ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯದಾಯಕ ವಾಸ್ತವ್ಯ, ಸಾಧಕರ ಭಕ್ತಿಭಾವ, ರಾಷ್ಟç ಮತ್ತು ಧರ್ಮಗಳಿಗೆ ಸಂಬಂಧಿಸಿದಂತೆ ನಡೆಯುವ ನಿರಂತರ ಕಾರ್ಯ ಮತ್ತು ಸಾಧನಾಮಯ ವಾತಾವರಣ ಇವುಗಳಿಂದ ಆಶ್ರಮದಲ್ಲಿನ ಸಾತ್ವಿಕತೆಯು ದಿನೇದಿನೇ ಹೆಚ್ಚುತ್ತಲೇ ಇದೆ. ಸಾಧಕರು ಪ್ರತೀದಿನ ಇದರ ಅನುಭವವನ್ನು ಪಡೆಯುತ್ತಿದ್ದಾರೆ. ಆಶ್ರಮದಲ್ಲಿನ ಸಾತ್ವಿಕತೆಗೆ ಸಾಕ್ಷಿಯೆಂಬಂತೆ ಇಲ್ಲಿ ಕಾಣಸಿಗುವ ದೈವೀ ಬದಲಾವಣೆಗಳ ಕೆಲವು ಉದಾಹರಣೆಗಳನ್ನು ನೋಡಿದರೆ, ‘ಈಶ್ವರನು ಸನಾತನದ ಮೇಲೆ ಕೃಪಾವೃಷ್ಟಿಯನ್ನೇ ಮಾಡುತ್ತಿದ್ದಾನೆ’, ಎಂಬುದರ ಅನುಭವ ಬರುತ್ತದೆ. ಇದು ಆಶ್ರಮದಲ್ಲಿ ಈಶ್ವರೀ ರಾಜ್ಯವೇ ಅವತರಿಸುತ್ತಿರುವುದರ ದ್ಯೋತಕವಾಗಿದೆ.
ಆಶ್ರಮದ ಚೈತನ್ಯದ ಒಂದು ದೃಶ್ಯ ಪರಿಣಾಮ !
ದಿನಾಂಕ 1.11.2016 ರಂದು ಸನಾತನದ ರಾಮನಾಥಿ ಆಶ್ರಮದಲ್ಲಿ ದೀಪಾವಳಿಯ ನಿಮಿತ್ತ ಹಚ್ಚಲಾದ ಹಣತೆಗಳ ಜ್ಯೋತಿಯ ಪ್ರಕಾಶವು ಹಳದಿಯಾಗಿದ್ದರೂ, ಆ ಜ್ಯೋತಿಯಿಂದಾಗಿ ಆಶ್ರಮದ ಮೇಲೆ ವ್ಯಾಪಿಸಿ ಕೊಂಡಿರುವ ಕೆಂಪು ಪ್ರಕಾಶ !