ಗುರುಚರಣಗಳಲ್ಲಿ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬೇಕು ?

೧. ಗುರುಪೂರ್ಣಿಮೆಯು ಸಮಷ್ಟಿ ಸಾಧನೆಗೆ ಬಹುದೊಡ್ಡ ಅವಕಾಶವಾಗಿದೆ

ಶ್ರೀ. ಜ್ಞಾನದೇವ ಪಾಟೀಲ

ಪ್ರತಿಯೊಂದು ಜೀವವು ಸುಖಕ್ಕಾಗಿ ಅಲ್ಲ, ಆನಂದಪ್ರಾಪ್ತಿಗಾಗಿ ಪ್ರಯತ್ನ ನಿರತವಾಗಿರುತ್ತದೆ. ಗುರುಪೂರ್ಣಿಮೆಯಂದು ಈಶ್ವರನಿಂದ ಸಾವಿರಾರು ಪಟ್ಟು ಅಧಿಕ ಗುರುತತ್ತ್ವ ಪ್ರಕ್ಷೇಪಿತವಾಗುತ್ತಿರುತ್ತದೆ. ಅದರ ಲಾಭ ಸಾಧ್ಯವಾದಷ್ಟು ಅಧಿಕ ಜೀವಿಗಳಿಗೆ ಸಿಗಬೇಕು ಮತ್ತು ಪ್ರತಿಯೊಬ್ಬರಿಗೂ ಅವರ ಜೀವನದ ಧ್ಯೇಯ ವಾಗಿರುವ ‘ಮೋಕ್ಷಪ್ರಾಪ್ತಿ ಸಾಧ್ಯವಾದಷ್ಟು ಬೇಗ ದೊರಕಬೇಕೆಂದು ಈಶ್ವರನು ವರ್ಷಕ್ಕೊಮ್ಮೆ ಸಾಧಕರಿಗೆ ಈ ಅವಕಾಶವನ್ನು ಒದಗಿಸಿ ಕೊಟ್ಟಿದ್ದಾನೆ. ‘ಅದರ ಅಧಿಕ ಲಾಭವನ್ನು ಹೇಗೆ ಪಡೆಯಬೇಕು’ ಎನ್ನುವ ಜ್ಞಾನವು ಪ.ಪೂ. ಗುರುಗಳ ಕೃಪೆಯಿಂದ ಗ್ರಂಥರೂಪದಲ್ಲಿ ನಮಗೆ ದೊರೆಯುತ್ತಿರುತ್ತದೆ. ಸಾಧನೆಗೆ ಅನುಕೂಲಕರ ವಾಗಿರುವ ವಾತಾವರಣವನ್ನು ನಿರ್ಮಾಣ ಮಾಡಿ, ಸಾಧಕರು ತಮ್ಮೊಂದಿಗೆ ಸಮಾಜದ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳಬೇಕೆಂದು ಈಶ್ವರನು ಸಾಧಕರಿಗೆ ‘ಗುರುಪೂರ್ಣಿಮೆ ಮೂಲಕ ಬಹುದೊಡ್ಡ ಅವಕಾಶವನ್ನು ಒದಗಿಸಿ ಕೊಟ್ಟಿದ್ದಾನೆ.

೨. ಮಹರ್ಷಿ ವ್ಯಾಸರು ಶಿಷ್ಯಂದಿರಿಗೆ ಶಬ್ದಗಳ ಮೂಲಕ ಜ್ಞಾನವನ್ನು ನೀಡಿ ಜೀವನ್ಮುಕ್ತಿಯ ಮಾರ್ಗವನ್ನು ತೋರಿಸುವುದು

ಆಷಾಢ ಶುಕ್ಲ ಪಕ್ಷ ಪೂರ್ಣಿಮೆಗೆ ‘ಗುರುಪೂರ್ಣಿಮೆ ಅಥವಾ ‘ವ್ಯಾಸ ಪೂರ್ಣಿಮೆ ಎಂದು ಹೇಳುತ್ತಾರೆ. ಮಹರ್ಷಿ ವ್ಯಾಸರಿಗಿಂತ ಮೊದಲಿನ ಗುರುಗಳು ತಮ್ಮ ಶಿಷ್ಯರಿಗೆ ಶಬ್ದಾತೀತ ಅಂದರೆ ಶಬ್ದರಹಿತ ಜ್ಞಾನವನ್ನು ನೀಡುತ್ತಿದ್ದರು. ಇದರ ಕಾರಣವೇನೆಂದರೆ ಆ ಸಮಯದಲ್ಲಿ ಶಿಷ್ಯಂದಿರಲ್ಲಿ ಶಬ್ದಾತೀತ ಜ್ಞಾನವನ್ನು ಗ್ರಹಿಸುವ ಯೋಗ್ಯತೆಯಿತ್ತು ತದನಂತರ ಮಹರ್ಷಿ ವ್ಯಾಸರು ಶಬ್ದಾತೀತ ಜ್ಞಾನವನ್ನು ಶಬ್ದಬದ್ಧಗೊಳಿಸಿ ಶಿಷ್ಯಂದಿರಿಗೆ ನೀಡಲು ಪ್ರಾರಂಭಿಸಿದರು. ಮತ್ತು ಆ ಜ್ಞಾನದ ಆಧಾರದಲ್ಲಿ ಸಾಧನೆಯನ್ನು ಮಾಡಿ ಶಿಷ್ಯಂದಿರು ಜೀವನ್ಮುಕ್ತರಾದರು.

೩. ಕೃತಿಯ ಮಟ್ಟದಲ್ಲಿ ಸಾಧನೆಯ ಪ್ರಯತ್ನ ಮಾಡಿ ನಾವು ಮೋಕ್ಷದ ಅಧಿಕಾರಿಗಳಾಗುವುದೇ ಗುರುಗಳ ಬಗ್ಗೆ ನಿಜವಾದ ಕೃತಜ್ಞತೆ ವ್ಯಕ್ತಪಡಿಸುವುದಾಗಿದೆ

ಈ ಯುಗದಲ್ಲಿ ಶ್ರೀಕೃಷ್ಣನ ಕೃಪೆಯಿಂದ ನಮ್ಮೆಲ್ಲರ ಪೂರ್ವ ಪುಣ್ಯದ ಫಲದಿಂದ ನಮಗೆ ಮೋಕ್ಷ ದೊರಕಿಸಿಕೊಡುವ ಗುರುಗಳಾಗಿ ಪರಾತ್ಪರ ಗುರು ಡಾ. ಆಠವಲೆಯವರು ದೊರಕಿದ್ದಾರೆ. ಸಾಧ್ಯವಾದಷ್ಟು ಅಧಿಕ ಅವರ ಲಾಭವನ್ನು ಪಡೆದುಕೊಂಡು ನಾವು ಮೋಕ್ಷದ ಅಧಿಕಾರಿಗಳಾಗೋಣ. ಇದಕ್ಕಾಗಿ ಪ.ಪೂ. ಗುರುದೇವರು ಸುಮಾರು ೪ ಸಾವಿರ ಗ್ರಂಥಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಆ ಗ್ರಂಥಗಳ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡಿ ನಾವು ಜೀವನ್ಮುಕ್ತರಾಗುವವರಿದ್ದೇವೆ. ಪ.ಪೂ. ಗುರುದೇವರು ನಮ್ಮೆಲ್ಲರನ್ನು ಶಬ್ದದಿಂದ ಮತ್ತು ಶಬ್ದ ರಹಿತ(ಅಂದರೆ ಚೈತನ್ಯದ ಮಟ್ಟದಲ್ಲಿ) ಜ್ಞಾನವನ್ನು ನೀಡಿ ಸಾಧಕರನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತಿದ್ದಾರೆ. ಈ ರೀತಿ ಸಾಧ್ಯವಾದಷ್ಟು ಅಧಿಕ ಜೀವಿಗಳನ್ನು ಮೋಕ್ಷದೆಡೆಗೆ ಕರೆದೊಯ್ಯಬೇಕೆಂದು ಪ.ಪೂ. ಗುರುಗಳು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಗುರುಪೂರ್ಣಿಮೆಯ ನಿಮಿತ್ತ ಇಂತಹ ಗುರುದೇವರ ಚರಣಗಳಲ್ಲಿ ನಾವು ಕೇವಲ ಶಬ್ದಗಳಲ್ಲಿನ ಕೃತಜ್ಞತೆಯನ್ನು ವ್ಯಕ್ತಪಡಿಸುವುದಕ್ಕಿಂತ ‘ಕೃತಿಯ ಮಟ್ಟದಲ್ಲಿ ಸಾಧನೆಯ ಪ್ರಯತ್ನ ಮಾಡಿ ಮೋಕ್ಷದ ಅಧಿಕಾರಿಗಳಾಗುವುದೇ ನಿಜವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವುದು’ ಇದೇ ಯೋಗ್ಯವಾಗಿರುವುದು

– ಶ್ರೀ. ಜ್ಞಾನದೇವ ಪಾಟೀಲ, ಚಿಪಳೂಣ (೧೩.೬.೨೦೧೭)

Leave a Comment