ಹಿಂದೂ ಧರ್ಮದಲ್ಲಿ ಪುನರ್ಜನ್ಮ ಮತ್ತು ಕರ್ಮಫಲ ನ್ಯಾಯವನ್ನು ಹೇಳಲಾಗಿದೆ. ಇದಕ್ಕನುಸಾರ ನಮ್ಮ ಮೃತ್ಯುವಿನ ನಂತರ ನಮ್ಮ ಲಿಂಗದೇಹದ ಮುಂದಿನ ಪ್ರವಾಸದ ನಿರ್ಣಯವಾಗುತ್ತದೆ. ೮೪ ಲಕ್ಷ ಯೋನಿಗಳಿಂದ ಪ್ರವಾಸ ಮಾಡಿದ ನಂತರ ಮನುಷ್ಯಜನ್ಮವು ದೊರಕುತ್ತದೆ ಮತ್ತು ಇದೇ ಜನ್ಮದಲ್ಲಿ ನಮಗೆ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಸಾಧ್ಯವಿದೆ, ಎಂದೂ ಧರ್ಮ ಹೇಳುತ್ತದೆ. ಈ ಸಂದರ್ಭದಲ್ಲಿ ಮೃತ್ಯುವಿನ ನಂತರ ಏನಾಗುತ್ತದೆ ? ಈ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ಸನಾತನದ ಸೂಕ್ಷ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕಿ ಕು. ಮಧುರಾ ಭೋಸಲೆ ಇವರಿಗೆ ಸೂಕ್ಷ್ಮದಿಂದ ಯಮರಾಜನ ಧರ್ಮಾಧಿಷ್ಠಿತ ನ್ಯಾಯ ಪದ್ಧತಿಯ ಬಗ್ಗೆ ದೊರಕಿದ ಜ್ಞಾನವನ್ನು ಇಲ್ಲಿ ನೀಡುತ್ತಿದ್ದೇವೆ. ಇದರಲ್ಲಿ ಒಳ್ಳೆಯ-ಕೆಟ್ಟ ಕರ್ಮಗಳಿಗನುಸಾರ ದೊರಕುವ ಮುಂದಿನ ಗತಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಲೋಕಮಾನ್ಯ ಟಿಳಕರೂ ಅವರಿಗೆ ಆಂಗ್ಲ ನ್ಯಾಯಾಧೀಶರು ಶಿಕ್ಷೆಯನ್ನು ವಿಧಿಸಿದಾಗ ‘ನಾನು ಯಾವುದೇ ಅಪರಾಧ ಮಾಡಿಲ್ಲ. ಈ ನ್ಯಾಯವ್ಯವಸ್ಥೆಯು ನನಗೆ ಶಿಕ್ಷೆ ನೀಡಿದ್ದರೂ, ಇದಕ್ಕಿಂತಲೂ ಒಂದು ದೊಡ್ಡ ನ್ಯಾಯವ್ಯವಸ್ಥೆ (ಈಶ್ವರನ) ಇದೆ. ಅಲ್ಲಿ ನನಗೆ ಖಂಡಿತ ನ್ಯಾಯ ದೊರಕುವುದು’, ಎಂಬ ಆಶಯದ ಹೇಳಿಕೆ ನೀಡಿ ಈ ದಿವ್ಯ ನ್ಯಾಯವ್ಯವಸ್ಥೆಯ ಮೇಲೆ ಹೆಚ್ಚು ವಿಶ್ವಾಸ ತೋರಿಸಿದ್ದರು.
೧. ಪಾಪಿ ವ್ಯಕ್ತಿಗಳ ಮೃತ್ಯುವಿನ ನಂತರ ಯಮಪುರಿಯ ಕಡೆಗೆ ಮಾರ್ಗಕ್ರಮಣವಾಗುವುದು
ಪಾಪಿ ವ್ಯಕ್ತಿಗಳ ಮೃತ್ಯುವಾದ ನಂತರ ಯಮದೂತನು ಪಾಪಿ ವ್ಯಕ್ತಿಗಳ ಲಿಂಗದೇಹವನ್ನು ದಕ್ಷಿಣ ದಿಕ್ಕಿಗೆ ತೆಗೆದುಕೊಂಡು ಹೋಗಿ ೧೬ ಯಮಪುರಿಗಳನ್ನು ದಾಟಿಸಿ ೧೭ ನೇ ಮುಖ್ಯ ಯಮಪುರಿಗೆ ಒಯ್ಯುತ್ತಾನೆ.
೨. ಯಮಧರ್ಮನ ನ್ಯಾಯದ ಆಸ್ಥಾನಯಮಪುರಿಯ ಅಂತಃಪುರದಲ್ಲಿ ಧರ್ಮ ಸಿಂಹಾಸನದ ಮೇಲೆ ವಿರಾಜಮಾನರಾದ ಯಮ ಧರ್ಮನು (ಯಮರಾಜ ಅಥವಾ ಯಮದೇವ) ಚಿತ್ರಗುಪ್ತ ಮತ್ತು ಪ್ರಮುಖ ಯಮದೂತರೊಂದಿಗೆ ನ್ಯಾಯದ ಆಸ್ಥಾನದಲ್ಲಿ ಉಪಸ್ಥಿತನಿರುತ್ತಾನೆ.
೩. ಯಮಧರ್ಮನ ನ್ಯಾಯದಾನದ ಪ್ರಕ್ರಿಯೆ
೩ ಅ. ಚಿತ್ರಗುಪ್ತನು ಕರ್ಮಗಳ ಪಟ್ಟಿಯನ್ನು ಓದುವುದು : ಚಿತ್ರಗುಪ್ತನು ಪಾಪಿ ಲಿಂಗದೇಹದ ಜೀವನದಲ್ಲಿನ ಕಾಯಾ, ವಾಚಾ, ಮನಸಾ ಇವುಗಳ ಮೂಲಕ, ಅಂದರೆ ಕರ್ಮ, ವಾಣಿ ಮತ್ತು ಮನಸ್ಸು ಇವುಗಳ ಮೂಲಕ ಪ್ರತಿಯೊಂದು ಕ್ಷಣಕ್ಕೆ ಮಾಡಿದ ಒಳ್ಳೆಯ-ಕೆಟ್ಟ ಕರ್ಮಗಳ ಪಟ್ಟಿಯನ್ನು ಓದುತ್ತಾನೆ.
೩ ಆ. ೧೭ ದೈವಿ ಶಕ್ತಿಗಳು ಸಾಕ್ಷಿ ನೀಡಲು ಯಮಪುರಿಯಲ್ಲಿ ತಕ್ಷಣ ಪ್ರಕಟಗೊಳ್ಳುವುದು : ಲಿಂಗದೇಹವು ಯಾವುದಾದರೊಂದು ಕರ್ಮವನ್ನು ಸ್ವೀಕರಿಸದಿದ್ದರೆ, ಚಿತ್ರಗುಪ್ತನ ಆವಾಹನೆಗನುಸಾರ ೧೭ ದೈವೀ ಶಕ್ತಿಗಳು ಸಾಕ್ಷಿಯನ್ನು ನೀಡಲು ಯಮಪುರಿಯಲ್ಲಿ ತಕ್ಷಣ ಪ್ರಕಟಗೊಳ್ಳುತ್ತಾರೆ. ‘ಪೃಥ್ವಿ, ಸೂರ್ಯ, ಚಂದ್ರ, ವರುಣ, ಮೇಘ, ವಾಯು, ಅಗ್ನಿ, ಕುಬೇರ, ಕಾಮದೇವ, ವಿಶ್ವಕರ್ಮ, ಧನ್ವಂತರಿ, ಅಶ್ವಿನಿಕುಮಾರ, ಇಂದ್ರ, ಸಪ್ತರ್ಷಿಗಣ, ನಕ್ಷತ್ರದೇವತೆ, ಗ್ರಹದೇವತೆ ಮತ್ತು ಅಂತರಿಕ್ಷ ದೇವತೆ’, ಇವು ೧೭ ದೇವತೆಗಳಾಗಿವೆ.
೩ ಇ. ಅಂತರ್ಸಾಕ್ಷಿಯಾಗಿರುವ ಅಂತರ್ಮನವು ಲಿಂಗದೇಹವು ಮಾಡಿದ ಪಾಪಕರ್ಮಗಳನ್ನು ದೊಡ್ಡದಾಗಿ ಕೂಗಿ ಬಹಿರಂಗ ಮಾಡುವುದು : ಪಾಪಿ ಲಿಂಗದೇಹದಲ್ಲಿ ‘ಅಂತರ್ಸಾಕ್ಷಿಯಾಗಿದ್ದ ಅದರ ಅಂತರ್ಮನವು’ (ಆಂತರಿಕ ವಿವೇಕ) ಲಿಂಗದೇಹವನ್ನು ಬಿಟ್ಟು ಹೋಗುತ್ತದೆ. ಅಂತರ್ಮನವು ದೈವಿ ಸಾಕ್ಷಿಯನ್ನು ನೀಡುವ ೧೭ ದೇವತೆಗಳ ಪಕ್ಕದಲ್ಲಿ ನಿಂತುಕೊಂಡು ಲಿಂಗದೇಹವು ಮಾಡಿದ ಪಾಪಕರ್ಮಗಳನ್ನು ದೊಡ್ಡದಾಗಿ ಕೂಗಿ ಬಹಿರಂಗ ಮಾಡುತ್ತದೆ.
೩ ಈ. ಯಮರಾಜರು ಪಾಪದ ಸಂಪೂರ್ಣ ಕ್ಷಾಲನೆ ಮಾಡಲು ದಂಡದ ನಿಖರ ಪ್ರಮಾಣ, ಸ್ವರೂಪ ಮತ್ತು ಕಾಲಾವಧಿಯನ್ನು ಕ್ಷಣಾರ್ಧದಲ್ಲಿ ನಿಶ್ಚಯಿಸುವುದು : ಮೃತನ ಪಾಪಕರ್ಮಗಳ ಪ್ರಮಾಣ, ಸ್ವರೂಪ ಮತ್ತು ಪಾಪಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಯಮರಾಜನು ಪಾಪದ ಕ್ಷಾಲನೆಯಾಗುವಷ್ಟು ಶಿಕ್ಷೆ, ಶಿಕ್ಷೆಯ ಸ್ವರೂಪ, ಶಿಕ್ಷೆಯ ಅವಧಿ ಮತ್ತು ನರಕ ಇವುಗಳ ನಿರ್ಣಯವನ್ನು ಕ್ಷಣಾರ್ಧದಲ್ಲಿ ಮಾಡುತ್ತಾನೆ. (ತದ್ವಿರುದ್ಧ ಇತ್ತೀಚೆಗಿನ ನ್ಯಾಯವ್ಯವಸ್ಥೆಯು ನ್ಯಾಯ ನೀಡಲು ಎಷ್ಟೋ ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ, ಆದರೂ ಅದು ಯೋಗ್ಯವಾಗಿರುವುದೆಂಬ ಖಾತ್ರಿ ಇರುವುದಿಲ್ಲ.) ಯಮರಾಜನು ನಿಶ್ಚಯಿಸಿದ ದಂಡದ ಪ್ರಮಾಣ, ಸ್ವರೂಪ ಮತ್ತು ಅವಧಿ ಎಷ್ಟು ನಿಖರವಿರುತ್ತದೆಯೆಂದರೆ, ನಿಶ್ಚಿತಪಡಿಸಿದ ಅವಧಿಯಲ್ಲಿ ಸಂಪೂರ್ಣ ಕ್ಷಾಲನವಾಗಿ ಪಾಪಮುಕ್ತಗೊಂಡ ಲಿಂಗದೇಹವು ಒಂದು ಕ್ಷಣದಲ್ಲಿ ನರಕದಿಂದ ಹೊರಗೆ ಬೀಳುತ್ತದೆ.
೩. ಉ. ಪಾಪಿ ಲಿಂಗದೇಹವು ಒಂದು ಕ್ಷಣದಲ್ಲಿ ನರಕಕ್ಕೆ ತಲುಪುವುದು : ಸಂಬಂಧಿತ ನರಕದ ಪ್ರಮುಖ ಯಮದೂತನು ಪಾಪಿ ಲಿಂಗದೇಹವನ್ನು ಶಿಕ್ಷೆಯನ್ನು ಭೋಗಿಸಲು ಕರೆದುಕೊಂಡು ಹೋಗುತ್ತಾನೆ ಮತ್ತು ಪಾಪಿ ಲಿಂಗದೇಹವು ಮರುಕ್ಷಣ ಸಂಬಂಧಿತ ನರಕಕ್ಕೆ ತಲುಪುತ್ತದೆ.
೪. ಯಮರಾಜನ ಅದ್ವಿತೀಯ ದೈವಿ ಕಾರ್ಯದಿಂದಾಗಿ ಅವನಿಗೆ ಸರ್ವೋಚ್ಚ ಪದ ‘ಧರ್ಮ’ ಮತ್ತು ಸರ್ವೋತ್ತಮ ವಿಶೇಷನಾಮ ‘ಯಮಧರ್ಮ” ಪ್ರಾಪ್ತವಾಗುವುದು !
೪ ಅ. ನ್ಯಾಯವನ್ನು ನೀಡುವ ದಿವ್ಯಶಕ್ತಿ : ಯಮರಾಜನು ಪಾಪದ ಪ್ರಮಾಣದಲ್ಲಿ ನಿಶ್ಚಯಿಸಿದ ದಂಡದ ಪ್ರಮಾಣ, ಸ್ವರೂಪ ಮತ್ತು ಅವಧಿ ಶೇ. ೧೦೦ ರಷ್ಟು ಕರಾರುವಕ್ಕಾಗಿ ಇರುವುದರಿಂದ ಆ ನಿರ್ಣಯ ಶೇ. ೧೦೦ ರಷ್ಟು ಸತ್ಯ ಮತ್ತು ಪರಿಪೂರ್ಣವಿದೆ. ಯಮರಾಜನು ನೀಡಿದ ನಿರ್ಣಯ ಧರ್ಮದ ಸತ್ಯವಂತಿಕೆಗೆ ಸರ್ವಾರ್ಥದಿಂದ ಉತ್ತೀರ್ಣವಾದುದರಿಂದ ಈ ನಿರ್ಣಯಕ್ಕೆ ‘ನ್ಯಾಯ’ ಎಂದು ಸಂಬೋಧಿಸಲಾಗಿದೆ. ಈ ನ್ಯಾಯವನ್ನು ನೀಡುವ ಶಕ್ತಿ ಸಾಮಾನ್ಯವಿರಲು ಸಾಧ್ಯವೇ ಇಲ್ಲ, ಅದು ದಿವ್ಯಸ್ವರೂಪವಾಗಿರುತ್ತದೆ.
೪ ಆ. ಅತ್ಯಂತ ಅಪರೂಪದ ದಿವ್ಯಶಕ್ತಿಯೆಂದರೆ ಧರ್ಮ : ಯಾವ ದಿವ್ಯಶಕ್ತಿಯ ಪ್ರತಿಯೊಂದು ನಿರ್ಣಯ ‘ನ್ಯಾಯಯುತವಾಗಿರುತ್ತದೆಯೋ’ ಅದು ಸ್ವತಃ ಧರ್ಮಸ್ವರೂಪವಿರುತ್ತದೆ. ಇಂತಹ ಅತ್ಯಂತ ಅಪರೂಪವಾದಂತಹ ದಿವ್ಯಶಕ್ತಿಗೆ ತ್ರಿಗುಣಾತ್ಮಕ ಜಗತ್ತಿನಲ್ಲಿನ ‘ಧರ್ಮ’ ಈ ಸರ್ವೋಚ್ಚ ಪದವು ಪ್ರಾಪ್ತವಾಗುತ್ತದೆ. ದಿವ್ಯಶಕ್ತಿಯ ಹೆಸರಿನಲ್ಲಿ ‘ಧರ್ಮ’ ಈ ಬಿರುದನ್ನು ಜೋಡಿಸಿದರೆ ಅದರ ಹೆಸರು ಸರ್ವೋತ್ತಮ ವಿಶೇಷನಾಮ ಇರುತ್ತದೆ. ಇದಕ್ಕಾಗಿ ಯಮರಾಜನಿಗೆ ‘ಯಮಧರ್ಮ’ ಎಂದು ಸಂಬೋಧಿಸಲಾಗುತ್ತದೆ.
೪ ಇ. ಯಮಧರ್ಮ ಮತ್ತು ಧರ್ಮಸ್ವರೂಪ ಅಂಶಾವತಾರ : ಯಮರಾಜನ ಅಂಶಾವತಾರ ಜ್ಯೇಷ್ಠ ಪಾಂಡವ ಸಾಮ್ರಾಟ ಯುಧಿಷ್ಠಿರ ಇವರನ್ನು ‘ಧರ್ಮರಾಜ’ ಈ ಹೆಸರಿನಿಂದ ಗೌರವದಿಂದ ಸಂಬೋಧಿಸಲಾಗುತ್ತಿತ್ತು. ವಿದುರ ಯಮರಾಜನ ಎರಡನೇ ಅಂಶಾವತಾರ ಆಗಿದ್ದರು. ಅವರು ವಿದ್ವಾನ ನೀತಿಶಾಸ್ತ್ರಜ್ಞರಾಗಿದ್ದರು. ಅವರು ಹೇಳಿದ ಸುಪ್ರಸಿದ್ಧ ‘ವಿದುರ ನೀತಿ’ಯನ್ನು ‘ವಿದುರನ ಧರ್ಮನೀತಿ’ ಹೆಸರಿನಿಂದಲೂ ಗುರುತಿಸಲಾಗುತ್ತದೆ.
೫. ನರಕಯಾತನೆಯನ್ನು ಭೋಗಿಸುವಾಗ ಪಾಪಿ ಲಿಂಗದೇಹದ ಮನಃಸ್ಥಿತಿಗನುಸಾರ ದೃಢವಾಗುವ ಸ್ವಭಾವದೋಷಗಳ ಕುಸಂಸ್ಕಾರ ಮತ್ತು ಪ್ರಾಪ್ತವಾಗುವ ಮುಂದಿನ ಗತಿ
೬. ನರಕಯಾತನೆಯಿಂದ ಬಿಡುಗಡೆಯಾಗಲು ಸಂಪೂರ್ಣ ಪಾಪಕ್ಷಾಲನೆಯ ಶುದ್ಧೀಕರಣ ಪ್ರಕ್ರಿಯೆ ಘಟಿಸುವುದು
೬ ಅ. ಲಿಂಗದೇಹವು ಸಂಪೂರ್ಣ ಅಸ್ತಿತ್ವದಿಂದ ನರಕಯಾತನೆಯನ್ನು ಭೋಗಿಸಿದ್ದರಿಂದ ಅದು ಶೀಘ್ರ ಪಾಪಮುಕ್ತವಾಗುವುದು : ನರಕಕ್ಕೆ ಹೋದ ಪಾಪಿ ಲಿಂಗದೇಹಕ್ಕೆ ಅಲ್ಲಿನ ಯಮದೂತರು ಅದರ ಪ್ರತಿಯೊಂದು ಪಾಪದ ಸ್ವರೂಪ ಮತ್ತು ದುಷ್ಟಪರಿಣಾಮ ಇವುಗಳ ಪ್ರತಿಯೊಂದು ಕ್ಷಣ ಸ್ಮರಣೆ ಮಾಡಿ ಕೊಡುತ್ತಾರೆ. ಯಮದೂತರು ಅದರ ಪಾಪಕರ್ಮಗಳ ಕ್ಷಣಕ್ಷಣಕ್ಕೆ ಅರಿವು ಮಾಡಿಕೊಡುವುದರಿಂದ ನರಕದಲ್ಲಿನ ಭಯಂಕರ ಯಾತನೆಯನ್ನು ಭೋಗಿಸುವಾಗ ಲಿಂಗದೇಹದ ‘ಪಾಪಕರ್ಮದ ಸ್ಮೃತಿ’ ಸದಾ ಜಾಗೃತವಿರುತ್ತದೆ. ಆದ್ದರಿಂದ ಪಾಪಕ್ಷಾಲನೆಯ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಲಿಂಗದೇಹದ ಸೂಕ್ಷ್ಮ ಆಕೃತಿಜನ್ಯ ಅಸ್ತಿತ್ವದೊಂದಿಗೆ ಅದರ ಅರಿವಿನ ಸೂಕ್ಷ್ಮತರ ಅಸ್ತಿತ್ವವೂ ಸಹಭಾಗಿಯಾಗಿರುತ್ತದೆ. ಆದ್ದರಿಂದ ಲಿಂಗದೇಹವು ಪೂರ್ಣ ಅಸ್ತಿತ್ವದಿಂದ ನರಕಯಾತನೆ ಭೋಗಿಸುತ್ತದೆ. ಆದ್ದರಿಂದ ನಿರ್ಧಾರಿತ (ಅಲ್ಪ) ಅವಧಿಯಲ್ಲಿ ಒಂದು ಪಾಪದ ಸಂಪೂರ್ಣ ಕ್ಷಾಲನೆಯಾಗುತ್ತದೆ. ಈ ರೀತಿ ಪ್ರತಿಯೊಂದು ಪಾಪದ ಕ್ಷಾಲನೆಯಾಗಿ ಲಿಂಗದೇಹವು ಪ್ರತಿಯೊಂದು ಪಾಪದಿಂದ ಮುಕ್ತವಾಗುತ್ತಾ ಹೋಗುತ್ತದೆ. ಕೊನೆಗೆ ಪಾಪದ ಕ್ಷಾಲನೆಯಾದಾಗ ಲಿಂಗದೇಹವು ಸಂಪೂರ್ಣವಾಗಿ ಪಾಪ ಮುಕ್ತವಾಗುತ್ತದೆ ಮತ್ತು ಧರ್ಮಶಕ್ತಿಯ ಪ್ರಭಾವದಿಂದಾಗಿ ನರಕದಿಂದ ಹೊರಗೆ ಎಸೆಯಲ್ಪಡುತ್ತದೆ.
೬ ಆ. ಪಾಪಿ ಲಿಂಗದೇಹದ ಶೀಘ್ರ ಉದ್ಧಾರಕ್ಕಾಗಿ ಕಠಿಣ ಕಾರ್ಯವನ್ನು ಪ್ರಾಣವನ್ನು ಒತ್ತೆಯಿಟ್ಟು ಪೂರ್ಣಗೊಳಿಸುವ ಯಮದೂತರು ! : ಲಿಂಗದೇಹವು ಸಂಪೂರ್ಣ ಅಸ್ತಿತ್ವದೊಂದಿಗೆ ನರಕಯಾತನೆಯನ್ನು ಭೋಗಿಸಿ ಆದಷ್ಟು ಬೇಗನೆ ಸಂಪೂರ್ಣವಾಗಿ ಪಾಪಮುಕ್ತವಾಗಬೇಕೆಂಬ ತಳಮಳ ಲಿಂಗದೇಹಕ್ಕಿಂತ ಯಮಧರ್ಮನಲ್ಲಿ ಹೆಚ್ಚು ಇರುತ್ತದೆ. ಪಾಪಕ್ಕಾಗಿ ನಿಶ್ಚಯಿಸಿದ ದಂಡರೂಪಿ ಕಠೋರ ಯಾತನೆ ನೀಡುವುದು ಮತ್ತು ಪಾಪಕರ್ಮದ ಸ್ಮೃತಿ ಕ್ಷಣಕ್ಷಣಕ್ಕೂ ಜಾಗೃತವಿಡುವುದು, ಈ ಕಠಿಣ ಕಾರ್ಯವನ್ನು ಯಮದೂತರು ಪಾಪಿ ಲಿಂಗದೇಹದ ಉದ್ಧಾರಕ್ಕಾಗಿ ಪೂರ್ಣ ಮಾಡುತ್ತಿರುತ್ತಾರೆ.
೬ ಇ. ಪಾಪಿ ಲಿಂಗದೇಹವನ್ನು ಬೇಗನೆ ಪಾಪಮುಕ್ತ ಮಾಡಲು ಯಮದೂತನು ಭಾವನೆಯ ಸ್ತರದಲ್ಲಿ ಸಹಾನುಭೂತಿಯನ್ನು ತೋರಿಸದೇ ಆಧ್ಯಾತ್ಮಿಕ ಸ್ತರದ ಪ್ರೀತಿಯನ್ನು ಕಾಪಾಡಿಕೊಂಡು ಸಾಕ್ಷಿಭಾವದಿಂದ ಕಾರ್ಯ ಮಾಡುವುದು : ಒಂದು ವೇಳೆ, ಪಾಪಿ ಲಿಂಗದೇಹಗಳ ಬಗ್ಗೆ ಯಮದೂತರಿಗೆ ಭಾವನೆಯ ಸ್ತರದಲ್ಲಿ ಸಹಾನುಭೂತಿ ಎನಿಸುತ್ತಿದ್ದರೆ, ಅವರು ದಂಡರೂಪಿ ಯಾತನೆಗಳ ಕಠೋರತೆಯನ್ನು ಕಡಿಮೆ ಮಾಡುತ್ತಿದ್ದರು ಅಥವಾ ಪಾಪಕರ್ಮದ ನೆನಪನ್ನು ಸತತವಾಗಿ ಮಾಡಿಕೊಡದೇ ಯಾವಾಗಲಾದರೊಮ್ಮೆ ಮಾಡುತ್ತಿದ್ದರು. ಇದರಿಂದ ಪಾಪ ಕ್ಷಾಲನೆಯ ಗತಿ ಮಂದವಾಗಬಹುದಿತ್ತು. ಪರಿಣಾಮಸ್ವರೂಪ ಯಮರಾಜನು ನಿಶ್ಚಿತಪಡಿಸಿದ ದಂಡದ ಅವಧಿ ಹೆಚ್ಚಾಗಿ ಪಾಪಿ ಲಿಂಗದೇಹಕ್ಕೆ ಹೆಚ್ಚು ಕಾಲ ನರಕಯಾತನೆ ಭೋಗಿಸಬೇಕಾಗುತ್ತಿತ್ತು. ಈ ರೀತಿ ಲಿಂಗದೇಹಕ್ಕೆ ಪ್ರತಿಯೊಂದು ಪಾಪದಿಂದ ಮುಕ್ತಮಾಡಲು ಹೆಚ್ಚು ಕಾಲಾವಧಿ ಬೇಕಾಗುವುದು ಮತ್ತು ಅದಕ್ಕೆ ಸಂಪೂರ್ಣ ಪಾಪಮುಕ್ತವಾಗಲು ಬಹಳ ಅವಧಿ ಬೇಕಾಗುವುದು. ಈ ಸತ್ಯವು ಯಮದೂತರಿಗೆ ಗೊತ್ತಿದೆ. ಆದ್ದರಿಂದ ಪಾಪಿ ಲಿಂಗದೇಹವನ್ನು ಶೀಘ್ರವಾಗಿ ಪಾಪಮುಕ್ತ ಮಾಡಲು ಯಮದೂತನು ಅವುಗಳ ವಿಷಯದಲ್ಲಿ ಭಾವನೆಯ ಸ್ತರದಲ್ಲಿ ಸಹಾನುಭೂತಿ ತೋರಿಸದೇ ಆಧ್ಯಾತ್ಮಿಕ ಸ್ತರದ ಪ್ರೀತಿಯನ್ನು ಕಾಪಾಡಿಕೊಂಡು ಅವರ ಕಾರ್ಯವನ್ನು ಸಾಕ್ಷಿಭಾವದಿಂದ ಮಾಡುತ್ತಿರುತ್ತಾರೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೬.೨೦೧೪ ರಾತ್ರಿ ೮.೦೫)
ವಿಶಿಷ್ಟ ಯೋನಿಯಲ್ಲಿನ ಹೊಸ ದೇಹಕ್ಕನುಸಾರ (ಮೃತ್ಯುವಿನ ನಂತರ) ಭೂತಕಾಲದ ಸ್ಮೃತಿ ಉಳಿದುಕೊಳ್ಳುವುದು ಅಥವಾ ಅಳಿಸಿ ಹೋಗುವುದು
ಲಿಂಗದೇಹವು ನರಕದಿಂದ ಮುಕ್ತವಾದ ನಂತರ ಯಮದೇವರು ೮೪ ಲಕ್ಷ ಯೋನಿಯಲ್ಲಿನ ಆಯ್ಕೆ ಮಾಡಿದ ಯೋನಿಯಲ್ಲಿ ಅದಕ್ಕೆ ಪ್ರವೇಶ ಸಿಗುವವರೆಗೆ ಮೃತ್ಯುವಿನ ನಂತರ ಕಾಲಖಂಡದಲ್ಲಿನ ಎಲ್ಲ ಘಟನೆಗಳ ಸುಸ್ಪಷ್ಟ ಸ್ಮರಣೆ ಇರುತ್ತದೆ. ಬಹುತಾಂಶ ಲಿಂಗದೇಹಗಳ ವಿಶಿಷ್ಟ ಯೋನಿಯಲ್ಲಿ ಪ್ರವೇಶವಾದ ನಂತರ ಹೊಸ ದೇಹ ಪ್ರಾಪ್ತವಾಗುವವರೆಗೆ ಭೂತಕಾಲದ ಸ್ಮೃತಿ ಉಳಿಯುತ್ತದೆ. ಒಂದು ವೇಳೆ ವಿಶಿಷ್ಟ ಯೋನಿಯಲ್ಲಿ ದೊರಕಿದ ಹೊಸ ದೇಹ ಸೂಕ್ಷ್ಮ ದೇಹವಾಗಿದ್ದರೆ, ಭೂತಕಾಲದ ಸ್ಮೃತಿ ದೀರ್ಘಕಾಲ ಉಳಿಯುತ್ತದೆ. ಒಂದು ವೇಳೆ ವಿಶಿಷ್ಟ ಯೋನಿಯಲ್ಲಿ ದೊರಕಿದ ಹೊಸ ದೇಹ ಸ್ಥೂಲ ದೇಹವಾಗಿದ್ದರೆ, ಭೂತಕಾಲದ ಸ್ಮೃತಿ ಹೊಸ ದೇಹದ ಜನ್ಮದೊಂದಿಗೆ ಅಳಿಸಿಹೋಗುತ್ತದೆ, ಉದಾ. ಲಿಂಗದೇಹಕ್ಕೆ ಭೂತಯೋನಿ ಪ್ರಾಪ್ತವಾದರೆ ಅದರ ಭೂತಕಾಲದ ಸ್ಮೃತಿ ಉಳಿದುಕೊಳ್ಳುತ್ತದೆ; ಆದರೆ ಒಂದು ವೇಳೆ ಅದಕ್ಕೆ ಹುಳದ ಜನ್ಮ ದೊರಕಿದರೆ, ಅದರ ಭೂತಕಾಲದ ಸ್ಮೃತಿ ಅಳಿಸಿಹೋಗುತ್ತದೆ.
ಅ. ವಿಶಿಷ್ಟ ಯೋನಿಯಲ್ಲಿ ಲಿಂಗದೇಹಕ್ಕೆ ಸ್ಥೂಲದೇಹ ಪ್ರಾಪ್ತವಾದರೂ ಭೂತಕಾಲದ ಸ್ಮೃತಿ ಜಾಗೃತವಿರುವುದು : ಕೆಲವೊಮ್ಮೆ ವಿಶಿಷ್ಟಯೋನಿಯಲ್ಲಿ ಲಿಂಗದೇಹಕ್ಕೆ ಸ್ಥೂಲದೇಹ ಪ್ರಾಪ್ತವಾದರೂ ಅದರ ಭೂತಕಾಲದ ಸ್ಮೃತಿ ಜಾಗೃತವಿರುತ್ತದೆ. ಭೂತಕಾಲದ ಸ್ಮೃತಿ ಜಾಗೃತ ಇರುವುದರ ಹಿಂದೆ ವಿವಿಧ ರೀತಿಯ ಅನೇಕ ಘಟಕಗಳು ಕಾರಣಿಭೂತವಿರುತ್ತವೆ. ಭೂತಕಾಲದಲ್ಲಿನ ಸ್ಮೃತಿಯ ಅವಧಿ ಮತ್ತು ಗುಣಮಟ್ಟ ಇವುಗಳ ಪ್ರಮುಖವಾಗಿ ಮನಸ್ಸಿನ ಪ್ರಕ್ರಿಯೆಯೊಂದಿಗೆ ದೃಢ ಸಂಬಂಧವಿರುತ್ತದೆ.
ಆ. ಮನಸ್ಸಿನ ಪ್ರಕ್ರಿಯೆಯ ಮೇಲೆ ಆಧರಿಸಿರುವ ಭೂತಕಾಲದಲ್ಲಿನ ಸ್ಮೃತಿಗಳ ವಿಧ ಮತ್ತು ಕೃಪೆ ಮನಸ್ಸಿನ ಪ್ರಕ್ರಿಯೆ ಜಾಗೃತವಾಗಿರುವ ಭೂತಕಾಲದಲ್ಲಿನ ಸ್ಮೃತಿಯ ಅವಧಿ ಮತ್ತು ಗುಣಮಟ್ಟ ಇವುಗಳಿಗನುಸಾರ ವಿಧಗಳು ಕೃಪೆ
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೬.೨೦೧೪) ಸಾಯಂಕಾಲ. ೪.೫೫)