ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಂಡು ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡಿಸುವ ಗುರು !

‘ನನ್ನ’ ಅಂದರೆ ಆತ್ಮಾರಾಮನ 
ವಿಳಾಸವನ್ನು ಗುರುಗಳೇ ಹೇಳಬಲ್ಲರು

ನಮ್ಮ ಒಬ್ಬ ಮಿತ್ರನನ್ನು ಭೇಟಿ ಮಾಡಲು ನಾವು ಅವನ ಊರಿಗೆ ಹೋದರೆ, ಅವನ ವಿಳಾಸಕ್ಕೆ ಹೇಗೆ ಹೋಗುವುದು, ಎಂದು ಯಾರಿಗಾದರೂ ಕೇಳಬೇಕಾಗುತ್ತದೆ. ಅದೇ ರೀತಿ ‘ನನ್ನ’ ಅಂದರೆ ಆತ್ಮಾರಾಮನ ವಿಳಾಸವನ್ನು ಗುರುಗಳೇ ಹೇಳಬಲ್ಲರು.

ಪ್ರಪಂಚದಲ್ಲಿ ಮಾರ್ಗದರ್ಶಕ ಗುರುಗಳು ಭೇಟಿಯಾಗದಿದ್ದರೆ ನಾವು ೮೪ ಲಕ್ಷ ಯೋನಿಗಳಿಂದ ತಿರುಗಾಡಬೇಕಾಗುವುದು

ನಾವು ಮರುಭೂಮಿಯಲ್ಲಿ ದಾರಿ ತಪ್ಪಿದೆವು ಮತ್ತು ನಮಗೆ 
ದಾರಿ ತೋರಿಸುವವರು ಸಿಗದಿದ್ದರೆ, ನಾವು ಇಲ್ಲಿಂದ ಅಲ್ಲಿಗೆ ಮತ್ತು 
ಅಲ್ಲಿಂದ ಇಲ್ಲಿಗೆ ಹೀಗೆ ಅಲೆದಾಡಿ ದಣಿದು ಹೋಗುತ್ತೇವೆ. ನಮಗೆ ಆಹಾರ-ನೀರು ಸಿಗುವುದಿಲ್ಲ ಮತ್ತು ನಾವು ಸತ್ತು ಹೋಗುತ್ತೇವೆ. ಅದೇ ರೀತಿ 
ಪ್ರಪಂಚದಲ್ಲಿ ಮಾರ್ಗದರ್ಶಕ ಗುರುಗಳು ಭೇಟಿಯಾಗದಿದ್ದರೆ, ನಮ್ಮಲ್ಲಿನ ದೋಷಗಳಿಂದಾಗಿ ಮತ್ತು ನಮ್ಮ ಕೈಯಿಂದಾಗುವ ತಪ್ಪುಗಳಿಂದಾಗಿ ನಮ್ಮ ಜೀವನವು ವ್ಯರ್ಥವಾಗಿ ಹೋಗುತ್ತದೆ ಮತ್ತು ನಾವು ೮೪ ಲಕ್ಷ ಯೋನಿಗಳಿಂದ ಸುತ್ತಬೇಕಾಗುತ್ತದೆ.

ಸಂಸಾರಸಾಗರವನ್ನು ದಾಟಿ ಹೋಗಲು ಸಂತರ ಆವಶ್ಯಕತೆಯಿರುವುದು

ನಮಗೆ ಈಜಲು ಬರದಿದ್ದರೆ, ನದಿಯನ್ನು ಪಾರು ಮಾಡಲು ನೌಕೆಯ ಆವಶ್ಯಕತೆಯಿರುತ್ತದೆ. ಅದೇ ರೀತಿ ಸಂಸಾರಸಾಗರವನ್ನು ದಾಟಿ ಹೋಗಲು ಸಂತರೂಪಿ ನೌಕೆಯ ಆವಶ್ಯಕತೆಯಿರುತ್ತದೆ.

ಆಧ್ಯಾತ್ಮಿಕ ಉನ್ನತಿಗಾಗಿ ಗುರುಗಳ 
ಸಹಾಯದಿಂದ ಬೇಗನೆ ಪ್ರಗತಿ ಮಾಡಿಕೊಳ್ಳಬಹುದು

ಒಂದು ಹಡಗು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ೪ ಗಂಟೆಗಳಲ್ಲಿ ಹೋಗುತ್ತದೆ. ಅದರ ಹಿಂದೆ ಹಗ್ಗದಿಂದ ಬೇರೊಂದು ದೋಣಿಯನ್ನು ಕಟ್ಟಿದರೆ, ಆ ದೋಣಿಯೂ ಆ ಸ್ಥಳಕ್ಕೆ ೪ ಗಂಟೆಗಳಲ್ಲಿಯೇ ತಲುಪುತ್ತದೆ; ಆದರೆ ಆ ಹಗ್ಗವನ್ನು ಬಿಟ್ಟು ದೋಣಿ ಹಡಗಿನಿಂದ ಬೇರೆ ಮಾಡಿದರೆ, ಆ ದೋಣಿಗೆ ಆ ಸ್ಥಳಕ್ಕೆ ತಲುಪಲು ೧೦ ಗಂಟೆಗಳು ಬೇಕಾಗುತ್ತವೆ. ಅದೇ ರೀತಿ ನಾವು ಆಧ್ಯಾತ್ಮಿಕ ಉನ್ನತಿಗಾಗಿ ನಾವೇ ಪ್ರಯತ್ನ ಮಾಡತೊಡಗಿದರೆ, ನಮ್ಮಲ್ಲಿನ ದೋಷಗಳಿಂದಾಗಿ ನಮ್ಮ ಉನ್ನತಿಯಾಗಲು ಬಹಳ ಸಮಯ ತಗಲುತ್ತದೆ; ಆದರೆ ಗುರುಗಳ ಸಹಾಯದಿಂದ ಬೇಗನೆ ಪ್ರಗತಿ ಮಾಡಿಕೊಳ್ಳಬಹುದು.
– ಪೂ. ಡಾ. ವಸಂತ ಬಾಳಾಜಿ ಆಠವಲೆ

Leave a Comment