ಸಂಶೋಧನೆಗಾಗಿ ಆಧ್ಯಾತ್ಮಿಕ ಮೌಲ್ಯವಿರುವ ವಸ್ತುಗಳ ಸಂಗ್ರಹಾಲಯ ಮತ್ತು ಧ್ವನಿಚಿತ್ರೀಕರಣ
ತೀರ್ಥಕ್ಷೇತ್ರ, ಸಂತರ ಸಮಾಧಿ ಇತ್ಯಾದಿ ಕಡೆಗಳ ಆಧ್ಯಾತ್ಮಿಕ ಮತ್ತು ಐತಿಹಾಸಿಕ ದೃಷ್ಟಿಯಿಂದ ವೈಶಿಷ್ಟ್ಯಪೂರ್ಣ ವಸ್ತುಗಳು (ಉದಾ. ಪವಿತ್ರ ನದಿಗಳ ತೀರ್ಥ, ಸ್ವಯಂಭೂ ಸಾಲಿಗ್ರಾಮ, ಸಂತರ ವಸ್ತು), ಹಾಗೆಯೇ ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ದೃಶ್ಯ ಪರಿಣಾಮ ತೋರಿಸುವ 15,000 ಕ್ಕೂ ಹೆಚ್ಚು ಚಿತ್ರ ಮತ್ತು ವಸ್ತುಗಳು ಹಾಗೂ 27,000 ಕ್ಕೂ ಹೆಚ್ಚು ಸಿ.ಡಿ.ಗಳಾಗುವಷ್ಟು ಧ್ವನಿಚಿತ್ರೀಕರಣವನ್ನು ಸಂಶೋಧನೆಗಾಗಿ ಜತನ ಮಾಡಲಾಗಿದೆ.
ಸನಾತನ ವೈದಿಕ ಹಿಂದೂ ಧರ್ಮದ ವಿವಿಧ ಘಟಕಗಳ ಶ್ರೇಷ್ಠತ್ವವನ್ನು ವೈಜ್ಞಾನಿಕ ದೃಷ್ಟಿಯಿಂದ ಸಿದ್ಧಪಡಿಸುವ ಸಂಶೋಧನೆ
ಹಿಂದೂ ಆಹಾರ, ಉಡುಗೆ, ಧಾರ್ಮಿಕ ಕೃತಿ, ಯಜ್ಞ, ನಾಮಜಪ, ಮುದ್ರೆ ಮತ್ತು ನ್ಯಾಸ ಇತ್ಯಾದಿಗಳಿಂದ ವ್ಯಕ್ತಿ ಮತ್ತು ವಾತಾವರಣಗಳ ಮೇಲೆ ಆಗುವ ಒಳ್ಳೆಯ ಪರಿಣಾಮಗಳಿಗೆ ಸಂಬಂಧಿಸಿದಂತೆ 1,000 ಕ್ಕಿಂತಲೂ ಹೆಚ್ಚಿನ ವಿಷಯಗಳ ಮೇಲೆ ‘ಯುನಿವರ್ಸಲ್ ಥರ್ಮೋ ಸ್ಕ್ಯಾನಿಂಗ್’, ‘ಪಾಲಿಕಾಂಟ್ರಾಸ್ಟ್ ಇಂಟರ್‌ಫಿಯರೆನ್ಸ್ ಫೋಟೋಗ್ರಫಿ’ ಇತ್ಯಾದಿಗಳ ಮೂಲಕ ವೈಜ್ಞಾನಿಕ ಪದ್ಧತಿಗಳಿಂದ ಸಂಶೋಧನೆಯನ್ನು ಮಾಡಲಾಗಿದೆ.