ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣವು ೧೪ ವಿದ್ಯೆಗಳ ಮತ್ತು ೬೪ ಕಲೆಗಳ ಮಾಧ್ಯಮದಿಂದ ಈಶ್ವರ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು, ಈ ಸಂದರ್ಭದಲ್ಲಿ…
೧. ಎಲ್ಲ ವಿದ್ಯಾರ್ಥಿಗಳಿಗೆ ಆವಶ್ಯಕವಾಗಿರುವ ಮೂಲಭೂತ ಶಿಕ್ಷಣ
ಮಹಾವಿದ್ಯಾಲಯಗಳು ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ನೀಡುವ ಸಂಸ್ಥೆಗಳಲ್ಲಿ ‘ಪ್ರತಿ ವರ್ಷ ಯಾವ ವಿಷಯಗಳನ್ನು ಹಂತಹಂತವಾಗಿ ಮತ್ತು ಹೇಗೆ ಕಲಿಸಬೇಕು’, ಎಂಬುದರ ಆಯೋಜನೆಯಿರುತ್ತದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮುಂದೆ ಕಲಿಸಲಾಗುವ ೧೪ ವಿದ್ಯೆ ಮತ್ತು ೬೪ ಕಲೆ ಇವುಗಳು ಎಲ್ಲ ವಿಷಯಗಳ ತಳಹದಿ ‘ಸಾತ್ತ್ವಿಕತೆ’ ಆಗಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಮೊದಲ ೪ – ೫ ವರ್ಷ ಸಾಧನೆಯನ್ನು ಮಾಡಿಸಿಕೊಳ್ಳಲಾಗುತ್ತದೆ. ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನೆಯ ಮಾರ್ಗಗಳು’ ಇದು ಅಧ್ಯಾತ್ಮದಲ್ಲಿನ ಒಂದು ಮೂಲಭೂತ ಸಿದ್ಧಾಂತವಾಗಿದೆ. ಅದಕ್ಕನುಸಾರ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನಾ ಮಾರ್ಗ ಬೇರೆ ಬೇರೆಯಾಗಿದ್ದರೂ, ಯಾವುದೇ ಮಾರ್ಗದಿಂದ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ವಿದ್ಯಾರ್ಥಿ ಸಾತ್ತ್ವಿಕವಾಗಿರುವುದು ಅತ್ಯಂತ ಆವಶ್ಯಕವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರಿಂದ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಇವುಗಳೊಂದಿಗೆ ನಾಮಜಪ ಸಾಧನೆಯನ್ನು ಮಾಡಿಸಿಕೊಳ್ಳಲಾಗುತ್ತದೆ. ಇವುಗಳ ವೈಶಿಷ್ಟ್ಯಗಳು ಮುಂದಿನಂತಿವೆ.
೧ ಅ. ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ : ಇವುಗಳಿಂದ ಮನಸ್ಸು ಸಾತ್ತ್ವಿಕವಾಗುತ್ತದೆ. ಸಾತ್ತ್ವಿಕ ಮನಸ್ಸಿನಿಂದ ವಿಷಯವನ್ನು ಕಲಿಯುವುದು ಸುಲಭವಾಗುತ್ತದೆ.
೧ ಆ ನಾಮಜಪ
೧ ಆ ೧. ಕೆಟ್ಟ ಶಕ್ತಿಗಳ ತೊಂದರೆಗಳ ನಿರ್ಮೂಲನೆ : ಇತ್ತೀಚೆಗಿನ ಕಾಲದಲ್ಲಿ ಸಮಾಜದಲ್ಲಿನ ಸುಮಾರು ಶೇ. ೮೦ ರಷ್ಟು ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳ ಅಲ್ಪ, ಮಧ್ಯಮ ಅಥವಾ ತೀವ್ರ ತೊಂದರೆಯಿದೆ. ಅದು ದೂರವಾದ ನಂತರವೇ ಸಾಧನೆಯಲ್ಲಿ ಮತ್ತು ಶಿಕ್ಷಣದ ವಿಷಯಗಳಲ್ಲಿ ಪ್ರಗತಿ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ನಾಮಜಪದಿಂದ ಕೆಟ್ಟ ಶಕ್ತಿಗಳ ತೊಂದರೆಗಳು ದೂರವಾಗುತ್ತವೆ.
೧ ಆ ೨. ಒಳ್ಳೆಯ ಶಕ್ತಿ ಮತ್ತು ಚೈತನ್ಯ ಇವುಗಳ ಪ್ರಾಪ್ತಿ : ಇವುಗಳಿಂದ ಸಾಧನೆಯನ್ನು ಮಾಡಲು ಬಲ ಮತ್ತು ಉತ್ಸಾಹ ಸಿಗುತ್ತದೆ.
೨. ಪಠ್ಯ ಕ್ರಮದ ವೈಶಿಷ್ಟ್ಯಗಳು
ವಿದ್ಯಾರ್ಥಿಗಳ ವಯಸ್ಸಿಗನುಸಾರವಲ್ಲ, ಅವರಲ್ಲಿನ ಸಾಧನೆಯ ಸ್ಥಿತಿಗನುಸಾರ ಮತ್ತು ಅವರಲ್ಲಿರುವ ಕಲೆಯ ಗುಣಗಳಿಗನುಸಾರ ಅವರಿಗೆ ಆವಶ್ಯಕವಿರುವ ಪಠ್ಯ ಕ್ರಮವನ್ನು ನಿಶ್ಚಯಿಸಲಾಗುತ್ತದೆ.
೩. ಸದ್ಯದ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಕಲಿಸುವ ಸ್ಥಿತಿ
ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ, ಹಾಗೆಯೇ ಕೆಟ್ಟ ಶಕ್ತಿಗಳ ತೊಂದರೆಗಳ ನಿರ್ಮೂಲನೆಗಾಗಿ ನಾಮಜಪವನ್ನು ಸಾಧ್ಯ ಮಾಡಿಕೊಂಡ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳು ಅಧ್ಯಾತ್ಮ, ಹಾಗೂ ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿ ಕಲೆಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ಕಲಿತು ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದಾರೆ.
– (ಪರಾತ್ಪರ ಗುರು) ಡಾ. ಆಠವಲೆ