ಸಪ್ತಲೋಕಗಳ ಸಂಕಲ್ಪನೆಯ ಮೇಲಾಧರಿಸಿದ ಪ್ರಂಬನನ್ ಅಂದರೆ ಪರಬ್ರಹ್ಮ ದೇವಸ್ಥಾನ !
ಪರಬ್ರಹ್ಮ ಮಂದಿರದ ಭವ್ಯ ಪರಿಸರ
೧. ಕಟ್ಟಡ ಕಾರ್ಯದಲ್ಲಿ ಸಿಮೆಂಟನ್ನು ಬಳಸದೇ ವಿಶಿಷ್ಟ ಪದ್ಧತಿಯಿಂದ ಒಂದರಲ್ಲೊಂದರಂತೆ ಕೋಟಿಗಟ್ಟಲೆ ಕಲ್ಲುಗಳನ್ನು ಸಿಲುಕಿಸಿ ದೇವಸ್ಥಾನ ಕಟ್ಟುವುದು
ಒಂದರಲ್ಲೊಂದು ಸಿಲುಕಿಸಲು (ಇಂಟರಲಾಕಿಂಗ್ ಗಾಗಿ) ವಿಶಿಷ್ಟ ಆಕಾರ ನೀಡಿರುವ ದೇವಸ್ಥಾನದಲ್ಲಿನ ಕಲ್ಲುಗಳು
ಇಂಡೋನೆಶಿಯಾದ ಯೋಗ್ಯಕರ್ತಾ ಎಂಬಲ್ಲಿ ಪರಬ್ರಹ್ಮ ದೇವಸ್ಥಾನಕ್ಕಾಗಿ ಕೋಟಿಗಟ್ಟಲೆ ಕಲ್ಲುಗಳನ್ನು ಬಳಸಲಾಗಿದೆ. ‘ಆ ಕಾಲದಲ್ಲಿ ಇದಕ್ಕೆ ಯಾವ ತಂತ್ರಜ್ಞಾನದ ಬಳಕೆ ಮಾಡಿರಬಹುದು ?’, ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಲ್ಲುಗಳನ್ನು ಎಲ್ಲಿಂದ ತಂದಿರಬಹುದು ?’, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಮಾರ್ಗದರ್ಶಕನಿಗೆ (‘ಗೈಡ್’)ನಿಗೆ ಕೇಳಿದಾಗ ಅವನು, “ದೇವಸ್ಥಾನದ ಹಿಂದೆ ಒಂದು ಹರಿಯುವ ನದಿ ಇದೆ, ಅಲ್ಲಿಂದ ಈ ಕಲ್ಲುಗಳನ್ನು ಹರಿಸುತ್ತ ತಂದಿರಬಹುದು”, ಎಂದರು. ‘ಕೋಟಿಗಟ್ಟಲೆ ಕಲ್ಲುಗಳು ತರುವುದು ಮತ್ತು ಅವುಗಳಿಂದ ದೇವಸ್ಥಾನವನ್ನು ಕಟ್ಟುವುದು, ಎಂದರೆ ಅಂದಿನ ತಂತ್ರಜ್ಞಾನವು ಎಷ್ಟೊಂದು ಪ್ರಗಲ್ಭವಾಗಿತ್ತು’, ಎಂಬುದು ಗಮನಕ್ಕೆ ಬರುತ್ತದೆ. ದೇವಸ್ಥಾನದ ಪರಿಸರವು ತುಂಬಾ ದೊಡ್ಡದಾಗಿದೆ, ಹಾಗೆಯೇ ಎಲ್ಲ ದೇವಸ್ಥಾನದ ಗೋಪುರಗಳು ತುಂಬಾ ಎತ್ತರವಾಗಿವೆ. ವಿಶೇಷವೆಂದರೆ ದೇವಸ್ಥಾನದ ಕಟ್ಟಡಕಾಮಗಾರಿಯಲ್ಲಿ ಎಲ್ಲಿಯೂ ಸಿಮೆಂಟ್ ಬಳಸಿದ್ದು ಕಾಣುವುದಿಲ್ಲ. ಎಲ್ಲೆಡೆ ‘ಇಂಟರಲಾಕಿಂಗ್’ ಪದ್ಧತಿ ಇದೆ. ಕಲ್ಲು ಒಂದರಲ್ಲೊಂದು ವಿಶಿಷ್ಟ ರೀತಿಯಲ್ಲಿ ಸಿಲುಕಿಸಿದ್ದಾರೆ. ಇಂತಹ ರಚನೆಯಿಂದ ದೇವಸ್ಥಾನವು ಸಾತ್ತ್ವಿಕ ಕಾಣಿಸುತ್ತದೆ. ಇದರಿಂದ ‘ನಮ್ಮ ಪೂರ್ವಜರು ಎಷ್ಟೊಂದು ಬುದ್ಧಿವಂತರಾಗಿದ್ದರು’, ಎಂಬುದು ಗಮನಕ್ಕೆ ಬರುತ್ತದೆ.
೨. ‘ನೈಸರ್ಗಿಕ ವಿಪತ್ತಿನಲ್ಲಿಯೂ ವಿಗ್ರಹಕ್ಕೆ ಹಾನಿಯಾಗಬಾರದು’, ಆ ರೀತಿಯಲ್ಲಿ ಮಾಡಿದ ದೇವಸ್ಥಾನದ ರಚನೆ
ಪರಬ್ರಹ್ಮ ಮಂದಿರದ ಸಮೂಹದಲ್ಲಿರುವ ಒಂದು ದೇವಸ್ಥಾನ. ಭೂಕಂಪದ ಸಮಯದಲ್ಲಿ ಈ ದೇವಸ್ಥಾನದ ಕಳಸವು ಗರ್ಭಗೃಹದಲ್ಲಿ ಬೀಳದೇ ಹೊರಬದಿಯಲ್ಲಿ ಬಿದ್ದಿದೆ. (ಆ ಸ್ಥಳವು ಛಾಯಾಚಿತ್ರದಲ್ಲಿ ಚೌಕೋನದಲ್ಲಿ ಕಾಣಿಸುತ್ತಿದೆ.) ಮೇಲಿನ ಚೌಕಟ್ಟಿನಲ್ಲಿ ಬಿದ್ದಿರುವ ಕಳಸ
ಇಲ್ಲಿ ಶಿವ ಸ್ವರೂಪವಾಗಿರುವ ಮತ್ತು ಜೀವಂತ ಜ್ವಾಲಾಮುಖಿ ಇರುವ ‘ಮೇರಾಪಿ’ ಪರ್ವತವಿದೆ. ಅದರಿಂದ ಸತತವಾಗಿ ಬೂದಿ ಮತ್ತು ಹೊಗೆ ಹೊರಗೆ ಬೀಳುತ್ತಿರುತ್ತದೆ. ಈ ಜ್ವಾಲಾಮುಖಿಯು ೧೦೦೬ ರಲ್ಲಿ ಜಾಗೃತವಾಗಿತ್ತು. ಆ ಸಮಯದಲ್ಲಿ ‘ಯೋಗ್ಯಕರ್ತಾ’ ಈ ಗ್ರಾಮದ ಪರಿಸರದಲ್ಲಿ ಭೂಕಂಪವಾಯಿತು. ಇದರಿಂದಾಗಿ ಅನೇಕ ಸಣ್ಣ ಸಣ್ಣ ದೇವಸ್ಥಾನಗಳು ಬಿದ್ದವು. ಅನಂತರ ೧೫೬೪ ರಲ್ಲಿ ಜ್ವಾಲಾಮುಖಿಯ ಉದ್ರೇಕದಿಂದ ಭೂಕಂಪವಾಯಿತು, ಆಗಲೂ ಈ ದೇವಸ್ಥಾನಗಳಿಗೆ ಪೆಟ್ಟು ಬಿದ್ದಿದ್ದವು. ಅನಂತರ ೨೦೦೬ ರ ಭೂಕಂಪದಲ್ಲಿ ಪುನಃ ಅಲ್ಲಿಯ ಕೆಲವು ದೇವಸ್ಥಾನಗಳು ಬಿದ್ದವು. ಮಾರ್ಗದರ್ಶಕರ ಹೇಳಿಕೆಯಂತೆ, ಭೂಕಂಪದಲ್ಲಿ ದೇವಸ್ಥಾನದ ಗೋಪುರಗಳು ಬಿದ್ದಾಗ, ಅದು ಆ ದೇವಸ್ಥಾನದ ಗರ್ಭಗೃಹದೊಳಗೆ ಬೀಳದೇ ಎರಡೂ ಬದಿಯಿಂದ ಮುರಿದು ಬಿದ್ದಿತು. ಅದರಿಂದ ಒಳಗಿನ ದೇವಸ್ಥಾನದ ವಿಗ್ರಹಗಳಿಗೆ ಯಾವುದೇ ರೀತಿಯ ಹಾನಿಯಾಗಲಿಲ್ಲ. ಆ ಪದ್ಧತಿಯಿಂದ ಈ ದೇವಸ್ಥಾನದ ರಚನೆ ಮಾಡಲಾಗಿತ್ತು. ‘ಆಪತ್ತು ಸಂಭವಿಸಿದರೂ, ದೇವತೆಗಳ ವಿಗ್ರಹಕ್ಕೆ ಯಾವುದೇ ಹಾನಿಯಾಗಬಾರದು’, ಎಂಬ ಅರಿವು ಆ ಕಾಲದ ಜನರಲ್ಲಿ ಇತ್ತು.
೩. ದೇವತೆಯ ವಾಹನಗಳದ್ದೂ ಬೃಹದಾಕಾರದ ದೇವಸ್ಥಾನ !
ಶಿವನ ವಾಹನ ನಂದಿ ಮತ್ತು ಅದರ ಎಡ ಮತ್ತು ಬಲಕ್ಕೆ ಕ್ರಮವಾಗಿ ಸೂರ್ಯದೇವಮತ್ತು ಚಂದ್ರದೇವರ ಮೂರ್ತಿಗಳು (ಎರಡೂ ಮೂರ್ತಿಗಳನ್ನು ಪಕ್ಕದಲ್ಲಿ ದೊಡ್ಡ ಆಕಾರದಲ್ಲಿ ತೋರಿಸಲಾಗಿದೆ.)
ಪರಬ್ರಹ್ಮ ದೇವಸ್ಥಾನವನ್ನು ನೋಡುವಾಗ ದೇವಸ್ಥಾನದ ಎದುರಿಗೆ ಆಯಾ ದೇವತೆಗಳ ವಾಹನಗಳ ದೊಡ್ಡ ದೇವಸ್ಥಾನದ ರಚನೆಗಳು ಕಂಡುಬಂದವು. ಉದಾ. ವಿಷ್ಣುವಿನ ವಾಹನ ಗರುಡ, ಶಿವನ ವಾಹನ ನಂದಿ, ಬ್ರಹ್ಮದೇವನ ವಾಹನ ಹಂಸ. ಇವರಿಗಾಗಿಯೂ ಇಲ್ಲಿ ಬೃಹದಾಕಾರದ ದೇವಸ್ಥಾನಗಳನ್ನು ಕಟ್ಟಿದ್ದಾರೆ. ನಮ್ಮ ಪೂರ್ವಜರು ವಾಹನಗಳನ್ನೂ ದೇವತೆಗಳ ಸಮಾನವೆಂದು ನಂಬಿದ್ದರು. ಮುಖ್ಯವಾಗಿ ಇಲ್ಲಿನ ನಂದಿಯ ದೇವಸ್ಥಾನದ ಪಕ್ಕದಲ್ಲಿ ಸೂರ್ಯ ಮತ್ತು ಚಂದ್ರರ ವಿಗ್ರಹಗಳು ಕಂಡುಬರುತ್ತವೆ. (ಭಾವಚಿತ್ರ ‘ಅ’ ನೋಡಿ) ‘ಸೂರ್ಯ ಮತ್ತು ಚಂದ್ರರು ಇರುವವರೆಗೂ ದೇವಸ್ಥಾನಗಳು ಅಥವಾ ಮಹತ್ವವು ಇಡೀ ಜಗತ್ತಿನಲ್ಲಿ ಉಳಿಯಬೇಕು’, ಎಂಬ ಶ್ರದ್ಧೆ ಈ ಜನರಲ್ಲಿತ್ತು. ಅಷ್ಟೊಂದು ವಿಶಾಲವಾದ ವಿಚಾರ ಅವರಲ್ಲಿತ್ತು ! ಈಗಿನ ಶಿವನ ದೇವಸ್ಥಾನದ ಎದುರಿಗೆ ಕೇವಲ ಒಂದು ಸಣ್ಣ ನಂದಿ ಇರುತ್ತದೆ, ಅಷ್ಟು ಸಂಕುಚಿತವಾದ ವೃತ್ತಿ ನಮ್ಮದಾಗಿದೆ.
೪. ಆಧ್ಯಾತ್ಮಿಕ ದೃಷ್ಟಿಕೋನವನ್ನಿಟ್ಟುಕೊಂಡು ಸಪ್ತಲೋಕಗಳಂತೆ ಮಾಡಿದ ದೇವಸ್ಥಾನಗಳ ರಚನೆ
ದೇವಸ್ಥಾನದ ರಚನೆಯಲ್ಲಿ ಕೆತ್ತಿದ ಸ್ವರ್ಗಲೋಕದಪ್ರತೀಕವಾದ ೧. ಕಲ್ಪವೃಕ್ಷ, ೨. ಕಿನ್ನರ-ಕಿನ್ನರಿ ಮತ್ತು ಭೂಲೋಕದ ಪ್ರತೀಕವಾದ ೩. ಪಕ್ಷಿ
ದೇವಸ್ಥಾನಗಳ ರಚನೆಯನ್ನು ಸಪ್ತಲೋಕಗಳಂತೆ ಮಾಡಲಾಗಿದೆ. ಕೆಳಗಿನ ಕಲ್ಲುಗಳ ಪದರು ಭೂ, ಭುವರ್ ಮತ್ತು ಸ್ವರ್ಗಲೋಕದೊಂದಿಗೆ ಸಂಬಂಧಿಸಿದೆ. ಅನಂತರ ಮೇಲು ಮೇಲಿನ ಸ್ತರದಲ್ಲಿ ದೇವತೆ ಮತ್ತು ಕೆಲವು ಋಷಿಮುನಿಗಳ ಮೂರ್ತಿಗಳಿರುತ್ತವೆ. ಕಳಸವೆಂದರೆ ಸತ್ಯಲೋಕವಿದೆ. ಸ್ವರ್ಗಲೋಕವನ್ನು ತೋರಿಸುವಾಗ ಅವರು ಕಲ್ಪವೃಕ್ಷವನ್ನು ತೋರಿಸಿದ್ದಾರೆ. (ಭಾವಚಿತ್ರ ‘ಆ’ ನೋಡಿ) ಅದರ ಕೆಳಗೆ ಅವರು ಕಿನ್ನರ-ಕಿನ್ನರಿ, ಯಕ್ಷ, ಗಂಧರ್ವ, ಅಪ್ಸರೆ ಮುಂತಾದ ದೇವತೆಗಳನ್ನು ತೋರಿಸಿದ್ದಾರೆ. ಕಲ್ಪವೃಕ್ಷವೆಂದರೆ ಎಲ್ಲ ಸುಖವನ್ನು ನೀಡುವ ಈ ವೃಕ್ಷ. ಸ್ವರ್ಗದಲ್ಲಿ ಎಲ್ಲ ಸುಖಗಳು ಸಿಗುತ್ತವೆ, ಅದರ ಪ್ರತೀಕವೆಂದು ಕಲ್ಪವೃಕ್ಷವನ್ನು ತೋರಿಸಲಾಗಿದೆ. ಅದು ಸುಖ ಒದಗಿಸುವ ದೇವತೆ, ಅವರ ಗಣಗಳೆಂದರೆ ಕಿನ್ನರ-ಕಿನ್ನರಿ, ಯಕ್ಷ, ಗಂಧರ್ವ ಎಂಬ ಎಲ್ಲ ಮೂರ್ತಿಗಳನ್ನು ಕೆತ್ತಲಾಗಿದೆ.
ದೇವಸ್ಥಾನದ ರಚನೆಯಲ್ಲಿ ಕೆತ್ತಿದ ಸ್ವರ್ಗಲೋಕದ ಪ್ರತೀಕವಾದ ೧. ಕಲ್ಪವೃಕ್ಷ, ಭೂಲೋಕದ ಪ್ರತೀಕವಾದ ೨. ಕಪಿಗಳು ಮತ್ತು ೩. ಪಕ್ಷಿ ಸ್ವರ್ಗಲೋಕದ ಚಿತ್ರಣ ಬಿಡಿಸುವಾಗ ಯಕ್ಷ, ಗಂಧರ್ವ, ಅಪ್ಸರೆ, ದೇವತೆಗಳ ಕೆತ್ತಿದ ಮೂರ್ತಿಗಳು
ಸ್ವರ್ಗಲೋಕದ ಪ್ರತೀಕವಾಗಿರುವ ಕಲ್ಪವೃಕ್ಷದ ಮೇಲೆ ಭೂಲೋಕದ ಪ್ರತೀಕವೆಂದು ಪಶುಪಕ್ಷಿಗಳು ಮತ್ತು ಕೆಲವು ಕಪಿಗಳ ಮೂರ್ತಿಗಳ ಕೆತ್ತನೆಗಳು ಇವೆ. (ಭಾವಚಿತ್ರ ‘ಇ’ ನೋಡಿ) ಈ ರೀತಿ ಆಧ್ಯಾತ್ಮಿಕ ದೃಷ್ಟಿಯನ್ನಿಟ್ಟು ದೇವಸ್ಥಾನಗಳ ರಚನೆ ಮಾಡಲಾಗಿದೆ.
– (ಸದ್ಗುರು) ಸೌ. ಅಂಜಲಿ ಗಾಡಗೀಳ, ಇಂಡೋನೇಶಿಯಾ.