ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಹೃದಯದವರೆಗೆ ಉದ್ದವಾದ ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆಧ್ಯಾತ್ಮಿಕ ಲಾಭ

ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಅನಾಹತ ಚಕ್ರಕ್ಕೆ ಸ್ಪರ್ಶವಾಗುವಂತೆ ಮಂಗಳಸೂತ್ರ(ಮಾಂಗಲ್ಯ)ವನ್ನು ಧರಿಸುವ ಮಹತ್ವ ಮುಂದಿನಂತೆ ಇದೆ.

೧. ಕಂಠಮಣಿ
ಕಂಠಮಣಿ ಇದು ವಿಶುದ್ಧಚಕ್ರವನ್ನು ಸ್ಪರ್ಶ ಮಾಡುತ್ತಿರುತ್ತದೆ. ಇದರಿಂದಾಗಿ ವಾಣಿಯ ಶುದ್ಧಿಯ ಪ್ರಕ್ರಿಯೆಯು ಸತತವಾಗಿ ಆಗುತ್ತಿರುತ್ತದೆ.

೨. ಮಂಗಳಸೂತ್ರ (ಮಾಂಗಲ್ಯ)
ಮಂಗಳಸೂತ್ರದ ಉದ್ದ ಕೊರಳನಿನಿಂದ ಹೃದಯದವರೆಗೆ ಇದ್ದರೆ, ಮಂಗಳಸೂತ್ರದ ಬಟ್ಟಲುಗಳ ಸ್ಪರ್ಶ ಸ್ತ್ರೀಯ ಅನಾಹತಚಕ್ರಕ್ಕೆ ಆಗುತ್ತದೆ. ಆದುದರಿಂದ ಚಿನ್ನದ ಬಟ್ಟಲುಗಳಲ್ಲಿ ಕಾರ್ಯನಿರತವಾಗಿರುವ ಚೈತನ್ಯದ ಸ್ಪರ್ಶ ಅನಾಹತ ಚಕ್ರಕ್ಕೆ ಆಗಿ ಅನಾಹತಚಕ್ರದಲ್ಲಿನ ಭಾವನೆ ಕಡಿಮೆಯಾಗಿ ಭಾವವೃದ್ಧಿಯಾಗುತ್ತದೆ. ಆದುದರಿಂದ ಸ್ತ್ರೀಗೆ ವೈವಾಹಿಕ ಜೀವನವನ್ನು ಆಧ್ಯಾತ್ಮಿಕ ಸ್ತರದಲ್ಲಿ ಬದುಕಲು ಸಹಾಯವಾಗುತ್ತದೆ.

ಇತ್ತೀಚೆಗೆ ಕೆಲವರ ಮಂಗಳಸೂತ್ರವು ಕೊರಳಿನ ವರೆಗೆ ಮಾತ್ರ ಇರುತ್ತದೆ. ಕೊರಳಿನ ವರೆಗೆ ಇರುವ ಮಂಗಳಸೂತ್ರದಿಂದಾಗಿ ವಿಶುದ್ಧ ಚಕ್ರದ ಸುತ್ತಲು ಸಾತ್ವಿಕತೆ ಮತ್ತು ಚೈತನ್ಯಗಳ ವಲಯ ನಿರ್ಮಾಣವಾಗುತ್ತದೆ; ಆದರೆ ಆ ಸ್ತ್ರೀಯರ ಅನಾಹತ ಚಕ್ರದ ಜಾಗೃತಿಯಾಗುವುದಿಲ್ಲ ಮತ್ತು ಅವರಿಗೆ ಆಧ್ಯಾತ್ಮಕ ಸ್ತರದಲ್ಲಿ ಲಾಭವಾಗುವುದಿಲ್ಲ.

1 thought on “ವಿವಾಹಿತ ಸ್ತ್ರೀಯು ಕೊರಳಿನಲ್ಲಿ ಕಂಠಮಣಿ ಮತ್ತು ಹೃದಯದವರೆಗೆ ಉದ್ದವಾದ ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆಧ್ಯಾತ್ಮಿಕ ಲಾಭ”

Leave a Comment