ಗುರುಗಳನ್ನು ಹುಡುಕಬೇಡಿ !

ಗುರುಗಳನ್ನು ಹುಡುಕಬೇಡಿ !

ಆಕಾಶವಾಣಿ ಅಥವಾ ದೂರದರ್ಶನ ಉಪಕರಣಗಳು ಕೆಟ್ಟರೆ, ನಾವು ಆ ಕ್ಷೇತ್ರದಲ್ಲಿನ ತಜ್ಞರಿಂದ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಅದರಂತೆಯೇ ಆಧ್ಯಾತ್ಮಿಕ ಉನ್ನತಿಗಾಗಿ ಅಧಿಕಾರಿ ವ್ಯಕ್ತಿ ಅಥವಾ ಗುರುಗಳ ಅವಶ್ಯಕತೆ ಇರುತ್ತದೆ. ಸಾಧನೆ ಮಾಡಿದ ನಂತರ ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗೆ,
 ಅಂದರೆ ಸೂಕ್ಷ್ಮವು ತಿಳಿಯುತ್ತದೆ. ಸೂಕ್ಷ್ಮದಲ್ಲಿನ ಸ್ಪಂದನಗಳು ಅರಿಯದೇ ಸಂತರು ಅಥವಾ
 ಗುರುಗಳು ನಿಜವಾಗಿ ಇದ್ದಾರಾ ಅಥವಾ ಇಲ್ಲವೇ, ಎಂಬುದನ್ನು ಸ್ವಲ್ಪವೂ ತಿಳಿದುಕೊಳ್ಳಲು ಆಗುವುದಿಲ್ಲ; ಆದುದರಿಂದ ಗುರುಗಳನ್ನು ಹುಡುಕಲು ಹೋಗಬಾರದು.

ಒಬ್ಬ ಜಾಣ ಹುಡುಗನು ಉತ್ತಮ ಅಂಕಗಳನ್ನು ಪಡೆದು ಶಾಲೆಯ ಒಳ್ಳೆಯ ಹೆಸರು ತರುವನು, ಎಂದು ಗಮನಕ್ಕೆ ಬಂದಾಗ ಶಿಕ್ಷಕರು ಆ ವಿದ್ಯಾರ್ಥಿಗೆ ಸಹಾಯ ಮಾಡುತ್ತಾರೆ. ಅದೇ ರೀತಿ ಸಾಧನೆ ಮಾಡುತ್ತಿದ್ದರೆ ಗುರುಗಳು ಸ್ವತಃ ಆ ಶಿಷ್ಯನಿಗೆ ಸಹಾಯ ಮಾಡುತ್ತಾರೆ. ನಾವು ಗುರುಗಳೆಂದು ಸ್ವೀಕರಿಸುವುದಕ್ಕಿಂತ ಗುರುಗಳೇ ನಮಗೆ ಶಿಷ್ಯರೆಂದು ಸ್ವೀಕರಿಸುವುದೇ ಮಹತ್ವದ್ದಾಗಿದೆ.

ಗುರು ಉಪದೇಶದ ಮಹತ್ವ !

ಗುರುಗಳು ಉಪದೇಶದಿಂದ ಅನೇಕ ಜನ್ಮದಲ್ಲಿನ ಸಂಸ್ಕಾರರೂಪಿ ಅಂಧಕಾರವನ್ನು ನಾಶಗೊಳಿಸಿ ಕಲ್ಮಶವಿರುವ ಹೃದಯವನ್ನು ನಿರ್ಮಲಗೊಳಿಸುತ್ತಾರೆ. ತುಂಬಾ ದಿನಗಳಿಂದ ಕೂಡಿದ ಕಸವನ್ನು ಒಂದೇ ಸಲ ಗುಡಿಸಲು ಆಗುವುದಿಲ್ಲ. ಅದೇ ರೀತಿ ಒಂದೇ ಬಾರಿ ಉಪದೇಶವನ್ನು ಕೇಳಿ ದೇಹಶುದ್ಧಿ ಆಗುವುದಿಲ್ಲ. ಕಲುಷಿತ ನೀರಿಗೆ ಪಟಕಾರ ಹಾಕಿದರೆ ಹೇಗೆ ಆ ನೀರು ಕ್ರಮೇಣ ಸ್ವಚ್ಛವಾಗುತ್ತದೆಯೋ, ಅದೇ ರೀತಿ ಗುರುಗಳ ಉಪದೇಶವನ್ನು ನಿಯಮಿತ ಶ್ರವಣ ಮಾಡಿದರೆ, ಗುರುಗಳು ಹೇಳಿದ ಸಾಧನೆ ಅಧಿಕಾಧಿಕ ಮಾಡುತ್ತಿದ್ದರೆ ಕ್ರಮೇಣ ಚಿತ್ತದಲ್ಲಿರುವ ಸಂಸ್ಕಾರಗಳು ಕ್ಷೀಣಿಸಿ ಹೃದಯವು ನಿರ್ಮಲವಾಗುತ್ತದೆ. ಕನ್ನಡಿ ಎದುರಿಗೆ ಇಟ್ಟುಕೊಂಡಾಗ ಮುಖ ಕಾಣಿಸುವುದಕ್ಕಾಗಿ ಇತರ ಸಾಧಕರ ಅವಶ್ಯಕತೆ ಇರುವುದಿಲ್ಲ. ಅದರಂತೆ ಸದ್ಗುರುಗಳಿಂದ ಮುಮುಕ್ಷತ್ವಕ್ಕೆ ಉಪದೇಶದ ಲಾಭವನ್ನು ಪಡೆದ ಮೇಲೆ ಸ್ವರೂಪ ಸಾಕ್ಷಾತ್ಕಾರಕ್ಕಾಗಿ ಶಿಷ್ಯನಿಗೆ ಇತರ ಸಾಧನೆ ಮಾಡಬೇಕಾಗುವುದಿಲ್ಲ; ಆಕಳುಗಳು ಹುಲ್ಲನ್ನು ಹೇಗೆ ಮೇಯಿಸಿ 
ತಿನ್ನುತ್ತವೆ, ಅದೇ ರೀತಿ ಮುಮುಕ್ಷುವು ಗುರುಪದೇಶವನ್ನು ಶ್ರಾವಣ ಮಾಡಿದ ಮೇಲೆ ಅದರ ಚಿಂತನೆ ಮಾಡುತ್ತಿರಬೇಕು. ಅಂದರೆ ಆ ರೀತಿ ಸಾಧನೆ ಮಾಡಬೇಕಾಗುತ್ತದೆ.

ಗುರುಗಳನ್ನು ಸ್ಮರಿಸುವ ಮಹತ್ವ !

ಶ್ರೀ ರಾಮಕೃಷ್ಣರು ಕೆಲವೊಮ್ಮೆ ಅವರ ಶಿಷ್ಯರಿಗೆ, ‘ಧ್ಯಾನ ಆರಂಭಿಸುವ ಮುನ್ನ ಒಮ್ಮೆ ಇವರ ಚಿಂತನೆ ಮಾಡಿಕೊಳ್ಳಿರಿ (ತಮ್ಮತ್ತ ಬೆರಳು ತೋರಿಸಿ) ಎಂದು ನಾನು ಏಕೆ ಹೇಳುತ್ತೇನೆ ಗೊತ್ತಿದೆಯೇ ? ನಿಮಗೆ ಇವನ ಮೇಲೆ (ನನ್ನ ಮೇಲೆ) ವಿಶ್ವಾಸ ಇದೆ. ಆದುದರಿಂದ ಇವರ ಬಗ್ಗೆ ವಿಚಾರ ಮಾಡುತ್ತ-ಮಾಡುತ್ತ, ನಿಮಗೆ ಭಗವಂತನ ನೆನಪಾಗುವುದು. ಆಕಳ ಹಣೆಯ ಮೇಲೆ ನೋಡುತ್ತಿದ್ದರೆ ದನ ಕಾಯುವವನ ನೆನಪಾಗುತ್ತದೆ. (ವಕೀಲ) ನ್ಯಾಯವಾದಿಗಳನ್ನು ನೋಡಿದ ಕೂಡಲೇ ಕೋರ್ಟ-ಕಚೇರಿಗಳ (ನ್ಯಾಯಾಲಯದ) ನೆನಪಾಗುತ್ತದೆ. ಮಕ್ಕಳನ್ನು ನೋಡಿದ ಕೂಡಲೇ ಅವರ ತಂದೆಯ ನೆನಪಾಗುತ್ತದೆ. ಅದೇ ರೀತಿ ಇವರಿಂದ (ನನ್ನಿಂದ) ನಿಮಗೆ ಈಶ್ವರನ ಸ್ಮರಣೆ ಆಗುವುದು. ಮನಸ್ಸು ಬಗೆಬಗೆಯ ವಿಷಯಗಳ ಹಿಂದೆ ಓಡುತ್ತಿರುತ್ತದೆ. ಇವನ ಬಗ್ಗೆ ನೀವು ವಿಚಾರ ಮಾಡುವಿರಿ; ಅಂದರೆ ಆ ಮನಸ್ಸು ಒಂದೇ ಸ್ಥಳದಲ್ಲಿ ಸ್ಥಿರವಿರಲು ಸಾಧ್ಯವಾಗುವುದು. ಆಗ ನಿಮಗೆ ಏಕಾಗ್ರತೆ ಮನಸ್ಸಿನಿಂದ ಸಹಜವಾಗಿ ಭಗವಂತನಲ್ಲಿ ಲೀನವಾಗಬಹುದು ಮತ್ತು ನಿಮ್ಮ ಧ್ಯಾನ ಉತ್ತಮವಾಗಲು ಸಾಧ್ಯವಾಗುತ್ತದೆ’ ಎಂದು ಹೇಳುತ್ತಿದ್ದರು.
– ಅಮೃತವಾಣಿ (ರಾಮಕೃಷ್ಣ-ಉಪದೇಶ ಸಂಗ್ರಹ)

Leave a Comment