– ಪ.ಪೂ. ಭಕ್ತರಾಜ ಮಹಾರಾಜ
೨. ಅನಂತ ಕೋಟಿ ತೀರ್ಥಗಳು ಗುರುಚರಣದಿ |
ವಂದಿಸಿ ಸೇವಾಗೈದರೆ ಸಾಗುವೆವು ಮುಕ್ತಿಪಥದಿ ||
ಅ. ‘ನಿಷ್ಠಾವಂತರಾಗಿ ಗುರುಗಳ ಸೇವೆ ಮಾಡುವುದು ಮತ್ತು ಅವರ ಚರಣತೀರ್ಥ ಸೇವಿಸುವುದು’, ಇದುವೇ ಶಿಷ್ಯರಿಗಾಗಿ ಸರ್ವೋತ್ಕೃಷ್ಟ೧೮:45 ಸಾಧನೆಯಾಗಿದೆ.
ಆ. ತೀರ್ಥಯಾತ್ರೆಗಾಗಿ ದೇಶ ವಿದೇಶಗಳಿಗೆ ಅಲೆಯದೇ ‘ಗುರುಚರಣ ಇದುವೇ ಸರ್ವಶ್ರೇಷ್ಠ ತೀರ್ಥಕ್ಷೇತ್ರವಾಗಿದೆ’, ಎಂಬ ದೃಢನಿಷ್ಠೆಯಿಂದ ಗುರುಚರಣದ ನವವಿಧಭಕ್ತಿ ಮಾಡಿ ದುರ್ಲಭ ಮಾನವ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.
ಇ. ಅನೇಕ ತೀರ್ಥಗಳ ತೀರ್ಥಯಾತ್ರೆ ಮಾಡುವುದರಿಂದ ಅತ್ಯಧಿಕ ಪುಣ್ಯದಿಂದ ತೀರ್ಥಯಾತ್ರೆಯನ್ನು ಮಾಡುವ ಸಾಧಕ ಸಾಧನಾಚತುಷ್ಟ್ಯ-ಸಂಪನ್ನ ಸಾಧಕನಾಗುವನು; ಆದರೆ ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !
(ಅಮೃತಸಂಗಮ, ಕನ್ಯಾಗತ ಮಹಾಪರ್ವಕಾಲ -೨೦೦೪)
ಗುರುಗಳ ಕೃಪಾಪ್ರಸಾದದಿಂದ ದೇವರು ಭೇಟಿಯಾಗುವುದರಿಂದ ಗುರುಗಳೇ ಶ್ರೇಷ್ಠವೆನಿಸುವುದು !
ಗುರು ಶ್ರೇಷ್ಠನೋ ದೇವರು ಶ್ರೇಷ್ಠನೋ |
ನಮಸ್ಕಾರ ಮೊದಲು ಯಾರಿಗೆ ಮಾಡಲಿ |
ನನಗೆ ನನ್ನ ಗುರುಗಳೇ ಶ್ರೇಷ್ಠವೆನಿಸುವರು |
ಅವನ ಕೃಪಾಶೀರ್ವಾದದಿಂದ ರಘುರಾಜ ಭೇಟಿಯಾಗುವನು ||’,
ಈ ಸಂತವಚನವು ದೇವತೆಗಳಿಗಿಂತ ಶ್ರೀಗುರುಗಳಲ್ಲಿರುವ ಶ್ರೇಷ್ಠತೆಯನ್ನು ಹೇಳುತ್ತದೆ. ಎಲ್ಲಿ ನಾಲ್ಕು ವೇದಗಳೂ ದೇವತೆಗಳ ವರ್ಣನೆ ಮಾಡುವಾಗ ದಣಿಯುವೆವೋ ಮತ್ತು ‘ನೇತಿ ನೇತಿ’, ಎಂದು ಹೇಳುತ್ತಾರೆ, ಅಲ್ಲಿ ದೇವತೆಗಳಿಗಿಂತ ಶ್ರೇಷ್ಠರಾಗಿರುವ ಶ್ರೀಗುರುಗಳ ಮಹಿಮೆಯನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯವೇ !