತ್ತದೆ. ಇದರಿಂದ ಕೆಲವು ಸಂತರಿಗೂ ಮುಂಡುವಿನಲ್ಲಿನ ಮಾಯಾವಿ ಶಕ್ತಿಯಿಂದ ಅದನ್ನು ಉಪಯೋಗಿಸಲು ಒಳ್ಳೆಯದೆನಿಸುತ್ತದೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೩.೨೦೧೮)
೧ ಇ. ಆರು ಗಜದ ಸೀರೆಯಿಂದ ಕಾಲುಗಳ ಬಳಿ ಟೊಳ್ಳು ನಿರ್ಮಾಣವಾಗುತ್ತಿದ್ದರೂ, ಆರು ಗಜದ ಸೀರೆ ಸಾತ್ತ್ವಿಕವಾಗಿರುವುದರ ಕಾರಣಗಳು : ಘಾಗರಾ, ಆರು ಗಜದ ಸೀರೆ, ಮುಂಡು ಇತ್ಯಾದಿ ವಸ್ತ್ರಗಳು ಎತ್ತರಕ್ಕೆ ಹೆಚ್ಚಿದ್ದುದರಿಂದ ಅವುಗಳ ದೊಡ್ಡ ಸುತ್ತಳತೆ ನಿರ್ಮಾಣವಾಗುತ್ತದೆ, ಇದರಿಂದ ಕಾಲುಗಳ ಸುತ್ತಲೂ ಟೊಳ್ಳು ನಿರ್ಮಾಣವಾಗುತ್ತದೆ. ಇದರಿಂದ ಸೂಕ್ಷ್ಮದಲ್ಲಿ ಕಾಲುಗಳವರೆಗಿನ ವಸ್ತ್ರಗಳಲ್ಲಿ ಶಕ್ತಿ ಕಾರ್ಯನಿರತವಾಗಿರುತ್ತದೆ ಮತ್ತು ವಸ್ತ್ರದಲ್ಲಿ ಯಾವ ಶಕ್ತಿಯು ಕಾರ್ಯನಿರತವಾಗಿರುತ್ತದೆಯೋ, ಅದೇ ಶಕ್ತಿಯು ಆಕರ್ಷಿತವಾಗುತ್ತದೆ, ಉದಾ. ಆರು ಗಜದ ಸೀರೆಯಲ್ಲಿ ಈಶ್ವರೀ ಶಕ್ತಿ ಇರುವುದರಿಂದ ಟೊಳ್ಳಿನಲ್ಲಿ ನಿರ್ಗುಣ ತತ್ತ್ವ ಮತ್ತು ಮುಂಡುವಿನಲ್ಲಿ ಕಪ್ಪು ಶಕ್ತಿ ಇರುವುದರಿಂದ ಅದರ ಟೊಳ್ಳಿನಲ್ಲಿ ಪಾತಾಳದಲ್ಲಿನ ಕಪ್ಪು ಶಕ್ತಿ ಆಕರ್ಷಿತವಾಗುತ್ತದೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೦.೨೦೧೭ ಮತ್ತು ೨೦.೧೦.೨೦೧೭)
೨. ಧೋತಿ (ಧೋತರ)
ಧೋತಿ ಉಡುವುದು ಹಿಂದೂಗಳ ಪ್ರಾಚೀನ ಪರಂಪರೆಯಾಗಿದ್ದು, ಅದು ಹಿಂದೂ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೇ ಆಗಿದೆ.
೨ ಅ. ಧೋತಿ ಉಡುವುದು ಹಿಂದೂ ಧರ್ಮಕ್ಕನುಸಾರವಾಗಿದೆ
೨ ಅ ೧. ಹಿಂದೂಗಳ ಪ್ರಾಚೀನ ಧರ್ಮಗ್ರಂಥಗಳಲ್ಲಿ ಧೋತಿ ಉಡುವುದರ ಬಗ್ಗೆ ಇರುವ ಉಲ್ಲೇಖ
೨ ಅ ೧ ಅ. ಕಚ್ಚೆಯಿರುವ ವಸ್ತ್ರವನ್ನು (ಉದಾ. ಧೋತಿ) ಧರಿಸುವುದು ಪಾವಿತ್ರ್ಯದರ್ಶಕವಾಗಿದೆ : ವಸ್ತ್ರದ, ಉದಾ. ಧೋತಿಗೆ ನೆರಿಗೆಗಳನ್ನು ಹಾಕಿ ಆ ಭಾಗವನ್ನು ಸೊಂಟದ ಹಿಂಭಾಗದಲ್ಲಿ ಬೆನ್ನೆಲುಬಿನ ಬಳಿ ಸಿಕ್ಕಿಸುವುದಕ್ಕೆ ಕಚ್ಚೆ ಹಾಕುವುದು ಎನ್ನುತ್ತಾರೆ.
ವಾಮೇ ಪೃಷ್ಠೇ ತಥಾ ನಾಭೌ ಕಕ್ಷತ್ರಯಮುದಾಹೃತಮ್ |
ಏಭಿಃ ಕಕ್ಷೈಃ ಪರೀಧತ್ತೇ ಯೋ ವಿಪ್ರಃ ಸ ಶುಚಿಃ ಸ್ಮೃತಃ ||– ಬೌಧಾಯನಸ್ಮೃತಿ
ಅರ್ಥ : ಎಡಬದಿಗೆ (ಹೊಟ್ಟೆಯ ಎಡಬದಿಗೆ), ಹಿಂದೆ (ಬೆನ್ನೆಲುಬಿನ ಬಳಿ) ಮತ್ತು ಎದುರಿಗೆ ನಾಭಿಯ ಬಳಿ, ಈ ಮೂರಕ್ಕೆ ‘ಕಕ್ಷಾತ್ರಯ’ ಅಥವಾ ‘ತ್ರೀಕಕ್ಷ’ ಎನ್ನುತ್ತಾರೆ. ಯಾವ ವಿಪ್ರನು (ವಿದ್ಯಾಸಂಪನ್ನ ಬ್ರಾಹ್ಮಣನು) (ಕನಿಷ್ಠ) ಈ ಮೂರು ಕಡೆಗಳಲ್ಲಿ ವಸ್ತ್ರವನ್ನು ಸಿಕ್ಕಿಸಿಕೊಳ್ಳುತ್ತಾನೆಯೋ (ಧೋತಿಯನ್ನು ಉಡುತ್ತಾನೆಯೋ), ಅವನು ಪವಿತ್ರನೆಂದು ಪರಿಗಣಿಸಲಾಗುತ್ತದೆ.
೨ ಆ. ಧೋತಿ ಉಡುವುದರ ಮಹತ್ವ
ಗೃಹಸ್ಥಾಶ್ರಮಿ ಜೀವಗಳ ಆಧ್ಯಾತ್ಮಿಕ ಮಟ್ಟ ಹೆಚ್ಚಿಲ್ಲದಿದ್ದರೆ ಅವರ ದೇಹವು ರಜ-ತಮ ಪ್ರಧಾನವಾಗಿರುತ್ತದೆ. ಜೀವದ ಹೊಟ್ಟೆಯಲ್ಲಿರುವ ಮಲ-ಮೂತ್ರ ಮತ್ತು ತ್ಯಾಜ್ಯ ಊರ್ಜೆ ಇವುಗಳಿಂದ ಹೊಟ್ಟೆಯಿಂದ ಲಿಂಗದವರೆಗಿನ ದೇಹದ ಭಾಗವು ಹೆಚ್ಚು ಪ್ರಮಾಣದಲ್ಲಿ ರಜ-ತಮ ಪ್ರಧಾನವಾಗಿರುತ್ತದೆ. ಧೋತಿಯನ್ನು ನಾಭಿಯ ಮೇಲೆ ಅಂದರೆ ಮಣಿಪುರ ಚಕ್ರದ ಮೇಲೆ ಕಟ್ಟಲಾಗುತ್ತದೆ. ಧೋತಿಯನ್ನು ದೇಹಕ್ಕೆ ಸ್ಪರ್ಶಿಸಿ, ಹಾಗೆಯೇ ದೇಹಕ್ಕೆ ಪೂರ್ತಿ ತಾಗಿಸಿಯೇ ಧರಿಸಿರುವುದರಿಂದ ದೇಹದಿಂದ ಪ್ರಕ್ಷೇಪಿಸುವ ರಜ-ತಮಗಳು ಧೋತಿಯ ಸತ್ತ್ವಗುಣದಿಂದ ನಾಶವಾಗುತ್ತವೆ ಮತ್ತು ಧೋತಿಯಿಂದ ದೇಹದ ಸಾತ್ತ್ವಿಕತೆ ವೃದ್ಧಿಯಾಗಲು ಸಹಾಯವಾಗುತ್ತದೆ. – ಶ್ರೀ. ನಿಷಾದದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೩.೨೦೧೮)
೨ ಇ. ಧೋತಿ ಉಡುವುದರಿಂದಾಗುವ ಕೆಲವು ಲಾಭಗಳು
೨ ಇ ೧. ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯವಾಗುವುದು : ಪಂಚಕಚ್ಛ ಉಡುವುದರಿಂದ ಮಣಿಪುರಚಕ್ರದ ಮೇಲೆ ಒತ್ತಡವುಂಟಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯವಾಗುತ್ತದೆ.
– ಶ್ರೀ. ಜಿ. ಅರುಕುಮಾರ್ ಶಿವಮ್ (ಶಿವಾಗಮ ವಿದ್ಯಾನಿಧಿ), ಈರೋಡ್, ತಮಿಳುನಾಡು. (೧೮.೫.೨೦೧೭)
೨ ಇ ೨. ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ : ಹೆಚ್ಚಿನ ಸಲ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗಲು ರಜ-ತಮಪ್ರಧಾನ ಮನಸ್ಸು ಕಾರಣವಾಗಿರುತ್ತದೆ. ವ್ಯಕ್ತಿಯ ಶರೀರದಲ್ಲಿನ ಸ್ವಾಧಿಷ್ಠಾನ ಮತ್ತು ಮಣಿಪುರ ಚಕ್ರಗಳ ಮೇಲೆ ರಜ-ತಮದ ಪ್ರಭಾವ ಹೆಚ್ಚಾಗುವುದರಿಂದ ವ್ಯಕ್ತಿಗೆ ವಿವಿಧ ಶಾರೀರಿಕ ರೋಗಗಳುಂಟಾಗುತ್ತವೆ. ಸರ್ವಸಾಮಾನ್ಯವಾಗಿ ಅನಾಹತಚಕ್ರವು ಮನಸ್ಸಿಗೆ ಸಂಬಂಧಿಸಿದ್ದರೂ, ಸ್ವಾಧಿಷ್ಠಾನ ಮತ್ತು ಮಣಿಪುರ ಈ ಚಕ್ರಗಳ ಮೇಲೆ ರಜ-ತಮದ ಪ್ರಭಾವ ಹೆಚ್ಚುವುದರಿಂದ ಕ್ರಮವಾಗಿ ವಾಸನೆ ಮತ್ತು ಸಿಟ್ಟು ಎಂಬ ವಿಕಾರಗಳು ನಿರ್ಮಾಣವಾಗುತ್ತವೆ. ಧೋತಿ ಉಡುವುದರಿಂದ ನಿರ್ಮಾಣವಾಗುವ ಸಾತ್ತ್ವಿಕತೆಯು ಈ ಚಕ್ರಗಳನ್ನು ಶುದ್ಧವಾಗಿಡುತ್ತದೆ. ಇದರ ಪರಿಣಾಮದಿಂದ ರಜ-ತಮದ ಪ್ರಭಾವ ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದ ಮನಸ್ಸು ನಿಯಂತ್ರಣದಲ್ಲಿರುತ್ತದೆ. ಸಹಜವಾಗಿಯೇ ಹೊಸ ಹೊಸ ರೋಗಗಳು ನಿರ್ಮಾಣವಾಗುವ ಸಾಧ್ಯತೆ ಮತ್ತು ಹಳೆಯ ರೋಗಗಳು ಪುನಃ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಅನಿದ್ರೆ, ಮಾನಸಿಕ ಒತ್ತಡ, ಅತೃಪ್ತಿ, ಅಶಾಂತಿ ಇವುಗಳಂತಹ ಅನೇಕ ಸಮಸ್ಯೆಗಳು ಕಡಿಮೆಯಾಗಲು ಧೋತಿ ಉಡುವುದು ಲಾಭದಾಯಕವಾಗಿದೆ.
– ಶ್ರೀ. ರಾಮ ಹೊನಪ್ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೭.೨೦೧೭)
೨ ಈ. ಪೈಜಾಮದಂತೆ ಹಾಕಬಹುದಾದ ಸಿದ್ಧ ಸ್ವರೂಪದಲ್ಲಿ ಸಿಗುವ ಧೋತಿ (ಧೋತಿ-ಪೈಜಾಮ)ಯನ್ನು ಉಪಯೋಗಿಸುವುದು ಅಯೋಗ್ಯವಾಗಿದೆ : ಸಿದ್ಧ ಧೋತಿ ಹೊಲಿಯುವಾಗ ಧೋತಿಗೆ ತೂತುಗಳನ್ನು ಮಾಡಿ ಹೊಲಿಗೆ ಹಾಕಲಾಗುತ್ತದೆ. ತೂತುಗಳನ್ನು ಮಾಡುವುದೆಂದರೆ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳನ್ನು ಆಕರ್ಷಿಸಿದಂತೆ. ತದ್ವಿರುದ್ಧ ಗಂಟು ಹಾಕಿ ಉಪಯೋಗಿಸುವ ವಸ್ತ್ರಗಳಿಗೆ ಗುಂಡಿ (ಬಟನ್) ಇತ್ಯಾದಿಗಳನ್ನು ಹಾಕದಿರುವುದರಿಂದ ವಸ್ತ್ರದ ಮೇಲೆ ಹೊಲಿಗೆಯಾಗದೇ ಅಥವಾ ಕನಿಷ್ಠ ಹೊಲಿಗೆಯಾಗಿ ಹೊಲಿಗೆಯಿಂದ ತೂತುಗಳಾಗಿ ರಜ-ತಮಾತ್ಮಕ ಲಹರಿಗಳು ವಸ್ತ್ರದಲ್ಲಿ ಸೇರಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆಯಿರುತ್ತದೆ.
– ಓರ್ವ ವಿದ್ವಾಂಸ, ೨೯.೧೦.೨೦೦೭ (ಸನಾತನದ ಸದ್ಗುರು (ಸೌ.) ಅಂಜಲಿ ಗಾಡಗೀಳರ ಬರಹಗಳು ‘ಓರ್ವ ವಿದ್ವಾಂಸ’, ‘ಗುರುತತ್ತ್ವ’ ಮುಂತಾದ ಹೆಸರುಗಳಿಂದ ಪ್ರಕಟಿಸಲಾಗಿದೆ.)
‘ಧೋತಿ ಮತ್ತು ಸದ್ಯ ಸಂನ್ಯಾಸಿಗಳು ಅಥವಾ ಶಕ್ತಿಮಾರ್ಗಿಯರು ಉಡುತ್ತಿರುವ ಲುಂಗಿಯಂತಹ ಕೇಸರಿ ವಸ್ತ್ರ’ ಇದರ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ…
ಆಧಾರ : ಸನಾತನದ ‘ಸಾತ್ತ್ವಿಕ ವೇಷಭೂಷಣ’ ಈ ಗ್ರಂಥಮಾಲಿಕೆಯ ಗ್ರಂಥ ‘ಮುಂಡುಗಿಂತ (ಲುಂಗಿಯಂತಹ ವಸ್ತ್ರ) ಧೋತಿ ಶ್ರೇಷ್ಠವಾಗಿರುವುದರ ಶಾಸ್ತ್ರ’