೧. ಷಟ್‌ಚಕ್ರಗಳು
ಜೀವ-ಶಿವ ಮಿಲನದ ಪ್ರವಾಸದಲ್ಲಿ ಮುಖ್ಯವಾಗಿರುವ ಆರು ಮೆಟ್ಟಿಲುಗಳು : ‘ಜೀವದ ಶಿವನೊಂದಿಗೆ ಏಕರೂಪವಾಗುವ ಪ್ರವಾಸದಲ್ಲಿ ಮುಖ್ಯವಾಗಿ ಆರು ಮೆಟ್ಟಿಲುಗಳಿರುತ್ತವೆ (ಷಟ್ ಚಕ್ರಗಳು). ಏಳನೇ ಮೆಟ್ಟಿಲಿನಲ್ಲಿ ಏಕರೂಪತ್ವ ಪ್ರಾಪ್ತವಾಗುತ್ತದೆ. ಜೀವದ ಈ ಪ್ರಯಾಣದ ಆರಂಭವು ಬದ್ಧತೆ, ಅನೇಕತೆ, ದ್ವೈತತೆ ಮತ್ತು ಅದ್ವೈತತೆ ಹಾಗೂ ಕಾರ್ಯಾನುರೂಪ ಸಹಜತೆ ಹೀಗೆ ಮಾರ್ಗಕ್ರಮಣವಾಗುತ್ತದೆ.
೧ ಅ. ಚಕ್ರಗಳು ಜಾಗೃತವಾಗಿರುವುದರ ಲಾಭ
ಈ ಚಕ್ರಗಳು ಯಾವಾಗ ಜಾಗೃತಾವಸ್ಥೆಯಲ್ಲಿ ರುತ್ತವೆಯೋ ಆಗ ಅವು ಬ್ರಹ್ಮಾಂಡದ ಸಪ್ತಲೋಕ ಮತ್ತು ಸಪ್ತಪಾತಾಳದ ಸೂಕ್ಷ್ಮಸ್ತರದ ವೈಶ್ವಿಕ ಶಕ್ತಿಗಳೊಂದಿಗೆ ಅನುಸಂಧಾನದಲ್ಲಿರುತ್ತವೆ. ಷಟ್‌ಚಕ್ರಗಳು ಈ ಶಕ್ತಿಗಳ ಆಕರ್ಷಣೆ ಮತ್ತು ಪ್ರಕ್ಷೇಪಣೆಯ ಸ್ಥಾನಗಳಾಗಿವೆ. ಬದ್ಧ ಕುಂಡಲಿನಿ (ಬದ್ಧಚಕ್ರಗಳು) ವೈಶ್ವಿಕ ಶಕ್ತಿಗಳೊಂದಿಗೆ ಅನುಸಂಧಾನವಿಡಲು ಅಡಚಣೆಗಳನ್ನುಂಟು ಮಾಡುತ್ತದೆ.
೧ ಆ. ಸಪ್ತಲೋಕ ಮತ್ತು ಸಪ್ತಪಾತಾಳದಲ್ಲಿನ ವೈಶ್ವಿಕ ಶಕ್ತಿಯ ಸ್ವರೂಪ
ಬ್ರಹ್ಮಾಂಡದ ಊರ್ಧ್ವಗಾಮಿ ಸಪ್ತಲೋಕದಲ್ಲಿನ ಸೂಕ್ಷ್ಮಸ್ತರದ ವೈಶ್ವಿಕ ಶಕ್ತಿಯು ಸತ್ತ್ವಗುಣ ಲಹರಿಗಳ ಸ್ವರೂಪದಲ್ಲಿರುತ್ತವೆ. ಅದೇ ಸಪ್ತಪಾತಾಳಗಳಲ್ಲಿನ ಅಧೋಗಾಮಿ ಸೂಕ್ಷ್ಮಸ್ತರದ ವೈಶ್ವಿಕ ಶಕ್ತಿಗಳು ತಿರ್ಯಕ್ ಲಹರಿಗಳ ಸ್ವರೂಪದಲ್ಲಿ ಇರುತ್ತವೆ.
೨. ಈಶ್ವರೀ ಶಕ್ತಿಯೊಂದಿಗೆ ಅನುಸಂಧಾನ ನಿರ್ಮಾಣ ಮಾಡುವ ಮಹತ್ವದ ಹಂತವೆಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ !
೨ ಅ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರಿಂದ ಚಕ್ರಗಳ ಶುದ್ಧೀಕರಣವಾಗಿ ಈಶ್ವರೀ ಶಕ್ತಿಯೊಂದಿಗೆ ಅನುಸಂಧಾನ ನಿರ್ಮಾಣವಾಗುವುದು
ಶ್ರೀಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವಾಗ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಮಾಡುತ್ತ, ಅಂದರೆ ಚಿತ್ತಶುದ್ಧಿ ಮಾಡುತ್ತ ಸಾಧನೆ ಮಾಡಿದರೆ ಸಪ್ತಲೋಕದಲ್ಲಿನ ೧೦೮ ಊರ್ಧ್ವಗಾಮಿ ಸಾತ್ತ್ವಿಕ ಲಹರಿಗಳೊಂದಿಗೆ ಅಂದರೆ ಈಶ್ವರೀ ಶಕ್ತಿಯೊಂದಿಗೆ ಅನುಸಂಧಾನ ನಿರ್ಮಾಣವಾಗುತ್ತದೆ. ಸ್ವಭಾವ ದೋಷ ಮತ್ತು ಅಹಂನಿರ್ಮೂಲನೆಯ ಪ್ರಯತ್ನದಿಂದ (ಪ್ರಯತ್ನಗಳ ಮಟ್ಟಕ್ಕನುಸಾರ) ಆಯಾಯ ಚಕ್ರಗಳ ಶುದ್ಧೀಕರಣ (ಭೇದಿಸಿ) ಅಂದರೆ ಜಾಗೃತಿಯಾಗಲು ಆರಂಭವಾಗುತ್ತದೆ. ಇದರಿಂದ ಅಸುರಿ ಶಕ್ತಿಯೊಂದಿಗಿನ ಅನುಸಂಧಾನ ತಡೆದು ಈಶ್ವರೀ ಶಕ್ತಿಗಳೊಂದಿಗೆ ಅನುಸಂಧಾನ ನಿರ್ಮಾಣವಾಗುತ್ತದೆ.
೨ ಆ. ಶ್ರೀಗುರುಗಳ ಮಾರ್ಗದರ್ಶನ ಪಡೆಯದೇ ಮನಬಂದಂತೆ ಸಾಧನೆ ಮಾಡುವುದರಿಂದ ಅಸುರಿ ಶಕ್ತಿಗಳೊಂದಿಗೆ ಅನುಸಂಧಾನ ನಿರ್ಮಾಣವಾಗುವುದು
ಶ್ರೀಗುರುಗಳ ಮಾರ್ಗದರ್ಶನ ಪಡೆಯದೇ ಮನಬಂದಂತೆ ಸಾಧನೆ ಮಾಡುವುದರಿಂದ (ಅಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಮಾಡದೇ ಸಾಧನೆ ಮಾಡುವುದು), ಉದಾ. ತಾಂತ್ರಿಕ ಸಾಧನೆ, ಅಘೋರಿ ಸಾಧನೆ ಇತ್ಯಾದಿಗಳನ್ನು ಮಾಡಿದರೆ ಸಪ್ತಪಾತಾಳದಲ್ಲಿನ ಅಧೋಗಾಮಿ ತಿರ್ಯಕ ಲಹರಿಗಳೊಂದಿಗೆ, ಅಂದರೆ ಅಸುರಿ ಶಕ್ತಿಯೊಂದಿಗೆ ಅನುಸಂಧಾನ ನಿರ್ಮಾಣವಾಗುತ್ತದೆ. ಪ್ರತ್ಯಕ್ಷ ಅಥವಾ ಪರೋಕ್ಷ ರೂಪದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ (ಚಿತ್ತಶುದ್ಧಿ)ಯನ್ನು ಮಾಡದೇ ಸಾಧನೆ ಮಾಡುವುದರಿಂದ ಷಟ್‌ಚಕ್ರಗಳು ಜಾಗೃತಗೊಳ್ಳುತ್ತವೆ; ಆದರೆ ಅವುಗಳ ಅನುಸಂಧಾನವು ತಿರ್ಯಕ್ ಲಹರಿಗಳೊಂದಿಗೆ, ಅಂದರೆ ಪಾತಾಳದಲ್ಲಿನ ಅನಿಷ್ಟ ಶಕ್ತಿಗಳೊಂದಿಗೆ ಆಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಚಿತ್ತಶುದ್ಧಿಗಾಗಿ ಪ್ರಯತ್ನ ಮಾಡದೇ ಸಾಧನೆ ಮಾಡಿದರೆ, ತಿಳಿದು ಅಥವಾ ತಿಳಿಯದೆಯೋ ಜೀವದ ಕೈಯಿಂದ ಅಸುರಿ ಕಾರ್ಯವು ಸಂಭವಿಸುತ್ತ ಹೋಗುತ್ತದೆ.
೨ ಇ. ಸ್ವಭಾವದೋಷ, ಅಹಂಭಾವ ಮತ್ತು ದಿವ್ಯ ಗುಣಗಳಿಗೆ ಸಂಬಂಧಿಸಿದ ಶಕ್ತಿ
ದೇಹದಲ್ಲಿನ ಪ್ರತಿಯೊಂದು ಚಕ್ರದೊಂದಿಗೆ ಸ್ವಭಾವದೋಷ, ಅಹಂಭಾವ ಮತ್ತು ದಿವ್ಯ ಗುಣ (ಈಶ್ವರೀ ಗುಣ) ಇವುಗಳಿಗೆ ಸಂಬಂಧಿಸಿದ ಸಂಸ್ಕಾರಗಳು ಇರುತ್ತವೆ. ಈ ಸಂಸ್ಕಾರಗಳು ಶಕ್ತಿಸ್ವರೂಪವಾಗಿರುತ್ತವೆ. ಸ್ವಭಾವದೋಷ ಮತ್ತು ಅಹಂಭಾವ ಇವುಗಳಿಗೆ ಸಂಬಂಧಿತ ಶಕ್ತಿ ತಿರ್ಯಕ್ ಲಹರಿಗಳ ಸ್ವರೂಪದಲ್ಲಿದ್ದರೆ, ದಿವ್ಯ ಗುಣಗಳಿಗೆ ಸಂಬಂಧಿತ ಶಕ್ತಿಯು ಸಾತ್ತ್ವಿಕ ೧೦೮ ಲಹರಿಗಳ ಹಾಗೆ ಇರುತ್ತದೆ.
೩. ಸ್ವಭಾವದೋಷ ಮತು ಅಹಂಭಾವ ಹಾಗೂ ಸಾಧನೆಯಲ್ಲಿ ವಿಘ್ನಗಳನ್ನುಂಟು ಮಾಡುವ ಅವುಗಳ ಕ್ಷಮತೆ !
೩ ಅ. ಮಂದ ಪ್ರಾಬಲ್ಯವಿರುವ ಸ್ವಭಾವದೋಷ ಮತ್ತು ಅದರ ನಿರ್ಮೂಲನೆ
೩ ಅ ೧. ಸ್ವಭಾವದೋಷ : ಆಲಸ್ಯ, ಅವ್ಯವಸ್ಥಿತನ, ಸಮಯದ ಪಾಲನೆ ಮಾಡದಿರುವುದು ಇತ್ಯಾದಿ.
೩ ಅ ೨. ಸ್ವಭಾವದೋಷಗಳ ಸ್ವರೂಪ ಮತ್ತು ವಿಘ್ನಗಳನ್ನುಂಟು ಮಾಡುವ ಅವುಗಳ ಕ್ಷಮತೆ : ಸ್ವಭಾವದೋಷಗಳ ಸ್ವರೂಪವು ಸೂಕ್ಷ್ಮಸ್ತರದ ತಿರ್ಯಕ್ ಲಹರಿಗಳಂತೆ ಇರುತ್ತದೆ. ರಾಮಾಯಣ ಕಾಲದ ಯಜ್ಞಗಳಲ್ಲಿ ವಿಘ್ನಗಳನ್ನುಂಟು ಮಾಡುತ್ತಿದ್ದ ಬಾಹ್ಯರೂಪದಿಂದ ಸಾಮಾನ್ಯ ಅನಿಸುವ ರಾಕ್ಷಸರಂತೆ ಇರುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಸಾಧಕರ ಪ್ರಯತ್ನದಲ್ಲಿ ಅವು ವಿಘ್ನಗಳನ್ನುಂಟು ಮಾಡುತ್ತವೆ.
೩ ಅ ೩. ಸ್ವಭಾವದೋಷ ನಿರ್ಮೂಲನೆ ಮತ್ತು ಇತರ ಪ್ರಯತ್ನಗಳ ಪರಿಣಾಮ : ಈ ಸ್ವಭಾವದೋಷಗಳ ನಿರ್ಮೂಲನೆಯೊಂದಿಗೆ ಸಾಧನೆಯ ಇನ್ನಿತರ ಪ್ರಯತ್ನಗಳಿಂದಾಗಿ ಈಶ್ವರೀಯ ಮಾರಕ ಶಕ್ತಿಯು ಜಾಗೃತ (ಈಶ್ವರನ ಮಾರಕ ರೂಪದೊಂದಿಗೆ ಏಕರೂಪತೆ)ವಾಗುತ್ತದೆ. ಇದರಿಂದಾಗಿ ಮೂಲಾಧಾರದಿಂದ ಮಣಿಪೂರ ಈ ಚಕ್ರಗಳು ಸ್ವಲ್ಪ ಮಟ್ಟಿಗೆ ಶುದ್ಧವಾಗುತ್ತವೆ. ಉಳಿದ ಭಾಗವು ಈಶ್ವರನ ತಾರಕ ರೂಪದೊಂದಿಗೆ ಏಕರೂಪ ಆಗುವುದರಿಂದ ಶುದ್ಧವಾಗುತ್ತದೆ. ಉದಾ. ಮಟ್ಟಕ್ಕನುಸಾರ ಸಾಧನೆ ಮಾಡುವಾಗ ಭಾವಪೂರ್ಣ ಕರ್ಮಕಾಂಡ, ನಾಮಜಪ, ಭಾವಜಾಗೃತಿಯ ಪ್ರಯತ್ನ ಇತ್ಯಾದಿ ಮಾಡುವುದರಿಂದ.
೩ ಅ ೪. ಚಕ್ರಗಳು ಭೇದಿಸುವುದರಿಂದ ಆಗುವ ಲಾಭ : ಚಕ್ರಗಳನ್ನು ಭೇದಿಸುವುದರಿಂದಾಗಿ ಜೀವದ ಕ್ರಿಯಾಶಕ್ತಿ ಜಾಗೃತವಾಗಿ (ಕಾರ್ಯಾನಿರತವಾಗಿ) ಸ್ಥೂಲ ಕಾರ್ಯ ಮಾಡುವ ಕ್ಷಮತೆ ಹೆಚ್ಚುತ್ತದೆ. ಸಾಧನೆಯಿಂದ ಜಾಗೃತವಾಗುವ ಕ್ರಿಯಾಶಕ್ತಿ ವ್ಯಷ್ಟಿಯ ಸ್ಥೂಲ ಅಥವಾ ಶಾರೀರಿಕ ಕಾರ್ಯಕ್ಕೆ ಗತಿ ಮತ್ತು ಸಮಷ್ಟಿಯ ಸ್ಥೂಲ ಅಥವಾ ಶಾರೀರಿಕ ಕಾರ್ಯಕ್ಕೆ ಪ್ರೇರಣೆ ನೀಡುವಂತಹದ್ದಾಗಿರುತ್ತದೆ.
೩ ಆ. ಮಧ್ಯಮ ಪ್ರಾಬಲ್ಯವಿರುವ ಸ್ವಭಾವದೋಷ ಮತ್ತು ಅದರ ನಿರ್ಮೂಲನೆ
೩ ಆ ೧. ಸ್ವಭಾವದೋಷ : ಹಟಮಾರಿತನ, ಪ್ರತಿಕ್ರಿಯಾತ್ಮಕವಾಗಿ ಮಾತನಾಡುವುದು, ಅಪೇಕ್ಷೆ, ಭಯ, ಇತರರ ವಿಚಾರ ಮಾಡದಿರುವುದು ಇತ್ಯಾದಿ.
೩ ಆ ೨. ಸ್ವಭಾವದೋಷಗಳ ಸ್ವರೂಪ ಮತ್ತು ವಿಘ್ನಗಳನ್ನುಂಟುಮಾಡುವ ಕ್ಷಮತೆ : ಸೂಕ್ಷ್ಮತರ ತಿರ್ಯಕ ಲಹರಿಗಳ ಸ್ವರೂಪದಲ್ಲಿರುತ್ತದೆ. ರಾಮಾಯಣ ಅಥವಾ ಮಹಾಭಾರತಗಳಲ್ಲಿ ಉಲ್ಲೇಖವಿರುವ ಪೂತನಾ, ಶೂರ್ಪಣಖಾ ಅಥವಾ ಕಾಲಿಯಾ ಇವರಂತಹ ಬಲಾಢ್ಯ ವ್ಯಷ್ಟಿ ಅಸುರರ ಸಮವಾಗಿರುತ್ತವೆ. ಈ ಸ್ವಭಾವದೋಷದಿಂದ ಮನಸ್ಸಿನ ಶಕ್ತಿ ವ್ಯರ್ಥವಾಗುತ್ತದೆ. ಮನೋದೇಹದ ಭಾವಭಾವನೆಗಳು ಉಕ್ಕಿಬಂದು ಸಾಧಕನಿಗೆ ಗೊಂದಲದಲ್ಲಿ ಸಿಲುಕಿದಂತೆ ಅನುಭವವಾಗುತ್ತದೆ.
೩ ಆ ೩. ಸ್ವಭಾವದೋಷ ನಿರ್ಮೂಲನೆ ಮತ್ತು ಭಾವ-ಭಕ್ತಿಯ ಪ್ರಯತ್ನದಿಂದ ಆಗುವ ಪರಿಣಾಮ : ಈ ಸ್ವಭಾವದೋಷಗಳ ನಿರ್ಮೂಲನೆಗಾಗಿ ಪ್ರಯತ್ನ ಮಾಡುವುದರಿಂದ ಜಾಗೃತವಾಗುವ ಈಶ್ವರನ ಮಾರಕ ಶಕ್ತಿಯಿಂದ ಜೀವದ ಅನಾಹತ, ವಿಶುದ್ಧ ಮತ್ತು ಕೆಲ ಪ್ರಮಾಣದಲ್ಲಿ ಆಜ್ಞಾಚಕ್ರ, ಇವುಗಳು ಭೇದಿಸಲ್ಪಡುತ್ತವೆ. ಭಾವ-ಭಕ್ತಿಯ ಪ್ರಯತ್ನಗಳಿಂದ ಜಾಗೃತವಾಗುವ ಈಶ್ವರನ ತಾರಕ ಶಕ್ತಿಯಿಂದ ಉಳಿದ ಚಕ್ರಗಳ ಭಾಗವು ಜಾಗೃತವಾಗಿ, ಈ ಚಕ್ರಗಳು ಸಂಪೂರ್ಣವಾಗಿ ಜಾಗೃತವಾಗುತ್ತವೆ. ಈ ಸ್ವಭಾವದೋಷಗಳ ನಿರ್ಮೂಲನೆಯಿಂದ ಕ್ರಿಯಾಶಕ್ತಿ ಸಹಿತ ಇಚ್ಛಾಶಕ್ತಿಯೂ ಜಾಗೃತವಾಗುತ್ತದೆ.
೩ ಅ ೪. ಜಾಗೃತ ಇಚ್ಛಾಶಕ್ತಿಯಿಂದಾಗುವ ಲಾಭ : ಸಾಧನೆಯಿಂದ ಜಾಗೃತವಾಗುವ ಇಚ್ಛಾಶಕ್ತಿಯು ವ್ಯಷ್ಟಿ ಮನಸ್ಸಿಗೆ ಶಕ್ತಿ ನೀಡುತ್ತದೆ, ವ್ಯಾಪಕತೆ ನೀಡುತ್ತದೆ. ಮತ್ತು ಸಮಷ್ಟಿ ಮನಸ್ಸನ್ನು ಪ್ರಭಾವಿತಗೊಳಿಸಿ ಅವರನ್ನು ಸಮಷ್ಟಿ ಕಾರ್ಯಕ್ಕೆ ಪ್ರೇರೇಪಿಸುತ್ತದೆ.
೩ ಇ. ತೀವ್ರ ಪ್ರಾಬಲ್ಯವಿರುವ ಸ್ವಭಾವದೋಷ ಮತ್ತು ಅದರ ನಿರ್ಮೂಲನೆ
೩ ಇ ೧. ಸ್ವಭಾವದೋಷ : ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಷಟ್‌ವೈರಿಗಳಾಗಿವೆ
೩ ಇ ೨. ಸ್ವರೂಪ : ಈ ದೋಷಗಳು ಸೂಕ್ಷ್ಮತಮ ತಿರ್ಯಕ್ ಲಹರಿಗಳ ಸ್ವರೂಪದಲ್ಲಿ ಇರುತ್ತವೆ, ಉದಾ. ರಾಮಾಯಣ, ಮಹಾಭಾರತದಲ್ಲಿ ಉಲ್ಲೇಖಿಸಿದ ಮೇಘನಾಥ, ಕುಂಭಕರ್ಣ ಇತ್ಯಾದಿ ಮಾಂತ್ರಿಕ ಶಕ್ತಿ ಹೊಂದಿದ ಬಲಾಢ್ಯ ಅಸುರರ ಸಮ ಇರುತ್ತವೆ.
೩ ಇ ೩. ಸ್ವಭಾವದೋಷಗಳ ನಿರ್ಮೂಲನೆ ಮಾಡುವಾಗ ಆಗುವ ಪರಿಣಾಮ : ಇವುಗಳ ನಿರ್ಮೂಲನೆಗಾಗಿ ತೀವ್ರ ಪ್ರಯತ್ನ ಮಾಡಬೇಕಾಗುತ್ತದೆ. ಇಲ್ಲಿ ಅಜ್ಞಾನಕ್ಕೆ ಕಾರಣವಾಗಿರುವ ಅಶುದ್ಧ ಬುದ್ಧಿಯ ಲಯವಾಗುವ ಪ್ರಕ್ರಿಯೆಯಾಗಿ ಜ್ಞಾನಶಕ್ತಿಯ ಉದಯವಾಗುತ್ತದೆ. ಸಾಧನೆಯಿಂದ ಜಾಗೃತವಾದ ಜ್ಞಾನಶಕ್ತಿ ಜೀವಕ್ಕೆ ಸ್ವಸ್ವರೂಪದ ಅನುಭೂತಿ ನೀಡುತ್ತದೆ. ಆದರೆ, ಸಮಷ್ಟಿಗೆ ‘ಸ್ವಸ್ವರೂಪದ ಅನುಭೂತಿ ಪಡೆಯುವುದು, ಇದು ಮನುಷ್ಯಜನ್ಮದ ಧ್ಯೇಯವಾಗಿದೆ’, ಎಂಬುದರ ಅರಿವು ಮಾಡಿಕೊಡುತ್ತದೆ. ಈ ಸ್ವಭಾವದೋಷಗಳ ನಿರ್ಮೂಲನೆಗಾಗಿ ಮಾಡಿದ ಪ್ರಯತ್ನದಿಂದ ದೇಹದಲ್ಲಿ ಮಾರಕ ಈಶ್ವರೀ ಶಕ್ತಿಯು ಎಷ್ಟು ಪ್ರಮಾಣದಲ್ಲಿ ಜಾಗೃತವಾಗುತ್ತದೆ ಎಂದರೆ, ಈ ಹಂತದಲ್ಲಿ ಈಶ್ವರನ ಮಾರಕ ರೂಪದೊಂದಿಗೆ ಏಕರೂಪತೆ ಪ್ರಾಪ್ತವಾಗುತ್ತದೆ. ಇಂದ್ರಿಯನಿಗ್ರಹ ಮಾಡಿ ಸಾಧಿಸಿದ ಜಿತೇಂದ್ರಿಯ ಅವಸ್ಥೆಯಿಂದಾಗಿ ಜೀವಕ್ಕೆ ಈಶ್ವರನ ತಾರಕ ರೂಪದೊಂದಿಗೆ ಏಕರೂಪತೆ ಪ್ರಾಪ್ತವಾಗುತ್ತದೆ. ಈ ಎಲ್ಲ ಪ್ರಯತ್ನಗಳಿಂದ ಆಜ್ಞಾಚಕ್ರವು ಭೇದಿಸಲ್ಪಡುತ್ತೆ ಮತ್ತು ಸ್ವಲ್ಪಮಟ್ಟಿಗೆ ಸಹಸ್ರಾರ ಚಕ್ರವು ಭೇದಿಸಲ್ಪಡುತ್ತದೆ.
೩ ಈ. ಅಹಂಭಾವದ ನಿರ್ಮೂಲನೆಯಿಂದ ಸಹಸ್ರಾರ ಚಕ್ರದೊಂದಿಗೆ ದೇಹದಲ್ಲಿನ ಎಲ್ಲ ನಾಡಿ ಮತ್ತು ಚಕ್ರಗಳ ಪೂರ್ಣ ಶುದ್ಧಿಯಾಗುವುದು
‘ಅಹಂಭಾವ’ ಇದು ಸ್ವಭಾವದೋಷಗಳ ಸೂಕ್ಷ್ಮಾತಿಸೂಕ್ಷ್ಮರೂಪ, ಅಂದರೆ ಬೀಜವಾಗಿರುತ್ತದೆ. ಸ್ವಭಾವದೋಷಗಳ ನಿರ್ಮೂಲನೆಯ ಪ್ರಕ್ರಿಯೆಯಲ್ಲಿ ಅಹಂಭಾವದ ಬೀಜ ನಿರ್ಮೂಲನೆ ನಡೆಯುತ್ತಿರುತ್ತದೆ. ‘ಸ್ವಕತೃತ್ವ’ ಅಥವಾ ‘ದ್ವೈತಭಾವ’ ಈ ಅಹಂಭಾವಗಳು ಎಲ್ಲಕ್ಕೂ ಮೂಲವಾಗಿರುತ್ತದೆ. ರಾಮಾಯಣ, ಮಹಾಭಾರತಗಳಲ್ಲಿ ಉಲ್ಲೇಖಿಸಿರುವ ರಾವಣ, ಕಂಸ, ದುರ್ಯೋಧನ ಮುಂತಾದ ಬಲಾಢ್ಯ ಅಸುರ ಮಾಂತ್ರಿಕ ರಾಜರಂತೆ ಇರುತ್ತವೆ. ಅಹಂಭಾವ ನಿರ್ಮೂಲನೆಯ ಪ್ರಯತ್ನದಿಂದ ಸ್ವಕತೃತ್ವ ಅಥವಾ ದ್ವೈತಭಾವಗಳು ನಷ್ಟವಾಗಿ ಈಶ್ವರಸ್ವರೂಪವು (ಈಶ್ವರನ ತಾರಕ-ಮಾರಕ ರೂಪದೊಂದಿಗೆ ಏಕರೂಪತೆ) ಅನುಭವಿಸಲು ಸಿಗುತ್ತದೆ. ಸಾಧನೆಯ ಈ ಪ್ರಯತ್ನಗಳಿಂದ ಸಹಸ್ರಾರ ಚಕ್ರಸಹಿತ ದೇಹದಲ್ಲಿನ ಎಲ್ಲ ನಾಡಿ ಮತ್ತು ಚಕ್ರಗಳು ಸಂಪೂರ್ಣ ಶುದ್ಧೀಕರಿಸಲ್ಪಡುತ್ತದೆ. ಇಲ್ಲಿ ಜ್ಞಾನಶಕ್ತಿಯು ಪೂರ್ಣವಾಗಿ ಜಾಗೃತವಾಗಿರುತ್ತದೆ. ಅಗತ್ಯದಂತೆ ಕ್ರಿಯಾಶಕ್ತಿ ಮತ್ತು ಇಚ್ಛಾಶಕ್ತಿಯೂ ಕಾರ್ಯನಿರತವಾಗಿರುತ್ತವೆ.’ – (ಸದ್ಗುರು) ಡಾ. ಚಾರುದತ್ತ ಪಿಂಗಳೆ, ಉತ್ತರಭಾರತ ಪ್ರಸಾರ ಸೇವಕರು (೧.೭.೨೦೧೭)