೧. ಗುರುಗಳೆಂದರೆ ಈಶ್ವರನ ರೂಪ !
ಅ. ಈಶ್ವರನ ಕೃಪೆಯು ಗುರುಗಳ ಸ್ವರೂಪವನ್ನು ಧರಿಸುತ್ತದೆ.
ಆ. ಗುರುಗಳ ದರ್ಶನ ಪಡೆಯುವುದೆಂದರೆ, ಈಶ್ವರನ ದರ್ಶನ ಪಡೆದಂತೆ ಆಗಿದೆ.
ಇ. ಯಾರು ಸದ್ಗುರುಗಳ ದರ್ಶನ ಪಡೆಯಲಿಲ್ಲ, ಆ ಮನುಷ್ಯನು ‘ಕುರುಡನೇ’ ಇರುವನು.
೨. ಗುರುಗಳು ನೀಡಿದ ಜ್ಞಾನದ ಮಹತ್ವ
ಅ. ಯಾವಾಗ ಮನುಷ್ಯನಿಗೆ ಸಂಸಾರದ ಬಗ್ಗೆ ಜಿಗುಪ್ಸೆ ನಿರ್ಮಾಣವಾಗುತ್ತದೆಯೋ, ಆಗ ಅವನಿಗೆ ವೈರಾಗ್ಯ ಬರುತ್ತದೆ ಮತ್ತು ಗುರುಗಳು ನೀಡಿದ ಉಪದೇಶಗಳ ಚಿಂತನೆ ಮಾಡಲು ಅವನು ಸಮರ್ಥನಾಗುತ್ತಾನೆ. ಆಗ ಧ್ಯಾನದಲ್ಲಿ ಆಯಾ ಸಮಯದಲ್ಲಿ ಅಧ್ಯಯನ ಮಾಡುವುದರಿಂದ ಅವನ ಮನಸ್ಸಿನಲ್ಲಿರುವ ಅನಿಷ್ಟ ವೃತ್ತಿ ದೂರವಾಗುತ್ತವೆ.
ಆ. ‘ಮಾಯೆಯಿಂದಾಗಿ ಒಬ್ಬ ಈಶ್ವರನು ಅನೇಕ ರೂಪಗಳಲ್ಲಿ ಕಾಣಿಸುತ್ತದೆ’, ಎಂಬ ಜ್ಞಾನವು ಯಾರಿಗೆ ಗುರುಕೃಪೆಯಿಂದ ಆಗುತ್ತದೆಯೋ, ಅವನು ಸತ್ಯವನ್ನು ಅರಿತುಕೊಳ್ಳುತ್ತಾನೆ ಮತ್ತು ವೇದಗಳನ್ನು ತಿಳಿದುಕೊಳ್ಳುತ್ತಾನೆ.
೩. ಗುರುಗಳು ಏನು ಮಾಡುತ್ತಾರೆ ?
ಅ. ಸದ್ಗುರುಗಳು ಶಿಷ್ಯನ ಮೇಲೆ ಆಶೀರ್ವಾದದ ಸುರಿಮಳೆ ಸುರಿಸುತ್ತಾರೆ.
ಆ. ಶಿಷ್ಯನು ಕಾರ್ಯದ ಸಂಖ್ಯೆಯನ್ನು ಎಣಿಸುತ್ತಾನೆ; ಆದರೆ ಗುರುಗಳು ಆ ಹಿಂದಿನ ನಿಶ್ಚಿತ ಕಾರಣ ಮತ್ತು ಉದ್ದೇಶ ಇವುಗಳ ತುಲನೆ ಮಾಡುತ್ತಾರೆ.
ಇ. ಗುರುಗಳು ಜೀವನನೌಕೆಯ ನಾವಿಕರಾಗಿದ್ದಾರೆ ಮತ್ತು ಈಶ್ವರನು
ಆ ನೌಕೆಯನ್ನು ಸಾಗಿಸುವನಿಗೆ ಅನುಕೂಲವಾಗಿ ಬೀಸುವ ಗಾಳಿ !
೪. ಗುರುಗಳ ಬಗ್ಗೆ ಭಕ್ತಿಭಾವ ಹೇಗೆ ನಿರ್ಮಾಣ ಮಾಡುವಿರಿ ?
ಅ. ಮೊದಲು ತಮ್ಮ ಉತ್ತಮೊತ್ತಮ ವಸ್ತುಗಳನ್ನು ಗುರುಗಳಿಗೆ ಸಮರ್ಪಿಸಿ. ಆದುದರಿಂದ ಆಸಕ್ತಿ ಸಹಜವಾಗಿ ಕಳಚಿಹೋಗುತ್ತದೆ.
ಆ. ಯಾವಾಗ ನಮಗೆ ಸಂಸಾರದಲ್ಲಿನ ಅಪೇಕ್ಷೆಗಳು ಇರುವುದಿಲ್ಲವೋ, ಆಗ ಗುರುಗಳ ಬಗ್ಗೆ ಭಕ್ತಿಭಾವ ನಿರ್ಮಾಣವಾಗುವುದು.
ಇ. ಆತ್ಮಸಾಕ್ಷಾತ್ಕಾರದ ದೇವಸ್ಥಾನದಲ್ಲಿ ಗುರುಗಳ ಸತ್ಸಂಗವು ಮೊದಲ ಸ್ತಂಭವಾಗಿದೆ.
ಈ. ಧರ್ಮವು ಕೇವಲ ಒಂದೇ, ಅದೆಂದರೆ ‘ಗುರುಗಳ ಬಗ್ಗೆ ಭಕ್ತಿ ಮತ್ತು ಪ್ರೇಮ’ ಇವುಗಳ ಧರ್ಮ.
ಉ. ಗುರುಗಳ ಆಸರೆ ಪಡೆಯಿರಿ ಮತ್ತು ಸತ್ಯದ ಅನುಕರಣೆ ಮಾಡಿರಿ.
ಊ. ಶ್ರದ್ಧೆ, ಭಕ್ತಿ ಮತ್ತು ತತ್ಪರತೆ ಇವುಗಳ ಹೂವಿನಿಂದ ಗುರುಗಳ ಪೂಜೆ ಮಾಡಿರಿ.
೫. ಗುರುಗಳಲ್ಲಿ ಶ್ರದ್ಧೆ ಹೇಗಿರಬೇಕು ?
ಅ. ಗುರುಗಳ ಕಾರ್ಯದ ಕಡೆಗೆ ಸಂಶಯದಿಂದ ನೋಡುವುದು, ಇದೊಂದು ಮಹಾಪಾಪವಾಗಿದೆ.
ಆ. ಜೀವನದಲ್ಲಿನ ಪ್ರತಿಯೊಂದು ಕಹಿ ಅನುಭವ ಗುರುಗಳ ಬಗ್ಗೆ ನಮ್ಮ ಶ್ರದ್ಧೆಯ ಪರೀಕ್ಷೆ ಇದೆ.
ಇ. ತಮ್ಮ ಗುರುಗಳ ಕೃಪೆಯ ಮೇಲೆ ಶ್ರದ್ಧೆ ಇಟ್ಟು ತಮ್ಮ ಕರ್ತವ್ಯಗಳನ್ನು ಪಾಲಿಸಿರಿ.
೬. ಶಿಷ್ಯನು ಗುರುಗಳ ಸಾನಿಧ್ಯದಲ್ಲಿ ಏನು ಮಾಡಬಾರದು ?
ಅ. ತಮ್ಮ ಗುರುಗಳ ಉಪಸ್ಥಿತಿಯಲ್ಲಿ ಹೆಚ್ಚು ಮಾತನಾಡಬೇಡಿ.
ಆ. ಶಿಷ್ಯನು ತಮ್ಮ ಗುರುಗಳ ‘ದೋಷಗಳನ್ನು’ ನೋಡಬಾರದು.
೭. ಗುರುಗಳ ಆಜ್ಞೆಯ ಪಾಲನೆ
ಅ. ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಅದು ಆ ಕೃತಿಯನ್ನು ಮಾಡುವುದಕ್ಕಿಂತಲೂ ದೊಡ್ಡದಾಗಿದೆ.
ಆ. ಗುರುಗಳ ಆಜ್ಞೆ ಪಾಲಿಸುವುದು ತ್ಯಾಗಕ್ಕಿಂತಲೂ ದೊಡ್ಡದು.
ಇ. ಗುರುಗಳ ಆಜ್ಞೆಯ ಉಲ್ಲಂಘನೆ, ಅಂದರೆ ತಾನೇ ತನ್ನ ಸಮಾಧಿ ತೋಡಿದಂತೆ !
ಈ. ಗುರುಗಳ ಮೇಲೆ ಪ್ರೀತಿ ಮಾಡಿ ಅವರ ಆಜ್ಞಾಪಾಲನೆ ಮಾಡುವುದು, ಅಂದರೆ ಗುರುಗಳ ಸೇವೆ ಮಾಡುವುದು.
೮. ಗುರುಗಳ ಸೇವೆ
ಅ. ಗುರುಗಳ ಸೇವೆ ಮಾಡುವುದೇ ಜೀವನದ ಧ್ಯೇಯವನ್ನಾಗಿರಿಸಿ.
ಆ. ತಮ್ಮ ದಿವ್ಯ ಗುರುಗಳ ಸೇವೆ ಮಾಡುವ ಯಾವುದೇ ಅವಕಾಶ ಕಳೆದುಕೊಳ್ಳಬೇಡಿ.
ಇ. ಯಾವಾಗ ತಾವು ತಮ್ಮ ದಿವ್ಯ ಗುರುಗಳ ಸೇವೆ ಮಾಡುವಿರಿ, ಆಗ ಏಕನಿಷ್ಠೆ ಮತ್ತು ಪ್ರಾಮಾಣಿಕತೆ ಇರಲಿ.
೯. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ ಅವರ ಬಳಿ ಏನೂ ಕೇಳಬೇಕಾಗುವುದಿಲ್ಲ !
ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ತಮ್ಮ ಗುರುಗಳಿಗೆ ಅಪೇಕ್ಷಿತವಿರುವಂತೆ ತಾವು ಆಚರಣೆಯನ್ನು ಮಾಡಿದರೆ, ರಾಷ್ಟ್ರರಕ್ಷಣೆ, ಧರ್ಮಸಂಸ್ಥಾಪನೆ ಮತ್ತು ಈಶ್ವರೀ ರಾಜ್ಯದ ಸ್ಥಾಪನೆ ಈ ಕುರಿತು ನಮಗೆ ಏನೂ ಬೇಡುವ ಅವಶ್ಯಕತೆಯೇ ಇರುವುದಿಲ್ಲ.
– ಪ.ಪೂ. ದಾಸ ಮಹಾರಾಜ (ಪ.ಪೂ. ರಘುವೀರ ಮಹಾರಾಜ), ಪಾನವಳ, ಸಿಂಧುದುರ್ಗ.